ADVERTISEMENT

ಸ್ಪರ್ಧಾತ್ಮಕ ಪರೀಕ್ಷೆ: ಸಾಮಾನ್ಯ ಜ್ಞಾನ – ಮಾದರಿ ಪ್ರಶ್ನೋತ್ತರಗಳು

ಕೆಎಸ್‌ಆರ್‌ಪಿ ಮತ್ತು ಸಹಾಯಕ ಪ್ರಾಧ್ಯಾಪಕರ ಹುದ್ದೆಗಾಗಿ ಸ್ಪರ್ಧಾತ್ಮಕ ಪರೀಕ್ಷೆ

ಪ್ರಜಾವಾಣಿ ವಿಶೇಷ
Published 9 ಫೆಬ್ರುವರಿ 2022, 16:19 IST
Last Updated 9 ಫೆಬ್ರುವರಿ 2022, 16:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭಾಗ 8
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವಿಶೇಷ ಮೀಸಲು ಸಬ್-ಇನ್‌ಸ್ಪೆಕ್ಟರ್ (ಕೆಎಸ್‌ಆರ್‌ಪಿ ಮತ್ತು ಐಆರ್‌ಬಿ) ಹುದ್ದೆಗಳು ಹಾಗೂ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳು ಶೀಘ್ರದಲ್ಲೇ ನಡೆಯಲಿವೆ. ಎರಡೂ ‍ಪರೀಕ್ಷೆಗಳಲ್ಲಿರುವ ‘ಸಾಮಾನ್ಯ ಜ್ಞಾನ’ ವಿಷಯಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.

1) ಗಂಗಾನದಿ ಬಯಲು ಭಾರತದಲ್ಲಿ ಅತಿದೊಡ್ಡ ನದಿ ಬಯಲಾಗಿದ್ದು, ಇದು ದೇಶದ ಶೇ 28ರಷ್ಟು ನೀರಿನ ವ್ಯವಸ್ಥೆಯನ್ನು ಒಳಗೊಂಡಿದೆ. ಗಂಗಾನದಿ ಬಯಲಿನಲ್ಲಿ ದೇಶದ ಶೇ 43ರಷ್ಟು ಜನರು ವಾಸಿಸುತ್ತಾರೆ. ಹೀಗಾಗಿಯೇ ಗಂಗಾನದಿಯನ್ನು ………………ರಲ್ಲಿ ರಾಷ್ಟ್ರೀಯ ನದಿ (ನ್ಯಾಷನಲ್ ರಿವರ್) ಎಂದು ಘೋಷಿಸಲಾಗಿದೆ

ಎ) 2008 ಬಿ) 2014
ಸಿ) 2018 ಡಿ) 2001
ಉತ್ತರ:ಎ

ADVERTISEMENT

2) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ಸಾಂಕ್ರಾಮಿಕದಿಂದ ಕೃಷಿ ಮತ್ತು ಸಂಬಂಧಿತ ವಲಯಗಳು ತೀವ್ರ ಪರಿಣಾಮಕ್ಕೆ ಒಳಗಾಗಿವೆ. ಹಿಂದಿನ ವರ್ಷದಲ್ಲಿ ಶೇ 3.6ರಷ್ಟು ಬೆಳವಣಿಗೆ ಕಂಡಿದ್ದ ಈ ವಲಯ 2021-22ರಲ್ಲಿ ಶೇ 3.9ರಷ್ಟು ಬೆಳವಣಿಗೆ ಹೊಂದುವ ನಿರೀಕ್ಷೆ ಇದೆ.

2) ಭಾರತವು 2017-18ರ ವಿತ್ತ ಸಾಲಿನಲ್ಲಿ 285 ಮಿಲಿಯನ್ ಟನ್ ಆಹಾರ ಧಾನ್ಯ ಬೆಳೆದಿದ್ದರೆ, 2019-20ರಲ್ಲಿ 297.5 ಮಿಲಿಯನ್ ಟನ್ ಆಹಾರ ಧಾನ್ಯ ಬೆಳೆಯಲಾಗಿತ್ತು. 2020-21ರಲ್ಲಿ 308.6 ಮಿಲಿಯನ್ ಟನ್ ಆಹಾರ ಧಾನ್ಯ ಬೆಳೆಯಲಾಗಿದೆ.

