ADVERTISEMENT

ಬಿಜೆಪಿ ಸೇರಿರುವ 2.58 ಲಕ್ಷ ಮಂದಿಯ ಪಟ್ಟಿ ಬಿಡುಗಡೆಗೊಳಿಸಿ: ಕಾಂಗ್ರೆಸ್ ಸವಾಲು

ಪಿಟಿಐ
Published 7 ಏಪ್ರಿಲ್ 2024, 23:30 IST
Last Updated 7 ಏಪ್ರಿಲ್ 2024, 23:30 IST
<div class="paragraphs"><p>ಜಿತು ಪಟ್ವಾರಿ (ಬಲ ಭಾಗದಲ್ಲಿರುವವರು) ಪಿಟಿಐ ಚಿತ್ರ</p></div>

ಜಿತು ಪಟ್ವಾರಿ (ಬಲ ಭಾಗದಲ್ಲಿರುವವರು) ಪಿಟಿಐ ಚಿತ್ರ

   

ಭೋಪಾಲ್: ಮಧ್ಯಪ್ರದೇಶದಲ್ಲಿ ತಮ್ಮ ಪಕ್ಷ ಸೇರಿದ್ದಾರೆ ಎಂದು ಬಿಜೆಪಿ ಹೇಳಿಕೊಳ್ಳುತ್ತಿರುವ 2.58 ಲಕ್ಷ ಮಂದಿಯ ಪಟ್ಟಿ ಬಿಡುಗಡೆಗೊಳಿಸುವಂತೆ ಕೇಸರಿ ಪಕ್ಷಕ್ಕೆ ಕಾಂಗ್ರೆಸ್ ಸವಾಲು ಹಾಕಿದೆ.

‘ರಾಜ್ಯದಲ್ಲಿ ಕಳೆದ ಮೂರು ತಿಂಗಳಲ್ಲಿ 2.58 ಮಂದಿ ಬಿಜೆಪಿ ಸೇರಿದ್ದಾರೆ. ಅದರ ಪೈಕಿ ಏಪ್ರಿಲ್ 6ರಂದು ಒಂದೇ ದಿನ 1.26 ಲಕ್ಷ ಮಂದಿ ಸೇರ್ಪಡೆ ಆಗಿದ್ದಾರೆ. ಅವರ ಪೈಕಿ ಬಹುತೇಕರು ಕಾಂಗ್ರೆಸ್‌ನವರು’ ಎಂದು ಮಾಜಿ ಮುಖ್ಯಮಂತ್ರಿ ನರೋತ್ತಮ್ ಮಿಶ್ರಾ ಅವರು ಶನಿವಾರ ಹೇಳಿದ್ದರು.  

ADVERTISEMENT

ಈ ಸಂಬಂಧ ಮಧ್ಯಪ್ರದೇಶ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಜಿತು ಪಟ್ವಾರಿ ಮಾತನಾಡಿ, ‘ಬಿಜೆಪಿಯು ಪಕ್ಷಕ್ಕೆ ಸೇರ್ಪಡೆಯಾಗಿರುವ 336 ಪ್ರಮುಖ ಮುಖಂಡರ ಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿದೆ. ಅದೇ ರೀತಿ 2.58 ಲಕ್ಷ ಮಂದಿಯ ಪಟ್ಟಿಯನ್ನೂ ಬಿಡುಗಡೆ ಮಾಡಲಿ’ ಎಂದು ಸವಾಲು ಎಸೆದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.