ADVERTISEMENT

BSF: 317 ಸಬ್‌ ಇನ್‌ಸ್ಪೆಕ್ಟರ್‌, ಕಾನ್‌ಸ್ಟೆಬಲ್‌ ಹುದ್ದೆಗಳಿಗೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 7:54 IST
Last Updated 18 ಫೆಬ್ರುವರಿ 2020, 7:54 IST
   

ನವದೆಹಲಿ: ಗಡಿ ಭದ್ರತಾ ಪಡೆಯು (ಬಿಎಸ್‌ಎಫ್‌) 2020ನೇ ಸಾಲಿನಗ್ರೂಪ್‌ ಬಿ ಮತ್ತು ಸಿ ವೃಂದದ (ನಾನ್‌ ಗೆಜೆಟೆಡ್‌) ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಟೆಕ್ನಿಷಿಯನ್ ವಿಭಾಗದಲ್ಲಿ ಖಾಲಿ ಇರುವ 317 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಸಬ್‌ ಇನ್ಸ್‌ಪೆಕ್ಟರ್‌, ಹೆಡ್‌ ಕಾನ್‌ಸ್ಟೆಬಲ್‌ ಹಾಗೂ ಕಾನ್‌ಸ್ಟೆಬಲ್‌ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು.

ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.

ಹುದ್ದೆಗಳ ಸಂಖ್ಯೆ: 317

ADVERTISEMENT

ಹುದ್ದೆಗಳ ವಿವರ

1)ಸಬ್‌ ಇನ್ಸ್‌ಪೆಕ್ಟರ್‌: 17

ವೇತನ ಶ್ರೇಣಿ: ₹ 35,400 (ಮೂಲ ವೇತನ) ರಿಂದ ₹ 1,12,400

ವಯಸ್ಸು: ಕನಿಷ್ಠ 22, ಗರಿಷ್ಠ 28

ಅರ್ಜಿ ಶುಲ್ಕ:ಸಾಮಾನ್ಯ ಹಾಗೂ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ₹ 200.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಹಾಗೂ ನಿವೃತ್ತ ಯೋಧರಿಗೆ ಶುಲ್ಕದಿಂದ ವಿನಾಯಿತಿ ಇದೆ.

2) ಹೆಡ್‌ ಕಾನ್‌ಸ್ಟೆಬಲ್‌: 140

ವೇತನ ಶ್ರೇಣಿ:₹ 25,500 (ಮೂಲ ವೇತನ) ರಿಂದ ₹ 81,100

ವಯಸ್ಸು: ಕನಿಷ್ಠ 20, ಗರಿಷ್ಠ 25

ಅರ್ಜಿ ಶುಲ್ಕ: ಸಾಮಾನ್ಯ ಹಾಗೂ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ₹ 100. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಹಾಗೂ ನಿವೃತ್ತ ಯೋಧರಿಗೆ ಶುಲ್ಕದಿಂದ ವಿನಾಯಿತಿ ಇದೆ.

3) ಕಾನ್‌ಸ್ಟೆಬಲ್‌: 160 ಹುದ್ದೆಗಳು

ವೇತನ ಶ್ರೇಣಿ:₹ 21,700 (ಮೂಲ ವೇತನ) ರಿಂದ ₹ 69,100

ವಯಸ್ಸು: ಕನಿಷ್ಠ 20, ಗರಿಷ್ಠ 25

ಅರ್ಜಿ ಶುಲ್ಕ: ಸಾಮಾನ್ಯ ಹಾಗೂ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ₹ 100. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಹಾಗೂ ನಿವೃತ್ತ ಯೋಧರಿಗೆ ಶುಲ್ಕದಿಂದ ವಿನಾಯಿತಿ ಇದೆ.

ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ, ಪಿಯುಸಿ, ಎಂಜಿನಿಯರಿಂಗ್ ಪದವಿ ಪಡೆದಿರಬೇಕು. ಹೆಚ್ಚಿನ ಮಾಹಿತಿಗೆ ಈ ಕೆಳಗೆ ನೀಡಿರುವ ಅಧಿಸೂಚನೆಯ ಲಿಂಕ್‌ ನೋಡಬಹುದು.

ವಯೋಮಿತಿ: ಸರ್ಕಾರಿ ನಿಯಮಗಳ ಅನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ನೇಮಕಾತಿ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬೇಕು. ಇತರೆ ವಿಧಾನದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನ: 15 ಮಾರ್ಚ್ 2020

ಅಧಿಸೂಚನೆ ಲಿಂಕ್‌:http://bsf.nic.in/doc/recruitment/r0118.pdf

ವೆಬ್‌ಸೈಟ್‌:https://bsf.gov.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.