ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ: ಪಶು ಸೇವೆಗೆ ನೆರವು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 23:30 IST
Last Updated 8 ಫೆಬ್ರುವರಿ 2026, 23:30 IST
   

ಬಿಜಿಎಂ ಫೌಂಡೇಷನ್ 2025– 26ನೇ ಸಾಲಿನ ಪಶು-ಸೇವಾ ವಿದ್ಯಾರ್ಥಿವೇತನ ನೀಡಲು ಪ್ರತಿಭಾವಂತ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಆಯ್ಕೆಯಾದವರಿಗೆ ಪಶುಪಾಲನೆ ಮತ್ತು ಪಶುಕಲ್ಯಾಣ ಕ್ಷೇತ್ರದಲ್ಲಿ ತಮ್ಮ ಅಧ್ಯಯನವನ್ನು ಮುಂದುವರಿಸಲು ನಿಗದಿತ ಆರ್ಥಿಕ ಸಹಾಯವನ್ನು ಒದಗಿಸಲಾಗುತ್ತದೆ.

ಅರ್ಹತೆ:

  • ಭಾರತದಲ್ಲಿ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ದಾಖಲಾಗಿ ಓದುತ್ತಿರುವ ಭಾರತೀಯ ನಾಗರಿಕರಾಗಿರಬೇಕು.

    ADVERTISEMENT
  • ಪಶುವೈದ್ಯಕೀಯ ವಿಜ್ಞಾನ, ಪಶುಸಂಗೋಪನೆ, ಕೃಷಿ, ಹಾಲು ಉತ್ಪಾದನಾ ವಿಜ್ಞಾನ, ಪಶುಸಂವರ್ಧನೆ ಮತ್ತು ಕೋಳಿ ನಿರ್ವಹಣೆ, ಪ್ಯಾರಾ ವೆಟರಿನರಿ, ಮೇವು ನಿರ್ವಹಣೆ ಅಥವಾ ಸಂಬಂಧಿತ ಕ್ಷೇತ್ರಗಳಲ್ಲಿ ಯಾವುದೇ ವರ್ಷದಲ್ಲಿ ಪೂರ್ಣಕಾಲಿಕ ಪದವಿ, ಸ್ನಾತಕೋತ್ತರ ಕೋರ್ಸ್‌ (ಸಾಮಾನ್ಯ/ವೃತ್ತಿಪರ) ಅಥವಾ ಡಿಪ್ಲೊಮಾ ಓದುತ್ತಿರುವವರಾಗಿರಬೇಕು. ಹಿಂದಿನ ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ ಶೇ 50ರಷ್ಟು ಅಂಕಗಳು ಅಥವಾ ಸಮಾನವಾದ ಸಿಜಿಪಿಎ ಪಡೆದಿರಬೇಕು.

  • ಹೆಣ್ಣುಮಕ್ಕಳು, ಅಂಗವಿಕಲರು, ಏಕಪೋಷಕ ಕುಟುಂಬದ ವಿದ್ಯಾರ್ಥಿಗಳು, ಅನಾಥರು, ಮೊದಲ ತಲೆಮಾರಿನ ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ಕಾಲೇಜಿನಲ್ಲಿ ಓದುತ್ತಿರುವವರು ಹಾಗೂ ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಅಂಕಗಳಲ್ಲಿ ಶೇ 5ರಷ್ಟು ಸಡಿಲಿಕೆ ಇರುತ್ತದೆ.

  • ಪೋಷಕರ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ₹ 8 ಲಕ್ಷವನ್ನು ಮೀರಿರಬಾರದು.

ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಾರ್ಷಿಕ ನೆರವು

ಡಿಪ್ಲೊಮಾ: ₹ 36,000

ಸಾಮಾನ್ಯ ಪದವಿ/ ಸ್ನಾತಕೋತ್ತರ ಪದವಿ: ₹ 36,000

ವೃತ್ತಿಪರ ಪದವಿ/ ಸ್ನಾತಕೋತ್ತರ ಪದವಿ: ₹ 75,000

ಸೂಚನೆ: ಈ ವಿದ್ಯಾರ್ಥಿವೇತನವು ಬೋಧನಾ ಶುಲ್ಕ, ವಸತಿ, ಆಹಾರ, ಸಾರಿಗೆ, ಪರೀಕ್ಷಾ ಶುಲ್ಕ ಹಾಗೂ ಇತರ ಶೈಕ್ಷಣಿಕ ವೆಚ್ಚಗಳನ್ನು ಒಳಗೊಂಡಿರುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: 16-02-2026

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌

ಹೆಚ್ಚಿನ ಮಾಹಿತಿಗೆ: Short Url: www.b4s.in/praja/ABCPSS1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.