ADVERTISEMENT

ಆಭರಣ ವಿನ್ಯಾಸಕ್ಕೆ ಡಿಪ್ಲೊಮಾ ಕೋರ್ಸ್‌ಗಳು

ಆರ್.ಬಿ.ಗುರುಬಸವರಾಜ
Published 20 ಫೆಬ್ರುವರಿ 2022, 19:30 IST
Last Updated 20 ಫೆಬ್ರುವರಿ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಆಭರಣಗಳು ಎಲ್ಲರಿಗೂ ಪ್ರಿಯವಾಗುತ್ತವೆ. ವಿಶಿಷ್ಟ ವಿನ್ಯಾಸದ ಆಭರಣಗಳಿಗೆ ಜನರು ಬಹುಬೇಗ ಆಕರ್ಷಿತರಾಗುತ್ತಾರೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಹೊಸ ಬಗೆಯ ವಿನ್ಯಾಸದ ಆಭರಣಗಳು ಮಾರುಕಟ್ಟೆಗೆ ದಾಂಗುಡಿ ಇಡುತ್ತಿವೆ. ಇದರಿಂದ ಆಭರಣ ತಯಾರಿಕಾ ಕ್ಷೇತ್ರದಲ್ಲಿ ಕ್ರಿಯಾಶೀಲ ವಿನ್ಯಾಸಕಾರರಿಗೆ ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಇಂಥ ವಿನ್ಯಾಸಕಾರನ್ನು ಅಣಿಗೊಳಿಸಲು ಕೆಲವು ಸಂಸ್ಥೆಗಳು ಡಿಪ್ಲೊಮಾ ಹಾಗೂ ಕಡಿಮೆ ಅವಧಿಯ ವೃತ್ತಿಪರ ಕೋರ್ಸ್‌ಗಳನ್ನು ಆರಂಭಿಸಿವೆ.

ಈ ಕೋರ್ಸ್‌ನಲ್ಲಿ ಚಿನ್ನ, ಬೆಳ್ಳಿ ಸೇರಿದಂತೆ ವಿವಿಧ ರೀತಿಯ ಲೋಹಗಳನ್ನು ಆಧುನಿಕ ಶೈಲಿಗೆ ಅನುಗುಣವಾಗಿ ವಿನ್ಯಾಸಗೊಳಿಸುವ ಕೌಶಲ ಕಲಿಸಲಾಗುತ್ತದೆ. ಕಂಪ್ಯೂಟರ್ ಸಹಾಯದಿಂದ ಆಭರಣಗಳನ್ನು ವಿನ್ಯಾಸಗೊಳಿಸುವ ಜ್ಞಾನವನ್ನು ಈ ಕೋರ್ಸ್ ಕಲಿಸುತ್ತದೆ.

ಅರ್ಹತೆ ಮತ್ತು ಇತರೆ ಕೌಶಲಗಳು: 10+2ನಲ್ಲಿ ಶೇ 45ರಷ್ಟು ಅಂಕ ಪಡೆದು ಉತ್ತೀರ್ಣರಾದ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರಿಗೆ ಅವಕಾಶವಿದೆ. ಕಲೆ ಬಗ್ಗೆ ಅರಿವಿದ್ದ ವಿದ್ಯಾರ್ಥಿಗಳಿಗೆ ಈ ಕೋರ್ಸ್ ಹೆಚ್ಚು ಸೂಕ್ತವಾಗಿದೆ. ಚಿತ್ರಕಲೆಯಲ್ಲಿ ಆಸಕ್ತಿಯುಳ್ಳವರಿಗೆ ಹೆಚ್ಚು ಆದ್ಯತೆ.

ADVERTISEMENT

ವೃತ್ತಿ ಅವಕಾಶಗಳು: ಆಭರಣ ವಿನ್ಯಾಸದಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿದ ನಂತರ, ಆಭರಣ ವಿನ್ಯಾಸಕರು, ಬ್ರಾಂಡ್ ಮ್ಯಾನೇಜರ್, ಆಭರಣ ಸಲಹೆಗಾರರು, ಜೆಮ್ ಪಾಲಿಶರ್, ಜೆಮ್‌ಸ್ಟೋನ್ ಮೌಲ್ಯಮಾಪಕರು ಇತ್ಯಾದಿಯಾಗಿ ಕೆಲಸ ಮಾಡಲು ಅವಕಾಶಗಳಿವೆ. ಉತ್ತಮ ವೇತನವೂ ಇದೆ. ‌

ದೇಶದಲ್ಲಿ ಆಭರಣ ವಿನ್ಯಾಸದಲ್ಲಿ ಡಿಪ್ಲೊಮಾವನ್ನು ಒದಗಿಸುವ ಸಾಕಷ್ಟು ಕಾಲೇಜುಗಳಿವೆ. ಅದರಲ್ಲಿ ದೆಹಲಿ ಮತ್ತು ಗುಜರಾತ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್‌ ಟೆಕ್ನಾಲಜಿ(ಎನ್‌ಐಎಫ್‌ಟಿ) ಹಾಗೂ ಸಿಂಬಯೋಸಿಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಡಿಸೈನ್ ಪ್ರಮುಖವಾದವು.

ಆನ್‌ಲೈನ್‌ನಲ್ಲಿ ಡಿಪ್ಲೊಮಾ

ಆನ್‌ಲೈನ್‌ನಲ್ಲಿ ಆಭರಣ ವಿನ್ಯಾಸದಲ್ಲಿ ಡಿಪ್ಲೊಮಾ ಕಲಿಯಲು ಅವಕಾಶವಿದೆ. ಈ ತರಬೇತಿಯಲ್ಲಿ 3D ತಂತ್ರಾಂಶವನ್ನು(ಸಾಫ್ಟ್‌ವೇರ್‌) ಬಳಸಿಕೊಂಡು ಕಂಪ್ಯೂಟರ್‌ನಲ್ಲಿ ಆಭರಣ ವಿನ್ಯಾಸ ಮಾಡುವುದನ್ನು ಕಲಿಸಲಾಗುತ್ತದೆ. ಆಫ್‌ಲೈನ್‌(ಭೌತಿಕ) ತರಗತಿಗೆ ಹೋಗಲು ಆಗದವರು, ಆನ್‌ಲೈನ್‌ನಲ್ಲೇ ಕಲಿಯಬಹುದು. ಕೆಲವು ಆರ್ಕಿಟೆಕ್ಚರ್‌ ಕಾಲೇಜುಗಳು, ಕಂಪ್ಯೂಫೀಲ್ಡ್, ಐಐಜೆ, ಐಐಜಿಜೆ(ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್ ಜೆಮ್ಸ್ ಅಂದ ಜ್ಯೂವೆಲ್ಸ್‌) ಕಾಲೇಜುಗಳಲ್ಲಿ ಆನ್‌ಲೈನ್‌ನಲ್ಲಿ ಕೋರ್ಸ್‌ಗಳು ಲಭ್ಯವಿವೆ.

ಹೆಚ್ಚಿನ ಮಾಹಿತಿಗೆ: http://iigjdelhi.org, https://aaftonline.com/program/diploma-in-jewelry-design/ ಜಾಲತಾಣ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.