ADVERTISEMENT

ವಜ್ಜಲ: ಸಂಭ್ರಮದ ಪಲ್ಲಕ್ಕಿ ಉತ್ಸವ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 5:03 IST
Last Updated 22 ಆಗಸ್ಟ್ 2025, 5:03 IST
ಹುಣಸಗಿ ತಾಲ್ಲೂಕಿನ ವಜ್ಜಲ ಗ್ರಾಮದಲ್ಲಿ ಶರಣ ಸಿದ್ರಾಮುಪ್ಪ ಮುತ್ಯಾ ನೂತನ ಮೂರ್ತಿ ಹಾಗೂ ನಾಲ್ಕು ಪಲ್ಲಕ್ಕಿಗಳ ಮೆರವಣಿಗೆ ಸಡಗರದಿಂದ ನಡೆಯಿತು
ಹುಣಸಗಿ ತಾಲ್ಲೂಕಿನ ವಜ್ಜಲ ಗ್ರಾಮದಲ್ಲಿ ಶರಣ ಸಿದ್ರಾಮುಪ್ಪ ಮುತ್ಯಾ ನೂತನ ಮೂರ್ತಿ ಹಾಗೂ ನಾಲ್ಕು ಪಲ್ಲಕ್ಕಿಗಳ ಮೆರವಣಿಗೆ ಸಡಗರದಿಂದ ನಡೆಯಿತು   

ಹುಣಸಗಿ: ತಾಲ್ಲೂಕಿನ ವಜ್ಜಲ ಗ್ರಾಮದಲ್ಲಿ ಶರಣ ಸಿದ್ರಾಮಪ್ಪ ಮುತ್ಯಾ ಅವರ ನೂತನ ಮೂರ್ತಿ ಸ್ಥಾಪನೆ ಅಂಗವಾಗಿ ಪಲ್ಲಕ್ಕಿ ಉತ್ಸವ ಶ್ರದ್ಧಾ ಭಕ್ತಿಯಿದ ನಡೆಯಿತು.

ಉತ್ಸವದ ಅಂಗವಾಗಿ ನಾವದಗಿಯ, ವಜ್ಜಲ, ಕೊಳಿಹಾಳದ ಬೀರದೇವರ ಹಾಗೂ ಮಾರಲಬಾವಿ ಬುಳ್ಳರಾಯ ದೇವರ ನಾಲ್ಕು ಪಲ್ಲಕ್ಕಿ ಉತ್ಸವ ಸಮಾವೇಶ ಗೊಂಡು ವೀರಗಾಸೆ ಕುಣಿತ ಗಮನ ಸೆಳೆಯಿತು.

ದೇವಸ್ಥಾನದ ಬಳಿ ಬುಧವಾರ ರಾತ್ರಿ ವಿವಿಧ ತಂಡಗಳಿಂದ ಡೋಳ್ಳಿನ ಪದ ಕಾರ್ಯಕ್ರಮ ನಡೆಯತು. ಗುರವಾರ ಗ್ರಾಮದ ತಿಮ್ಮಪ್ಪಯ್ಯ ದೇವಸ್ಥನದಿಂದ ಪಲ್ಲಕ್ಕಿ ಉತ್ಸವ ಆರಂಭವಾಗಿ ಗಂಗಾ ಸ್ನಾನಕ್ಕೆ ತೆರಳಲಾಯಿತು. ತೆಪ್ಪೋತ್ಸವದ ಬಳಿಕ ದೇವರ ಮೂರ್ತಿಗಳ ಹಾಗೂ ನೂತನ ಶರಣರ ಮೂರ್ತಿಯ ಗಂಗಾಸ್ನಾನ ಪಂಚಾಮೃತ ಅಭಿಶೇಕ ನಡೆಯಿತು.

ADVERTISEMENT

ಶರಣರ ದೇವಸ್ಥಾದವರೆಗೂ ಡೊಳ್ಳು ಕುಣಿತ ಹಾಗೂ ವೀರಗಾಸೆ ನಡೆಯಿತು. ದೇವಸ್ಥಾನಕ್ಕೆ ಆಗಮಿಸಿದ ಸಂದರ್ಭದಲ್ಲಿ ಪೂಜೆ ಸಲ್ಲಿಸಿ ಪಲ್ಲಕ್ಕಿ ಉತ್ಸವ ಸಂಪನ್ನವಾಯಿತು.

ನಾವದಗಿಯ ಬಸವರಾಜ ಪೂಜಾರಿ ಹಾಗೂ ಬಂಡೆಪ್ಪನಹಳ್ಳಿಯ ಸಣ್ಣಕೆಪ್ಪ ಪೂಜಾರಿ ಅವರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳು ನಡೆದವು.

ಭೀಮರಾಯ ಪೂಜಾರಿ ನಾವದಗಿ, ಪೂಜಪ್ಪ ಪೂಜಾರಿ, ಕರಿಸಿದ್ದಪ್ಪ ಪೂಜಾರಿ, ಸಿದ್ದಪ್ಪ ಪೂಜಾರಿ, ಅಂಬರೇಶ ನಡಗೇರಿ, ಬೀರಪ್ಪ ಕವಡಿಮಟ್ಟಿ, ಭೀಮಣ್ಣ ಮಿಣಜಗಿ, ಬೀರಪ್ಪ ಕೊಳಿಹಾಳ, ನಿಂಗಪ್ಪ ಪೂಜಾರಿ, ರೇವಣಸಿದ್ದಪ್ಪ ದೇವತಕಲ್ಲ, ಸಿದ್ರಾಮಪ್ಪ, ಶಿವಣ್ಣ ಕನ್ನೇಳ್ಳಿ ಸೇರಿದಂತೆ ವಜ್ಜಲ, ಮಾಳನೂರು, ಬಂಡೆಪ್ಪನಹಳ್ಳಿ, ನಾವದಗಿ, ಕೋಳಿಹಾಳ, ಕಲ್ಲದೇವನಹಳ್ಳಿ ಗ್ರಾಮದ ಹಿರಿಯರು, ಮಹಿಳೆಯರು, ಭಕ್ತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.