ADVERTISEMENT

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 19:45 IST
Last Updated 13 ಅಕ್ಟೋಬರ್ 2021, 19:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಭಾಗ– 76

1041. ಸಿಐಎಸ್‌ಎಫ್‌ ವಿಸ್ತಾರ ರೂಪ ಯಾವುದು?

ಎ) ಸೆಂಟ್ರಲ್ ಇಂಡಸ್ಟ್ರಿಯಲ್‌ ಸರೆಂಡರ್‌ ಫೋರ್ಸ್‌

ADVERTISEMENT

ಬಿ) ಸೆಂಟ್ರಲ್ ಇಂಟೆಲಿಜೆನ್ಸ್‌ ಸೆಕ್ಯುರಿಟಿ ಫೋರ್ಸ್‌

ಸಿ) ಸೆಂಟ್ರಲ್ ಇಂಡಸ್ಟ್ರಿಯಲ್‌ ಸೆಕ್ಯುರಿಟಿ ಫೋರ್ಸ್‌

ಡಿ) ಸೆಂಟ್ರಲ್ ಇಮಿಗ್ರೇಷನ್ ಸೆಕ್ಯುರಿಟಿ ಫೋರ್ಸ್

1042. ಪ್ರತಿಷ್ಠಿತ ‘ಬೂಕರ್’ ಬಹುಮಾನವು ಇದಕ್ಕಾಗಿ ನೀಡಲ್ಪಡುತ್ತದೆ.

ಎ) ಭೌತಶಾಸ್ತ್ರ

ಬಿ) ಔಷಧ

ಸಿ) ಕ್ರೀಡೆ

ಡಿ) ಸಾಹಿತ್ಯ

1043. ಭಾರತೀಯ ಸಶಸ್ತ್ರ ಪಡೆಗಳು ಇದನ್ನು ಹೊಂದಿಲ್ಲ.

ಎ) ಭಾರತೀಯ ಸೈನ್ಯ

ಬಿ) ಭಾರತೀಯ ಆಕಾಶಪಡೆ

ಡಿ) ಭಾರತೀಯ ನೌಕಾದಳ

ಡಿ) ಭಾರತೀಯ ವಾಯುಪಡೆ

1044. 6 ಕಿ.ಮೀ ನಡೆದ ನಂತರ ನಾನು ಬಲಕ್ಕೆ ತಿರುಗಿದೆ ಮತ್ತು 2 ಕಿ.ಮೀ ದೂರ ಪ್ರಯಾಣಿಸಿದೆ. ಮತ್ತೆ ಎಡಕ್ಕೆತಿರುಗಿ 10 ಕಿ.ಮೀ ದೂರ ಕ್ರಮಿಸಿದೆ ಕೊನೆಯಲ್ಲಿ ನಾನು ಉತ್ತರದತ್ತ ಚಲಿಸುತ್ತಲಿದ್ದೆ ನಾನು ಯಾವ ದಿಕ್ಕಿನಿಂದ ಪ್ರಯಾಣ ಪ್ರಾರಂಭಿಸಿದೆ?

ಎ) ಉತ್ತರ

ಬಿ) ದಕ್ಷಿಣ

ಸಿ) ನೈಋತ್ಯ

ಡಿ) ಈಶಾನ್ಯ

1045. ‘ಎ’ ಯು ‘ಬಿ’ ಯ ಪತಿಯಾಗಿರುತ್ತಾನೆ. ‘ಇ’ ಯು ‘ಸಿ’ ಯ ಮಗಳಾಗಿರುತ್ತಾಳೆ. ‘ಎ’ ಯು ‘ಸಿ’ ಯ ತಂದೆ ಆಗಿರುತ್ತಾನೆ. ‘ಬಿ’ ಯು ‘ಇ’ ಗೆ ಹೇಗೆ ಸಂಬಂಧಿಯಾಗಿರುತ್ತಾಳೆ?

ಎ) ತಾಯಿ

ಬಿ) ಅಜ್ಜಿ

ಸಿ) ಸೋದರತ್ತೆ

ಡಿ) ಸೋದರಸಂಬಂಧಿ

1046. ನೀವು 1ರಿಂದ 100 ರವರೆಗಿನ ಎಲ್ಲಾ ಸಂಖ್ಯೆಗಳನ್ನು ಬರೆಯತ್ತೀರಿ ಎಂದಾದರೆ, ನೀವು ‘3’ ಸಂಖ್ಯೆಯನ್ನು ಎಷ್ಟುಬಾರಿ ಬರೆಯುತ್ತೀರಿ?

ಎ) 18

ಬಿ) 19

ಸಿ) 20

ಡಿ) 21

1047. ಶೂನ್ಯವೇಳೆ ಇವರ ವಿವೇಚನೆಯಲ್ಲಿರುತ್ತದೆ.

ಎ) ಪ್ರಧಾನಮಂತ್ರಿ

ಬಿ) ರಾಷ್ಟ್ರಾಧ್ಯಕ್ಷರು

ಸಿ) ಸದನದ ಸದಸ್ಯರು

ಡಿ) ಸಭಾಧ್ಯಕ್ಷರು

1048. ಕ್ರಿಮಿಕೀಟಗಳನ್ನು ಭಕ್ಷಿಸುವ ಸಸ್ಯ

ಎ) ಕಸ್ಕುಟ್

ಬಿ) ಚೈನಾ‌ ರೋಸ್

ಸಿ) ಪಿರ್‌ ಸಸ್ಯ (ಹೂಜಿಗಿಡ)

ಡಿ) ಗುಲಾಬಿ

1049. ಕೆಳಗಿನವುಗಳಲ್ಲಿ ಯಾವುದು ಉಣ್ಣೆಯನ್ನು ನೀಡುವುದಿಲ್ಲ?

ಎ) ಯಾಕ್

ಬಿ) ಒಂಟೆ

ಸಿ) ಆಡು

ಡಿ) ಮೋಲಿ ನಾಯಿ

1050. ದುಗ್ಧಾಮ್ಲ ಇದರಲ್ಲಿ ಕಂಡುಬರುತ್ತದೆ.

ಎ) ಅಕ್ಕಿ

ಬಿ) ಚಹಾ

ಸಿ) ಮೊಸರು

ಡಿ) ಕಾಫಿ

ಭಾಗ 75ರ ಉತ್ತರಗಳು: 1026. ಡಿ, 1027. ಎ,1028. ಎ,1029. ಎ,1030. ಡಿ, 1031. ಎ, 1032. ಡಿ, 1033. ಡಿ, 1034. ಸಿ, 1035. ಡಿ, 1036. ಡಿ, 1037. ಎ, 1038. ಡಿ, 1039. ಎ, 1040. ಡಿ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.