ADVERTISEMENT

ಜೆಇಇ ಮೇನ್ಸ್‌ ಪರೀಕ್ಷೆ: ಬಹು ಆಯ್ಕೆ ಪ್ರಶ್ನೆಗೆ ಇರಲಿ ಆದ್ಯತೆ

ಪ್ರೊ.ಎಸ್‌.ಕೆ.ಜಾರ್ಜ್‌
Published 28 ಫೆಬ್ರುವರಿ 2021, 19:30 IST
Last Updated 28 ಫೆಬ್ರುವರಿ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಈ ಬಾರಿ ಜೆಇಇ (ಜಾಯಿಂಟ್‌ ಎಂಟ್ರನ್ಸ್‌ ಎಕ್ಸಾಮ್‌) ಮೇನ್ಸ್‌ ಪರೀಕ್ಷೆಯನ್ನು ನಾಲ್ಕು ಸಲ (ಸೆಷನ್ಸ್) ಬರೆಯಲು ಅವಕಾಶ ನೀಡಲಾಗಿದೆ. ಹೀಗಾಗಿ ದೇಶದ ಪ್ರಮುಖ ಎಂಜಿನಿಯರಿಂಗ್‌ ಕಾಲೇಜುಗಳು, ಐಐಟಿಗಳಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳು ಸಿಗುತ್ತವೆ. ಈಗಾಗಲೇ ಒಂದು ಸೆಷನ್‌ ಮುಗಿದಿದ್ದು, ಉಳಿದ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ತಯಾರಿಗಾಗಿ ಸಮಯವಿದೆ.

ವಿದ್ಯಾರ್ಥಿಗಳಿಗೆ ನಾಲ್ಕೂ ಸೆಷನ್‌ಗಳಿಗೆ ಹಾಜರಾಗುವ ಅವಕಾಶ ಇದ್ದರೂ ಕೂಡ ಏಪ್ರಿಲ್‌ ಅಥವಾ ಮೇನಲ್ಲಿ ನಡೆಯುವ ಪರೀಕ್ಷೆಗಳಿಗೆ ಹಾಜರಾಗಬಹುದು. ಸಿದ್ಧತೆಗೆ ಸಾಕಷ್ಟು ಸಮಯ ಸಿಗುತ್ತದೆ ಎಂಬುದು ಇದಕ್ಕೆ ಕಾರಣ.

ಮೊದಲನೆಯದಾಗಿ ನಿಗದಿತ ವೇಳಾಪಟ್ಟಿ ಹಾಕಿಕೊಂಡು ಓದಬೇಕಾಗುತ್ತದೆ. ನಿತ್ಯ 5–6 ತಾಸು ಓದುವ ಅಭ್ಯಾಸ ಇಟ್ಟುಕೊಂಡರೆ ಸರಿಯಾದ ಸಿದ್ಧತೆ ನಡೆಸಬಹುದು. ಮುಕ್ಕಾಲು ತಾಸು ಓದಿ, ಮಧ್ಯೆ 5–10 ನಿಮಿಷಗಳ ಬಿಡುವು ತೆಗೆದುಕೊಳ್ಳಿ. ಹಾಗೆಯೇ ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಓದುವುದರ ಜೊತೆಗೆ ಪ್ರಥಮ ಪಿಯುಸಿ ಪುಸ್ತಕಗಳ ಕಡೆಗೂ ಗಮನಹರಿಸಿ. ಗಣಿತ, ರಸಾಯನವಿಜ್ಞಾನ ಹಾಗೂ ಭೌತವಿಜ್ಞಾನದ ಎಲ್ಲಾ ಪಾಠಗಳು ಮುಖ್ಯವಾಗಿದ್ದರೂ ಕೂಡ ಕೆಲವು ವಿಷಯಗಳಿಗೆ ಹೆಚ್ಚು ಒತ್ತು ಕೊಡಬೇಕಾಗುತ್ತದೆ. ಇದರಿಂದ ಉಳಿದ ವಿಷಯಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ.

