ಬೆಂಗಳೂರಿನ ನೃಪತುಂಗ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ 2 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು ಎಂದು ವಿವಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇದೇ ಅಕ್ಟೋಬರ್ 10 ರಂದು ಬೆಳಿಗ್ಗೆ 11 ಗಂಟೆಗೆ ಕಾಲೇಜಿನಲ್ಲಿ ನಡೆಯುವ ಸಂದರ್ಶಕ್ಕೆ ಹಾಜರಾಗಬೇಕು ಎಂದು ವಿವಿ ಮಾಹಿತಿ ನೀಡಿದೆ. ಹುದ್ದೆಗೆ ಸಂಬಂಧಿಸಿದ ಮಾಹಿತಿಯನ್ನು ತಿಳಿಯೋಣ ಬನ್ನಿ.
ಹುದ್ದೆಗಳ ವಿವರ:
ಶೈಕ್ಷಣಿಕ ಅಧ್ಯಯನ ವಿಷಯದಲ್ಲಿ ಸಹಾಯಕ ಪ್ರಾಧ್ಯಾಪಕರು – 1 ಹುದ್ದೆ.
ಬಿಬಿಎ ವಿಷಯದಲ್ಲಿ ಸಹಾಯಕ ಪ್ರಾಧ್ಯಾಪಕರು – 1 ಹುದ್ದೆ.
ಉದ್ಯೋಗ ಸ್ಥಳ: ಬೆಂಗಳೂರು
ಹುದ್ದೆಯ ಹೆಸರು: ಸಹಾಯಕ ಪ್ರಾಧ್ಯಾಪಕರು
ಸಂಬಳ: ₹35000 (ತಿಂಗಳಿಗೆ)
ಇರಬೇಕಾದ ಅರ್ಹತೆಗಳು ಯಾವುವು?
1. ಶೈಕ್ಷಣಿಕ ಅಧ್ಯಯನ ವಿಷಯದಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಇರಬೇಕಾದ ಅರ್ಹತೆಗಳು:
ಕನಿಷ್ಠ ಶೇ55 ಅಂಕಗಳೊಂದಿಗೆ ಎಂ.ಎಡ್ ಉತ್ತೀರ್ಣವಾಗಿರಬೇಕು.
ರಾಷ್ಟ್ರೀಯ ಅರ್ಹತಾ ಪರೀಕ್ಷೆ (NET), ರಾಜ್ಯ ಅರ್ಹತಾ ಪರೀಕ್ಷೆ (KSET) ಅಥವಾ ಪಿಎಚ್‌ಡಿ ಪಡೆದಿರಬೇಕು.
ಮನೋವಿಜ್ಞಾನದಲ್ಲಿ ತತ್ವಶಾಸ್ತ್ರ, ಸಮಾಜಶಾಸ್ತ್ರ ಅಥವಾ ಸಂಬಂಧಿತ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
2. ಬಿಬಿಎ ವಿಷಯದ ಸಹಾಯಕ ಪ್ರಾಧ್ಯಾಪರ ಹುದ್ದೆಗೆ ಇರಬೇಕಾದ ಅರ್ಹತೆ:
ಎಂಬಿಎ ಅಥವಾ ಎಂಕಾಂ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
ವಾಣಿಜ್ಯ ಅಥವಾ ನಿರ್ವಹಣೆಯಲ್ಲಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ (NET), ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆ (KSET) ಅಥವಾ ಪಿಎಚ್‌ಡಿ ಪಡೆದಿರಬೇಕು.
ಅಗತ್ಯ ದಾಖಾಲೆಗಳೇನು?
ವಿದ್ಯಾಹರ್ತೆಗೆ ಸಂಬಂಧಪಟ್ಟ ಎಲ್ಲಾ ಮೂಲ ದಾಖಲೆಗಳು, ಮೂಲ ದಾಖಲೆಗಳ ಎರಡು ನಕಲು ಪ್ರತಿಗಳು ಹಾಗೂ ಎರಡು ಭಾವಚಿತ್ರಗಳನ್ನು ಅರ್ಜಿ ನಮೂನೆಗೆ ಲಗತ್ತಿಸಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬೇಕಾದ ವಿಳಾಸ:
ವಿಶ್ವವಿದ್ಯಾಲಯದ ಕುಲಪತಿಗಳ ಕಚೇರಿ,
ನೃಪತುಂಗ ವಿಶ್ವವಿದ್ಯಾಲಯ,
ಬೆಂಗಳೂರು.
ಅರ್ಜಿ ನಮೂನೆಯನ್ನು ಪಡೆಯಲು ಹಾಗೂ ಓದಲು ಇಲ್ಲಿ ಕ್ಲಿಕ್ ಮಾಡಿ
https://nublr.karnataka.gov.in/uploads/media_to_upload1759519272.pdf
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.