ಬೆಂಗಳೂರು: ಮೂರು ಪಕ್ಷಗಳ ನಡುವಿನ ಭಾರಿ ಹಣಾಹಣಿ, ಅಬ್ಬರದ ಪ್ರಚಾರ, ಪ್ರತಿಷ್ಠೆಯನ್ನೇ ಪಣವಾಗಿಟ್ಟು ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ 3.67 ಕೋಟಿ ಮತದಾರರು ನೀಡಿರುವ ಜನಾದೇಶ ಇಂದು ಬಹಿರಂಗವಾಗಲಿದೆ.
ಲೋಕಸಭೆ ಚುನಾವಣೆಗೆ ಒಂದು ವರ್ಷ ಇರುವಾಗ ನಡೆದಿರುವ ಈ ಚುನಾವಣೆಯ ಫಲಿತಾಂಶ ರಾಜ್ಯ ಮಾತ್ರವಲ್ಲ, ದೇಶದ ರಾಜಕೀಯ ದಿಕ್ಕನ್ನು ನಿರ್ಧರಿಸಲಿದೆ. ಈ ಕಾರಣಕ್ಕೆ, ಫಲಿತಾಂಶದ ಮೇಲೆ ದೇಶದ ಕಣ್ಣೇ ನೆಟ್ಟಿದೆ.
ವಿಧಾನಸಭೆಯ 224 ಕ್ಷೇತ್ರಗಳ ಪ್ರತಿನಿಧಿಗಳ ಆಯ್ಕೆಗೆ ಬುಧವಾರ (ಏಪ್ರಿಲ್ 10) ಮತದಾನ ನಡೆದಿತ್ತು. 5.07 ಕೋಟಿ ಮತದಾರರಲ್ಲಿ 3.67 ಕೋಟಿ ಮಂದಿ ಮತಚಲಾಯಿಸಿದ್ದರು. 2,615 ಅಭ್ಯರ್ಥಿಗಳು ಕಣದಲ್ಲಿದ್ದು, ಜನರ ವಿಶ್ವಾಸಗೆದ್ದು ಯಾರು ವಿಧಾನಸಭೆ ಪ್ರವೇಶಿಸಲಿದ್ದಾರೆ ಎಂಬುದು ಹೊರಬೀಳಲಿದೆ.
ಬೆಳಗಾವಿ: ಮತ ಎಣಿಕೆಗೆ ಕ್ಷಣಗಣನೆ
ಕೊಪ್ಪಳ: ವಿಧಾನಸಭಾ ಚುನಾವಣೆಯ ಮತ ಎಣಿಕೆ ಶನಿವಾರ ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದ್ದು, ಕಣದಲ್ಲಿರುವ ಒಟ್ಟು 69 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಕೊಪ್ಪಳ ಮತ್ತು ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ತ್ರಿಕೋನ, ಉಳಿದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಜಿಲ್ಲೆಯಿಂದ ರಾಜಕೀಯ ಬದುಕನ್ನು ಅಗ್ನಿಪರೀಕ್ಷೆಗೆ ಒಳಪಡಿಸಿರುವ ಗಾಲಿ ಜನಾರ್ದನ ರೆಡ್ಡಿ ರಾಜಕೀಯ ಭವಿಷ್ಯವನ್ನೂ ಈ ಫಲಿತಾಂಶ ನಿರ್ಧಾರ ಮಾಡಲಿದೆ. ರೆಡ್ಡಿ ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ, ಹತ್ತು ವರ್ಷಗಳ ಕಾಲ ಬಿಜೆಪಿಯಲ್ಲಿದ್ದು, ಟಿಕೆಟ್ ಸಿಗದ ಕಾರಣಕ್ಕೆ ಬಂಡಾಯವೆದ್ದಿರುವ ಸಿ.ವಿ. ಚಂದ್ರಶೇಖರ್ ಕೊಪ್ಪಳ ಕ್ಷೇತ್ರದ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದಾರೆ. ಅವರ ರಾಜಕೀಯ ಬದುಕಿಗೂ ಈ ಚುನಾವಣಾ ಫಲಿತಾಂಶ ಮಹತ್ವದ್ದಾಗಿದೆ.
ಇಲ್ಲಿನ ಗವಿಸಿದ್ದೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯಲಿದ್ದು, ಒಟ್ಟು 11,36,838 ಮತದಾರರಲ್ಲಿ 8,85,325 ಮತದಾರರು ಹಕ್ಕು ಚಲಾಯಿಸಿದ್ದಾರೆ. ಐದು ಕ್ಷೇತ್ರಗಳಿಂದ 69 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2018ರ ಚುನಾವಣೆಗಿಂತಲೂ ಮತದಾನ ಹೆಚ್ಚಿನ ಪ್ರಮಾಣದಲ್ಲಿ ಆಗಿದ್ದು, ಕೂಡ ಅಭ್ಯರ್ಥಿಗಳ ಹುಮ್ಮಸ್ಸು ಹೆಚ್ಚಿಸಿದೆ.
ಬೆಂಗಳೂರು: ಈ ಬಾರಿ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೆ ಮಾತ್ರ ಜೆಡಿಎಸ್ ಅಥವಾ ಪಕ್ಷೇತರರ ನೆರವಿನೊಂದಿಗೆ ಸರ್ಕಾರ ರಚಿಸುವ ಕಸರತ್ತಿಗೆ ಕೈ ಹಾಕುವ ಬಗ್ಗೆ ಬಿಜೆಪಿಯಲ್ಲಿ ಚರ್ಚೆ ನಡೆದಿದೆ.
‘ಪಕ್ಷದ ಆಂತರಿಕ ಲೆಕ್ಕಾಚಾರದ ಪ್ರಕಾರ ಈ ಬಾರಿ 105 ರಿಂದ 120 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಒಂದು ವೇಳೆ ಮ್ಯಾಜಿಕ್ ಸಂಖ್ಯೆ 113 ದಾಟಿದರೆ ಪಕ್ಷೇತರರನ್ನು ಸೇರಿಸಿಕೊಂಡು ಸರ್ಕಾರ ರಚಿಸುವುದು. ಸಂಖ್ಯೆ 95 ರಿಂದ 113 ರ ಒಳಗೆ ಬಂದು ನಿಂತರೆ ಆಗ ಜೆಡಿಎಸ್ ಮತ್ತು ಪಕ್ಷೇತರರ ಜತೆ ಕೈ ಜೋಡಿಸುವುದು ಅನಿವಾರ್ಯ. ಈ ಹಿನ್ನೆಲೆಯಲ್ಲಿ ಗೆಲ್ಲಬಹುದಾದ ಪಕ್ಷೇತರರು ಮತ್ತು ಜೆಡಿಎಸ್ ಜತೆ ಸಂಪರ್ಕ ಸಾಧಿಸಲು ಹಲವು ನಾಯಕರಿಗೆ ಸೂಚನೆ ನೀಡಲಾಗಿದೆ’ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
‘2018 ರಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸರ್ಕಾರ ರಚಿಸಲಾಗದ ಸ್ಥಿತಿ ಉದ್ಭವಿಸಿತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದರೂ ಸಂಖ್ಯೆ ಹೊಂದಿಸಲಾಗದೇ ರಾಜೀನಾಮೆ ನೀಡಿ ಮುಖಭಂಗ ಅನುಭವಿಸಬೇಕಾಯಿತು. ಆಗ ಜೆಡಿಎಸ್, ಕಾಂಗ್ರೆಸ್ ಜತೆ ಕೈ ಜೋಡಿಸಿತ್ತು. ಈ ಬಾರಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದು, ಬಿಜೆಪಿ ಎರಡನೇ ಸ್ಥಾನಕ್ಕೆ ಕುಸಿದರೆ, ಅಂದರೆ 90ಕ್ಕಿಂತಲೂ ಕಡಿಮೆ ಸ್ಥಾನ ಗೆದ್ದರೆ ಸರ್ಕಾರ ರಚನೆ ಕಸರತ್ತಿಗೆ ಕೈ ಹಾಕದಿರಲು ತೀರ್ಮಾನಿಸಲಾಗಿದೆ’ ಎಂದು ತಿಳಿಸಿವೆ.
‘ಜೆಡಿಎಸ್ ಜತೆ ಈ ಹಿಂದೆ ಸರ್ಕಾರ ರಚಿಸಿ ಕಹಿ ಅನುಭವಿಸಿದ್ದ ಹಿನ್ನೆಲೆಯಲ್ಲಿ ಈ ಬಾರಿ ಫಲಿತಾಂಶ ಅತಂತ್ರ ಬಂದರೆ ಅವರ ಜತೆ ಸೇರಿ ಸರ್ಕಾರ ರಚಿಸಬೇಕೇ ಎಂಬ ಬಗ್ಗೆಯೂ ಚರ್ಚೆಯೂ ನಡೆದಿದೆ. ಜೆಡಿಎಸ್‌ನ ಎಲ್ಲ ಷರತ್ತುಗಳಿಗೆ ಮಣೆ ಹಾಕುತ್ತಲೇ ಹೋದರೆ ಸರ್ಕಾರ ನಡೆಸುವುದೇ ಕಷ್ಟವಾಗಬಹುದು. ಆದ್ದರಿಂದ ಫಲಿತಾಂಶದ ದಿಕ್ಕು ದೆಸೆ ನೋಡಿ ಆ ಬಳಿಕವೇ ಎಚ್ಚರಿಕೆಯ ಹೆಜ್ಜೆ ಇಡಬೇಕು. ಪರ್ಯಾಯ ಮಾರ್ಗಗಳ ಬಗ್ಗೆಯೂ ಚಿಂತನೆ ನಡೆಸಲಾಗಿದೆ’ ಎಂದು ಮೂಲಗಳು ಹೇಳಿವೆ.
ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಗುರುವಾರ ಟ್ವೀಟ್ ಮಾಡಿದ ಪ್ರಕಾರ 31 ಸಾವಿರ ಬೂತ್‌ಗಳಲ್ಲಿ ಲೀಡ್ ಇದೆ. ಅವರು ನಿಖರ ಮಾಹಿತಿಯನ್ನು ಇಟ್ಟಕೊಂಡೇ ಟ್ವೀಟ್ ಮಾಡಿರುತ್ತಾರೆ. ಇದರ ಪ್ರಕಾರ ಸುಮಾರು 105 ರಿಂದ 120 ಸ್ಥಾನಗಳವರೆಗೆ ಗೆಲ್ಲಬಹುದು ಎಂಬ ಲೆಕ್ಕಾಚಾರ ಮಾಡಲಾಗಿದೆ’ ಎಂದು ಬಿಜೆಪಿಯ ನಾಯಕರೊಬ್ಬರು ತಿಳಿಸಿದರು.
