ADVERTISEMENT

Loksabha Election: ರಾಜ್ಯಪಾಲರ ನೇಮಕಕ್ಕೆ ರಾಜ್ಯದ ಅಭಿಪ್ರಾಯ ಅಗತ್ಯ– DMK

ಪಿಟಿಐ
Published 20 ಮಾರ್ಚ್ 2024, 9:41 IST
Last Updated 20 ಮಾರ್ಚ್ 2024, 9:41 IST
<div class="paragraphs"><p>ಕನಿಮೋಳಿ, ದಯಾನಿದಿ ಮಾರನ್ ಇದ್ದಾರೆ</p></div>

ಕನಿಮೋಳಿ, ದಯಾನಿದಿ ಮಾರನ್ ಇದ್ದಾರೆ

   

ಚೆನ್ನೈ: ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷವು ಏ. 19ರಂದು ನಡೆಯುವ ಲೋಕಸಭಾ ಚುನಾವಣೆಯ 21 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಕನಿಮೋಳಿ, ಟಿ.ಆರ್.ಬಾಲು ಹಾಗೂ ಎ.ರಾಜಾ ನಿರೀಕ್ಷೆಯಂತೆ ಸ್ಪರ್ಧಿಸುತ್ತಿದ್ದಾರೆ.

ಉಳಿದ 18 ಕ್ಷೇತ್ರಗಳನ್ನು ಕಾಂಗ್ರೆಸ್‌, ಎಡಪಕ್ಷ ಹಾಗೂ ವಿಸಿಕೆ ಜತೆ ಹೊಂದಾಣಿಕೆ ಮಾಡಿಕೊಂಡಿದೆ.

ADVERTISEMENT

ಘೋಷಿತ 21 ಕ್ಷೇತ್ರಗಳಲ್ಲಿ 11 ಕ್ಷೇತ್ರಗಳಿಗೆ ಡಿಎಂಕೆ ಹೊಸ ಮುಖಗಳನ್ನು ಪರಿಚಯಿಸಿದೆ. ಇವರಲ್ಲಿ ಮೂವರು ಮಹಿಳೆಯರೂ ಇದ್ದಾರೆ. ದಕ್ಷಿಣ ಚೆನ್ನೈನಿಂದ ಸಂಸದೆ ತಮಿಳಾಚಿ ತಂಗಪ್ಪಾಂಡಿಯನ್ ಅವರಿಗೂ ಟಿಕೆಟ್ ಘೋಷಣೆಯಾಗಿದೆ. ಉಳಿದಂತೆ ದಯಾನಿದಿ ಮಾರನ್, ಎಸ್.ಜಗದ್‌ರಕ್ಷಕನ್‌, ಕಲಾನಿಧಿ ವೀರಸ್ವಾಮಿ, ಕಾಥಿರ್ ಆನಂದ್ ಹಾಗೂ ಸಿ.ಎನ್.ಅಣ್ಣಾದೊರೈ ಅವರ ಹೆಸರೂ ಇದೆ.

ಇದೇ ಸಂದರ್ಭದಲ್ಲಿ ಡಿಎಂಕೆ ಪಕ್ಷವು ಚುನಾವಣೆಗೆ ತನ್ನ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಿದೆ. ಇದರಲ್ಲಿ ರಾಜ್ಯಪಾಲರ ನೇಮಕದಲ್ಲಿ ರಾಜ್ಯ ಸರ್ಕಾರದ ಅಭಿಪ್ರಾಯ ಕೇಳುವುದು ಹಾಗೂ ಪುದುಚೇರಿಗೆ ರಾಜ್ಯ ಸರ್ಕಾರದ ಸ್ಥಾನಮಾನ ನೀಡದಿರಲು ಕೇಂದ್ರಕ್ಕಿರುವ ಅಧಿಕಾರಕ್ಕೆ ಸಂಬಂಧಿಸಿದಂತೆ 356ನೇ ವಿಧಿ ರದ್ದು ವಿಷಯವನ್ನೂ ಪ್ರಸ್ತಾಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.