ADVERTISEMENT

ಸುರಪುರ | ನಾಯಿಗಳ ದಾಳಿ: 17 ಕುರಿ ಸಾವು

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 5:55 IST
Last Updated 24 ಜುಲೈ 2025, 5:55 IST
<div class="paragraphs"><p>ಸುರಪುರದ ತಾಲ್ಲೂಕಿನ ನಾಗರಾಳ ಗ್ರಾಮದ ಮಲ್ಲಣ್ಣ ಅವರಿಗೆ ಸೇರಿದ 17 ಕುರಿಗಳು ನಾಯಿ ಕಡಿತದಿಂದ ಮೃತಪಟ್ಟಿರುವುದು.&nbsp;</p></div>

ಸುರಪುರದ ತಾಲ್ಲೂಕಿನ ನಾಗರಾಳ ಗ್ರಾಮದ ಮಲ್ಲಣ್ಣ ಅವರಿಗೆ ಸೇರಿದ 17 ಕುರಿಗಳು ನಾಯಿ ಕಡಿತದಿಂದ ಮೃತಪಟ್ಟಿರುವುದು. 

   

ಸುರಪುರ: ತಾಲ್ಲೂಕಿನ ನಾಗರಾಳ ಗ್ರಾಮದಲ್ಲಿ ನಾಯಿಗಳ ಗುಂಪು ಕುರಿ ಮಂದೆ ಮೇಲೆ ದಾಳಿ ನಡೆಸಿ 17 ಕುರಿಗಳನ್ನು ಕಚ್ಚಿ ಸಾಯಿಸಿದ ಘಟನೆ ಮಂಗಳವಾರ ನಡೆದಿದೆ.

ಕುರಿಗಳು ಗ್ರಾಮದ ಮಲ್ಲಣ್ಣ ಎಂಬುವರಿಗೆ ಸೇರಿವೆ. ಮಂದೆಯಲ್ಲಿ 50 ಕುರಿಗಳಿದ್ದವು. 

ADVERTISEMENT

ಊಟಕ್ಕೆ ಹೋಗಿದ್ದ ಮಲ್ಲಣ್ಣ ವಾಪಸ್ ಬಂದು ನೋಡಿದಾಗ ನಾಯಿಗಳು ದಾಳಿ ನಡೆಸುತ್ತಿರು ವುದು ಕಂಡುಬಂದಿದೆ. ನಾಯಿಗಳನ್ನು ಓಡಿಸಿದ ಕಾರಣ ಉಳಿದ ಕುರಿಗಳು ಜೀವ ಉಳಿಸಿಕೊಂಡಿವೆ.

ಸ್ಥಳಕ್ಕೆ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಸುರೇಶ ಹಚ್ಚಡ ಭೇಟಿ ನೀಡಿ ಪರಿಶೀಲಿಸಿದರು. ₹1.20 ಲಕ್ಷ ಹಾನಿ ಅಂದಾಜಿಸಲಾಗಿದೆ. ಪರಿಹಾರಕ್ಕಾಗಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.