ADVERTISEMENT

ಹುಣಸಗಿ| ಅಗಾಧ ಜ್ಞಾನ ಸಂಪತ್ತು ಹೊಂದಿದ ಸಿದ್ದೇಶ್ವರ ಶ್ರೀ: ಗಿರಿಜಮ್ಮ ತಾಯಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 6:02 IST
Last Updated 4 ಜನವರಿ 2026, 6:02 IST
ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ಪ್ಯಾಟಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಿದ್ದೇಶ್ವರ ಸ್ವಾಮಿಗಳ ನುಡಿ ನಮನ ಕಾರ್ಯಕ್ರಮ ನಡೆಯಿತು
ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ಪ್ಯಾಟಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಿದ್ದೇಶ್ವರ ಸ್ವಾಮಿಗಳ ನುಡಿ ನಮನ ಕಾರ್ಯಕ್ರಮ ನಡೆಯಿತು   

ಹುಣಸಗಿ: ‘ತಮ್ಮಲ್ಲಿರುವ ಅಗಾಧ ಜ್ಞಾನ ಸಂಪತ್ತನ್ನು ಜಗತ್ತಿನೆಲ್ಲೆಡೆ ಹಂಚಿದ ಮಹಾನ್ ಯೋಗಿ ಸಿದ್ದೇಶ್ವರ ಸ್ವಾಮಿಗಳು’ ಎಂದು ಗಿರಿಜಮ್ಮ ತಾಯಿ ಹೇಳಿದರು.

ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ಪ್ಯಾಟಿ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಸಿದ್ದೇಶ್ವರ ಸ್ವಾಮಿಗಳ ಸ್ಮರಣೆ ಹಾಗೂ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಾಂತ ಸ್ವಭಾವದಿಂದಲೇ ಎಲ್ಲರನ್ನು ಬೆರಗುಗೊಳಿಸಿದ ಹಾಗೂ ಸದಾ ಪ್ರಾಣಿ–ಪಕ್ಷಿ, ಜೀವ ಸಂಕುಲಕ್ಕೆ ಕಾಳಜಿ ತೊರಿಸಿ, ಆ ದಾರಿಯಲ್ಲಿಯೇ ಮುಕ್ತಿ ಮಾರ್ಗ ಇದೆ ಎಂದು ತೋರಿಸಿಕೊಟ್ಟರು ಎಂದು ಹೇಳಿದರು.

ADVERTISEMENT

ಬಸಣ್ಣ ಗೊಡ್ರಿ ಹಾಗೂ ಶಿಕ್ಷಕ ಎಸ್.ಎಸ್.ಮಾರನಾಳ ಮಾತನಾಡಿ,‘ಸಿದ್ದೇಶ್ವರ ಸ್ವಾಮಿಗಳು ನಡೆದಾಡುವ ದೇವರು ಎಂದು ಭಕ್ತರು ನಂಬಿದ್ದರು. ಅವರ ತತ್ವಗಳನ್ನು ತಿಳಿದುಕೊಂಡು ಜೀವನ ನಡೆಸಿದರೆ ಅದುವೇ ನಾವು ಅವರಿಗೆ ಸಲ್ಲಿಸುವ ಗೌರವ’ ಎಂದರು.

ಪತ್ರಕರ್ತ ಪವನ್ ದೇಶಪಾಂಡೆ ಮಾತನಾಡಿದರು.

ಈ ಸಂದರ್ಭದಲ್ಲಿ ಹಿರಿಯರಾದ ಬಸಣ್ಣ ಕಂಚಗಾರ, ಶಾಮಸುಂದರ್ ಜೋಶಿ, ಬಸಣ್ಣ ಹಳೆ ಪೂಜಾರಿ, ಚಂದ್ರಶೇಖರ ಹೊಕ್ರಾಣಿ, ಕಸಾಪ ವಲಯ ಘಟಕದ ಅಧ್ಯಕ್ಷ ಕೋರಿ ಸಂಗಯ್ಯ ಗಡ್ಡದ, ಎಸ್.ಬಿ.ಅಡ್ಡಿ ಸೋಮಶೇಖರ ಪಂಜಗಲ್ಲ, ಮಲ್ಲು ಜಂಗಳಿ, ಮಡಿವಾಳಪ್ಪ ತಮದೊಡ್ಡಿ, ಬಸಣ್ಣ ಗೊಡ್ರಿ, ಮೌನೇಶ ಹೂಗಾರ, ಬಸವರಾಜ ಅಂಗಡಿ, ರವಿ ಅಡ್ಡಿ ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.