3) 2020-21ರಲ್ಲಿ ಕೃಷಿ ಕ್ಷೇತ್ರವು ಒಟ್ಟು (ಗ್ರಾಸ್ ವೆಲ್ಯೂ ಎಡಿಷನ್‌ಗೆ –ಜಿವಿಎ) ಶೇ 20.2ರಷ್ಟು ಮೌಲ್ಯದ ಕೊಡುಗೆಯನ್ನು ನೀಡಿದ್ದರೆ 2021-22ರಲ್ಲಿ ಶೇಕಡ 18.8ರಷ್ಟು ಕೊಡುಗೆಯನ್ನು ನೀಡಲಿದೆ.

4) ಕೃಷಿ ಆಧಾರಿತ ಕೈಗಾರಿಕೆಯಲ್ಲಿ ಹತ್ತಿ ಆಧಾರಿತ ಕೈಗಾರಿಕೆ ಬಿಟ್ಟರೆ ನಂತರದ ಸ್ಥಾನದಲ್ಲಿರುವುದು ಸಕ್ಕರೆ ಕೈಗಾರಿಕೋದ್ಯಮ. ಅಂದರೆ, ದೇಶದಲ್ಲೇ ಸಕ್ಕರೆ ಉದ್ಯಮ ಕೃಷಿ ಆಧಾರಿತ ಕೈಗಾರಿಕೋದ್ಯಮದಲ್ಲಿ ಎರಡನೇ ಅತಿದೊಡ್ಡ ಉದ್ಯಮವಾಗಿದೆ. ಈ ಉದ್ಯಮದ ಮೇಲೆ, 5 ಕೋಟಿ ರೈತರು ಅವಲಂಬಿತರಾಗಿದ್ದಾರೆ. ಅಷ್ಟೇ ಅಲ್ಲ, ಭಾರತ ವಿಶ್ವದಲ್ಲೇ ಅತಿಹೆಚ್ಚು ಸಕ್ಕರೆ ಬಳಸುವ ರಾಷ್ಟ್ರವಾಗಿದೆ.
ಈ ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ

ಎ) ಹೇಳಿಕೆ 1, 2, ಮತ್ತು 5 ಮಾತ್ರ ಸರಿಯಾಗಿದೆ
ಬಿ) ಹೇಳಿಕೆ 3, 4, 5 ಮಾತ್ರ ಸರಿಯಾಗಿದೆ.
ಸಿ) ಯಾವ ಹೇಳಿಕೆಯೂ ಸರಿಯಾಗಿಲ್ಲ
ಡಿ) 1ರಿಂದ 4ರ ತನಕ ಎಲ್ಲಾ ಹೇಳಿಕೆಗಳು ಸರಿಯಾಗಿವೆ.
ಉತ್ತರ: ಡಿ

4) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ನೀತಿ ಆಯೋಗದ ಸುಸ್ಥಿರ ಅಭಿವೃದ್ಧಿ ಸೂಚ್ಯಂಕದ ಅನ್ವಯ ಭಾರತ ಪಡೆದಿರುವ ಒಟ್ಟಾರೆ ಅಂಕಗಳು 2018-19 ರಲ್ಲಿ 57 , 2019-20 ರಲ್ಲಿ 60ರಷ್ಟಿದ್ದು, 2020-21 ರಲ್ಲಿ 66ರಷ್ಟಾಗಿದ್ದು, ಸುಧಾರಣೆ ಕಂಡಿದೆ.

2) ಭಾರತವು ವಿಶ್ವದಲ್ಲಿ ಹತ್ತನೇ ಅತಿ ದೊಡ್ಡ ಅರಣ್ಯ ಪ್ರದೇಶವನ್ನು ಹೊಂದಿದ ರಾಷ್ಟ್ರವಾಗಿದೆ. ಭಾರತವು 2010 ರಿಂದ 2020ರ ಅವಧಿಯಲ್ಲಿ ತನ್ನ ಅರಣ್ಯ ಪ್ರದೇಶವನ್ನು ವಿಸ್ತರಿಸುವಲ್ಲಿ ಜಾಗತಿಕವಾಗಿ ಮೂರನೇ ಸ್ಥಾನದಲ್ಲಿದೆ. 2020ರಲ್ಲಿ, ಭಾರತದ ಒಟ್ಟು ಶೇ 24ರಷ್ಟು ಭೌಗೋಳಿಕ ಪ್ರದೇಶದಲ್ಲಿ ಅರಣ್ಯ ವಿಸ್ತರಣೆಯಾಗಿದ್ದು, ಇದು ಪ್ರಪಂಚದ ಒಟ್ಟು ಅರಣ್ಯ ಪ್ರದೇಶದ ಶೇ 2 ರಷ್ಟಿದೆ.

