ಸಾಂದರ್ಭಿಕ ಚಿತ್ರ
ಬೆಂಗಳೂರು: ಭಾರತದ ಕೇಂದ್ರ ಬ್ಯಾಂಕ್ ಆಗಿರುವ ಪ್ರತಿಷ್ಠಿತ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (ಆರ್‌ಬಿಐ) ಕೆಲಸ ಮಾಡುವ ಅವಕಾಶ ಬಹಳ ಜನರಿಗೆ ಸಿಗುವುದಿಲ್ಲ. ಅದರಲ್ಲೂ ಹಣಕಾಸು, ವಾಣಿಜ್ಯ ಕ್ಷೇತ್ರದಲ್ಲಿ ಉನ್ನತ ಪದವಿ, ಅನುಭವ ಪಡೆದವರೇ ಉದ್ಯೋಗಕ್ಕಾಗಿ ಆರ್‌ಬಿಐ ಬಾಗಿಲು ತಟ್ಟುವುದು ಹೆಚ್ಚು.
ಇದೀಗ ಆರ್‌ಬಿಐನ ದೇಶದ ವಿವಿಧ ಪ್ರಾದೇಶಿಕ ಕಚೇರಿಗಳಲ್ಲಿ ಆಫೀಸ್ ಅಟೆಂಡೆಂಟ್ (ಕಚೇರಿ ಸಹಾಯಕ) ಆಗಿ ಕೆಲಸ ಮಾಡಲು 10 ನೇ ತರಗತಿ ಪಾಸಾಗಿರುವವರಿಗೆ (ಕನಿಷ್ಠ ವಿದ್ಯಾರ್ಹತೆ) ಅವಕಾಶ ಒದಗಿ ಬಂದಿದೆ.
ಒಟ್ಟು 572 ಆಫೀಸ್ ಅಟೆಂಡೆಂಟ್ ಹುದ್ದೆಗಳಿಗೆ ಆನ್‌ಲೈನ್ ನೇಮಕಾತಿ ಪ್ರಕ್ರಿಯೆಯನ್ನು ಆರ್‌ಬಿಐ ಪ್ರಾರಂಭಿಸಿದೆ. ಅರ್ಜಿ ಸಲ್ಲಿಸಲು ಇದೇ ಫೆಬ್ರುವರಿ 4 ಕಡೆಯ ದಿನ.
ವಯೋಮಿತಿ
10ನೇ ತರಗತಿ ಪಾಸಾಗಿರುವ 18 ರಿಂದ 25ರ ವಯೋಮಾನದ ಅಭ್ಯರ್ಥಿಗಳು ಆರ್‌ಬಿಐ ಆಫೀಸ್ ಅಟೆಂಡೆಂಟ್ ಹುದ್ದೆಗಳಿಗೆ ಅರ್ಜಿ ಅಲ್ಲಿಸಲು ಅರ್ಹ. ಮೀಸಲು ವರ್ಗಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ.
ಶುಲ್ಕ
ಎಸ್‌ಸಿ, ಎಸ್‌ಟಿ, ಅಂಗವಿಕಲ ಮತ್ತು ಮಾಜಿ ಸೈನಿಕ ಕೋಟಾದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ₹50. ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ₹450.
ವೇತನ
ಆರ್‌ಬಿಐ ಆಫೀಸ್ ಅಟೆಂಡೆಂಟ್ ಆಗಿ ನೇಮಕ ಆಗುವ ಅಭ್ಯರ್ಥಿಗಳು ಆರಂಭಿಕವಾಗಿ ಬೇಸಿಕ್ ಹಾಗೂ ಇತರ ಎಲ್ಲ ಭತ್ಯೆಗಳು ಸೇರಿ ಗರಿಷ್ಠ ₹46,029 ವೇತನ ಸಿಗಲಿದೆ.
ನೇಮಕಾತಿ ಪರೀಕ್ಷೆ ಹೇಗಿರಲಿದೆ?
ಯಶಸ್ವಿಯಾಗಿ ಆನ್‌ಲೈನ್ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎರಡು ಹಂತದ ಆನ್‌ಲೈನ್ (ಸಿಬಿಟಿ) ಪರೀಕ್ಷೆ ಎದುರಿಸಬೇಕಾಗುತ್ತದೆ.