ADVERTISEMENT

ಕೇವಲ ಪುಸ್ತಕ ಓದುವುದು ಮಾತ್ರವಲ್ಲ, ಸಮಸ್ಯೆಗಳನ್ನು ಬಿಡಿಸುವುದರತ್ತ ಕೂಡ ಗಮನಹರಿಸಬೇಕಾಗುತ್ತದೆ. ಗಣಿತದಲ್ಲಿ ಹಾಗೂ ಭೌತವಿಜ್ಞಾನದಲ್ಲಿ ಕೆಲವು ಸಮಸ್ಯೆಗಳನ್ನು ಪರಿಹರಿಸುವುದರಿಂದ ಮಾತ್ರ ಅವುಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬಹುದು. ಹೆಚ್ಚಾಗಿ ಬಹು ಆಯ್ಕೆ ಪ್ರಶ್ನೆ (ಎಂಸಿಕ್ಯೂ) ಗಳ ಬಗ್ಗೆ ಲಕ್ಷ್ಯ ಕೊಡಿ. ಇದರಿಂದ ಪರೀಕ್ಷೆಯಲ್ಲಿ ಸಮಯದ ನಿರ್ವಹಣೆಯೂ ರೂಢಿಯಾಗುತ್ತದೆ. ಹಾಗೆಯೇ ಜೆಇಇಯ ಹಳೆಯ ಪ್ರಶ್ನೆಪತ್ರಿಕೆಗಳನ್ನು ಬಿಡಿಸುತ್ತ ಹೋಗಿ. ಈ ಕುರಿತು ಇರುವ ಆನ್‌ಲೈನ್‌ ಅಥವಾ ಆಫ್‌ಲೈನ್‌ ಅಣಕು ಪರೀಕ್ಷೆಗೆ ಹಾಜರಾಗುವುದು ಸೂಕ್ತ. ತಜ್ಞರು ಮಾಡಿರುವ ವಿಡಿಯೊಗಳನ್ನು ವೀಕ್ಷಿಸಿದರೆ ಈ ಬಗ್ಗೆ ನಿಮಗೆ ಉಪಯುಕ್ತ ಸಲಹೆಗಳು ಸಿಗುತ್ತವೆ.

ಒಂದು ತಿಂಗಳಿನಲ್ಲಿ ಅಭ್ಯಾಸ ಮಾಡಬೇಕಾದರೆ ಈ ರೀತಿ ವೇಳಾಪಟ್ಟಿ ಹಾಕಿಕೊಳ್ಳಬಹುದು. ಇವುಗಳ ಜೊತೆ ಉಳಿದ ಪಾಠಗಳನ್ನೂ ಓದಿಕೊಂಡರೆ ಎಲ್ಲಾ ಪ್ರಶ್ನೆಗಳ ಬಗ್ಗೆ ನಿಮಗೆ ಸರಿಯಾದ ಉತ್ತರವನ್ನು ನೀಡಲು ಸಾಧ್ಯವಾಗುತ್ತದೆ.

ಗಣಿತ: ಲಾಗರ್ಧಮ್ಸ್‌, ಕ್ವಾಡ್ರ್ಯಾಟಿಕ್‌ ಇಕ್ವೇಷನ್ಸ್‌, ಅಪ್ಲಿಕೇಶನ್‌ ಅಂಡ್‌ ಡಿರೈವೇಶನ್‌, ಕಂಟಿನ್ಯುಟಿ, ಲಿಮಿಟ್ಸ್‌, ಸರ್ಕಲ್ಸ್‌‌, ಲೈನ್ಸ್‌ ಅಂಡ್‌ ಪೇರ್‌ ಆಫ್‌ ಸ್ಟ್ರೇಟ್‌ ಲೈನ್ಸ್‌, 3ಡಿ ಜಾಮೆಟ್ರಿ, ಲೋಕಸ್‌, ಸೆಟ್ಸ್‌, ರಿಲೇಷನ್ಸ್‌ ಅಂಡ್‌ ಫಂಕ್ಷನ್ಸ್‌, ಪ್ರಾಬೆಬಿಲಿಟಿ ಅಂಡ್‌ ಸ್ಟಾಟೆಸ್ಟಿಕ್ಸ್‌, ವೆಕ್ಟರ್‌ ಆಲ್‌ಜಿಬ್ರಾ, ಇಂಟಿಗ್ರೇಶನ್‌, ಡಿಫರೆನ್ಶಿಯೇಶನ್‌, ಕಾಂಪ್ಲೆಕ್ಸ್‌ ನಂಬರ್‌, ಥಿಯರಿ ಆಫ್‌ ಇಕ್ವೇಶನ್ಸ್‌, ಸೀಕ್ವೆನ್ಸ್‌ ಅಂಡ್‌ ಸೀರೀಸ್‌, ಟ್ರಿಗ್ನಾಮೆಟ್ರಿಕ್‌ ರೇಷಿಯೊ.

