AI ಚಿತ್ರ
ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಕೇಂದ್ರ ಗೃಹ ಇಲಾಖೆಯ ಅಂಗ ಸಂಸ್ಥೆಯಾದ ಕೇಂದ್ರಿಯ ಸಶಸ್ತ್ರ ಪೊಲೀಸ್ ಪಡೆಯಲ್ಲಿ (ಸಿಎಪಿಎಫ್) 357 ಅಸಿಸ್ಟಂಟ್ ಕಮಾಂಡೆಂಟ್ ಹುದ್ದೆಗಳ ಭರ್ತಿಗೆ ನೇಮಕಾತಿ ಪರೀಕ್ಷೆ ನಡೆಸುತ್ತಿದೆ.
ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಾಸಾದ ಪುರುಷ ಹಾಗೂ ಮಹಿಳೆಯರು ಇದೇ ಮಾರ್ಚ್ 25ರೊಳಗೆ ಅರ್ಜಿ ಸಲ್ಲಿಸಬೇಕು. ಸಾಮಾನ್ಯ ವರ್ಗದವರಿಗೆ ಗರಿಷ್ಠ ವಯೋಮಿತಿ 20 ರಿಂದ 25. ಮೀಸಲು ವರ್ಗದವರಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ.
ದೈಹಿಕ ಪರೀಕ್ಷೆ, ಲಿಖಿತ ಪರೀಕ್ಷೆ (ಬಹುಆಯ್ಕೆ ಮಾದರಿಯ ಎರಡು ಪೇಪರ್) ವೈದ್ಯಕೀಯ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ನೇಮಕಾತಿ ನಡೆಯಲಿದೆ.
ಸಿಎಪಿಎಫ್‌ನ ವಿಭಾಗಗಳಾದ ಸಿಆರ್‌ಪಿಎಫ್‌ನಲ್ಲಿ 204, ಸಿಐಎಸ್‌ಎಫ್‌ನಲ್ಲಿ 92, ಎಸ್ಎಸ್‌ಬಿಯಲ್ಲಿ 33, ಬಿಎಸ್‌ಎಫ್‌ನಲ್ಲಿ 24 ಹಾಗೂ ಐಟಿಬಿಪಿಯಲ್ಲಿ 4 ಅಸಿಸ್ಟಂಟ್ ಕಮಾಂಡೆಂಟ್ ಖಾಲಿ ಹುದ್ದೆಗಳಿವೆ.
ಅರ್ಜಿ ಸಲ್ಲಿಸುವ ಶುಲ್ಕ ₹200. ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗೆ https://upsconline.gov.in/ ಗೆ ಭೇಟಿ ನೀಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.