ADVERTISEMENT

ರೂಪಾ ರಾಹುಲ್‌ ಬಜಾಜ್ ಸ್ಕಾಲರ್‌ಷಿಪ್‌ ಫಾರ್ ವಿಮೆನ್‌ ಇನ್‌ ಎಂಜಿನಿಯರಿಂಗ್‌

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 23:30 IST
Last Updated 5 ಅಕ್ಟೋಬರ್ 2025, 23:30 IST
   

ರೂಪಾ ರಾಹುಲ್‌ ಬಜಾಜ್ ಸ್ಕಾಲರ್‌ಷಿಪ್‌ ಫಾರ್ ವಿಮೆನ್‌ ಇನ್‌ ಎಂಜಿನಿಯರಿಂಗ್‌

ಬಜಾಜ್ ಆಟೊ ಲಿಮಿಟೆಡ್‌ನ ಪ್ರಮುಖ ಉಪಕ್ರಮವಾದ ಈ ವಿದ್ಯಾರ್ಥಿವೇತನವು ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆಯ (ಸಿಎಸ್‌ಆರ್) ಭಾಗವಾಗಿದೆ. ಎಂಜಿನಿಯರಿಂಗ್‌ ಓದುತ್ತಿರುವ ವಿದ್ಯಾರ್ಥಿನಿಯರನ್ನು ಇದು ಪ್ರೋತ್ಸಾಹಿಸುತ್ತದೆ.

ಅರ್ಹತೆ: ಆಯ್ದ 40 ಉನ್ನತ ಎಂಜಿನಿಯರಿಂಗ್‌ ಕಾಲೇಜುಗಳಿಗೆ ದಾಖಲಾದ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಲು ಅರ್ಹರು. ಅನ್ವಯವಾಗುವ ವಿಭಾಗಗಳು: ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಆ್ಯಂಡ್‌ ಕಮ್ಯುನಿಕೇಷನ್‌, ಇಂಡಸ್ಟ್ರಿಯಲ್/ಪ್ರೊಡಕ್ಷನ್, ಆಟೊಮೊಬೈಲ್, ಮೆಕಾಟ್ರಾನಿಕ್ಸ್, ಇನ್‌ಸ್ಟ್ರುಮೆಂಟೇಶನ್, ಮೆಟೀರಿಯಲ್ ಸೈನ್ಸಸ್ ಮತ್ತು ಮೆಟಲರ್ಜಿ. 12ನೇ ತರಗತಿಯಲ್ಲಿ ಕನಿಷ್ಠ ಶೇ 75ರಷ್ಟು ಅಂಕ ಪಡೆದಿರಬೇಕು.

ಆರ್ಥಿಕ ಸಹಾಯ: ₹ 8 ಲಕ್ಷದವರೆಗೆ ವಿದ್ಯಾರ್ಥಿವೇತನ. ಉದ್ಯಮ ವೃತ್ತಿಪರರಿಂದ ಮಾರ್ಗದರ್ಶನ. ಒಟ್ಟಾರೆ ಬೆಳವಣಿಗೆಗೆ ಅನುವಾಗುವಂತೆ ಜೀವನಕೌಶಲ ವೃದ್ಧಿ ಮತ್ತು ವೃತ್ತಿಪರ ಅಭಿವೃದ್ಧಿಗೆ ನೆರವು. ನಿರಂತರ ಬೆಂಬಲ ಮತ್ತು ಸಹಯೋಗಕ್ಕಾಗಿ ಹಳೆಯ ವಿದ್ಯಾರ್ಥಿಗಳು ಹಾಗೂ ಕಾರ್ಯಜಾಲದ ಸಂಪರ್ಕ.

ADVERTISEMENT

ಅರ್ಜಿ ಸಲ್ಲಿಸಲು ಕೊನೇ ದಿನ: 31-10-2025

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌

ಹೆಚ್ಚಿನ ಮಾಹಿತಿಗೆ: Short Url: www.b4s.in/praja/BAJAJ1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.