ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಚಿಕ್ಕಬಳ್ಳಾಪುರದ ಅಂಗನಾವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಎಸ್‌ಎಸ್ಎಲ್‌ಸಿ ಅಥವಾ ಪಿಯುಸಿ ಉತ್ತೀರ್ಣವಾಗಿರಬೇಕು. ಸೆಪ್ಟೆಂಬರ್ 30ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಇಲಾಖೆಯು ತಿಳಿಸಿದೆ.
ಹುದ್ದೆಗಳು
ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ಸಂಖ್ಯೆ: 274
ಉದ್ಯೋಗ ಸ್ಥಳ: ಚಿಕ್ಕಬಳ್ಳಾಪುರ
ಪೋಸ್ಟ್ ಹೆಸರು: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ
ಹುದ್ದೆಯ ವಿವರಗಳು:
ಬಾಗೇಪಲ್ಲಿ: ಕಾರ್ಯಕರ್ತೆ 5 ಹುದ್ದೆಗಳು, ಅಂಗನವಾಡಿ ಸಹಾಯಕಿ 47 ಹುದ್ದೆಗಳು.
ಚಿಕ್ಕಬಳ್ಳಾಪುರ: ಕಾರ್ಯಕರ್ತೆ 3 ಹುದ್ದೆಗಳು, ಅಂಗನವಾಡಿ ಸಹಾಯಕಿ 37 ಹುದ್ದೆಗಳು.
ಚಿಂತಾಮಣಿ : ಕಾರ್ಯಕರ್ತೆ 14 ಹುದ್ದೆಗಳು, ಅಂಗನವಾಡಿ ಸಹಾಯಕಿ 63 ಹುದ್ದೆಗಳು.
ಗುಡಿಬಂಡೆ : ಅಂಗನವಾಡಿ ಸಹಾಯಕಿ 7 ಹುದ್ದೆಗಳು.
ಶಿಡ್ಲಘಟ್ಟ : ಕಾರ್ಯಕರ್ತೆ 3 ಹುದ್ದೆಗಳು, ಅಂಗನವಾಡಿ ಸಹಾಯಕಿ 48 ಹುದ್ದೆಗಳು.
ಗೌರಿಬಿದನೂರು: ಕಾರ್ಯಕರ್ತೆ 8 ಹುದ್ದೆಗಳು, ಅಂಗನವಾಡಿ ಸಹಾಯಕಿ 39 ಹುದ್ದೆಗಳು.
ಅರ್ಹತೆಗಳೇನು?
ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿ ಪೂರ್ಣಗೊಳಿಸಿರಬೇಕು.
ಅಭ್ಯರ್ಥಿಯು ಕನಿಷ್ಠ 19 ವರ್ಷ ಹಾಗೂ ಗರಿಷ್ಠ 35 ವರ್ಷ ವಯಸ್ಸಿನವರಾಗಿರಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿಯನ್ನು ಸಲ್ಲಿಸಲು ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. https://karnemakaone.kar.nic.in/abcd/home.aspx
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.