ADVERTISEMENT

ವಿಟಿಯುನಲ್ಲಿ ಈ ವರ್ಷ 15 ಆನ್‌ಲೈನ್‌ ಕೋರ್ಸ್‌ ಆರಂಭ

ಎಂಜಿನಿಯರಿಂಗೇತರ ಕಾರ್ಯಕ್ರಮಗಳಿಗೆ ಯುಜಿಟಿ, ಎಐಸಿಟಿಇ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2023, 12:32 IST
Last Updated 1 ಸೆಪ್ಟೆಂಬರ್ 2023, 12:32 IST
   

ಮೈಸೂರು: ‘ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದಿಂದ ಇದೇ ಮೊದಲ ಬಾರಿಗೆ ಆನ್‌ಲೈನ್‌ನಲ್ಲಿ 3 ಪದವಿ ಮತ್ತು 12 ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಈ ಶೈಕ್ಷಣಿಕ ವರ್ಷದಿಂದ ಆರಂಭಿಸಲಾಗಿದ್ದು, ಸೆ.30ರೊಳಗೆ ಪ್ರವೇಶ ಪಡೆಯಬಹುದು’ ಎಂದು ಕುಲಪತಿ ಪ್ರೊ.ಎಸ್.ವಿದ್ಯಾಶಂಂಕರ್‌ ತಿಳಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ಹಾಗೂ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ)ದಿಂದ ಅನುಮೋದನೆ ಪಡೆದುಕೊಳ್ಳಲಾಗಿದೆ. ಜಾಗತಿಕವಾಗಿ ಯಾವುದೇ ಪ್ರದೇಶದಿಂದ ಒಟ್ಟು 1.10 ಲಕ್ಷ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಅವಕಾಶವಿದೆ. ಎಂಜಿನಿಯರಿಂಗ್‌ ಹೊರತುಪಡಿಸಿದ ಕೋರ್ಸ್‌ಗಳು ಇವಾಗಿವೆ’ ಎಂದು ಮಾಹಿತಿ ನೀಡಿದರು.

‘ಆನ್‌ಲೈನ್‌ ಶಿಕ್ಷಣಕ್ಕಾಗಿ ಹೆಚ್ಚುತ್ತಿರುವ ಬೇಡಿಕೆ ಮತ್ತು ಇಂದಿನ ಕಲಿಯುವವರ ಅಗತ್ಯಗಳನ್ನು ಗುರುತಿಸಿ ಆನ್‌ಲೈನ್‌ನಲ್ಲಿ ಕಲಿಕೆಗೆ ಮುಂದಾಗಿದ್ದೇವೆ. ವಿದ್ಯಾರ್ಥಿಗಳು ತಾವಿರುವ ಸ್ಥಳದಿಂದಲೇ ತಮ್ಮ ಶೈಕ್ಷಣಿಕ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಬಹುದು. ಪ್ರವೇಶದಿಂದ ಹಿಡಿದು ಪರೀಕ್ಷೆಗಳವರೆಗೆ ಎಲ್ಲ ಪ್ರಕ್ರಿಯೆಗಳೂ ಸಂ‍ಪೂರ್ಣವಾಗಿ ಅನ್‌ಲೈನ್‌ನಲ್ಲೇ ನಡೆಯಲಿವೆ. ಇದಕ್ಕೆ ಅಗತ್ಯವಾದ ಎಲ್ಲ ವ್ಯವಸ್ಥೆಗಳನ್ನೂ ಮಾಡಿಕೊಂಡಿದ್ದೇವೆ. ಶುಕ್ರವಾರದಿಂದಲೇ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ’ ಎಂದು ವಿವರಿಸಿದರು.

ADVERTISEMENT

‘ಸರ್ಕಾರಿ ತಾಂತ್ರಿಕ ವಿಶ್ವವಿದ್ಯಾಲಯಗಳ ಪೈಕಿ ವಿಟಿಯುಗೆ ಮಾತ್ರವೇ ಮೊದಲಿಗೆ ಅನುಮೋದನೆ ಪಡೆದುಕೊಂಡಿದೆ. ಖಾಸಗಿಗೆ ಹೋಲಿಸಿದರೆ ನಮ್ಮಲ್ಲಿ ಶುಲ್ಕ ಶೇ 70ರಷ್ಟು ಕಡಿಮೆ ಇದೆ. ಉದ್ಯೋಗ ತರಬೇತಿ ಬಯಸಿದವರಿಗೆ ಆನ್‌ಲೈನ್‌ನಲ್ಲೇ ಒದಗಿಸಲಾಗುವುದು. https://onlinedegree.vtu.ac.in/ ಜಾಲತಾಣದ ಮೂಲಕ ಪ್ರವೇಶ ಪಡೆಯಬಹುದು’ ಎಂದರು.

