ADVERTISEMENT

ನಗರಸಭೆ ಸಿಬ್ಬಂದಿ ನೆಪದಲ್ಲಿ ಕಳವು

ನಗ, ನಾಣ್ಯ ದೋಚಿ ಪರಾರಿ, ಜನತೆ ಎಚ್ಚರಿಕೆ ವಹಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 4:54 IST
Last Updated 13 ಜುಲೈ 2021, 4:54 IST

ಯಾದಗಿರಿ: ನಗರದ ಸ್ಟೇಷನ್ ರಸ್ತೆಯ ಮನೆಯೊಂದರಲ್ಲಿ ನಗರಸಭೆ ಸಿಬ್ಬಂದಿ ನೆಪದಲ್ಲಿ ನಗ, ನಾಣ್ಯ ಕಳವು ಮಾಡಿರುವ ಘಟನೆ ಸೋಮವಾರ ಜರುಗಿದೆ.

‘ವೃದ್ಧೆಯ ಮನೆಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಶೌಚಾಲಯ ಸ್ವಚ್ಛ ಮಡುತ್ತೇವೆ ಎಂದು ತೆರಳಿದ್ದಾರೆ. ವೃದ್ಧೆಯ ಜೊತೆ ಒಬ್ಬರು ಶೌಚಾಲಯಕ್ಕೆ ತೆರಳಿದರೆ ಮತ್ತೊಬ್ಬರು ಅಲಮಾರದಲ್ಲಿದ್ದ ನೆಕ್‌ಲೆಸ್‌, ಉಂಗುರ, ₹80 ಸಾವಿರ ಹಣ ದೋಚಿ ಪರಾರಿಯಾಗಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.

ಎಚ್ಚರಿಕೆ: ಯಾರಾದರೂ ಅಪರಿಚಿತರು ಮನೆ ಬಳಿ ಬಂದು ಶೌಚಾಲಯ ಸ್ವಚ್ಛಗೊಳಿಸುತ್ತೇವೆ, ಬಂಗಾರ ಪಾಲಿಷ್‌ ಮಾಡಿಕೊಡುತ್ತೇವೆ ಎಂದರೆ ಮೋಸ ಹೋಗಬೇಡಿ. ಕೂಡಲೇ ಹತ್ತಿರದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು ಎಂದು ಎಚ್ಚರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.