ADVERTISEMENT

ಉದ್ಯೋಗ ಕಿರಣ: ವರ್ಕ್‌ ಫ್ರಂ ಹೋಮ್‌ ಇಂಟರ್ನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 23:30 IST
Last Updated 8 ಫೆಬ್ರುವರಿ 2026, 23:30 IST
   

ವರ್ಕ್‌ ಫ್ರಂ ಹೋಮ್‌ ಇಂಟರ್ನ್‌ಷಿಪ್‌

ರಿಯಾಕ್ಟ್‌ ನೇಟಿವ್‌ ಡೆವಲಪ್‌ಮೆಂಟ್‌: ಲೋಕಲ್‌ವೈಬ್ಸ್‌ ಎಲ್‌ಎಲ್‌ಪಿ (LocalVibez LLP) ಸಂಸ್ಥೆಯು ರಿಯಾಕ್ಟ್‌ ನೇಟಿವ್‌ ಡೆವಲಪ್‌ಮೆಂಟ್‌ ಇಂಟರ್ನಿಗಳನ್ನು ನೇಮಿಸಿಕೊಳ್ಳಲಿದೆ. ಸಿಎಸ್‌ಎಸ್‌, ಎಚ್‌ಟಿಎಂಎಲ್‌ ಮತ್ತು ರಿಯಾಕ್ಟ್‌ ನೇಟಿವ್‌ ಕುರಿತು ಜ್ಞಾನವುಳ್ಳ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಮಾರ್ಚ್‌ 6 ಕೊನೇ ದಿನ. ಸ್ಟೈಪೆಂಡ್‌– ತಿಂಗಳಿಗೆ ₹ 8,000– ₹ 10,000. ಸಂಪರ್ಕ: https://shorturl.at/g4QRJ.

ಪ್ರಾಡಕ್ಟ್‌ ಮ್ಯಾನೇಜ್‌ಮೆಂಟ್‌: ಎಐ ಕ್ರೋನಿ ಸಂಸ್ಥೆಯು ಪ್ರಾಡಕ್ಟ್‌ ಮ್ಯಾನೇಜ್‌ಮೆಂಟ್‌ ಇಂಟರ್ನಿಗಳನ್ನು ಆಹ್ವಾನಿಸಿದೆ. ವಿದ್ಯಾರ್ಥಿಗಳಿಗೆ ಮಾರ್ಕೆಟಿಂಗ್‌, ಪ್ರಾಡಕ್ಟ್‌ ಮ್ಯಾನೇಜ್‌ಮೆಂಟ್‌ ಬಗ್ಗೆ ಜ್ಞಾನ ಇರಬೇಕು. ಪರಿಣಾಮಕಾರಿ ಸಂವಹನ ಮತ್ತು ಇಂಗ್ಲಿಷ್‌ನಲ್ಲಿ ಮಾತನಾಡುವ ಸಾಮರ್ಥ್ಯ ಇರಬೇಕು. ಅಂತಹವರು ಮಾರ್ಚ್‌ 6ರ ಒಳಗೆ ಅರ್ಜಿ ಸಲ್ಲಿಸಬೇಕು. ಸ್ಟೈಪೆಂಡ್‌–₹ 8,000– ₹ 23,000.

ADVERTISEMENT

ಸಂಪರ್ಕ: https://shorturl.at/T68vX.  

ಬೆಂಗಳೂರು ಕೇಂದ್ರಿತ ಇಂಟರ್ನ್‌ಷಿಪ್‌

ಪ್ರಾಡಕ್ಟ್‌ ಆ್ಯಂಡ್‌ ವಿಷುಯಲೈಸೇಷನ್‌ ಡಿಸೈನ್‌: ಮೆಟೀರಿಯಲ್‌ ಡಿಪಾಟ್‌ ಸಂಸ್ಥೆಯು ಪ್ರಾಡಕ್ಟ್‌ ಆ್ಯಂಡ್‌ ವಿಷುಯಲೈಸೇಷನ್‌ ಡಿಸೈನ್‌ ಇಂಟರ್ನಿಗಳನ್ನು ನೇಮಿಸಿಕೊಳ್ಳಲಿದೆ. ಅಡೋಬ್‌ ಇಲಸ್ಟ್ರೇಟರ್‌, ಅಡೋಬ್‌ ಫೋಟೊಶಾಪ್‌, ಡಿಸೈನ್‌ ಥಿಂಕಿಂಗ್‌ ಮತ್ತು ಇಮೇಜ್‌ ಎಡಿಟಿಂಗ್‌ ಬಗ್ಗೆ ಅರಿತಿರುವವರು ಮಾರ್ಚ್‌ 4ರ ಒಳಗೆ ಅರ್ಜಿ ಸಲ್ಲಿಸಬಹುದು. ಸ್ಟೈಪೆಂಡ್‌– ತಿಂಗಳಿಗೆ ₹ 20,000– ₹ 25,000 ಸಂಪರ್ಕ: https://shorturl.at/8KwDg.

ಕಂಟೆಂಟ್‌ ರೈಟರ್‌ (ಇನ್‌ಕಂ ಟ್ಯಾಕ್ಸ್‌): ಕ್ಲಿಯರ್‌ಟ್ಯಾಕ್ಸ್‌ ಸಂಸ್ಥೆಯು ಕಂಟೆಂಟ್‌ ರೈಟರ್‌ ಇಂಟರ್ನಿಗಳನ್ನು ನೇಮಿಸಿಕೊಳ್ಳಲಿದೆ. ಕಂಟೆಂಟ್‌ ಮಾರ್ಕೆಟಿಂಗ್‌, ಇನ್‌ಕಂ ಟ್ಯಾಕ್ಸ್‌ ಮತ್ತು ಸರ್ಚ್‌ ಎಂಜಿನ್‌ ಆಪ್ಟಿಮೈಸೇಷನ್‌ (ಎಸ್‌ಇಒ) ಬಗ್ಗೆ ಜ್ಞಾನವುಳ್ಳ ವಿದ್ಯಾರ್ಥಿಗಳು ಮಾರ್ಚ್‌ 6ರ ಒಳಗೆ ಅರ್ಜಿ ಸಲ್ಲಿಸಬಹುದು. ಸ್ಟೈಪೆಂಡ್‌– ತಿಂಗಳಿಗೆ ₹ 25,000.

ಸಂಪರ್ಕ: https://shorturl.at/Y9aKT.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.