ಪ್ರಸಾರ ಭಾರತಿ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಿದ್ದು, ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆ ಹೆಸರು: ಬ್ರಾಡ್‌ಕಾಸ್ಟ್ ಎಕ್ಸಿಕ್ಯುಟಿವ್, ಕಾಪಿ ರೈಟರ್, ಮುಖ್ಯ ಸಲಹೆಗಾರ ಸೇರಿದಂತೆ ಇನ್ನೂ ಅನೇಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು ಹುದ್ದೆ: 60
ಉದ್ಯೋಗ ಸ್ಥಳ: ದೆಹಲಿ, ಮುಂಬೈ, ಚೆನ್ನೈ, ಲಖನೌ, ಭೋಪಾಲ್ ಬೆಂಗಳೂರು, ಕೋಲ್ಕತ್ತಾ ಸೇರಿದಂತೆ ದೇಶಾದ್ಯಂತ ಇರುವ ವಿವಿಧ ಪ್ರಸಾರ ಭಾರತಿ ಕಚೇರಿಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.
ವಿದ್ಯಾರ್ಹತೆ:
ಯಾವುದೇ ವಿಷಯದಲ್ಲಿ ಪದವಿ ಅಥವಾ ಪತ್ರಿಕೋದ್ಯಮ, ಮಾಧ್ಯಮ, ಸಂವಹನದಲ್ಲಿ ಸ್ನಾತಕೋತ್ತರ ಪಡೆದಿರಬೇಕು.
ವೇತನ ಶ್ರೇಣಿ :
ಕಾಪಿ ರೈಟರ್ ಹುದ್ದೆ– ₹55,000 (ತಿಂಗಳಿಗೆ)
ಬ್ರಾಡ್‌ಕಾಸ್ಟ್ ಎಕ್ಸಿಕ್ಯುಟಿವ್ ಹುದ್ದೆ – ₹50,000 (ತಿಂಗಳಿಗೆ)
ವಿವಿಧ ವಿಭಾಗದ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ₹25,000 ರಿಂದ ₹80,000 ರವರೆಗೆ ಮಾಸಿಕ ವೇತನ ಸಿಗಲಿದೆ. ಮೇಲಿನ ಎಲ್ಲಾ ಹುದ್ದೆಗಳಿಗೆ ಅಭ್ಯರ್ಥಿಯು ಕನಿಷ್ಠ ಐದು ವರ್ಷ ಅನುಭವ ಪಡೆದಿರಬೇಕು.
ವಯೋಮಿತಿ: 30 ರಿಂದ 40 ವರ್ಷ, ಸರ್ಕಾರದ ನಿಯಮಾವಳಿಗಳ ಪ್ರಕಾರ SC/ST/OBC ಮತ್ತು ಇತರೆ ವರ್ಗದ ಅಭ್ಯರ್ಥಿಗಳಿಗೆ ವಯೋ ವಿನಾಯಿತಿ (Age Relaxation) ನೀಡಲಾಗುತ್ತದೆ. ಮಹಿಳೆಯರು ಮತ್ತು ವಿಶೇಷ ವರ್ಗದ ಅಭ್ಯರ್ಥಿಗಳಿಗೆ ಸಡಿಲಿಕೆ ಇರಬಹುದು.
ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ಪ್ರಸಾರ ಭಾರತಿ ಅಧಿಕೃತ ವೆಬ್‌ಸೈಟ್ http://prasarbharati.gov.in ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 7ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಅಕ್ಟೋಬರ್ 21 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸುವ ಮೊದಲು ಪ್ರಕಟಣೆ ಸಂಪೂರ್ಣ ಓದಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡುವುದು ಮುಖ್ಯ.
ಹೆಚ್ಚಿನ ವಿವರಗಳಿಗಾಗಿ https://prasarbharati.gov.in/pbvacancies/
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.