ADVERTISEMENT

ಯೋಗಿ, ಮಾಯಾಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 20:06 IST
Last Updated 11 ಏಪ್ರಿಲ್ 2019, 20:06 IST
ಯೋಗಿ ಆದಿತ್ಯನಾಥ
ಯೋಗಿ ಆದಿತ್ಯನಾಥ   

ನವದೆಹಲಿ: ‘ಲೋಕಸಭಾ ಚುನಾವಣೆಯು ಅಲಿ ಮತ್ತು ಬಜರಂಗ ಬಲಿ ನಡುವಿನ ಸ್ಪರ್ಧೆ’ ಎಂದು ಹೇಳಿಕೆ ನೀಡಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಚುನಾವಣಾ ಆಯೋಗ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದೆ.

‘ಬಾಲಾಕೋಟ್‌ನಲ್ಲಿ ಉಗ್ರರ ನೆಲೆ ಧ್ವಂಸಗೊಳಿಸಿದ ವೀರ ಯೋಧರಿಗೆ ನಿಮ್ಮ ಮತ ಅರ್ಪಿಸಿ’ ಎಂದು ಮೋದಿ ಅವರು ಮೊದಲ ಬಾರಿ ಮತ ಚಲಾಯಿಸುವ ಮತದಾರರಿಗೆ ಕರೆ ಕೊಟ್ಟಿದ್ದರು ಎನ್ನಲಾದ ವರದಿಯನ್ನು ಪರಿಶೀಲಿಸುತ್ತಿರುವುದಾಗಿ ಆಯೋಗ ತಿಳಿಸಿದೆ.

‘ಮುಸ್ಲಿಂ ಮತಗಳು ವಿಭಜನೆಯಾಗದಂತೆ ತಡೆಯಬೇಕು’ ಎಂದು ಮುಸ್ಲಿಂ ಮತದಾರರಿಗೆ ಕರೆ ನೀಡಿದ್ದ ಬಿಎಸ್‌ಪಿ ವರಿಷ್ಠೆ ಮಾಯಾವತಿ ಅವರಿಗೂ ಆಯೋಗ ನೋಟಿಸ್ ನೀಡಿದೆ.

ADVERTISEMENT

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ನೋಟಿಸ್ ನೀಡಲಾಗಿದೆ ಎಂದು ಉಪಚುನಾವಣಾ ಆಯುಕ್ತ ಭೂಷಣ್ ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.