ಯಾದಗಿರಿ: ತಾಲ್ಲೂಕಿನ ಎಸ್.ಹೊಸಳ್ಳಿಯಲ್ಲಿ ಬುಧವಾರ ಎರಡು ಕಡೆ ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಸೇರಿ ನಾಲ್ವರು ಮೃತಪಟ್ಟಿದ್ದಾರೆ.
ಗುರುಮಠಕಲ್ ತಾಲ್ಲೂಕಿನ ಗಾಜರಕೋಟದ ಮೋನಮ್ಮ(25), ಅವರ ಮಕ್ಕಳಾದ ಭಾನು (4) ಶ್ರೀನಿವಾಸ (2) ಮತ್ತು ಎಸ್.ಹೊಸಳ್ಳಿ ಗ್ರಾಮದ ಸಾಬಣ್ಣ (17) ಮೃತರು. ಮೋನಮ್ಮ ಅವರ ಮೈದುನ ಭೀಮಾಶಂಕರ (32) ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
‘ಯಾದಗಿರಿ ಆಸ್ಪತ್ರೆಗೆ ಬಂದಿದ್ದ ಭೀಮಾಶಂಕರ, ಮೋನಮ್ಮ ಮತ್ತು ಇಬ್ಬರು ಮಕ್ಕಳೊಂದಿಗೆ ಗಾಜರಕೋಟಕ್ಕೆ ಬೈಕ್‌ನಲ್ಲಿ ಮರಳುವಾಗ, ಎಸ್.ಹೊಸಳ್ಳಿ ಬಳಿ ಮಳೆ ಸುರಿಯತೊಡಗಿತು. ಆಗ ಎಲ್ಲರೂ ಮರ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದಿದೆ. ಅದೇ ಗ್ರಾಮದಲ್ಲಿ ಬೇರೆಡೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಾಬಣ್ಣಗೆ ಸಿಡಿಲು ಬಡಿದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.