ಯಾದಗಿರಿ: ಕಳೆದ ಎರಡ್ಮೂರು ವರ್ಷಗಳಿಂದಲೂ ಹೈದರಾಬಾದ್ ಹಲೀಂ ಎನ್ನುವ ಹೆಸರಿನ ಅಂಗಡಿಗಳು ನಗರದ ವಿವಿಧೆಡೆ ರಂಜಾನ್ ಮಾಸದಲ್ಲಿ ತಲೆ ಎತ್ತಿವೆ.
ರಂಜಾನ್ ಹಬ್ಬಕ್ಕೆ ಕೆಲವೇ ದಿನಗಳಿದ್ದು, ಈಗ ರಂಜಾನ್ ಮಾಸದಲ್ಲಿ ‘ಹಲೀಂ’ (ಮಾಂಸ, ಗೋಧಿ, ಬೇಳೆ) ಘಮ ಸಂಜೆ ವೇಳೆ ಕಂಡು ಬರುತ್ತಿದೆ.
ನಗರದ ವಿವಿಧೆಡೆ ಸುಮಾರು 10–12 ಕಡೆ ಹಲೀಂ ತಯಾರಿಸಲಾಗುತ್ತಿದೆ. ಅಲ್ಲದೇ ಮುಸ್ಲಿಮರು ಹೆಚ್ಚಿರುವ ಪ್ರದೇಶಗಳಲ್ಲಿ ಹಲೀಂ ತಯಾರಿಕೆ ಜೋರಾಗಿದೆ.
ಯಾದಗಿರಿ ಹೈದರಾಬಾದ್ ನಗರಕ್ಕೆ ಸಮೀಪವಿದ್ದರೂ ಕಳೆದ ಐದಾರು ವರ್ಷಗಳಲ್ಲಿ ಹಲೀಂ ಘಮ ಕಂಡು ಬರುತ್ತಿರಲಿಲ್ಲ. ಈಗ ವಿವಿಧೆಡೆ ತಲೆ ಎತ್ತಿದ್ದು, ಗ್ರಾಹಕರನ್ನು ಕೈಬಿಸಿ ಕರೆಯುತ್ತಿದೆ.
ನಾರಾಯಣಪೇಟ ಅಥವಾ ಕಲಬುರಗಿಗೆ ತೆರಳಿ ಇಲ್ಲಿನವರು ಹಲೀಂ ಘಮ ಸವಿಯುತ್ತಿದ್ದರು.
ರಂಜಾನ್ ಮಾಸದ ಹಬ್ಬದ ಅಂಗವಾಗಿ ಮುಸ್ಲಿಮರು ಉಪವಾಸ ವ್ರತ ಕೈಗೊಂಡಿದ್ದು, ಇಫ್ತಾರ್ (ಉಪವಾಸ ಬಿಡುವ) ವೇಳೆ ಗ್ರಾಹಕರಿಂದ ತುಂಬಿರುತ್ತದೆ. ಮಸೀದಿ ಅಕ್ಕಪಕ್ಕದ ಜಾಗಗಳಲ್ಲಿ ಗ್ರಾಹಕರಿಂದ ಗಿಜಿಗುಡುತ್ತಿದೆ.
ಸ್ಥಳೀಯವಾಗಿ ಹಲೀಂ ತಯಾರಿಕೆ ಮಾಡುವವರು ಕಡಿಮೆ ಇರುವುದರಿಂದ ಹೊರ ರಾಜ್ಯಗಳಿಂದ ಇಲ್ಲಿಗೆ ಬಂದು ಹಲೀಂ ತಯಾರಿಸಲಾಗುತ್ತಿದೆ.
ನಗರದಲ್ಲಿ ವಿವಿಧೆಡೆ ಹಲೀಂ ಘಮ ಸೆಳೆಯುತ್ತಿದೆ. ಇಫ್ತಾರ್ ವೇಳೆ ಗ್ರಾಹಕರು ಬಂದು ಸೇವನೆ ಮಾಡುತ್ತಿದ್ದಾರೆ. ಪಾರ್ಸೆಲ್ ಕೂಡ ಹೆಚ್ಚಾಗಿದೆಮಹಮ್ಮದ್ ಆಜಮ ಉಸ್ತಾದ್ ವ್ಯಾಪಾರಿ
ನಗರದಲ್ಲಿ ರಂಜಾನ್ ಮಾಸದ ಆರಂಭದಿಂದಲೂ ಹಲೀಂ ತಯಾರಿಕೆ ಮಾಡುತ್ತಿದ್ದು ಕಳೆದ ವರ್ಷ ಒಂದು ಪ್ಲೇಟ್‌ಗೆ ₹50 ಇತ್ತು. ಈ ವರ್ಷ ₹20 ಹೆಚ್ಚಿಸಲಾಗಿದೆಬಶೀರ್ ಉಲ್ ಹಸನ್ ಗ್ರಾಹಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.