ಭೌತವಿಜ್ಞಾನ: ಪವರ್‌ ಎಲೆಕ್ಟ್ರೋಸ್ಟ್ಯಾಟಿಕ್‌, ಎನರ್ಜಿ, ಗ್ರೆವಿಟೇಶನ್‌, ವೇವ್ಸ್‌, ಥರ್ಮಲ್‌ ಎಲೆಕ್ಟ್ರಿಸಿಟಿ, ಥರ್ಮಲ್‌ ಎಕ್ಸ್‌ಪಾನ್ಶನ್‌, ಎಲೆಕ್ಟ್ರಿಸಿಟಿ ಮತ್ತು ಹೀಟ್‌ ಟ್ರಾನ್ಸ್‌ಫರ್‌, ನ್ಯೂಟನ್ಸ್‌ ಲಾ ಆಫ್‌ ಮೋಷನ್‌ ಅಂಡ್‌ ಫ್ರಿಕ್ಷನ್‌, ಮಾಡರ್ನ್‌ ಫಿಸಿಕ್ಸ್‌, ಪ್ರಾಪರ್ಟೀಸ್‌ ಆಫ್‌ ಮ್ಯಾಟರ್‌, ಫ್ಲ್ಯೂಡ್‌ ಮೆಕ್ಯಾನಿಕ್ಸ್‌, ವೆಕ್ಟರ್‌ ಕಮ್ಯೂನಿಕೇಶನ್‌ ಸಿಸ್ಟಂ, ಹೀಟ್‌ ಅಂಡ್‌ ಥರ್ಮೊಡೈನಮಿಕ್ಸ್‌, ಮೋಷನ್‌ ಅಂಡ್‌ ಸರ್ಕುಲರ್‌ ಮೋಷನ್‌.

ರಸಾಯನವಿಜ್ಞಾನ: ಅಲ್ಕೈಲ್‌ ಹ್ಯಾಲೈಡ್ಸ್‌ ಅಂಡ್‌ ಮೋಲ್‌ ಕನ್ಸೆಪ್ಟ್‌ ಅಂಡ್‌ ಕಾರ್ಬೊನಿಲ್‌ ಕಂಪೌಂಡ್‌, ಪೀರಿಯಾಡಿಕ್‌ ಟೇಬಲ್‌, ಕೆಮಿಕಲ್‌ ಬಾಂಡ್‌, ಆಟಮಿಕ್‌ ಸ್ಟ್ರಕ್ಚರ್ ಮತ್ತು ಎಲೆಕ್ಟ್ರೊಕೆಮಿಸ್ಟ್ರಿ, ಫಿನಾಲ್‌, ಆಲ್ಕೊಹಾಲ್‌, ಈಥರ್‌, ಸಾಲಿಡ್‌ ಸ್ಟೇಟ್‌, ಗ್ಯಾಸಿಯಸ್‌ ಸ್ಟೇಟ್‌, ಬಯೊಮಾಲಿಕ್ಯೂಲ್ಸ್‌, ಜನರಲ್‌ ಆರ್ಗ್ಯಾನಿಕ್‌ ಕೆಮಿಸ್ಟ್ರಿ, ಕೊ– ಆರ್ಡಿನೇಶನ್‌ ಕೆಮೆಸ್ಟ್ರಿ, ಹೈಡ್ರೋಕಾರ್ಬನ್ಸ್‌, ಕೆಮಿಕಲ್‌ ಕೈನೆಟಿಕ್ಸ್‌, ಹೈಡ್ರೋಜನ್‌ ಅಂಡ್‌ ಇಟ್ಸ್‌ ಕಂಪೌಂಡ್‌.

ಇವಿಷ್ಟನ್ನು ಒಮ್ಮೆ ಓದಿದರೆ ಸಾಲದು, ಪುನರಾವರ್ತನೆ ಮಾಡುತ್ತ ಹೋಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.