3) ಭಾರತವು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯ ದೃಷ್ಟಿಯಿಂದ 2022ರ ವೇಳೆಗೆ ಏಕ ಬಳಕೆಯ ಪ್ಲಾಸ್ಟಿಕ್‌ ಅನ್ನು ಹಂತಹಂತವಾಗಿ ತೆಗೆದುಹಾಕುವ ಗುರಿಯನ್ನು ಹೊಂದಿದೆ.

ಈ ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ

ಎ) 1, 2, ಮತ್ತು 3 ಹೇಳಿಕೆಗಳು ಸರಿಯಾಗಿವೆ

ಬಿ) ಹೇಳಿಕೆಗಳಲ್ಲಿ 2 ಮತ್ತು 3 ಮಾತ್ರ ಸರಿಯಾಗಿದೆ.

ಸಿ) ಯಾವ ಹೇಳಿಕೆಯೂ ಸರಿಯಾಗಿಲ್ಲ

ಡಿ) ಹೇಳಿಕೆ 3 ಮಾತ್ರ ಸರಿಯಾಗಿದೆ.
ಉತ್ತರ: ಎ

5) ಜನವರಿ 10, 2022ರ ಹೊತ್ತಿಗೆ ದೇಶದಲ್ಲಿ ಸುಮಾರು 61,400 ಸ್ಟಾರ್ಟ್ಅಪ್‌ಗಳನ್ನು ಗುರುತಿಸಲಾಗಿದೆ. ಬೆಂಗಳೂರಿಗಿಂತ ಹೆಚ್ಚು ಸ್ಟಾರ್ಟ್‌ಅಪ್‌ಗಳು ದೆಹಲಿಯಲ್ಲಿವೆ. ಹಾಗಾದರೆ ದೇಶದ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಸ್ಟಾರ್ಟ್ಅಪ್‌ಗಳು ಕಾರ್ಯನಿರ್ವಹಿಸುತ್ತಿವೆ?


ಎ) ಕರ್ನಾಟಕ

ಬಿ) ಮಹಾರಾಷ್ಟ್ರ

ಸಿ) ಆಂಧ್ರಪ್ರದೇಶ

ಡಿ) ದೆಹಲಿ
ಉತ್ತರ:ಬಿ

6) ನಮ್ಮ ದೇಶದಲ್ಲಿ 2018-19ರಲ್ಲಿ ಫಾರೆಕ್ಸ್ ರಿಸರ್ವ್ 411.9 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಇದ್ದರೆ 2021-22ರಲ್ಲಿ (31 ಡಿಸೆಂಬರ್ 2021ರ ಹೊತ್ತಿಗೆ) ಎಷ್ಟಿತ್ತು?

ಎ) 633.6 ಬಿಲಿಯನ್ ಅಮೆರಿಕನ್ ಡಾಲರ್

ಬಿ) 833.4 ಬಿಲಿಯನ್ ಅಮೆರಿಕನ್ ಡಾಲರ್

ಸಿ) 532.7 ಬಿಲಿಯನ್ ಅಮೆರಿಕನ್ ಡಾಲರ್

ಡಿ) 470.7 ಬಿಲಿಯನ್ ಅಮೆರಿಕನ್ ಡಾಲರ್
ಉತ್ತರ:ಎ

7) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ₹ 34 ಲಕ್ಷ ಕೋಟಿ ಬಜೆಟ್ ಮಂಡಿಸಿದ್ದಾರೆ.‌ ಭಾರತವನ್ನು ಮುಂದಿನ 100 ವರ್ಷಗಳ ಅವಧಿಗೆ ಸಜ್ಜುಗೊಳಿಸಲು `ಪಿಎಂ ಗತಿಶಕ್ತಿ ಯೋಜನೆಯು ಮಹತ್ವದ್ದು’ ಎಂದಿದ್ದಾರೆ. ಹಾಗಾದರೆ ಪಿಎಂ ಗತಿಶಕ್ತಿ ಯೋಜನೆಯಲ್ಲಿ ಈ ಕೆಳಗಿನ ಯಾವೆಲ್ಲಾ ಅಂಶಗಳು ಇವೆ?


