ಪ್ರಾತಿನಿಧಿಕ ಚಿತ್ರ
ನೀಟ್, ಸಿಇಟಿ, ಜೆಇಇ ಪ್ರವೇಶ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಲು ಸಹಾಯವಾಗುವಂತೆ ಎಕ್ಸೆಲ್ ಅಕಾಡೆಮಿಕ್ಸ್ 50 ದಿನಗಳ ಕ್ರ‍್ಯಾಷ್ ಕೋರ್ಸ್ ರೂಪಿಸಿದೆ.
ಈ ಕೋರ್ಸ್‌ನಲ್ಲಿ ಕಡಿಮೆ ಅವಧಿಯಲ್ಲಿ ಉತ್ತಮ ಅಂಕಗಳನ್ನು ಪಡೆಯುವ ‘ಟ್ರಿಕ್ಸ್’ ತಿಳಿಸಿಕೊಡಲಾಗುವುದು. ಈಗಾಗಲೇ ಸಿಇಟಿ, ಜೆಇಇ, ನೀಟ್ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆಯಾಗಿದೆ. ದ್ವಿತೀಯ ಪಿಯು ಪರೀಕ್ಷೆ ಮುಗಿದ ಬಳಿಕವೇ ಈ ಕೋರ್ಸ್ ಆರಂಭವಾಗಲಿದೆ.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೇರೆ ಬೇರೆ ಬ್ಯಾಚ್‌ಗಳಾಗಿ ವಿಂಗಡಿಸಿ ತರಬೇತಿ ನೀಡಲಾಗುವುದು. ಪ್ರತಿದಿನ ತರಬೇತಿ ನಂತರ ಪರೀಕ್ಷೆ ನಡೆಯಲಿದೆ. ಫಲಿತಾಂಶವನ್ನೂ ಅದೇ ದಿನ ಬಿಡುಗಡೆ ಮಾಡಲಾಗುವುದು. ರಾಜ್ಯಪಠ್ಯಕ್ರಮ, ಕೇಂದ್ರ ಪಠ್ಯಕ್ರಮ ಎಲ್ಲ ವಿದ್ಯಾರ್ಥಿಗಳೂ ಈ ಕೋರ್ಸ್‌ಗೆ ದಾಖಲಾಗಬಹುದು.
ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ತರಗತಿಗಳು ಇರಲಿವೆ. ನಿತ್ಯ 2 ಗಂಟೆ ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತ ವಿಷಯಗಳ ಬೋಧನೆ ನಡೆಯಲಿದೆ. ಆಯ್ಕೆ ಮಾಡಿಕೊಳ್ಳುವ ಪ್ರವೇಶ ಪರೀಕ್ಷೆ ಆಧಾರದ ಮೇಲೆ ತರಬೇತಿ ಇರಲಿದೆ. ನೀಟ್(ಪಿಸಿಬಿ), ಜೆಇಇ ಮೈನ್ಸ್(ಪಿಸಿಎಂ), ಸಿಇಟಿ(ಪಿಸಿಎಂ), ಎಂಜಿನಿಯರಿಂಗ್ ಸಿಇಟಿ(ಪಿಸಿಬಿ), ಪಶು ವೈದ್ಯಕೀಯ, ಬಿ.ಎಸ್ಸಿ ಅಗ್ರಿ(ಪಿಸಿಬಿ) ಸಿಇಟಿ- ಪಿಸಿಎಂಬಿ ವಿಷಯಗಳನ್ನು ಬೋಧಿಸಲಿದೆ. ಇಲ್ಲಿ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳ ಅನುಗುಣವಾಗಿ ಪ್ರಶ್ನೆಪತ್ರಿಕೆಗಳನ್ನು ರೂಪಿಸಿ ಪರೀಕ್ಷೆ ನಡೆಸಲಿದೆ.
ಮಾಹಿತಿಗೆ: 9513657041, 7676917777 ಸಂಪರ್ಕಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.