ADVERTISEMENT

ಸೈದಾಪುರ | ಮೃತ ಮಂಗನ ಸಾಂಪ್ರದಾಯಿಕ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2023, 14:38 IST
Last Updated 22 ಜುಲೈ 2023, 14:38 IST
ಸೈದಾಪುರ ಪಟ್ಟಣದಲ್ಲಿ ಮೃತಪಟ್ಟ ಮಂಗವನ್ನು ವಿಶ್ವ ಹಿಂದೂ ಪರಿಷತ್ ಭಜರಂಗದಳದಿಂದ ಸಾಂಪ್ರದಾಯಿಕವಾಗಿ ಅಂತ್ಯಕ್ರಿಯೆ ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ರೆಡ್ಡಿ, ವಿರೂಪಾಕ್ಷ, ನೆಹರು, ದೇವು, ತಾಯಪ್ಪ, ಬಸು, ತಾಯ, ನಾಗನಥ, ಸಾಬು, ಹಣಮಂತ, ರಮೆಶ, ರವಿ ರಾಥೋಡ, ಗಂಗು ಸೇರಿದಂತೆ ಇತರರಿದ್ದರು.

ಸೈದಾಪುರ: ಪಟ್ಟಣದಲ್ಲಿ ಮೃತಪಟ್ಟ ಮಂಗನ ಅಂತ್ಯಕ್ರಿಯೆಯನ್ನು ವಿಶ್ವ ಹಿಂದೂ ಪರಿಷತ್, ಭಜರಂಗದಳದಿಂದ ಶನಿವಾರ ಸಾಂಪ್ರದಾಯಿಕವಾಗಿ ನೆರವೇರಿಸಲಾಯಿತು.

ಶನಿವಾರ ಬೆಳಿಗ್ಗೆ ಪಟ್ಟಣದ ಬಸವೇಶ್ವರ ವೃತ್ತದ ಸಮೀಪದ ವ್ಯಕ್ತಿಯೋರ್ವರ ಮನೆ ಮೇಲೆ ಕೋತಿ ಸತ್ತಿರುವುದು ಗಮನಿಸಿದ ಸ್ಥಳೀಯ ವಿಶ್ವ ಹಿಂದೂ ಪರಿಷತ್ ಭಜರಂಗದಳದ ಸಂಚಾಲಕ ಚಂದ್ರು ವಾಡಿ ಹಾಗೂ ಯುವಕರ ತಂಡವು ಅದರ ಅಂತಿಮ ಸಂಸ್ಕಾರವನ್ನು ವಿಶೇಷ ಪೂಜಾ ಕೈಕಂರ್ಯಗಳನ್ನು ಮಾಡಿ, ಮೆರವಣಿಗೆ ಮಾಡಿ ಶಾಸ್ತ್ರೋಕ್ತವಾಗಿ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ರೆಡ್ಡಿ, ವಿರೂಪಾಕ್ಷ, ನೆಹರು, ದೇವು, ತಾಯಪ್ಪ, ಬಸ್ಸು, ತಾಯ, ನಾಗನಥ, ಸಾಬು, ಹಣಮಂತ, ರಮೆಶ, ರವಿ ರಾಥೋಡ, ಗಂಗು ಸೇರಿದಂತೆ ಇತರರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.