ADVERTISEMENT

ಕನ್ನಡದಲ್ಲೂ ಟಿಟಿಡಿಯ ಎಸ್‌ವಿಬಿಸಿ ವಾಹಿನಿ ಪ್ರಸಾರ: ಪಂ.ಆನಂದ ತೀರ್ಥಾಚಾರ್ ಪಗಡಾಲ್

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 6:05 IST
Last Updated 3 ಡಿಸೆಂಬರ್ 2021, 6:05 IST
ತೀರ್ಥಾಚಾರ್
ತೀರ್ಥಾಚಾರ್   

ಯಾದಗಿರಿ: ಶ್ರೀ ವೆಂಕಟೇಶ್ವರ ಭಕ್ತಿ ಚಾನಲ್‌ (ಎಸ್‌ವಿಬಿಸಿ) ಶೀಘ್ರದಲ್ಲಿ ಕನ್ನಡದಲ್ಲಿ ಪ್ರಸಾರ ಮಾಡಲಾಗುವುದು ಎಂದು ಟಿಟಿಡಿ ದಾಸ ಸಾಹಿತ್ಯ ಯೋಜನೆಯ ವಿಶೇಷಾಧಿಕಾರಿ ಪಂ.ಆನಂದ ತೀರ್ಥಾಚಾರ್ ಪಗಡಾಲ್‌ ತಿಳಿಸಿದರು.

ಈಗಾಗಲೇ ತೆಲುಗು ಮತ್ತು ತಮಿಳಿನಲ್ಲಿ ಎಸ್‌ವಿಬಿಸಿ ವಾಹಿನಿ ಪ್ರಸಾರವಾಗುತ್ತಿದ್ದು, ಕನ್ನಡನಾಡಿನ ತಿಮ್ಮಪ್ಪನ ಭಕ್ತರಿಗಾಗಿ ಕನ್ನಡದಲ್ಲಿಯೂ ವಾಹಿನಿ ಆರಂಭಿಸಲಾಗುತ್ತಿದೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹರಿದಾಸ ಕೀರ್ತನೆಗಳನ್ನು ಎಲ್ಲರಿಗೂ ಮುಟ್ಟಿಸಬೇಕು ಎನ್ನುವ ನಿಟ್ಟಿನಲ್ಲಿ ದಾಸ ನಮನ ಗಾಯನ ಸ್ಪರ್ಧೆ ಏರ್ಪಡಿಸಲಾಗುತ್ತಿದ್ದು, ಫೆಬ್ರುವರಿ 1 ರಂದು ಕಾರ್ಯಕ್ರಮ ಪ್ರಾರಂಭಿಸಲಾಗುತ್ತದೆ. ಎಲ್ಲ ಜಿಲ್ಲೆಗಳಿಂದ 10 ಯುವಕ, ಯುವತಿಯರನ್ನು ಆಯ್ಕೆ ಮಾಡಿಕೊಂಡು ರಾಜ್ಯ ಮಟ್ಟದಲ್ಲಿ ಆಯ್ಕೆಯಾದವರಿಗೆ ಟ್ರಸ್ಟ್‌ನ ಪಾರಿತೋಷಕ ನೀಡಲಾಗುವುದು ಎಂದು ತಿಳಿಸಿದರು.
ಬ್ರಾಹ್ಮಣ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ರಾಘವೇಂದ್ರರಾವ್ ಮುಂಡರಗಿ, ಶ್ರೀನಿವಾಸರಾವ್ ಪದಕಿ, ಶಂಕರನಾರಾಯಣ ಪಸಪುಲ, ಪ್ರವೀಣ ದೇಶಮುಖ, ಗುರುರಾಜ ಕುಲಕರ್ಣಿ ಲಿಂಗೇರಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.