ADVERTISEMENT

4 ಸಾವಿರ ಪೌರಕಾರ್ಮಿಕರ ಹುದ್ದೆಗೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2019, 20:34 IST
Last Updated 31 ಆಗಸ್ಟ್ 2019, 20:34 IST

ಬೆಂಗಳೂರು: 4 ಸಾವಿರ ಪೌರ ಕಾರ್ಮಿಕರ ಹುದ್ದೆಗಳನ್ನು (ಡಿ ಗುಂಪು) ಭರ್ತಿ ಮಾಡಲು ಬಿಬಿಎಂಪಿ ಅರ್ಜಿ ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್‌ ಮೂಲಕ (www.bbmp.gov.in) ಅರ್ಜಿ ಸಲ್ಲಿಸಬಹುದು.

ಒಟ್ಟು 4,000 ಹುದ್ದೆಗಳಲ್ಲಿ 3,510 ಹುದ್ದೆಗಳನ್ನು ಸ್ಥಳೀಯ ಮೂಲವೃಂದದ ಮೂಲಕ ತುಂಬಲಾಗುತ್ತಿದೆ. 490 ಹುದ್ದೆಗಳನ್ನು ಹೈದರಾಬಾದ್‌ ಕರ್ನಾಟಕ ವೃಂದಕ್ಕೆ ಮೀಸಲಿಡಲಾಗಿದೆ. ಅರ್ಜಿ ಸಲ್ಲಿಕೆ ಸೆ. 9ರಿಂದ ಆರಂಭವಾಗಲಿದ್ದು, ಅ.9 ಕೊನೆಯ ದಿನ.

ಅಭ್ಯರ್ಥಿಗಳ ವಯಸ್ಸು 45 ವರ್ಷಗಳ ಒಳಗಿರಬೇಕು. ಬಿಬಿಎಂಪಿಯಲ್ಲಿ ಎರಡು ವರ್ಷಗಳಿಂದ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಎನ್‌.ಎಂ.ಆರ್‌/ ದಿನಗೂಲಿ ಅಥವಾ ಹೊರಗುತ್ತಿಗೆ ಕಾರ್ಮಿಕರಿಗೆ ಆದ್ಯತೆ ನೀಡಲಾಗುತ್ತದೆ.

ADVERTISEMENT

ಅಂಗವಿಕಲರಿಗೆ ಶುಲ್ಕ ವಿನಾಯಿತಿ ಇದೆ. ಪೌರಕಾರ್ಮಿಕರು ₹ 100 ಹಾಗೂ ಇತರರು ₹ 200 ಶುಲ್ಕ ಪಾವತಿಸಬೇಕು ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.