ಎ) ರಸ್ತೆಗಳು, ರೈಲ್ವೆಗಳು, ವಿಮಾನ ನಿಲ್ದಾಣಗಳು, ಬಂದರುಗಳು, ಸಮೂಹ ಸಾರಿಗೆ, ಜಲ ಮಾರ್ಗಗಳು ಮತ್ತು ಲಾಜಿಸ್ಟಿಕ್ಸ್ ಮೂಲಸೌಕರ್ಯ.
ಬಿ) ಬಾಹ್ಯಾಕಾಶ ನಿಲ್ದಾಣಗಳು, ವಿಮಾನ ನಿಲ್ದಾಣಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಹಾಗೂ ಜಲಸಾರಿಗೆ
ಸಿ) ವಿಶ್ವ ದರ್ಜೆ ವಿಶ್ವವಿದ್ಯಾಲಯಗಳು, ಉತ್ತಮ ವಿದೇಶಿ ವಿನಿಮಯ ಸಂಗ್ರಹ, ಕಡಿಮೆದರದಲ್ಲಿ ಬ್ಯಾಂಕ್ ಸಾಲ
ಡಿ) ಮೇಲಿನ ಯಾವುದೂ ಅಲ್ಲ
ಉತ್ತರ: ಎ

8) ಕೇಂದ್ರ ಹಣಕಾಸು ಸಚಿವರು ಮಂಡಿಸಿದ ಬಜೆಟ್ ಹಿನ್ನೆಲೆಯಲ್ಲಿ ಕೆಳಗಿನ ಹೇಳಿಕೆಗಳನ್ನು ಗಮನಿಸಿ

1)ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಹೊಸದಾಗಿ ಪ್ರಾರಂಭಿಸಲಾಗುವುದು. ವರ್ಚುವಲ್ ಲ್ಯಾಬ್‌ಗಳು ಮತ್ತು ಸ್ಕಿಲಿಂಗ್-ಇ-ಲ್ಯಾಬ್‌ಗಳನ್ನು ಪ್ರಾರಂಭಿಸಲಾಗುವುದು. ಇದರ ಮೂಲಕ ನಿರ್ಣಾಯಕ ಚಿಂತನಾ ಕೌಶಲ್ಯ ಮತ್ತು ಕಲಿಕೆಯ ವಾತಾವರಣವನ್ನು ಉತ್ತೇಜಿಸಲು ಅವಕಾಶ ನೀಡಲಾಗುವುದು

2) ‘ಪಿಎಂ ಇ–ವಿದ್ಯಾ’ ಯೋಜನೆ ಅಡಿಯಲ್ಲಿ ‘ಒನ್ ಕ್ಲಾಸ್ ಒನ್ ಟಿವಿ ಚಾನೆಲ್’ ಅನ್ನು ವಿಸ್ತರಿಸಲಾಗುವುದು.‘ಒನ್ ಕ್ಲಾಸ್ ಒನ್ ಟಿವಿ ಚಾನೆಲ್’ ಯೋಜನೆ ಅಡಿಯಲ್ಲಿ ಟಿವಿ ಚಾನೆಲ್‌ಗಳ ಸಂಖ್ಯೆಯನ್ನು 12 ರಿಂದ 200ಕ್ಕೆ ಹೆಚ್ಚಿಸಲಾಗುವುದು. ಇದು 1ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ ನೀಡಲು ರಾಜ್ಯಗಳಿಗೆ ನೆರವಾಗಲಿದೆ ಎಂದು ಬಜೆಟ್ ಭಾಷಣದಲ್ಲಿ ತಿಳಿಸಲಾಗಿದೆ.

3) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್‌ನಲ್ಲಿ ಡಿಜಿಟಲ್ ವಿಶ್ವವಿದ್ಯಾಲಯ ಸ್ಥಾಪಿಸುವ ಯೋಜನೆ ಘೋಷಿಸಿದ್ದಾರೆ. ಈ ಡಿಜಿಟಲ್ ವಿಶ್ವವಿದ್ಯಾಲಯವು ದೇಶದಾದ್ಯಂತ ವಿದ್ಯಾರ್ಥಿಗಳಿಗೆ ವಿಶ್ವ ದರ್ಜೆಯ ಶಿಕ್ಷಣಕ್ಕೆ ಅವಕಾಶ ಒದಗಿಸುತ್ತವೆ. ಕೇಂದ್ರವು ಸ್ಥಾಪಿಸಲು ಯೋಜಿಸಿರುವ ಡಿಜಿಟಲ್ ವಿಶ್ವವಿದ್ಯಾಲಯವು ನೆಟ್‌ವರ್ಕ್‌ ‘ಹಬ್‌‘ ಮತ್ತು ‘ಸ್ಪೋಕ್’ ಮಾದರಿಯನ್ನು ಆಧರಿಸಿದೆ.
4) ಡಿಜಿಟಲ್ ವಿಶ್ವವಿದ್ಯಾಲಯವನ್ನು ಐಎಸ್‌ಟಿಇ ಮಾನದಂಡಗಳ ಪ್ರಕಾರ ಸ್ಥಾಪಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. ಐಎಸ್‌ಟಿಇ ಮಾನದಂಡಗಳು ಬೋಧನೆ ಮತ್ತು ಕಲಿಕೆಯಲ್ಲಿ ತಂತ್ರಜ್ಞಾನದ ಬಳಕೆಗೆ ಮಾನದಂಡಗಳಾಗಿವೆ.

ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ

ಎ) ಹೇಳಿಕೆ 1, 2, ಮತ್ತು 4 ಮಾತ್ರ ಸರಿಯಾಗಿದೆ
ಬಿ) ಹೇಳಿಕೆ 1, 3, 4 ಮಾತ್ರ ಸರಿಯಾಗಿದೆ.
ಸಿ) ಯಾವ ಹೇಳಿಕೆಯೂ ಸರಿಯಾಗಿಲ್ಲ
ಡಿ) 1ರಿಂದ 4ರ ತನಕ ಎಲ್ಲಾ ಹೇಳಿಕೆಗಳು ಸರಿಯಾಗಿವೆ.
ಉತ್ತರ: ಡಿ

9) ಯಾವ ವರ್ಷವನ್ನು 'ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ’ ಎಂದು ಘೋಷಿಸಲಾಗಿದೆ?

ಎ) 2022 ಬಿ) 2023
ಸಿ) 2024 ಡಿ) 2025

10) ‘1938ರ ವಿಮಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಎಫ್‌ಡಿಐ ಮಿತಿಯನ್ನು ಶೇ 49 ರಿಂದ ಶೇ ……………………..ಕ್ಕೆ ಹೆಚ್ಚಿಸಲು ಹಾಗೂ ಸುರಕ್ಷತೆಗಳೊಂದಿಗೆ ವಿದೇಶಿ ಮಾಲೀಕತ್ವಕ್ಕೆ ಮತ್ತು ನಿಯಂತ್ರಣಕ್ಕೆ ಅವಕಾಶ ನೀಡಲಾಗುವುದು ಎಂದು ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮ್ ಅವರು ತಿಳಿಸಿದ್ದಾರೆ

ಎ) ಶೇ 74

ಬಿ) ಶೇ 85

ಸಿ) ಶೇ 65

ಡಿ) ಶೇ 100
ಉತ್ತರ:ಎ

11) ಬ್ಲಾಕ್‌ಚೈನ್‌ ತಂತ್ರಜ್ಞಾನವನ್ನು ಬಳಸಿ ಶೀಘ್ರದಲ್ಲೇ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಡಿಜಿಟಲ್‌ ರೂಪಾಯಿಯಾದ ಕೇಂದ್ರೀಯ ಬ್ಯಾಂಕ್‌ನ ಡಿಜಿಟಲ್‌ ಕರೆನ್ಸಿ (ಸಿಬಿಡಿಸಿ) ವಿತರಿಸಲಿದೆ. ಡಿಜಿಟಲ್‌ ರೂಪದಲ್ಲಿ ಕರೆನ್ಸಿ ತರಲು ಯಾವ ಕಾಯ್ದೆಗೆ ತಿದ್ದುಪಡಿ ತರಲಾಗುವುದು?

ಎ) 1935ರ ಆರ್‌ಬಿಐ ಕಾಯ್ದೆ

ಬಿ) 1944ರ ಆರ್‌ಬಿಐ ಕಾಯ್ದೆ

ಸಿ) 1934ರ ಆರ್‌ಬಿಐ ಕಾಯ್ದೆ

ಡಿ) 1947ರ ಆರ್‌ಬಿಐ ಕಾಯ್ದೆ
ಉತ್ತರ: ಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.