ADVERTISEMENT

ಧರ್ಮದ ಆಧಾರದಲ್ಲಿ ದೇಶ ವಿಭಜಿಸಬೇಡಿ: ಫಾರೂಕ್ ಅಬ್ದುಲ್ಲಾ

ಪಿಟಿಐ
Published 1 ಮೇ 2024, 15:50 IST
Last Updated 1 ಮೇ 2024, 15:50 IST
ಫಾರೂಕ್ ಅಬ್ದುಲ್ಲಾ
ಫಾರೂಕ್ ಅಬ್ದುಲ್ಲಾ   

ರಜೌರಿ/ಜಮ್ಮು: ಪ್ರಧಾನಿ ಮೋದಿ ಧರ್ಮದ ಆಧಾರದಲ್ಲಿ ದೇಶ ವಿಭಜಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರುವ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ಮುಸ್ಲಿಮರು ಯಾರ ಹಕ್ಕುಗಳನ್ನೂ ಕಸಿದುಕೊಳ್ಳುವುದಿಲ್ಲ ಎಂದು ಹೇಳಿದರು.

‘ಧರ್ಮದ ಆಧಾರದಲ್ಲಿ ವಿಭಜಿಸುವುದರಿಂದ ಬಿರುಗಾಳಿ ಉಂಟಾಗಿ ದೇಶದ ಅಸ್ತಿತ್ವಕ್ಕೆ ತೊಡಕುಂಟಾಗಲಿದೆ. ಜನರನ್ನು ವಿಭಜಿಸುವುದಕ್ಕಿಂತ ದೇಶವನ್ನು ಒಗ್ಗೂಡಿಸುವ ಬಗ್ಗೆ ಮಾತನಾಡುವುದು ಉತ್ತಮ’ ಎಂದು ತಿಳಿಸಿದರು.

ರಜೌರಿ ಜಿಲ್ಲೆಯ ತನಮಂಡಿಯಲ್ಲಿ ಚುನಾವಣೆ ಪ್ರಚಾರ ನಡೆಸಿದ ಅವರು, ‘ನಾವು ಮುಸ್ಲಿಮರು, ಅಲ್ಲಾ ನಮಗೆ ಇತರ ಧರ್ಮಗಳನ್ನು ಗೌರವಿಸುವಂತೆ ಹೇಳಿದ್ದಾರೆ’ ಎಂದರು. 

ADVERTISEMENT

‘ಮುಸ್ಲಿಂ ‍ಪ್ರಾಬಲ್ಯದ ಜಮ್ಮು ಮತ್ತು ಕಾಶ್ಮೀರದ ಜನ 1947ರಲ್ಲಿ ಪಾಕಿಸ್ತಾನದ ಬದಲು ಭಾರತವನ್ನು ಆಯ್ಕೆ ಮಾಡಿಕೊಂಡರು. ಏಕೆಂದರೆ ಹಿಂದೂಗಳು, ಮುಸ್ಲಿಮರು, ಸಿಖ್ಖರು, ಬೌದ್ಧರು ಮತ್ತು ಕ್ರಿಶ್ಚಿಯನ್ನರು ಎಲ್ಲರೂ ಭಾರತದ ಸಂವಿಧಾನದ ಪ್ರಕಾರ ಸಮಾನರು’ ಎಂದು ಅಭಿಪ್ರಾಯ ಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.