ಮೊದಲ ಭಾಗದ ಆನ್‌ಲೈನ್ ಪರೀಕ್ಷೆಯಲ್ಲಿ ಒಂದೇ ಪತ್ರಿಕೆ ಇರುತ್ತದೆ. ಬಹು ಆಯ್ಕೆ ಮಾದರಿಯ 120 ಪ್ರಶ್ನೆಗಳು ಪತ್ರಿಕೆಯನ್ನು ಎದುರಿಸಬೇಕು. ಒಟ್ಟು ಅಂಕ 120. ಇದರಲ್ಲಿ ಗ್ರಹಿಕೆ ಸಾಮರ್ಥ್ಯ, ಸಾಮಾನ್ಯ ಜ್ಞಾನ, ಬೇಸಿಕ್ ಇಂಗ್ಲಿಷ್, ಸಂಖ್ಯಾ ಸಾಮರ್ಥ್ಯದ ತಲಾ 30 ಪ್ರಶ್ನೆಗಳು ಇರಲಿವೆ.
ಈ ಪರೀಕ್ಷೆಯಲ್ಲಿ ಶಾರ್ಟ್ ಲಿಸ್ಟ್‌ಗೆ ಒಳಗಾಗುವ ಅಭ್ಯರ್ಥಿಗಳನ್ನು ಎರಡನೇ ಭಾಗದ ಪರೀಕ್ಷೆಯಾಗಿ ಭಾಷಾ ಸಾಮರ್ಥ್ಯದ Language Proficiency Test (LPT) ಪರೀಕ್ಷೆಗೆ ಒಳಪಡಬೇಕಾಗುತ್ತದೆ. ಇದು ಸಹ ಆನ್‌ಲೈನ್ ಪರೀಕ್ಷೆಯಾಗಿರುತ್ತದೆ. ಯಾವ ಅಭ್ಯರ್ಥಿ ಯಾವ ರಾಜ್ಯದಲ್ಲಿ ಕೆಲಸ ಮಾಡಲು ಇಚ್ಛೆ ವ್ಯಕ್ತಪಡಿಸಿರುತ್ತಾನೋ ಅಂತಹ ರಾಜ್ಯ ಭಾಷೆ ಅಥವಾ ಸ್ಥಳೀಯ ಭಾಷೆಯನ್ನು ಆತ ಬಲ್ಲವನಾಗಿರುವನೇ ಎಂಬುದನ್ನು ಈ ಹಂತದಲ್ಲಿ ಪರೀಕ್ಷೆ ನಡೆಸಲಾಗುತ್ತದೆ.
ಇದೇ ಫೆಬ್ರುವರಿ 28 ರಿಂದ ಮಾರ್ಚ್ 1ರವರೆಗೆ ಈ ಪರೀಕ್ಷೆಗಳು ನಡೆಯಲಿವೆ. ಭಾಷಾ ಸಾಮರ್ಥ್ಯ ಪರೀಕ್ಷೆ ನಂತರ ಆರ್‌ಬಿಐ ವೆಬ್‌ಸೈಟ್‌ನಲ್ಲಿ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
ಕೆಲಸದ ಸ್ವರೂಪ
ಆಫೀಸ್ ಅಟೆಂಡೆಂಟ್ ಆಗುವ ಅಭ್ಯರ್ಥಿಗಳು ಆರ್‌ಬಿಐ ಪ್ರಾದೇಶಿಕ ಕಚೇರಿಗಳಲ್ಲಿ 'ಅಟೆಂಡರ್' ರೀತಿ ಕೆಲಸ ನಿರ್ವಹಿಸಬೇಕಾಗುತ್ತದೆ. ಕಚೇರಿ ವೇಳೆ ಅಧಿಕಾರಿಗಳಿಗೆ ಸಹಾಯಕರಾಗಿ, ಕಡತಗಳ ಸಾಗಣೆ, ಹಸ್ತಾಂತರ ಸೇರಿ ಮೇಲಾಧಿಕಾರಿಗಳು ಸೂಚಿಸಿದ ಮುಂತಾದ ಕೆಲಸಗಳನ್ನು ನಿರ್ವಹಿಸಬೇಕಾಗುತ್ತದೆ. ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಆರ್‌ಬಿಐ ಪ್ರಾದೇಶಿಕ ಕಚೇರಿಯಲ್ಲಿ 16 ಹುದ್ದೆಗಳಿವೆ.
ಹುದ್ದೆಗಳ ವಿಂಗಡಣೆ ಇಂತಿದೆ..
rbi jobs
ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಹಾಗೂ ವಿವರವಾದ ಅಧಿಸೂಚನೆ ಪರಿಶೀಲಿಸಲು (Recruitment for the Post of Office Attendant in Reserve Bank of India - Panel Year 2025) ವೆಬ್‌ಸೈಟ್ https://rbi.org.in/ ಗೆ ಭೇಟಿ ನೀಡಬೇಕು.
***
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.