ADVERTISEMENT

ಯಾದಗಿರಿ | ಕಾಡು ಪ್ರಾಣಿ ಬೇಟೆ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 5:48 IST
Last Updated 12 ಜನವರಿ 2022, 5:48 IST

ಮೋಟ್ನಳಿ (ಯರಗೋಳ): ಗ್ರಾಮದ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಬೇಟೆಯಾಡುತ್ತಿದ್ದ ಒಬ್ಬ ಅಂತರರಾಜ್ಯ ಬೇಟೆಗಾರ ಮತ್ತು ಸ್ಥಳೀಯ ವಾಹನ ಚಾಲಕ ಸೇರಿ ಇಬ್ಬರನ್ನು ಬಂಧಿಸಲಾಗಿದೆ.

ಪ್ರಾದೇಶಿಕ ಅರಣ್ಯ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿಳ ತಂಡವು ದಾಳಿ ಮಾಡಿ, ಮೃತ 6 ಕಾಡು ಹಂದಿ ಹಾಗೂ ಒಂದು ಜಿಪ್ ವಶಪಡಿಸಿಕೊಂಡಿದೆ.

ಮಹಾರಾಷ್ಟ್ರ ಜಲಗಾಂವ್ ಮೂಲದ ಬಂಟಿ ಶಂಕರ್ ಬಾಬು ಹಾಗೂ ಮೋಟ್ನಳ್ಳಿ ತಾಂಡಾದವಾಹನ ಚಾಲಕ ಕುಮಾರ ಬಂಧಿತ ಆರೋಪಿಗಳು. ಜತೆಯಲ್ಲಿದ್ದ ಇಬ್ಬರು ಪರಾರಿ ಆಗಿದ್ದಾರೆ.

ADVERTISEMENT

ಈ ತಂಡ ಕಚ್ಚಾ ಬಾಂಬ್ ತಯಾರಿಸಿ ಅರಣ್ಯ ಪ್ರದೇಶದಲ್ಲಿ ನೀರು ಇರುವ ಸ್ಥಳದಲ್ಲಿ ಇರಿಸುತ್ತಿದ್ದರು. ನೀರು ಕುಡಿಯಲು ಬರುವ ಪ್ರಾಣಿಗಳ ಸ್ಪರ್ಶದಿಂದ ಬಾಂಬ್‌ ಸ್ಫೋಟಗೊಳ್ಳುತ್ತಿತ್ತು. ಇದರಿಂದ ಪ್ರಾಣಿಗಳು ಸಾವನ್ನಪ್ಪುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿ ದ್ದಾರೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸುನಿಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.