ADVERTISEMENT

ಕೆಎಸ್‌ಐಎಸ್ಎಫ್ ಪರೀಕ್ಷೆಗೆ ಆಕರ ಗ್ರಂಥಗಳು

ಪ್ರಜಾವಾಣಿ ವಿಶೇಷ
Published 16 ಫೆಬ್ರುವರಿ 2022, 19:30 IST
Last Updated 16 ಫೆಬ್ರುವರಿ 2022, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ(ಕೆಎಸ್‌ಐಎಸ್‌ಎಫ್) ಸಬ್ಇನ್ಸ್ಪೆಕ್ಟರ್ ಹುದ್ಧೆಗಳಿಗಾಗಿ ನಡೆಯುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳು ಓದಬೇಕಾದ ಪುಸ್ತಗಳು ಇಲ್ಲಿವೆ.

ಇತಿಹಾಸ: ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಡಾ.ಕೆ. ಸದಾಶಿವ ಅವರ ‘ಭಾರತದ ಸಮಗ್ರ ಇತಿಹಾಸ‘ ಕೃತಿ, ಇಂಗ್ಲಿಷ್ ಮಾಧ್ಯಮದವರು ಎನ್‌ಸಿಇಆರ್‌ಟಿಯ 11 ಮತ್ತು 12ನೇ ತರಗತಿಯ ಪುಸ್ತಕಗಳ ಜತೆಗೆ ಸ್ಪೆಕ್ಟ್ರಂ ಪ್ರಕಾಶನದ ‘ಮಾಡರ್ನ್ ಇಂಡಿಯಾ‘ ಹಾಗೂ ಸೂರ್ಯನಾಥ್ ಕಾಮತ್ ಅವರ ‘ಕನ್ಸೈಸ್‌ ಹಿಸ್ಟರಿ ಆಫ್ ಕರ್ನಾಟಕ ಕೃತಿಗಳನ್ನು ಓದಬಹುದು.

ಸಂವಿಧಾನ: ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಪಿ ಎಸ್ ಗಂಗಾಧರ್ ಅವರ ‘ಭಾರತೀಯ ಸಂವಿಧಾನ ಮತ್ತು ರಾಜಕೀಯ‘ ಕೃತಿ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳೂ ಎಂ. ಲಕ್ಷಿಕಾಂತ್‌ ಅವರ ‘ಇಂಡಿಯನ್ ಪಾಲಿಟಿಕ್ಸ್‌‘ ಓದಬಹುದು.

ADVERTISEMENT

ವಿಜ್ಞಾನ: ಈ ವಿಷಯಕ್ಕೆ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ರಾಜ್ಯಸರ್ಕಾರ ಪ್ರಕಟಿಸಿರುವ 8, 9 ಮತ್ತು 10 ನೇ ತರಗತಿಗಳ ಪುಸ್ತಕಗಳನ್ನು ಹಾಗೂ ಎನ್ ಸಿ ಇ ಆರ್ ಟಿ ವಿಜ್ಞಾನದ ಪುಸ್ತಕಗಳನ್ನು ಓದಬಹುದು.

ಭಾರತೀಯ ಅರ್ಥಶಾಸ್ತ್ರ: ಕೃಷ್ಣಯ್ಯಗೌಡ ಅವರ ಕೃತಿಯ ಜೊತೆಗೆ, ನಿತ್ಯ ಪತ್ರಿಕೆಗಳಲ್ಲಿ ಪ್ರಕಟವಾಗುವ ಆರ್ಥಿಕ, ವಾಣಿಜ್ಯ ವಿಷಯಕ್ಕೆ ಸಂಬಂಧಿಸಿದ ಲೇಖನಗಳನ್ನು ಓದಬೇಕು. ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳು ಪ್ರತಿಯೋಗಿತಾ ದರ್ಪಣ ಪ್ರಕಟಿತ ಇಂಡಿಯನ್ ಇಕಾನಾಮಿ ಪುಸ್ತಕಗಳನ್ನು ಓದಬಹುದು. ಆರ್. ಎಸ್. ಅಗರವಾಲ್ ಅವರ ‘ರೀಸನಿಂಗ್‘ ಪುಸ್ತಕಗಳು ಉಪಯುಕ್ತವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.