ADVERTISEMENT

ಶಹಾಪುರ ಹೆದ್ದಾರಿ | ಶೀಘ್ರವೇ ಡಾಂಬರೀಕರಣ, ಸುತ್ತುಗೋಡೆ ನಿರ್ಮಾಣ: ಶಾಸಕ ತುನ್ನೂರ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 7:33 IST
Last Updated 12 ಡಿಸೆಂಬರ್ 2025, 7:33 IST
ಯಾದಗಿರಿ ಜಿಲ್ಲೆಯ ಯಾದಗಿರಿ-ಶಹಾಪುರ ಹೆದ್ಧಾರಿಯ ಪುನರ್‌ ನಿರ್ಮಾಣಗೊಡ 2 ಕಿ.ಮೀ. ರಸ್ತೆಯನ್ನು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಪರಿಶೀಲಿಸಿದರು 
ಯಾದಗಿರಿ ಜಿಲ್ಲೆಯ ಯಾದಗಿರಿ-ಶಹಾಪುರ ಹೆದ್ಧಾರಿಯ ಪುನರ್‌ ನಿರ್ಮಾಣಗೊಡ 2 ಕಿ.ಮೀ. ರಸ್ತೆಯನ್ನು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಪರಿಶೀಲಿಸಿದರು    

ಯಾದಗಿರಿ: ‘ನಗರದ ಸುಭಾಷ್‌ ವೃತ್ತದಿಂದ ವಡಗೇರಾ ಕ್ರಾಸ್‌ವರೆಗಿನ 2 ಕಿ.ಮೀ. ವ್ಯಾಪ್ತಿಯ ಯಾದಗಿರಿ-ಶಹಾಪುರ ಮಾರ್ಗದಲ್ಲಿ ಶೀಘ್ರವೇ ಡಾಂಬರೀಕರಣ, ಪಕ್ಕದಲ್ಲಿ ಸುತ್ತುಗೋಡೆ ಮತ್ತು ಪ್ರಮುಖ ಸ್ಥಳಗಳಲ್ಲಿ ಶೈನ್ ಮಾರ್ಕಿಂಗ್ ಮಾಡಲಾಗುವುದು’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಭರವಸೆ ನೀಡಿದರು

ನಗರದ ಯಾದಗಿರಿ-ಶಹಾಪುರ ರಾಜ್ಯ ಹೆದ್ದಾರಿಯ ಪುನರ್‌ ನಿರ್ಮಾಣಗೊಂಡ ರಸ್ತೆ ಕಾಮಗಾರಿಯನ್ನು ಗುರುವಾರ ಪರಿಶೀಲಿಸಿ ಮಾತನಾಡಿದ ಅವರು, ‘ಈ ಹೆದ್ಧಾರಿಯಲ್ಲಿ 2 ಕಿ.ಮೀ. ರಸ್ತೆ ಹದಗೆಟ್ಟು ಸಂಚಾರ ಸಮಸ್ಯೆಯಾಗಿತ್ತು. ಈಗ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ₹10 ಕೋಟಿ ಅನುದಾನದಲ್ಲಿ ಕಾಮಗಾರಿ ಜರುಗಿದೆ’ ಎಂದು ತಿಳಿಸಿದರು.

ಮುಖಂಡರಾದ ಶ್ಯಾಮಸನ್ ಮಾಳಿಕೇರಿ, ಮಲ್ಲಿಕಾರ್ಜುನ ಈಟೆ, ಲಚಮರೆಡ್ಡಿ, ಮೋಹಿನುದ್ದಿನ್ ಮಿರ್ಚಿ, ಸಾಯಿಬಣ್ಣ ಕೆಂಗುರಿ, ತಿಮ್ಮಣ್ಣ ನಾಯಕ್, ಸುರೇಶ ಮಡ್ಡಿ, ಶರಣುಗೌಡ ಬಲ್ಕಲ್, ಜಲಾಲಸಾಬ್ ಬಬುಲಾದ, ವಿಶ್ವನಾಥ ನಾಯಕ, ಹನುಮಂತರಾಯ ಮಾಲಿಪಾಟೀಲ, ಗುಲಾಮ ಮುರ್ತುಜ, ಮಂಜುನಾಥ ಮಡ್ಡಿ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.