ADVERTISEMENT

ಸರ್ಕಾರಿ ಹುದ್ದೆ ನೇಮಕ ವಯೋಮಿತಿ ಸಡಿಲಿಕೆ: ಯಾವ ಹುದ್ದೆಗೆ ಗರಿಷ್ಠ ಮಿತಿ ಎಷ್ಟು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಸೆಪ್ಟೆಂಬರ್ 2025, 5:44 IST
Last Updated 30 ಸೆಪ್ಟೆಂಬರ್ 2025, 5:44 IST
   

ರಾಜ್ಯ ಸರ್ಕಾರ ಸರ್ಕಾರಿ ಉದ್ಯೋಗವನ್ನು ಬಯಸುವವರಿಗೆ ಶುಭ ಸುದ್ದಿ ನೀಡಿದೆ. ಸರ್ಕಾರಿ ನೇಮಖಾತಿಯಲ್ಲಿ 3 ವರ್ಷ ವಯೋಮಿತಿಯ ಸಡಿಲಿಕೆಯನ್ನು ಜಾರಿ ಮಾಡಿ ಆದೇಶ ಹೊರಡಿಸಿದೆ. ಎಲ್ಲಾ ವರ್ಗದ ಅಭ್ಯರ್ಥಿಗಳು ಈ ಆದೇಶಕ್ಕೆ ಒಳಪಡುತ್ತಾರೆ.

ಈ ಆದೇಶವು 2027ರ ಡಿಸೆಂಬರ್‌ 31ರವರೆಗೆ ಜಾರಿಯಲ್ಲಿರುತ್ತದೆ ಎಂದು ಸರ್ಕಾರ ತಿಳಿಸಿದೆ. ಆದೇಶದಲ್ಲಿ ಒಂದು ಬಾರಿ ಮಾತ್ರ ಅಭ್ಯರ್ಥಿಗೆ ಇದು ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ. 

ಹಲವು ವರ್ಷಗಳಿಂದ ನೇರ ನೇಮಕಾತಿಯ ಅಧಿಸೂಚಿಯನ್ನು ಹೊರಡಿಸಿರಲಿಲ್ಲ. ಇದರಿಂದಾಗಿ ಪರೀಕ್ಷೆ ತಯಾರಿ ನಡೆಸುತ್ತಿದ್ದ ಯುವಕರಿಗೆ ವಯೋಮಿತಿ ಮೀರಿ ಹೋಗುತ್ತಿತ್ತು. ಆದರೆ ಈಗ ಆ ಭಯವಿಲ್ಲ, ಸರ್ಕಾರಿ ಉದ್ಯೋಗ ಪಡೆಯಬೇಕು ಎನ್ನುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ. 

ADVERTISEMENT

ಯಾವ ಯಾವ ವರ್ಗಕ್ಕೆ ಎಷ್ಟು ವಯೋಮಿತಿಯ ಸಡಿಲಿಕೆ?

  • ಸಾಮಾನ್ಯ ವರ್ಗಕ್ಕೆ – ಮೊದಲು ಇದ್ದದ್ದು (35ವರ್ಷ), ಹೆಚ್ಚಳ (38 ವರ್ಷ)

  • ಒಬಿಸಿ ವರ್ಗಕ್ಕೆ – ಮೊದಲು ಇದ್ದದ್ದು (38ವರ್ಷ), ಹೆಚ್ಚಳ (41ವರ್ಷ)

  • ಎಸ್‌ಸಿ, ಎಸ್‌ಟಿ, ಪ್ರವರ್ಗ-1–  ಮೊದಲು ಇದ್ದದ್ದು (40ವರ್ಷ), ಹೆಚ್ಚಳ (43ವರ್ಷ)

ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ವಯೋಮಿತಿ ಎಷ್ಟು? 

  • ಎಸ್‌ಸಿ, ಎಸ್‌ಟಿ, ಒಬಿಸಿ – ಮೊದಲು ಇದ್ದದ್ದು (42ವರ್ಷ), ಹೆಚ್ಚಳ (45ವರ್ಷ)

  • ಸಾಮಾನ್ಯ – ಮೊದಲು ಇದ್ದದ್ದು (40ವರ್ಷ), ಹೆಚ್ಚಳ (43ವರ್ಷ)

ಎಸ್‌ಡಿಎ, ಎಫ್‌ಡಿಎ, ಗ್ರೂಪ್‌ ಸಿ ಹುದ್ದೆಗಳಿಗೆ :

  • ಎಸ್‌ಸಿ, ಎಸ್‌ಟಿ, ಒಬಿಸಿ – ಮೊದಲು ಇದ್ದದ್ದು (35 ವರ್ಷ), ಹೆಚ್ಚಳ (38 ವರ್ಷ)

  • ಸಾಮಾನ್ಯ – ಮೊದಲು ಇದ್ದದ್ದು (37 ವರ್ಷ), ಹೆಚ್ಚಳ (40 ವರ್ಷ)

ಪೊಲೀಸ್ ಕಾನ್ಸ್​ ಟೇಬಲ್ ನೇಮಕಾತಿ : 

  • ಎಸ್‌ಸಿ, ಎಸ್‌ಟಿ, ಒಬಿಸಿ – ಮೊದಲು ಇದ್ದದ್ದು (27ವರ್ಷ), ಹೆಚ್ಚಳ (30ವರ್ಷ)

  • ಸಾಮಾನ್ಯ – ಮೊದಲು ಇದ್ದದ್ದು (25ವರ್ಷ), ಹೆಚ್ಚಳ (28ವರ್ಷ) ‌

ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ನಿಗದಿಪಡಿಸಿದ ವಯೋಮಿತಿ : 

  • ಎಸ್‌ಸಿ, ಎಸ್‌ಟಿ, ಒಬಿಸಿ – ಮೊದಲು ಇದ್ದದ್ದು (32ವರ್ಷ), ಹೆಚ್ಚಳ (35ವರ್ಷ)

  • ಸಾಮಾನ್ಯ – ಮೊದಲು ಇದ್ದದ್ದು (30ವರ್ಷ), ಹೆಚ್ಚಳ (33ವರ್ಷ) ‌

ಕೆಎಎಸ್ ಹುದ್ದೆಗೆ ನಿಗದಿಪಡಿಸಿದ ವಯೋಮಿತಿ : 

  • ಎಸ್‌ಸಿ, ಎಸ್‌ಟಿ, ಒಬಿಸಿ – ಮೊದಲು ಇದ್ದದ್ದು (40ವರ್ಷ), ಹೆಚ್ಚಳ (43ವರ್ಷ)

  • ಸಾಮಾನ್ಯ – ಮೊದಲು ಇದ್ದದ್ದು ( 37ವರ್ಷ) ಹೆಚ್ಚಳ ( 40ವರ್ಷ) ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.