ADVERTISEMENT

BELನಲ್ಲಿ 340 ಪ್ರೊಬೇಷನರಿ ಇಂಜಿನಿಯರ್ ಹುದ್ದೆಗಳ ನೇಮಕಾತಿ: ಹೀಗೆ ಅರ್ಜಿ ಸಲ್ಲಿಸಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಅಕ್ಟೋಬರ್ 2025, 10:19 IST
Last Updated 28 ಅಕ್ಟೋಬರ್ 2025, 10:19 IST
   

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಂಪನಿ ದೇಶದಾದ್ಯಂತ ಖಾಲಿ ಇರುವ ಪ್ರೊಬೇಷನರಿ ಇಂಜಿನಿಯರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ನವೆಂಬರ್‌ 14ರೊಳಗೆ ಅರ್ಜಿ ಸಲ್ಲಿಸಬಹುದು.

ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆಗಳೇನು? ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿ ತಿಳಿಯೋಣ.

ಹುದ್ದೆಗಳ ವಿವರ : 

ADVERTISEMENT
  • ಪ್ರೊಬೇಷನರಿ ಇಂಜಿನಿಯರ್ (ಎಲೆಕ್ಟ್ರಾನಿಕ್ಸ್) – 175 ಹುದ್ದೆಗಳು

  • ಪ್ರೊಬೇಷನರಿ ಇಂಜಿನಿಯರ್ (ಮೆಕ್ಯಾನಿಕಲ್)‌ – 109 ಹುದ್ದೆಗಳು

  • ಪ್ರೊಬೇಷನರಿ ಇಂಜಿನಿಯರ್ (ಕಂಪ್ಯೂಟರ್ ಸೈನ್ಸ್) – 42 ಹುದ್ದೆಗಳು

  • ಪ್ರೊಬೇಷನರಿ ಇಂಜಿನಿಯರ್ (ಎಲೆಕ್ಟ್ರಿಕಲ್) – 14 ಹುದ್ದೆಗಳು

ವಿದ್ಯಾರ್ಹತೆ: 

  • ಪ್ರೊಬೇಷನರಿ ಇಂಜಿನಿಯರ್ (ಎಲೆಕ್ಟ್ರಾನಿಕ್ಸ್):  ಬಿ.ಎಸ್‌ಸಿ, ಬಿಇ, ಬಿ.ಟೆಕ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ, ಸಂವಹನ, ದೂರಸಂಪರ್ಕದಲ್ಲಿ ಪದವಿ ಪಡೆದಿರಬೇಕು

  • ಪ್ರೊಬೇಷನರಿ ಇಂಜಿನಿಯರ್ (ಮೆಕ್ಯಾನಿಕಲ್): ಬಿ.ಎಸ್‌ಸಿ, ಬಿಇ, ಬಿ.ಟೆಕ್, ಮೆಕ್ಯಾನಿಕಲ್‌ನಲ್ಲಿ ಪದವಿ ಪಡೆದಿರಬೇಕು.

  • ಪ್ರೊಬೇಷನರಿ ಎಂಜಿನಿಯರ್ (ಕಂಪ್ಯೂಟರ್ ಸೈನ್ಸ್):  ಕಂಪ್ಯೂಟರ್ ಸೈನ್ಸ್, ಇಂಜಿನಿಯರಿಂಗ್‌ನಲ್ಲಿ ಬಿ.ಎಸ್‌ಸಿ, ಬಿಇ, ಬಿ.ಟೆಕ್ ಪದವಿ ಪಡೆದಿರಬೇಕು.

  • ಪ್ರೊಬೇಷನರಿ ಇಂಜಿನಿಯರ್ (ಎಲೆಕ್ಟ್ರಿಕಲ್):  ಎಲೆಕ್ಟ್ರಿಕಲ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್‌ನಲ್ಲಿ ಬಿ.ಎಸ್‌ಸಿ, ಬಿಇ, ಬಿ.ಟೆಕ್ ಪದವಿ ಪಡೆದಿರಬೇಕು.

ವಯೋಮಿತಿ:

  • ಅಭ್ಯರ್ಥಿಗಳ ವಯಸ್ಸು 25 ವರ್ಷ ಮೀರಿರಬಾರದು (ನವೆಂಬರ್ 14, 2025 ಕ್ಕೆ).

  • ಒಬಿಸಿ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ನೀಡಲಾಗಿದೆ.

  • ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10 ವರ್ಷ ವಯಸ್ಸಿನ ಸಡಿಲಿಕೆ ನೀಡಲಾಗಿದೆ. 

ವೇತನ :

₹ 40,000 ದಿಂದ ₹1.40,000

ಅರ್ಜಿ ಶುಲ್ಕ: 

  • ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ – ₹1,180.

  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ವಿಶೇಷ ಚೇತನ,‌ ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ. 

ಅರ್ಜಿ ಸಲ್ಲಿಸುವುದು ಹೇಗೆ? 

  • ಬಿಇಎಲ್‌ನ ಅಂತರ್ಜಾಲ ತಾಣ bel-india.in ಗೆ ಭೇಟಿ ನೀಡಿ.

  • ತೆರೆದ ಇಲಾಖೆಯ ಮುಖಪುಟದಲ್ಲಿ ‘‍Careers’ ಅಥವಾ ‘Recruitment‘ ವಿಭಾಗವನ್ನು ಆಯ್ಕೆ ಮಾಡಿರಿ.

  • ನಂತರ ತೆರೆದ ಪುಟದಲ್ಲಿ ‘ಪ್ರೊಬೇಷನರಿ ಇಂಜಿನಿಯರ್ ನೇಮಕಾತಿ 2025‘ ಲಿಂಕ್‌ನ ಮೇಲೆ ಕ್ಲಿಕ್ ಮಾಡಿ.

  • ಬಳಿಕ ಅಲ್ಲಿ ಕೇಳಲಾದ ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿ. 

ಇಲಾಖೆಯ ಅಧಿಸೂಚಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.