ವಿಟಿಯು ಆನ್‌ಲೈನ್ ಶಿಕ್ಷಣದ ನಿರ್ದೇಶಕ ಟಿ.ಪಿ.ರೇಣುಕಮೂರ್ತಿ, ಉಪ ನಿರ್ದೇಶಕಿ ಪಿ.ಸಂಧ್ಯಾ, ಸಹಾಯಕ ನಿರ್ದೇಶಕ ಪಿ.ಕೆ.ಕುಮಾರ, ವಿಶೇಷ ಅಧಿಕಾರಿ ಪಿ. ಪ್ರಕೃತಿ ಇದ್ದರು.

ಯಾವ್ಯಾವ ಕೋರ್ಸ್‌ಗಳು?

ಯುಜಿ (6 ಸೆಮಿಸ್ಟರ್‌)

* ಬಿಬಿಎ–ಡಿಜಿಟಲ್‌ ಮಾರ್ಕೆಟಿಂಗ್‌

* ಬಿಸಿಎ–ಡೇಟಾ ಸೈನ್ಸ್‌

* ಬಿಸಿಎ –ಡೇಟಾ ಅನಾಲಿಟಿಕ್ಸ್‌

ಪಿಜಿ (4 ಸೆಮಿಸ್ಟರ್‌)

* ಎಂಬಿಎ– ಡಿಜಿಟಲ್ ಮಾರ್ಕೆಟಿಂಗ್

* ಎಂಬಿಎ– ಎಚ್‌ಆರ್‌/ ಎಂಎಂ/ ಎಫ್ಎಂ

* ಎಂಬಿಎ–ಬ್ಯುಸಿನೆಸ್‌ ಅನಾಲಿಟಿಕ್ಸ್‌

* ಮಾಸ್ಟರ್‌ ಆಫ್‌ ಕಂಪ್ಯೂಟರ್‌ ಅಪ್ಲಿಕೇಷನ್ಸ್‌

* ಎಂಸಿಎ– ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ ಅಂಡ್ ಡೇಟಾ ಸೈನ್ಸ್‌

* ಎಂಸಿಎ– ಸೈಬರ್‌ ಸೆಕ್ಯುರಿಟಿ ಅಂಡ್ ಕ್ಲೌಡ್ ಕಂಪ್ಯೂಟಿಂಗ್‌

ಪಿಜಿ ಡಿಪ್ಲೊಮಾ

* ಫೈನಾನ್ಷಿಯಲ್ ಅನಾಲಿಟಿಕ್ಸ್, ಮಾರ್ಕೆಟಿಂಗ್ ಅನಾಲಿಟಿಕ್ಸ್, ಎಚ್‌ಆರ್ ಅನಾಲಿಟಿಕ್ಸ್

* ಇನ್ವೆಸ್ಟ್‌ಮೆಂಟ್ ಮ್ಯಾನೇಜ್‌ಮೆಂಟ್, ರಿಸ್ಕ್ ಮ್ಯಾನೇಜ್‌ಮೆಂಟ್, ರಿಟೇಲ್ ಮ್ಯಾನೇಜ್‌ಮೆಂಟ್

* ಎಐ ಅಂಡ್ ಡೇಟಾ ಸೈನ್ಸ್

* ಸೈಬರ್ ಸೆಕ್ಯುರಿಟಿ ಅಂಡ್ ಕ್ಲೌಡ್ ಕಂಪ್ಯೂಟಿಂಗ್

* ಬಿಗ್‌ ಡೇಟಾ ಅನಾಲಿಟಿಕ್ಸ್

* ಸಾಫ್ಟ್‌ವೇರ್‌ ಟೆಸ್ಟಿಂಗ್

ವಿದೇಶಗಳಲ್ಲಿ ಕೇಂದ್ರ ಈ ಕಾರ್ಯಕ್ರಮಗಳನ್ನು ನಡೆಸಲು ಫ್ರಾಂಚೈಸಿ ಕೊಡುವುದಿಲ್ಲ. ನಾವೇ ನಿರ್ವಹಿಸುತ್ತೇವೆ. ಮುಂದಿನ ದಿನಗಳಲ್ಲಿ 25ರಿಂದ 30 ದೇಶಗಳಲ್ಲಿ ಸಹಾಯವಾಣಿ ಕೇಂದ್ರ ಆರಂಭಿಸಲು ಯೋಜಿಸಲಾಗಿದೆ.
– ಪ್ರೊ.ಎಸ್. ವಿದ್ಯಾಶಂಕರ್‌, ಕುಲಪತಿ, ವಿಟಿಯು

ಪ್ರೊ.ಎಸ್. ವಿದ್ಯಾಶಂಕರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.