ಬಳ್ಳಾರಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಮತ ಏಣಿಕೆ ಕಾರ್ಯಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ದತೆ.
ಕೆಲವು ಗಂಟೆಗಳಲ್ಲಿ ಆರಂಭವಾಗಲಿರುವ ಮತ ಏಣಿಕೆ ಕಾರ್ಯ.
ನಗರದ ವೈ ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜಿನ ನಡೆಯಲಿರುವ ಮತ ಏಣಿಕೆ.
ಜಿಲ್ಲೆಯಲ್ಲಿ ಶೇ.76.24 ರಷ್ಟು ಮತದಾನವಾಗಿದೆ.
ತಲಾ ಒಂದು ಕ್ಷೇತ್ರದ 14 ಟೇಬಲ್ಗಳಿಗೆ 170 ಸಿಬ್ಬಂದಿ ನಿಯೋಜನೆ.
ತಲಾ ಒಂದು ಕ್ಷೇತ್ರದ ಮತ ಎಣಿಕೆಗೆ 14 ಟೇಬಲ್ ಹಾಗೂ ಪೋಸ್ಟಲ್ ಬ್ಯಾಲೆಟ್ ಎಣಿಕೆಗೆ 2 ಟೇಬಲ್ ವ್ಯವಸ್ಥೆ.
ಮತಏಣಿಕೆ ಸೂಪರ್ ವೈಜರ್ಸ್, ಮತಏಣಿಕೆ ಸಹಾಯಕರು, ಮತ ಏಣಿಕೆ ವಿಕ್ಷೇಕರನ್ನು ನಿಯೋಜನೆ ಮಾಡಲಾಗಿದೆ. ಸ್ಟ್ರಾಂಗ್ ರೂಮ್‌ನಿಂದ ಮತಯಂತ್ರಗಳನ್ನು ತೆಗೆದುಕೊಂಡ ಮತಏಣಿಕೆ ಕೇಂದ್ರ ತರಲು ಗ್ರಾಮ ಸಹಾಕಯರನ್ನು ಕರ್ತವ್ಯ ವ್ಯವಸ್ಥೆ.
ಒಟ್ಟು 56 ಅಭ್ಯರ್ಥಿಗಳು ಕಣದಲ್ಲಿನ ಇಂದು ಭವಿಷ್ಯ ನಿರ್ಧಾರ.
ಮತ ಏಣಿಕೆ ಕಾರ್ಯ ಸಮಯದಲ್ಲಿ ಯಾವುದೇ ಅಹಿಕತರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೇಂದ್ರ ಹಾಗೂ ಜಿಲ್ಲೆಯಾದ್ಯಂತ ಕಲಂ 144 ನಿಷೇಧ್ಞಾನೆ ಜಾರಿ.
ಮತಕೇಂದ್ರದತ್ತ ಬರುತ್ತಿರುವ ಮತ ಎಣಿಕೆ ಸಿಬ್ಬಂದಿ.
ಸಿಬ್ಬಂದಿಗಳನ್ನು ತಪಾಸಣೆ ಮಾಡಿ ಬಿಡುತ್ತಿರುವ ಪೊಲೀಸರು.
ಮಂಗಳೂರು: ಸುರತ್ಕಲ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್ಐಟಿಕೆ) ಆವರಣದಲ್ಲಿ ಮತಯಂತ್ರಗಳನ್ನು ಇರಿಸಿದ್ದ ಭದ್ರತಾ ಕೊಠಡಿಗಳನ್ನು ಶನಿವಾರ ಬೆಳಿಗ್ಗೆ 7.40 ಕ್ಕೆ ತೆರೆಯಲಾಗಿದ್ದು ಇನ್ನೇನು ಕೆಲವೇ ಸಮಯದಲ್ಲಿ ಮತೆಣಿಕೆಕಾರ್ಯ ಶುರುವಾಗಲಿದೆ.
ಈಗಾಗಲೇ ಮತ ಎಣಿಕೆ ಕೇಂದ್ರದ ಬಳಿ ಅಭ್ಯರ್ಥಿ ಗಳ ಏಜೆಂಟರು, ಮತ ಎಣಿಕೆ ಅಧಿಕಾರಿಗಳು ಸೇರಿದ್ದಾರೆ.
ಎನ್ಐಟಿಕೆ ಪ್ರದೇಶದಲ್ಲಿ ರುಂತುರು ಮಳೆ ಶುರುವಾಗಿದೆ.
ಹೊಸಪೇಟೆ: ವಿಜಯನಗರ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ.
ಭಾರಿ ಭದ್ರತೆ ನಡುವೆ ನಗರದ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನಲ್ಲಿ ಮತ ಎಣಿಕೆಗೆ ಸಿದ್ಧತೆ ಮಾಡಲಾಗಿದೆ.
ಜಿಲ್ಲಾ ಚುನಾವಣಾಧಿಕಾರಿ ವೆಂಕಟೇಶ್ ಟಿ., ಚುನಾವಣಾ ವೀಕ್ಷಕ ಎಂ.ಎಂ. ನಾಯಕ, ಚುನಾವಣಾಧಿಕಾರಿ ಸಿದ್ಧ ರಾಮೇಶ್ವರ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂಗಳ ಸೀಲ್ ತೆಗೆಯಲಾಗುತ್ತಿದೆ. ಇನ್ನೊಂದೆಡೆ ಅಂಚೆ ಮತ ಪತ್ರಗಳನ್ನು ಜೋಡಿಸುವ ಕೆಲಸ ಪ್ರಗತಿಯಲ್ಲಿದೆ. ಎಂಟು ಗಂಟೆಗೆ ಎಣಿಕೆ ಶುರುವಾಗಲಿದೆ.
ಮೊದಲು ಅಂಚೆ ಮತಪತ್ರಗಳ ಎಣಿಕೆ ನಡೆಯಲಿದೆ. ಅನಂತರ ವಿದ್ಯುನ್ಮಾನ ಮತಗಳ ಎಣಿಕೆ ನಡೆಸಲಾಗುತ್ತದೆ.
ಅಭ್ಯರ್ಥಿಗಳಾದ ಎಚ್.ಆರ್. ಗವಿಯಪ್ಪ, ಭೀಮ ನಾಯ್ಕ, ಕೆ. ನೇಮರಾಜ ನಾಯ್ಕ ಹಾಗೂ ಅವರ ಬೆಂಬಲಿಗರು, ಏಜೆಂಟರು ಬಂದಿದ್ದಾರೆ. ಏಜೆಂಟರಿಷ್ಟೇ ಮತ ಎಣಿಕೆ ಕೇಂದ್ರದ ಒಳಗೆ ಬಿಡಲಾಗುತ್ತಿದೆ. ಕಾಲೇಜಿನ ಎದುರು ಅಪಾರ ಸಂಖ್ಯೆಯ ಕಾರ್ಯಕರ್ತರು ಸೇರಿದ್ದಾರೆ. ಎಸ್ಟಿ ಶ್ರೀಹರಿಬಾಬು ಬಿ.ಎಲ್. ಇತರೆ ಅಧಿಕಾರಿಗಳು ಸ್ಥಳದಲ್ಲಿದ್ದಾರೆ.
ರಾಜ್ಯದಾದ್ಯಂತ ಅಂಚೆ ಮತಗಳ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ.
ಅಂಚೆ ಮತ ಎಣಿಕೆಯಲ್ಲಿ ಕನಕಪುರದಲ್ಲಿ ಡಿ.ಕೆ. ಶಿವಕುಮಾರ್, ಮಹಾಲಕ್ಷ್ಮೀ ಲೇಔಟ್‌ನಲ್ಲಿ ಗೋಪಾಲಯ್ಯ, ಮಲ್ಲೇಶ್ವರದಲ್ಲಿ ಅಶ್ವತ್ಥ ನಾರಾಯಣ, ಹಾಸನದಲ್ಲಿ ಜೆಡಿಎಸ್‌ನ ಸ್ವರೂಪ್ ಮುನ್ನಡೆ. ತೇರದಾಳದಲ್ಲಿ ಸಿದ್ದು ಸವದಿ, ಸರ್ವಜ್ಙನಗರದಲ್ಲಿ ಕೆ.ಜೆ. ಜಾರ್ಜ್,
ಅಂಚೆ ಮತ ಎಣಿಕೆಯಲ್ಲಿ ಬಿಜೆಪಿ 20, ಕಾಂಗ್ರೆಸ್ 13, ಜೆಡಿಎಸ್ 2ರಲ್ಲಿ ಮುನ್ನಡೆ
ಹಾಸನದಲ್ಲಿ ಜೆಡಿಎಸ್‌ನ ಸ್ವರೂಪ್ ಗೌಡ ಅವರನ್ನು ಹಿಂದಿಕ್ಕಿ ಪ್ರೀತಂ ಗೌಡ ಮುನ್ನಡೆ ಸಾಧಿಸಿದ್ದಾರೆ. ಅರಕಲಗೂಡಿನಲ್ಲಿ ಜೆಡಿಎಸ್‌ನ ಎ. ಮಂಜು ಮುನ್ನಡೆ. ಚಾಮರಾಜಪೇಟೆಯಲ್ಲಿ ಜಮೀರ್ ಅಹಮದ್, ಹುಬ್ಬಳ್ಳಿ–ಧಾರವಾಡ ಪಶ್ಚಿಮದಲ್ಲಿ ಅರವಿಂದ ಬೆಲ್ಲದ್, ಕೋಲಾರದಲ್ಲಿ ವರ್ತೂರು ಪ್ರಕಾಶ್ ಮುನ್ನಡೆ
ಆರಂಭಿಕ ಟ್ರೆಂಡ್: 44ರಲ್ಲಿ ಬಿಜೆಪಿ, 37ರಲ್ಲಿ ಕಾಂಗ್ರೆಸ್, ಜೆಡಿಎಸ್ 17ರಲ್ಲಿ ಮುನ್ನಡೆ ಸಾಧಿಸಿವೆ. ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ, ಚನ್ನಪಟ್ಟಣದಲ್ಲಿ ಎಚ್.ಡಿ. ಕುಮಾರಸ್ವಾಮಿ ಮುನ್ನಡೆ ಸಾಧಿಸಿದ್ದಾರೆ. ಹಾಸನದಲ್ಲಿ ಪ್ರೀತಂ ಗೌಡ ಮತ್ತೆ ಹಿನ್ನಡೆ ಅನುಭವಿಸಿದ್ದಾರೆ.
ಹುಕ್ಕೇರಿ ಕ್ಷೇತ್ರದಲ್ಲಿ ಅಂಚೆ ಮತಗಳ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ನಿಖಿಲ್ ಕತ್ತಿ ಅವರಿಗೆ ಮುನ್ನಡೆ.
ನಿಖಿಲ್ ಕತ್ತಿ(ಬಿಜೆಪಿ)-474
ಎ.ಬಿ.ಪಾಟೀಲ(ಕಾಂಗ್ರೆಸ್)-425
ಮಂಗಳೂರು ಉತ್ತರ ಕ್ಷೇತ್ರದ ಭದ್ರತಾಕೊಠಡಿಯ ಬೀಗ ತೆಗೆಯಲು ಆಗದೆ, ಬಾಗಿಲು ಒಡೆದು ಭದ್ರತಾ ಕೊಠಡಿಯ ಬಾಗಿಲು ತೆಗೆಯಲಾಯಿತು.
ಗೋಕಾಕ್‌ನಲ್ಲಿ ರೆಮೇಶ್ ಜಾರಕಿಹೊಳಿ, ಹೊನ್ನಾಳಿಯಲ್ಲಿ ಎಂ.ಪಿ. ರೇಣುಕಾಚಾರ್ಯ, ಹೊಳೆನರಸೀಪುರದಲ್ಲಿ ರೇವಣ್ಣ ಹಿನ್ನಡೆ ಸಾಧಿಸಿದ್ದಾರೆ.
ಕೋಲಾರದಲ್ಲಿ ಕೊತ್ತೂರು ಮಂಜುನಾಥ್, ಸಾಗರದಲ್ಲಿ ಬೇಳೂರು ಗೋಪಾಲಕೃಷ್ಣ ಮುನ್ನಡೆ ಸಾಧಿಸಿದ್ದಾರೆ. ಮೊದಲ ಸುತ್ತಿನಲ್ಲಿ 1600 ಮತಗಳ ಮುನ್ನಡೆ. ಹೊಳೆನರಸೀಪುರದಲ್ಲಿ ಮುನ್ನಡೆ ಸಾಧಿಸಿದ ರೇವಣ್ಣ, ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಮುನ್ನಡೆ ಪಡೆದಿದ್ದಾರೆ. ಚನ್ನಪಟ್ಟಣದಲ್ಲಿ ಸಿ.ಪಿ. ಯೋಗೀಶ್ವರ್ ಮುನ್ನಡೆ ಸಾಧಿಸಿದ್ದಾರೆ.
ಹುಬ್ಬಳ್ಳಿ–ಧಾರವಾಡ ಸೆಂಟ್ರಲ್‌ನಲ್ಲಿ ಜಗದೀಶ್ ಶೆಟ್ಟರ್ ಹಿನ್ನಡೆ ಅನುಭವಿಸಿದ್ದಾರೆ. ಹಳಿಯಾಳದಲ್ಲಿ ಆರ್.ವಿ. ದೆಶಪಾಂಡೆ ಹಿನ್ನಡೆ ಅನುಭವಿಸಿದ್ದಾರೆ. ಯಶವಂತಪುರದಲ್ಲಿ ಎಸ್.ಟಿ ಸೋಮಶೇಖರ್ ಹಿನ್ನಡೆ.
ಹಾಸನ: ಜಿದ್ದಾ ಜಿದ್ದಿನ ಹಾಸನ ಕ್ಷೇತ್ರದಲ್ಲಿ ಮೊದಲ ಸುತ್ತಿನ ಎಣಿಕೆ ಕಾರ್ಯ ಪೂರ್ಣವಾಗಿದ್ದು, ಬಿಜೆಪಿಯ ಪ್ರೀತಂಗೌಡ ಮುನ್ನಡೆ ಸಾಧಿಸಿದ್ದಾರೆ.
ಮೊದಲ ಸುತ್ತಿನಲ್ಲಿ ಬಿಜೆಪಿ 3505. ಜೆಡಿಎಸ್ 3429 ಮತ ಪಡೆದಿದ್ದು, ಬಿಜೆಪಿಗೆ 76 ಮತಗಳ ಮುನ್ನಡೆ ಸಿಕ್ಕಿದೆ. ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಆರಂಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಮುನ್ನಡೆ ಸಾಧಿಸಿದ್ದು, ಜೆಡಿಎಸ್ ನ ಎಚ್.ಡಿ. ರೇವಣ್ಣ 50 ಮತಗಳ ಹಿನ್ನಡೆ ಅನುಭವಿಸುತ್ತಿದ್ದಾರೆ.
ಗದಗ: ರೋಣ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಆರಂಭಗೊಂಡಿದ್ದು, ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್.ಪಾಟೀಲ (4928 ಮತ) ಮುನ್ನಡೆ ಸಾಧಿಸಿದ್ದಾರೆ.
ಶಾಸಕ ಕಳಕಪ್ಪ ಬಂಡಿ (4456) ಎರಡನೇ ಸ್ಥಾನದಲ್ಲಿ ಇದ್ದಾರೆ.
ಚಾಮರಾಜಪೇಟೆಯಲ್ಲಿ ಕಾಂಗ್ರೆಸ್‌ನ ಜಮೀರ್‌ಗೆ, ರಾಜಾಜಿನಗರದಲ್ಲಿ ಬಿಜೆಪಿಯ ಸುರೇಶ್ ಕುಮಾರ್‌ಗೆ ಹಿನ್ನಡೆ
ಬೆಂಗಳೂರು: ಬಸವನಗುಡಿ ಬಿಎಂಎಸ್ ಕಾಲೇಜಿನಲ್ಲಿ ನಡೆಯುತ್ತಿರುವ ಮತ ಎಣಿಕೆಯ ಮೊದಲ ಸುತ್ತು ಮುಕ್ತಾಯವಾಗಿದ್ದು ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್‌ನ ಜಮೀರ್ ಅಹಮದ್ ಹಿನ್ನಡೆ ಅನುಭವಿಸಿದ್ದಾರೆ. ಬಿಜೆಪಿಯ ಭಾಸ್ಕರ್ ರಾವ್‌ಗೆ ಮುನ್ನಡೆ ಸಿಕ್ಕಿದೆ.
ರಾಜಾಜಿನಗರದಲ್ಲಿ ಸುರೇಶ್ ಕುಮಾರ್ ಅವರಿಗೆ ಆರಂಭಿಕ ಸುತ್ತಿನಲ್ಲಿ ಹಿನ್ನಡೆಯಾಗಿದೆ. ಕಾಂಗ್ರೆಸ್ ಪುಟ್ಟಣ್ಣ ಮೊದಲ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಚಿತ್ರದುರ್ಗ: ಮೊದಲ ಸುತ್ತಿನ ಮತ ಎಣಿಕೆ: ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ
ಚಿತ್ರದುರ್ಗ: ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಮತ ಎಣಿಕೆ ಆರಂಭವಾಗಿದ್ದು, ಮೂರು ಕ್ಷೇತ್ರದಲ್ಲಿ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
ಹೊಸದುರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಬಿ.ಜಿ.ಗೋವಿಂದಪ್ಪ, ಹೊಳಲ್ಕೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಆಂಜನೇಯ ಹಾಗೂ ಮೊಳಕಾಲ್ಮುರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ.ಗೋಪಾಲಕೃಷ್ಣ ಮುನ್ನಡೆ ಸಾಧಿಸಿದ್ದಾರೆ.
ಚಾಮರಾಜನಗರ: ಸೋಮಣ್ಣಗೆ ಹಿನ್ನಡೆ
ಚಾಮರಾಜನಗರ: ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋಮಣ್ಣ ಹಿನ್ನಡೆ ಅನುಭವಿಸಿದ್ದಾರೆ.
ಕಾಂಗ್ರೆಸ್ನ ಸಿ.ಪುಟ್ಟರಂಗಶೆಟ್ಟಿ ಮೊದಲ ಸುತ್ತಿನಲ್ಲಿ 4865 ಮತಗಳನ್ನು ಪಡೆದು ಮುನ್ನಡೆ ಕಾಯ್ದುಕೊಂಡಿದ್ದಾರೆ.
ಸೋಮಣ್ಣ 4603 ಮತಗಳನ್ನು ಪಡೆದಿದ್ದಾರೆ.
ಭಟ್ಕಳ:ಬಿಜೆಪಿ ಅಭ್ಯರ್ಥಿ ಮುನ್ನಡೆ
ಭಟ್ಕಳ ವಿಧಾನಸಭಾ ಕ್ಷೇತ್ರದ ಮೊದಲ ಹಂತದ ಮತ ಎಣಿಕೆ ಪ್ರಕ್ರಿಯೆ ಮುಗಿದಿದ್ದು ಬಿಜೆಪಿ ಅಭ್ಯರ್ಥಿ ಸುನೀಲ ನಾಯ್ಕ 4,899 ಮತಗಳೊಂದಿಗೆ 1,502 ಮತಗಳ ಮುನ್ನಡೆ ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮಂಕಾಳ ವೈದ್ಯ 3,397 ಮತ ಪಡೆದಿದ್ದಾರೆ.
ಶಿರಹಟ್ಟಿ ಮೀಸಲು ಕ್ಷೇತ್ರ; ಬಿಜೆಪಿಯ ಡಾ. ಚಂದ್ರು ಲಮಾಣಿ ಮುನ್ನಡೆ
ಗದಗ; ಶಿರಹಟ್ಟಿ ಮೀಸಲು ಕ್ಷೇತ್ರದ ಮೊದಲ ಸುತ್ತಿ ಎಣಿಕೆ ಮುಗಿದಿದ್ದು, ಬಿಜೆಪಿಯ ಡಾ. ಚಂದ್ರು ಲಮಾಣಿ ಭಾರಿ ಮುನ್ನಡೆ ಸಾಧಿಸಿದ್ದಾರೆ.
ಡಾ. ಚಂದ್ರು ಲಮಾಣಿ 5048, ಕಾಂಗ್ರೆಸ್ ನ ಸುಜಾತಾ ದೊಡ್ಡಮನಿ 2309, ಪಕ್ಷೇತರ ಅಭ್ಯರ್ಥಿ ರಾಮಕೃಷ್ಣ ದೊಡ್ಡಮನಿ 2235 ಮತ ಪಡೆದಿದ್ದಾರೆ.
ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಚನ್ನಪಟ್ಟಣದಲ್ಲಿ ಸಿ.ಪಿ. ಯೋಗೀಶ್ವರ್ ಮುನ್ನಡೆ ಪಡೆದಿದ್ದಾರೆ. ಕುಮಾರಸ್ವಾಮಿ 300 ಮತಗಳಿಂದ ಹಿನ್ನಡೆ ಅನುಭವಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ
ಭದ್ರಾವತಿ: ಜೆ ಡಿ ಎಸ್ ಅಭ್ಯರ್ಥಿ ಶಾರದಾ ಅಪ್ಪಾಜಿಗೌಡ ಮುನ್ನಡೆ. ಕಾಂಗ್ರೆಸ್ ಬಿಕೆ ಸಂಗಮೇಶ್ ಹಿನ್ನಡೆ. 600 ಮತಗಳ ಮುನ್ನಡೆ. ಕೆ.ಆರ್.ನಗರದಲ್ಲಿ ಜೆಡಿಎಸ್‌ನ ಸಾ.ರಾ.ಮಹೇಶ್‌ಗೆ ಮೊದಲ ಸುತ್ತಿನಲ್ಲಿ ಹಿನ್ನಡೆ ಕಾಂಗ್ರೆಸ್‌ನ ರವಿಶಂಕರ್ ಮುನ್ನಡೆ. 1096 ಮತಗಳಿಂದ ಮುನ್ನಡೆ. ಮಹೇಶ್ 4603 ಮತಗಳನ್ನು ಪಡೆದಿದ್ದರೆ, ರವಿಶಂಕರ್ 5699 ಮತಗಳನ್ನು ಗಳಿಸಿದ್ದಾರೆ.
ಕಾರವಾರ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ 134 ಮತಗಳ ಮುನ್ನಡೆ ಸಾಧಿಸಿದ್ದಾರೆ. 2,672 ಮತಗಳನ್ನು ಅವರು ಪಡೆದಿದ್ದು, ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್'ನ ಸತೀಶ ಸೈಲ್ 2,538 ಮತ ಗಳಿಸಿದ್ದಾರೆ.
ರಾಯಚೂರು ಜಿಲ್ಲೆಯ ಫಲಿತಾಂಶ ರಾಯಚೂರು- ಬಿಜೆಪಿ ಮುನ್ನಡೆ ರಾಯಚೂರು ಗ್ರಾಮೀಣ- ಕಾಂಗ್ರೆಸ್ ಮುನ್ನಡೆ ಮಾನ್ವಿ- ಬಿಜೆಪಿ ಮುನ್ನಡೆ ಸಿಂಧನೂರು- ಕಾಂಗ್ರೆಸ್ ಮುನ್ನಡೆ ದೇವದುರ್ಗ- ಜೆಡಿಎಸ್ ಮುನ್ನಡೆ ಲಿಂಗಸುಗೂರು- ಕಾಂಗ್ರೆಸ್ ಮುನ್ನಡೆ ಮಸ್ಕಿ- ಬಿಜೆಪಿ ಮುನ್ನಡೆ ಹಿರೇಕೆರೂರು ಕ್ಷೇತ್ರ: ಯು.ಬಿ.ಬಣಕಾರಗೆ ಮುನ್ನಡೆ
ಹಾವೇರಿ: ಜಿಲ್ಲೆಯ ಹಿರೇಕೆರೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯು.ಬಿ.ಬಣಕಾರ ಅವರು ಮೊದಲನೇ ಸುತ್ತಿನಲ್ಲಿ 1265 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ತೀವ್ರ ಕುತೂಹಲ ಕೆರಳಿಸಿರುವ ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಕೃಷಿ ಸಚಿವ ಬಿ.ಸಿ.ಪಾಟೀಲ ಮತ್ತು ಜೆಡಿಎಸ್‌ನಿಂದ ಜಯಾನಂದ ಜಾವಣ್ಣನವರ ಕಣದಲ್ಲಿದ್ದಾರೆ. ಯು.ಬಿ.ಬಣಕಾರ– 4929, ಬಿ.ಸಿ.ಪಾಟೀಲ– 3664 ಮತಗಳನ್ನು ಪಡೆದಿದ್ದಾರೆ.
ಶಿರಸಿ: ಯಲ್ಲಾಪುರ-ಮುಂಡಗೋಡ ವಿಧಾನ ಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ನ ವಿ.ಎಸ್.ಪಾಟೀಲ್ ಅವರಿಗಿಂತ 662 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಶಿರಸಿ ಸಿದ್ದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮೊದಲ ಸುತ್ತಿನಲ್ಲಿ ಮುನ್ನಡೆ ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್ ನ ಭೀಮಣ್ಣ ಅವರಿಗಿಂತ 1772 ಮತ ಮುಂದಿದ್ದಾರೆ. ಬಿ.ಟಿ.ಎಂ. ಲೇಔಟ್ ನಲ್ಲಿ ರಾಮಲಿಂಗಾರೆಡ್ಡಿ, ಪದ್ಮನಾಭನಗರದಲ್ಲಿ ಆರ್. ಅಶೋಕ್ ಮುನ್ನಡೆ ಸಾಧಿಸಿದ್ದಾರೆ. ಬಬಲೇಶ್ವರ ಕಾಂಗ್ರೆಸ್: 5224 ಬಿಜೆಪಿ: 4670 ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ಮೊದಲ ಸುತ್ತಿನಲ್ಲಿ ಕಾಂಗ್ರೆಸ್‌ನ ಕೆ.ಹರೀಶ್ ಗೌಡ 58 ಮತಗಳಿಂದ ಮುನ್ನಡೆ. 4162 ಮತಗಳನ್ನು ಪಡೆದಿದ್ದಾರೆ. ಬಿಜೆಪಿಯ ಎಲ್.ನಾಗೇಂದ್ರ ಹಿನ್ನಡೆ. ಅವರು 4104 ಮತಗಳನ್ನು ಗಳಿಸಿದ್ದಾರೆ.
ಬಳ್ಳಾರಿ ಗ್ರಾಮೀಣ ಕಾಂಗ್ರೆಸ್‌ನ ನಾಗೇಂದ್ರ ಮುನ್ನಡೆ . ಬಿಜೆಪಿಯ ರಾಮುಲುಗೆ ಹಿನ್ನಡೆ
ಹುಬ್ಬಳ್ಳಿ ಧಾರವಾಡ ಪೂರ್ವ (ಮೀಸಲು ಕ್ಷೇತ್ರ ); ಕಾಂಗ್ರೆಸ್ ಮುನ್ನಡೆ
ಕಾಂಗ್ರೆಸ್‌ನ ಪ್ರಸಾದ ಅಬ್ಬಯ್ಯ 4 ಸಾವಿರ ಮತಗಳ ಮುನ್ನಡೆ
ಕೊಡಗು ಜಿಲ್ಲೆ: ಕಾಂಗ್ರೆಸ್ 1, ಬಿಜೆಪಿ 1 ಮುನ್ನಡೆ
ಮೊದಲು ಸುತ್ತಿನ ಮತ ಎಣಿಕೆಯ ನಂತರ ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳ ಪೈಕಿ ಮಡಿಕೇರಿಯಲ್ಲಿ ಕಾಂಗ್ರೆಸ್ ಹಾಗೂ ವಿರಾಜಪೇಟೆಯಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ.
ಮಡಿಕೇರಿಯ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂತರ್ ಗೌಡ 3,524, ಬಿಜೆಪಿಯ ಎಂ.ಪಿ.ಅಪ್ಪಚ್ಷುರಂಜನ್ 3,014, ಜೆಡಿಎಸ್ ನ ನಾಪಂಡ ಮುತ್ತಪ್ಪ 260 ಮತಗಳನ್ನು ಪಡೆದಿದ್ದಾರೆ.
ವಿರಾಜಪೇಟೆ ಕ್ಷೇತ್ರದ ಬಿಜೆಪಿಯ ಕೆ.ಜಿ.ಬೋಪಯ್ಯ 1481, ಕಾಂಗ್ರೆಸ್ ನ ಎ.ಎಸ್.ಪೊನ್ನಣ್ಣ1,230 ಮತಗಳನ್ನು ಪಡೆದಿದ್ದಾರೆ
ಚಿಕ್ಕಬಳ್ಳಾಪುರ ಕ್ಷೇತ್ರ: ಕಾಂಗ್ರೆಸ್ ಮುನ್ನಡೆ
ಕ್ಷೇತ್ರದಲ್ಲಿ ಮೊದಲ ಸುತ್ತಲಿನ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
ಯಲಬುರ್ಗಾ ಕ್ಷೇತ್ರ: ಕಾಂಗ್ರೆಸ್ ಮುನ್ನಡೆ
ಕೊಪ್ಪಳ ಕ್ಷೇತ್ರ: ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ರಾಯರಡ್ಡಿ ಮುನ್ನಡೆಯಲ್ಲಿದ್ದಾರೆ.
ಕಾಂಗ್ರೆಸ್-5266, ಬಿಜೆಪಿಯ ಹಾಲಪ್ಪ ಆಚಾರ್ -4175 ಹಾಗೂ
ಜೆಡಿಎಸ್ ಪಕ್ಷದ ಮಲ್ಲನಗೌಡ ಕೋನನಗೌಡ್ರ 30 ಮತಗಳನ್ನು ಪಡೆದಿದ್ದಾರೆ.
ದೇವರಹಿಪ್ಪರಗಿ : ಕಾಂಗ್ರೆಸ್ ಮುನ್ನಡೆ
ಬಿಜೆಪಿ-2038
ಜೆಡಿಎಸ್-2101
ಕಾಂಗ್ರೆಸ್- 3306
ಚಿತ್ರದುರ್ಗ : ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ವಿರೇಂದ್ರ 1000 ಮತಗಳ ಮುನ್ನಡೆ.
ಅರಭಾವಿ ಕ್ಷೇತ್ರ: ಮೊದಲ ಸುತ್ತು ಮುಕ್ತಾಯ; ಬಿಜೆಪಿಗೆ ಮುನ್ನಡೆ
ಬಾಲಚಂದ್ರ ಜಾರಕಿಹೊಳಿ- ಬಿಜೆಪಿ- 5,847
ಅರವಿಂದ ದಳವಾಯಿ- ಕಾಂಗ್ರೆಸ್- 1,621
ಬಿಜೆಪಿಗೆ 4,226 ಮತಗಳ ಮುನ್ನಡೆ
ಮಂಜುಳಾ ಲಿಂಬಾವಳಿಗೆ ಹಿನ್ನಡೆ
ಎಂಟಿಬಿ ನಾಗರಾಜ್ ಹಿನ್ನಡೆ
ಡಿಕೆಶಿಗೆ 9730 ಮತಗಳ ಮುನ್ನಡೆ
ರಾಮನಗರ: ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಸುತ್ತುಗಳ ಮತ ಎಣಿಕೆ ಮುಗಿದಿದ್ದು, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಶಿವಕುಮಾರ್ 9730 ಮತಗಳ ಭಾರಿ ಮುನ್ನಡೆ ಗಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಬಿ. ನಾಗರಾಜು 2812 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿ ಆರ್. ಅಶೋಕ್ 1316 ಮತ ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
ಹೂವಿನಹಡಗಲಿ ಕ್ಷೇತ್ರ
ಕೃಷ್ಣ ನಾಯ್ಕ (ಬಿಜೆಪಿ) –4471
ಪಿ.ಟಿ. ಪರಮೇಶ್ವರ ನಾಯ್ಕ (ಕಾಂಗ್ರೆಸ್) –4008
ಕೃಷ್ಣ ನಾಯ್ಕ 463 ಮತಗಳ ಮುನ್ನಡೆ
ಗೋಕಾಕ: ಎರಡನೇ ಸುತ್ತಿನಲ್ಲೂ ರಮೇಶ ಜಾರಕಿಹೊಳಿಗಿಂತ ಮಹಾಂತೇಶ ಮುನ್ನಡೆ
ಬೆಳಗಾವಿ: ಗೋಕಾಕ ವಿಧಾನಸಭಾ ಕ್ಷೇತ್ರದ ಎರಡನೇ ಸುತ್ತಿನ ಫಲಿತಾಂಶ ಬಂದಿದ್ದು, ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ ಕಡಾಡಿ ಅವರು ರಮೇಶ ಜಾರಕಿಹೊಳಿ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.
ರಮೇಶ ಜಾರಕಿಹೊಳಿ 6532 ಮತ ಪಡೆದಿದ್ದರೆ, ಮಹಾಂತೇಶ 6726 ಮತ ಪಡೆದು 194 ಮತಗಳ ಮುನ್ನಡೆ ಪಡೆದಿದ್ದಾರೆ.
* ಬೆಳಗಾವಿ ದಕ್ಷಿಣದಲ್ಲಿ ಅಭಯ ಪಾಟೀಲ ಮುನ್ನಡೆ
2ನೇ ಸುತ್ತಿನ ಅಂತ್ಯಕ್ಕೆ ಅಭಯ ಪಾಟೀಲ್ 13,211 ರಮಾಕಾಂತ ಕೊಂಡೂಸ್ಕರ್4325
* 2ನೇ ಸುತ್ತಿನಲ್ಲಿ ಹುಕ್ಕೇರಿ ಕ್ಷೇತ್ರದಲ್ಲಿ ಬಿಜೆಪಿಯ ನಿಖೀಲ ಕತ್ತಿ 2945 ಮುನ್ನೆಡೆ
ಬಿಜೆಪಿ : ನಿಖೀಲ ಕತ್ತಿ -9757
ಕಾಂಗ್ರೆಸ್ : ಎ ಬಿ ಪಾಟೀಲ- 6812
* ಕಿತ್ತೂರು ವಿಧಾನ ಸಭೆ ಬಿ.ಜೆ.ಪಿ ಅಭ್ಯರ್ಥಿ ಮಹಾಂತೇಶ ದೊಡ್ಡಗೌಡರ್ 2965 ಕಾಂಗ್ರೆಸ್ ಬಾಬಾಸಾಹೇಬ್ ಪಾಟೀಲ 3303. 337 ಮಾತಗಳ ಮುನ್ನಡೆ ಕಾಯ್ದುಕೊಂಡ ಬಾಬಾಸಾಹೇಬ ಪಾಟೀಲ
ಬೆಂ. ಗ್ರಾಮಾಂತರ ಜಿಲ್ಲೆಯ ಫಲಿತಾಂಶ
ಹೊಸಕೋಟೆ- ಕಾಂಗ್ರೆಸ್ 2493 ಮತಗಳ ಮುನ್ನಡೆ
ದೇವನಹಳ್ಳಿ ವಿಧಾನ ಸಭಾ ಕ್ಷೇತ್ರ
ಎರಡನೇ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ
84 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್ ಮುನಿಯಪ್ಪ ಮುನ್ನಡೆ
ಚಿಕ್ಕಮಗಳೂರು
ಶೃಂಗೇರಿ ಕ್ಷೇತ್ರ ದಲ್ಲಿ ಕಾಂಗ್ರೆಸ್ ನ ಟಿಡಿ ರಾಜೇಗೌಡ ಅವರು 3664 ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಯ ಡಿ.ಎನ್.ಜೀವರಾಜ್ ಅವರು 3111 ಹಾಗೂ ಜೆಡಿಎಸ್ ನ ಸುಧಾಕರ ಎಸ್ ಶೆಟ್ಟಿ ಅವರು 1463 ಮತ ಪಡೆದಿದ್ದಾರೆ.
ವಿಜಯಪುರ ನಗರ
ಬಿಜೆಪಿ: 8367
ಕಾಂಗ್ರೆಸ್: 1231
ಬಬಲೇಶ್ವರ
ಕಾಂಗ್ರೆಸ್: 10443
ಬಿಜೆಪಿ: 9207
ಬಸವನ ಬಾಗೇವಾಡಿ
ಕಾಂಗ್ರೆಸ್: 4623
ಜೆಡಿಎಸ್: 4052
ದೇವರಹಿಪ್ಪರಗಿ
ಕಾಂಗ್ರೆಸ್: 3306
ಜೆಡಿಎಸ್: 2101
ಮುದ್ದೇಬಿಹಾಳ
ಬಿಜೆಪಿ: 7020
ಕಾಂಗ್ರೆಸ್: 3607
ಸಿಂದಗಿ
ಕಾಂಗ್ರೆಸ್: 12654
ಬಿಜೆಪಿ: 12188
ಧಾರವಾಡ:
ಗ್ರಾಮೀಣ ವಿಧಾನಸಭಾ ಕ್ಷೇತ್ರದ 3ನೇ ಸುತ್ತು..
ವಿನಯ ಕುಲಕರ್ಣಿ 16289
ಅಮೃತ ದೇಸಾಯಿ 12361
ಲೀಡ್ - 3928
ಕಾರವಾರ ಕ್ಷೇತ್ರ;
ಎರಡನೆ ಸುತ್ತು:ಬಿಜೆಪಿ 1,155 ಮುನ್ನಡೆ
ರೂಪಾಲಿ ನಾಯ್ಕ: ಬಿಜೆಪಿ: 6,510
ಸತೀಶ ಸೈಲ್:ಕಾಂಗ್ರೆಸ್: 5,355
ಬಾಗಲಕೋಟೆ ಜಿಲ್ಲೆ
ಜಮಖಂಡಿ
ಕಾಂಗ್ರೆಸ್ ಆನಂದ ನ್ಯಾಮಗೌಡ 4690
ಬಿಜೆಪಿ ಜಗದೀಶ ಗುಡಗುಂಟಿ 4636
ಬಾಗಲಕೋಟೆ
ಬಿಜೆಪಿ ವೀರಣ್ಣ ಚರಂತಿಮಠ 3436
ಕಾಂಗ್ರೆಸ್ ಎಚ್.ವೈ. ಮೇಟಿ 4671
ಬಾದಾಮಿ
ಬಿಜೆಪಿ ಶಾಂತಗೌಡ ಪಾಟೀಲ 2,546
ಕಾಂಗ್ರೆಸ್ ಭೀಮಸೇನ ಚಿಮ್ಮಿ ಕಟ್ಟಿ 4,594
ಮುಧೋಳ
ಬಿಜೆಪಿ ಗೋವಿಂದ ಕಾರಜೋಳ 5,062
ಕಾಂಗ್ರೆಸ್ ಆರ್.ಬಿ. ತಿಮ್ಮಾಪುರ 5,492
ತೀರ್ಥಹಳ್ಳಿ
ಅರಗ ಜ್ಞಾನೇಂದ್ರ 4,387
ಕಿಮ್ಮನೆ 4209 ಅರಗ ಮೊದಲ ಸುತ್ತಿನಲ್ಲಿ 184 ಮತ ಮುನ್ನಡೆ
ಗಂಗಾವತಿಯಲ್ಲಿ ರೆಡ್ಡಿ ಮುನ್ನಡೆ
ಕೊಪ್ಪಳ: ಜಿಲ್ಲೆಯ ಗಂಗಾವತಿ ಕ್ಚೇತ್ರದಲ್ಲಿ ಕಲ್ಯಾಣ ರಾಜ್ಯ ಕರ್ನಾಟಕ ಪ್ರಗತಿ ಪಕ್ಷದ ಜನಾರ್ದನ ರೆಡ್ಡಿ ಮುನ್ನಡೆಯಲ್ಲಿದ್ದಾರೆ.
ರೆಡ್ಡಿ 3310, ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ 2965, ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ 2209 ಹಾಗೂ ಜೆಡಿಎಸ್ ಅಭ್ಯರ್ಥಿ ಎಚ್.ಆರ್.ಚನ್ನಕೇಶವ 83 ಮತಗಳನ್ನು ಪಡೆದಿದ್ದಾರೆ.
ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್‌ನ ಜಿ.ಡಿ.ಹರೀಶ್‌ಗೌಡ ಮುನ್ನಡೆ. ಅವರು 6117 ಮತಗಳನ್ನು ಪಡೆದಿದ್ದಾರೆ.
ಹಾಲಿ ಶಾಸಕ, ಕಾಂಗ್ರೆಸ್‌ನ ಎಚ್.ಪಿ.ಮಂಜುನಾಥ್ 4456 ಮತ ಗಳಿಸಿದ್ದಾರೆ. 1661 ಮತಗಳಿಂದ ಹರೀಶ್ ಗೌಡ ಮುನ್ನಡೆ ಸಾಧಿಸಿದ್ದಾರೆ.
ಚಿತ್ರದುರ್ಗ
ಚಿತ್ರದುರ್ಗ ಕ್ಷೇತ್ರ- ಮೊದಲ ಸುತ್ತು ಎಣಿಕೆ ಮುಕ್ತಾಯ- ಕಾಂಗ್ರೆಸ್ 2,613 ಮತಗಳ ಮುನ್ನಡೆ
ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ವಿರೇಂದ್ರ 5,722 ಮತ ,
ಬಿಜೆಪಿ ಅಭ್ಯರ್ಥಿ ಜಿ.ಎಚ್.ತಿಪ್ಪಾರೆಡ್ಡಿ- 3109 ಮತ.
ಗುಂಡ್ಲುಪೇಟೆ: ಕಾಂಗ್ರೆಸ್ ನ ಗಣೇಶ್ ಪ್ರಸಾದ್ ಮುನ್ನಡೆ
ಚಾಮರಾಜನಗರ: ಗುಂಡ್ಲುಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಗಣೇಶ್ ಪ್ರಸಾದ್ ಮುನ್ನಡೆಯಲ್ಲಿದ್ದಾರೆ.
ಮೊದಲ ಸುತ್ತಿನಲ್ಲಿ ಗಣೇಶ್ ಪ್ರಸಾದ್ 6611 ಮತಗಳನ್ನು ಪಡೆದರೆ, ಬಿಜೆಪಿಯ ಅಭ್ಯರ್ಥಿ, ಶಾಸಕ ಸಿ.ಎಸ್.ನಿರಂಜನಕುಮಾರ್ 3,698 ಮತಗಳನ್ನು ಗಳಿಸಿದ್ದಾರೆ.
ಅಥಣಿಯಲ್ಲಿ ಲಕ್ಷ್ಮಣ ಸವದಿ ಮುನ್ನಡೆ
ಲಕ್ಷ್ಮಣ ಸವದಿ(ಕಾಂಗ್ರೆಸ್)-11,137
ಮಹೇಶ ಕುಮಠಳ್ಳಿ(ಬಿಜೆಪಿ)-5,763
ರಾಮನಗರ
ನಾಲ್ಕನೇ ಸುತ್ತಿನಲ್ಲೂ ನಿಖಿಲ್‌ಗೆ ಮುನ್ನಡೆ
ರಾಮನಗರ: ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಎರಡನೇ ಸುತ್ತಿನ ಅಂತ್ಯಕ್ಕೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ 16,721 ಮತಗಳನ್ನು ಪಡೆದು 3011 ಮತಗಳ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ 13,710 ಮತಗಳನ್ನು ಪಡೆದು ಹಿನ್ನಡೆ ಅನುಭವಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಗೌತಮ್ ಗೌಡ ಕೇವಲ 2133 ಮತಗಳನ್ನು ಪಡೆದಿದ್ದಾರೆ.
ಗುರುಮಠಕಲ್ ಮತಕ್ಷೇತ್ರ ಮೊದಲ ಸುತ್ತಿನಲ್ಲಿ 83 ಮತಗಳ ಅಂತರದಿಂದ ಕಾಂಗ್ರೆಸ್ ಮುನ್ನಡೆ.
- ಕಾಂಗ್ರೆಸ್ ಬಾಬುರಾವ ಚಿಂಚನಸೂರ- 3504
- ಜೆಡಿಎಸ್ ಶರಣಗೌಡ ಕಂದಕೂರ - 3421
- ಬಿಜೆಪಿ ಲಿಲಿತಾ ಅನಪುರ -730
ಕೂಡ್ಲಿಗಿ ಕ್ಷೇತ್ರ–ಮೊದಲನೇ ಸುತ್ತಿನಲ್ಲಿ
ಲೋಕೇಶ್ ವಿ. ನಾಯಕ (ಬಿಜೆಪಿ)–5823
ಡಾ.ಎನ್.ಟಿ. ಶ್ರೀನಿವಾಸ್ (ಕಾಂಗ್ರೆಸ್)–12513
ಕೋಡಿಹಳ್ಳಿ ಭೀಮಣ್ಣ (ಜೆಡಿಎಸ್)–332
ಕಾಂಗ್ರೆಸ್ ಅಭ್ಯರ್ಥಿ 6690 ಮತಗಳ ಮುನ್ನಡೆ
ಬಳ್ಳಾರಿ ನಗರ ಕ್ಷೇತ್ರ
ಕಾಂಗ್ರೆಸ್- 5149
ಕೆಆರ್ ಪಿಪಿ- 3392
ಕಾಂಗ್ರೆಸ್ 1757 ಮುನ್ನಡೆ
ಕುಮಟಾ ಕ್ಷೇತ್ರ:: ಮೊದಲ ಸುತ್ತು:ಜೆಡಿಎಸ್ 428 ಮುನ್ನಡೆ
ದಿನಕರ ಶೆಟ್ಟಿ:ಬಿಜೆಪಿ:3,231
ನಿವೇದಿತ್ ಆಳ್ವ:ಕಾಂಗ್ರೆಸ್:1,183
ಸೂರಜ್ ನಾಯ್ಕ ಸೋನಿ:ಜೆಡಿಎಸ್:3,659
ಮೂರನೆ ಸುತ್ತಿನಲ್ಲಿಯೂ ರಾಯರಡ್ಡಿ ಮುನ್ನಡೆ
ಕೊಪ್ಪಳ: ಯಲಬುರ್ಗಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ರಾಯರಡ್ಡಿ ಮೂರನೆ ಸುತ್ತಿನ ಅಂತ್ಯಕ್ಕೆ ಮುನ್ನಡೆಯಲ್ಲಿದ್ದಾರೆ.
ಕಾಂಗ್ರೆಸ್ 14,342, ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ 12,491
ಮತಗಳನ್ನು ಪಡೆದಿದ್ದಾರೆ.
ಪ್ರಿಯಾಂಕ್ ಖರ್ಗೆ ಮುನ್ನಡೆ
ಕಲಬುರಗಿ: ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿಯ ಮಣಿಕಂಠ ರಾಥೋಡ ಅವರಿಗಿಂತ 2493 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಎರಡು ಸುತ್ತುಗಳ ಮತ ಎಣಿಕೆ ಮುಕ್ತಾಯವಾಗಿದೆ.
ಕಲಬುರಗಿ ಉತ್ತರ ಕ್ಷೇತ್ರದಲ್ಲಿ ಬಿಜೆಪಿಯ ಚಂದು ಪಾಟೀಲ ಕಾಂಗ್ರೆಸ್ ಅಭ್ಯರ್ಥಿ ಕನೀಜ್ ಫಾತಿಮಾ ಅವರಿಗಿಂತ 2600 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಚಿಂಚೋಳಿಯಲ್ಲಿ ಬಿಜೆಪಿಯ ಡಾ.ಅವಿನಾಶ್ ಜಾಧವ ಕಾಂಗ್ರೆಸ್ ನ ಸುಭಾಷ್ ರಾಠೋಡ ಅವರಿಗಿಂತ 3063 ಮತಗಳ ಅಂತರದಯ ಮುನ್ನಡೆ ಸಾಧಿಸಿದ್ದಾರೆ.
ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಯ ಬಸವರಾಜ ಮತ್ತಿಮಡು ಮುನ್ನಡೆ ಸಾಧಿಸಿದ್ದಾರೆ.
ರಾಮನಗರ: ಚನ್ನಪಟ್ಟಣದಲ್ಲಿ ಎರಡನೇ ಸುತ್ತಿನ ಅಂತ್ಯಕ್ಕೆ ಜೆಡಿಎಸ್ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ 710 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ಕುಮಾರಸ್ವಾಮಿ 9522 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ 8812 ಮತಗಳನ್ನು ಪಡೆದು ಅಲ್ಪ ಮತಗಳ ಹಿನ್ನಡೆ ಅನುಭವಿಸಿದ್ದಾರೆ. ಕಾಂಗ್ರೆಸ್‌ನ ಎಸ್. ಗಂಗಾಧರ್ 1305 ಮತ ಪಡೆದಿದ್ದಾರೆ.
ಸತೀಶ ಜಾರಕಿಹೊಳಿ(ಕಾಂಗ್ರೆಸ್)-31582
ಬಸವರಾಜ ಹುಂದಿ(ಬಿಜೆಪಿ)-14844
6576 ಮತಗಳನ್ನು ಪಡೆದಿರುವ ಸಿದ್ದರಾಮಯ್ಯ. ಬಿಜೆಪಿಯ ವಿ.ಸೋಮಣ್ಣಗೆ ಹಿನ್ನಡೆ. 3866 ಮತಗಳನ್ನು ಪಡೆದಿರುವ ಬಿಜೆಪಿ ಅಭ್ಯರ್ಥಿ ಸೋಮಣ್ಣ. ಸಿದ್ದರಾಮಯ್ಯಗೆ 2710 ಮತಗಳ ಮುನ್ನಡೆ.
ರಾಜರಾಜೇಶ್ವರಿ ನಗರ
ಮುನಿರತ್ನ (ಬಿಜೆಪಿ) 12,851 ಎಚ್.ಕುಸುಮಾ (ಕಾಂಗ್ರೆಸ್) ಮುನ್ನಡೆ: ಬಿಜೆಪಿಗೆ 1271 ಮತಗಳು
ಕಾರವಾರ ಕ್ಷೇತ್ರ;
ಆರನೆ ಸುತ್ತು:ಕಾಂಗ್ರೆಸ್ 994 ಮುನ್ನಡೆ
ರೂಪಾಲಿ ನಾಯ್ಕ: ಬಿಜೆಪಿ: 19,183
ಸತೀಶ ಸೈಲ್:ಕಾಂಗ್ರೆಸ್: 20,377
ಕ್ಷೇತ್ರ: ಶ್ರವಣಬೆಳಗೊಳ
ಸಿ.ಎನ್. ಬಾಲಕೃಷ್ಣ (ಜೆಡಿಎಸ್)– 26662
ಎಂ.ಎ. ಗೋಪಾಲಸ್ವಾಮಿ (ಕಾಂಗ್ರೆಸ್)– 23101
ಚಿದಾನಂದ (ಬಿಜೆಪಿ)–1343
ಜೆಡಿಎಸ್ ಮುನ್ನಡೆ- 3561
ತೀರ್ಥಹಳ್ಳಿ 4 ನೇ ಸುತ್ತು
ಆರಗ ಜ್ಞಾನೇಂದ್ರ - ಬಿಜೆಪಿ-19247
ಕಿಮ್ಮನೆ ರತ್ನಾಕರ್ - ಕಾಂಗ್ರೆಸ್ -17703
ಕುಮಟಾ ಕ್ಷೇತ್ರ:
ಎರಡನೆ ಸುತ್ತು:ಬಿಜೆಪಿ 522 ಮುನ್ನಡೆ
ದಿನಕರ ಶೆಟ್ಟಿ:ಬಿಜೆಪಿ:6,827
ನಿವೇದಿತ್ ಆಳ್ವ:ಕಾಂಗ್ರೆಸ್:2,577
ಸೂರಜ್ ನಾಯ್ಕ ಸೋನಿ:ಜೆಡಿಎಸ್:6,305
ಆಳಂದ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ
ಕಲಬುರಗಿ: ಆಳಂದ ಕ್ಷೇತ್ರದಲ್ಲಿ ಬಿಜೆಪಿಯ ಸುಭಾಷ್ ಗುತ್ತೇದಾರ ಅವರು ಕಾಂಗ್ರೆಸ್ ನ ಬಿ.ಆರ್. ಪಾಟೀಲ ಅವರಿಗಿಂತ ಮೂರನೇ ಸುತ್ತಿನಲ್ಲಿ 223 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಗಾಂಧಿನಗರ ಮೂರನೇ ಸುತ್ತು
ಬಿಜೆಪಿ ಸಪ್ತಗಿರಿಗೌಡ 1,986 ಮತಗಳ ಮುನ್ನಡೆ.
ಬಿಜೆಪಿ- 10,419
ಕಾಂಗ್ರೆಸ್- 8,433
ಜೆಡಿಎಸ್- 2,405
ವಿಜಯನಗರ ಜಿಲ್ಲೆ ಐದು ಕ್ಷೇತ್ರಗಳ ಮತ ಎಣಿಕೆ ವಿವರ
ವಿಜಯನಗರ–ಕಾಂಗ್ರೆಸ್ ಮುನ್ನಡೆ
ಹಗರಿಬೊಮ್ಮನಹಳ್ಳಿ–ಜೆಡಿಎಸ್ ಮುನ್ನಡೆ
ಹೂವಿನಹಡಗಲಿ–ಬಿಜೆಪಿ ಮುನ್ನಡೆ
ಕೂಡ್ಲಿಗಿ–ಕಾಂಗ್ರೆಸ್ ಮುನ್ನಡೆ
ಹುಬ್ಬಳ್ಳಿ ಧಾರವಾಡ ಪೂರ್ವ
ಕಾಂಗ್ರೆಸ್ ನ ಪ್ರಸಾದ್ ಅಬ್ಬಯ್ಯ- 15294
ಬಿಜೆಪಿ ಯ ಡಾ. ಕ್ರಾಂತಿ ಕಿರಣ್-9402
ಧಾರವಾಡ: ಗ್ರಾಮೀಣ ವಿಧಾನಸಭಾ ಕ್ಷೇತ್ರದ ಆರನೇ ಸುತ್ತು..
ವಿನಯ ಕುಲಕರ್ಣಿ 33,755
ಅಮೃತ ದೇಸಾಯಿ 25,151
ಲೀಡ್ - 8604
6ನೇ ಸುತ್ತು: ವಿರಾಜಪೇಟೆ
ಬಿಜೆಪಿ ಕೆ.ಜಿ.ಬೋಪಯ್ಯ 26,435
ಕಾಂಗ್ರೆಸ್ ಎ.ಎಸ್.ಪೊನ್ನಣ್ಣ 22,544
ಬಿಜೆಪಿ 3,891 ಮತಗಳ ಮುನ್ನಡೆ
5ನೇ ಸುತ್ತು: ಮಡಿಕೇರಿ
ಕಾಂಗ್ರೆಸ್ ಮಂತರ್ ಗೌಡ ,19,834
ಬಿಜೆಪಿ ಎಂ.ಪಿ.ಅಪ್ಪಚ್ಷುರಂಜನ್ 23,858
ಕಾಂಗ್ರೆಸ್ 4,024ಮತಗಳ ಮುನ್ನಡೆ
ಕ್ಷೇತ್ರ: ಅರಕಲಗೂಡು(3 ನೇ ಸುತ್ತು)
ಎ.ಮಂಜು (ಜೆಡಿಎಸ್)– 12177
ಯೋಗಾ ರಮೇಶ್ (ಬಿಜೆಪಿ)–2489
ಶ್ರೀಧರ್ ಗೌಡ (ಕಾಂಗ್ರೆಸ್)– 3730
ಎಂ.ಟಿ. ಕೃಷ್ಣೇಗೌಡ (ಪಕ್ಷೇತರ)– 8533
ನಾಲ್ಕನೇ ಸುತ್ತಿನಲ್ಲೂ ಪ್ರಿಯಾಂಕ್ ಮುನ್ನಡೆ
ಕಲಬುರಗಿ: ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ನಾಲ್ಕನೇ ಸುತ್ತಿನಲ್ಲೂ 5330 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಬೆಂಗಳೂರು: ಚಿಕ್ಕಪೇಟೆ ಕ್ಷೇತ್ರ
ಉದಯ್ ಗರುಡಾಚಾರ್ (ಬಿಜೆಪಿ) 9573
ಆರ್.ವಿ.ದೇವರಾಜ್ (ಕಾಂಗ್ರೆಸ್) 74117
ಮುನ್ನಡೆ: ಬಿಜೆಪಿಗೆ 2156 ಮತಗಳು
ಚಾಮರಾಜನಗರ ಕ್ಷೇತ್ರ: 8ನೇ ಸುತ್ತು
ಕಾಂಗ್ರೆಸ್ (ಸಿ.ಪುಟ್ಟರಂಗಶೆಟ್ಟಿ)- 43,636
ಬಿಜೆಪಿ (ವಿ.ಸೋಮಣ್ಣ)-33,980
ಕಾಂಗ್ರೆಸ್ ಮುನ್ನಡೆ: 9,656
ಮುಧೋಳ ನಾಲ್ಕನೇ ಸುತ್ತು
ಆರ್.ಬಿ.ತಿಮ್ಮಾಪುರ:22807
ಗೋವಿಂದ ಕಾರಜೋಳ:17680
ಕಾಂಗ್ರೆಸ್ ಮುನ್ನಡೆ:5127
ಆರನೇ ಸುತ್ತಿನಲ್ಲಿ ನಿಖಿಲ್‌ಗೆ ಮುನ್ನಡೆ
ರಾಮನಗರ: ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಆರನೇ ಸುತ್ತಿನ ಅಂತ್ಯಕ್ಕೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ 2477 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ನಿಖಿಲ್ ಮತಗಳನ್ನು 24,455 ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ 21,978 ಮತಗಳನ್ನು ಪಡೆದು ಹಿನ್ನಡೆ ಅನುಭವಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಗೌತಮ್ ಗೌಡ 4,176 ಮತಗಳನ್ನು ಪಡೆದಿದ್ದಾರೆ.
ಶಿಗ್ಗಾವಿ ಕ್ಷೇತ್ರ– 4ನೇ ಸುತ್ತು
ಬಸವರಾಜ ಬೊಮ್ಮಾಯಿ (ಬಿಜೆಪಿ)– 24,789
ಯಾಸಿರ್ ಖಾನ್ ಪಠಾಣ್ (ಕಾಂಗ್ರೆಸ್)– 12,516
ಶಶಿಧರ ಯಲಿಗಾರ (ಜೆಡಿಎಸ್)– 3053
ಬೊಮ್ಮಾಯಿಗೆ 12273 ಮತಗಳ ಮುನ್ನಡೆ
ಮೈಸೂರು: ಒಟ್ಟು 11 ಕ್ಷೇತ್ರ
ಬಿಜೆಪಿ 2 ಕ್ಷೇತ್ರದಲ್ಲಿ ಮುನ್ನಡೆ (ಕೃಷ್ಣರಾಜ, ಚಾಮರಾಜ)
ಜೆಡಿಎಸ್ 3 ಕ್ಷೇತ್ರದಲ್ಲಿ ಮುನ್ನಡೆ(ಚಾಮುಂಡೇಶ್ವರಿ, ಹುಣಸೂರು, ತಿ.ನರಸೀಪುರ)
ಕಾಂಗ್ರೆಸ್ 6 ಕ್ಷೇತ್ರದಲ್ಲಿ ಮುನ್ನಡೆ
(ನಂಜನಗೂಡು, ನರಸಿಂಹರಾಜ, ಪಿರಿಯಾಪಟ್ಟಣ, ಕೆಆರ್ ನಗರ, ವರುಣ, ಎಚ್.ಡಿ.ಕೋಟೆ)
ಬಾಲಕೃಷ್ಣಗೆ 3285 ಮತಗಳ ಮುನ್ನಡೆ
ರಾಮನಗರ: ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಮೂರನೇ ಸುತ್ತಿನ ಅಂತ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ. ಬಾಲಕೃಷ್ಣ 3285 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಬಾಲಕೃಷ್ಣ 13,109 ಮತ ಪಡೆದರೆ, ಜೆಡಿಎಸ್ ಅಭ್ಯರ್ಥಿ ಎ. ಮಂಜುನಾಥ್ 9824 ಮತ ಹಾಗೂ ಬಿಜೆಪಿ ಅಭ್ಯರ್ಥಿ ಪ್ರಸಾದ್ ಗೌಡ 4671 ಮತ ಪಡೆದಿದ್ದಾರೆ.
ಬೆಳಗಾವಿ: ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ಎಂಟನೇ ಸುತ್ತಿನ ಮತ ಎಣಿಕೆ ಪ್ರಕ್ರಿಯೆ ಮುಗಿದಿದೆ. ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ ಅವರು 36,404 ಮತ ಪಡೆದಿದ್ದಾರೆ. ಎರಡನೇ ಸ್ಥಾನದಲ್ಲಿ ಜೆಡಿಎಸ್‌ನ ಮಾರುತಿ ಅಷ್ಟಗಿ ಇದ್ದು 10,515 ಮತ ಪಡೆದಿದ್ದಾರೆ. ಮೂರನೇ ಸ್ಥಾನದಲ್ಲಿ ಬಿಜೆಪಿಯ ಬಸವರಾಜ ಹುಂದ್ರಿ 6894 ಮತ ಪಡೆದಿದ್ದಾರೆ.
ಸತತ ಎಂಟು ಸ್ಥಾನಗಳಲ್ಲೂ ಮುನ್ನಡೆ ಕಾಯ್ದುಕೊಂಡು ಬಂದ ಸತೀಶ ಜಾರಕಿಹೊಳಿ ಅವರಿಗೆ ಈಗ 25,889 ಮತಗಳ ಮುನ್ನಡೆ ಸಿಕ್ಕಿದೆ.
ಕುಡಚಿ ಮತಕ್ಷೇತ್ರದ ಮೂರು ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಕಾಂಗ್ರೆಸ್‌ನ ಮಹೇಂದ್ರ ತಮ್ಮಣ್ಣವರ 10291 ಮತಗಳ ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅವರು 16,262 ಮತ ಪಡೆದಿದ್ದಾರೆ. ಬಿಜೆಪಿಯ ಪಿ.ರಾಜೀವ್ 5,971 ಮತ ಪಡೆದು ಎರಡನೇ ಸ್ತಾನದಲ್ಲಿದ್ದಾರೆ.
ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಬಿಜೆಪಿಯ ಡಾ.ರವಿ ಪಾಟೀಲ 9511 ಮತ ಹಾಗೂ ಕಾಂಗ್ರೆಸ್‌ನ ಆಸೀಫ್ ಸೇಠ್ 9168 ಮತ ಪಡೆದಿದ್ದಾರೆ. ಎಂಇಎಸ್‌ನ ಅಮರ ಯಳ್ಳೂರಕರ 1004 ಮತ ಪಡೆದು ಮೂರನೇ ಸ್ಥಾನಕ್ಕೆ ಬಂದಿದ್ದಾರೆ.
ಕೊಪ್ಪಳ: ಯಲಬುರ್ಗಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ರಾಯರಡ್ಡಿ ನಾಲ್ಕನೆ ಸುತ್ತಿನ ಅಂತ್ಯಕ್ಕೆ ಮುನ್ನಡೆಯಲ್ಲಿದ್ದಾರೆ.
ಕಾಂಗ್ರೆಸ್ 19,312 ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ 16364, ಜೆಡಿಎಸ್ ಅಭ್ಯರ್ಥಿ ಮಲ್ಲನಗೌಡ ಕೋನನಗೌಡ್ರ 177
ಮತಗಳನ್ನು ಪಡೆದಿದ್ದಾರೆ.
ಗಂಗಾವತಿ ನಾಲ್ಕನೇ ಸುತ್ತಿನಲ್ಲಿ ರೆಡ್ಡಿ ಮುನ್ನಡೆ
ಕೊಪ್ಪಳ: ಗಂಗಾವತಿ ಕ್ಷೇತ್ರದಲ್ಲಿ ನಾಲ್ಕನೆ ಸುತ್ತಿನ ಅಂತ್ಯಕ್ಕೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಜನಾರ್ದನ ರೆಡ್ಡಿ ಮುನ್ನಡೆಯಲ್ಲಿದ್ದಾರೆ.
ರೆಡ್ಡಿ 15912, ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ 13038, ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ 8726 ಮತಗಳನ್ನು ಪಡೆದಿದ್ದಾರೆ.
*ವಿಜಯಪುರ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ 9132 ಮತಗಳ ಮುನ್ನಡೆ ಸಾಧಿಸಿದ್ದಾರೆ.
*ಬಬಲೇಶ್ವರದಲ್ಲಿ ಕಾಂಗ್ರೆಸ್ ನ ಎಂ.ಬಿ.ಪಾಟೀಲ ಅವರು 3873 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
*ಮುದ್ದೇಬಿಹಾಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್.ನಾಡಗೌಡ ಅವರು 1396 ಮುನ್ನಡೆ ಸಾಧಿಸಿದ್ದಾರೆ.
*ನಾಗಠಾಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಠಲ ಕಟಕಧೋಂಡ 3855 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
*ಸಿಂದಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ 422 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
*ಇಂಡಿ ಕಾಂಗ್ರೆಸ್ ನ ಯಶವಂತ ರಾಯಗೌಡ ಪಾಟೀಲ ಅವರು 5768 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
*ದೇವರಹಿಪ್ಪರಗಿ ಜೆಡಿಎಸ್ ಅಭ್ಯರ್ಥಿ ರಾಜುಗೌಡ ಪಾಟೀಲ 3169 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
* ಬಸವನಬಾಗೇವಾಡಿ ಜೆಡಿಎಸ್ ನ ಸೋಮನಗೌಡ ಪಾಟೀಲ ಮನಗೂಳಿ 1136 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಬಳ್ಳಾರಿ ಗ್ರಾಮೀಣ: ಶ್ರೀರಾಮುಲು
ಕಾಂಗ್ರೆಸ್ ನಾಗೇಂದ್ರ - 20919
ಬಿಜೆಪಿ-ಶ್ರೀರಾಮುಲು-15498
ಕಾಂಗ್ರೆಸ್- 5421 ಮುನ್ನಡೆ
ಪ್ರೀತಂ ಗೌಡ (ಬಿಜೆಪಿ)– 7321
ಸ್ವರೂಪ್ ಪ್ರಕಾಶ್ (ಜೆಡಿಎಸ್)– 7457
ಬನವಾಸೆ ರಂಗಸ್ವಾಮಿ (ಕಾಂಗ್ರೆಸ್)- 634
ಜೆಡಿಎಸ್ ಮುನ್ನಡೆ- 136
ಬೆಳಗ್ಗೆ 10.30ರ ಹೊತ್ತಿಗೆ ಬಿಜೆಪಿ 76, ಕಾಂಗ್ರೆಸ್ 113, ಜೆಡಿಎಸ್ 30, ಇತರರು 5 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರು.
ಚನ್ನಪಟ್ಟಣ: ಕುಮಾರಸ್ವಾಮಿಗೆ 1807 ಮತಗಳ ಮುನ್ನಡೆ
ರಾಮನಗರ: ಚನ್ನಪಟ್ಟಣದಲ್ಲಿ ನಾಲ್ಕನೇ ಸುತ್ತಿನ ಅಂತ್ಯಕ್ಕೆ ಜೆಡಿಎಸ್ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ 1807 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ಕುಮಾರಸ್ವಾಮಿ 19,398 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ 17,591 ಮತಗಳನ್ನು ಪಡೆದು ಹಿನ್ನಡೆ ಅನುಭವಿಸಿದ್ದಾರೆ. ಕಾಂಗ್ರೆಸ್‌ನ ಎಸ್. ಗಂಗಾಧರ್ 2567 ಮತ ಪಡೆದಿದ್ದಾರೆ.
3ನೇ ಸುತ್ತು: ಮಂಡ್ಯ ಕ್ಷೇತ್ರ
ಬಿ.ಆರ್.ರಾಮಚಂದ್ರ (ಜೆಡಿಎಸ್): 10103
ಗಣಿಗ ರವಿಕುಮಾರ್ (ಕಾಂಗ್ರೆಸ್):10578
ಅಶೋಕ್ ಜಯರಾಂ (ಬಿಜೆಪಿ): 2273
ಕಾಂಗ್ರೆಸ್ ನ ರವಿಕುಮಾರ್ 475. ಮತಗಳ ಮುನ್ನಡೆ
ಅಫಜಲಪೂರ ಕ್ಷೇತ್ರ 4ನೆ ಸುತ್ತಿನ ಎಣಿಕೆ ಪೂರ್ಣ
ಪಕ್ಷೇತರ ಅಭ್ಯರ್ಥಿ ನಿತಿನ್ ಗುತ್ತೇದಾರ ಅವರು ಕಾಂಗ್ರೆಸ್ ಅಭ್ಯರ್ಥಿ ಎಂ.ವೈ.ಪಾಟೀಲ ಅವರಿಗಿಂತ 3007 ಮತಗಳ ಅಂತರದಿಂದ ಮುನ್ನಡೆ.
ಚಿತ್ತಾಪುರ ಕ್ಷೇತ್ರದ 7ನೇ ಸುತ್ತಿನ ಎಣಿಕೆ ಪೂರ್ಣ
ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಅವರಿಗಿಂತ 8633 ಮತಗಳ ಅಂತರದಿಂದ ಮುನ್ನಡೆ.
ಯಲಬುರ್ಗಾ: ಆರನೇ ಸುತ್ತಿನಲ್ಲಿಯೂ ಕಾಂಗ್ರೆಸ್ ನ ರಾಯರಡ್ಡಿ ಮುನ್ನಡೆ
ಕೊಪ್ಪಳ: ಜಿಲ್ಲೆಯ ಯಲಬುರ್ಗಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ರಾಯರಡ್ಡಿ ಆರನೆ ಸುತ್ತಿನ ಅಂತ್ಯಕ್ಕೆ ಮುನ್ನಡೆಯಲ್ಲಿದ್ದಾರೆ.
ಕಾಂಗ್ರೆಸ್ 30160 ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ 24940 ಜೆಡಿಎಸ್ ಅಭ್ಯರ್ಥಿ ಮಲ್ಲನಗೌಡ ಕೋನನಗೌಡ್ರ 267 ಮತಗಳನ್ನು ಪಡೆದಿದ್ದಾರೆ.
ಪಕ್ಷೇತರ ಅಭ್ಯರ್ಥಿ ನಿತಿನ್ ಗುತ್ತೇದಾರ ಮುನ್ನಡೆ
ಕಲಬುರಗಿ: ಅಫಜಲಪುರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಿತಿನ್ ಗುತ್ತೇದಾರ ಅವರು ಕಾಂಗ್ರೆಸ್ ನ ಎಂ.ವೈ. ಪಾಟೀಲ ಅವರಿಗಿಂತ 3007 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಜೇವರ್ಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಅಜಯ್ ಸಿಂಗ್ ಎರಡನೇ ಸುತ್ತಿನಲ್ಲಿ ಬಿಜೆಪಿಯ ಶಿವರಾಜ ಪಾಟೀಲ ರದ್ದೇವಾಡಗಿ ