ADVERTISEMENT

ಉದ್ಯೋಗ ಕಿರಣ | ವರ್ಕ್‌ ಫ್ರಂ ಹೋಮ್‌ ಇಂಟರ್ನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 3:19 IST
Last Updated 19 ಜನವರಿ 2026, 3:19 IST
   

ಪರ್ಫಾರ್ಮೆನ್ಸ್‌ ಮಾರ್ಕೆಟಿಂಗ್‌: ಬ್ರ್ಯಾಂಡ್‌ಹೈ.ಕೊ ಸಂಸ್ಥೆಯು ಪರ್ಫಾರ್ಮೆನ್ಸ್‌ ಮಾರ್ಕೆಟಿಂಗ್‌ ಇಂಟರ್ನಿಗಳನ್ನು ನೇಮಿಸಿಕೊಳ್ಳಲಿದೆ. ಮಾರ್ಕೆಟಿಂಗ್‌, ಗೂಗಲ್‌ ಆ್ಯಡ್ಸ್, ಫೇಸ್‌ಬುಕ್‌ ಆ್ಯಡ್ಸ್‌, ಇನ್‌ಸ್ಟಾಗ್ರಾಂ ಆ್ಯಡ್ಸ್‌, ಮಾರ್ಕೆಟ್‌ ರಿಸರ್ಚ್‌ ಮತ್ತು ಸಿಯೊ ಸ್ಟ್ರಾಟಜಿ ವಿಷಯಗಳಲ್ಲಿ ಜ್ಞಾನ ಇರುವ ವಿದ್ಯಾರ್ಥಿಗಳು ಫೆ. 6ರ ಒಳಗೆ ಅರ್ಜಿ ಸಲ್ಲಿಸಬಹುದು. ಸ್ಟೈಪೆಂಡ್‌– ತಿಂಗಳಿಗೆ ₹ 10,000– ₹ 15,000. ಸಂಪರ್ಕ: https://tinyurl.com/5n7yrxut.

ಹ್ಯೂಮನ್‌ ರಿಸೋರ್ಸಸ್‌ (ಎಚ್‌ಆರ್‌): ಡೇಟಾವಿನ್ಸಿ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯು ಹ್ಯೂಮನ್‌ ರಿಸೋರ್ಸಸ್‌ (ಎಚ್‌ಆರ್‌) ಇಂಟರ್ನಿಗಳನ್ನು ಆಹ್ವಾನಿಸಿದೆ. ಇಂಗ್ಲಿಷ್‌ನಲ್ಲಿ ಬರೆಯುವ ಮತ್ತು ಮಾತನಾಡುವ ಸಾಮರ್ಥ್ಯ ಇರುವವರು ಫೆ. 6ರ ಒಳಗೆ ಅರ್ಜಿ ಸಲ್ಲಿಸಬಹುದು. ಸ್ಟೈಪೆಂಡ್‌– ₹ 2,000– ₹ 5,000. ಸಂಪರ್ಕ: https://shorturl.at/yBYPT.

ಬೆಂಗಳೂರು ಕೇಂದ್ರಿತ ಇಂಟರ್ನ್‌ಷಿಪ್‌

ಕ್ರಿಪ್ಟೊ ಕಂಟೆಂಟ್‌ ರೈಟರ್‌: ಟ್ರೇಡ್‌ ಬ್ರೈನ್ಸ್‌ ಸಂಸ್ಥೆಯು ಕ್ರಿಪ್ಟೊ ಕಂಟೆಂಟ್‌ ರೈಟರ್‌ ಇಂಟರ್ನಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಆರ್ಥಿಕ ಸಾಕ್ಷರತೆ ಮತ್ತು ಹೂಡಿಕೆ ಕುರಿತು ಜ್ಞಾನವುಳ್ಳವರು ಫೆ. 6ರ ಒಳಗೆ ಅರ್ಜಿ ಸಲ್ಲಿಸಬಹುದು. ಸ್ಟೈಪೆಂಡ್‌– ತಿಂಗಳಿಗೆ ₹ 10,000– ₹ 12,000. ಸಂಪರ್ಕ: https://tinyurl.com/2p8yn8ku.

ADVERTISEMENT

ಕಂಟೆಂಟ್‌ ಆ್ಯಂಡ್‌ ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್‌: ಸಿಎಕ್ಸ್‌ಒ ಬ್ರ್ಯಾಂಡಿಂಗ್‌ ಸಂಸ್ಥೆಯು ಕಂಟೆಂಟ್‌ ಆ್ಯಂಡ್‌ ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್‌ ಇಂಟರ್ನಿಗಳನ್ನು ಆಹ್ವಾನಿಸಿದೆ. ಬ್ರ್ಯಾಂಡಿಂಗ್‌, ಪ್ರಾಡಕ್ಟ್‌ ಲೈಫ್‌ಸೈಕಲ್‌ ಮ್ಯಾನೇಜ್‌ಮೆಂಟ್‌ (ಪಿಎಲ್‌ಎಂ), ಸರ್ಚ್‌ ಎಂಜಿನ್‌ ಆಪ್ಟಿಮೈಸೇಷನ್‌ (ಎಸ್‌ಇಒ) ಮತ್ತು ಸೋಷಿಯಲ್‌ ಮೀಡಿಯಾ ಮಾರ್ಕೆಟಿಂಗ್‌ ಬಗ್ಗೆ ತಿಳಿದಿರುವವರು ಫೆ. 5ರ ಒಳಗೆ ಅರ್ಜಿ ಸಲ್ಲಿಸಬಹುದು. ಸ್ಟೈಪೆಂಡ್‌– ತಿಂಗಳಿಗೆ ₹ 9,000– ₹ 21,000. ಸಂಪರ್ಕ: https://shorturl.at/9XyFa.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.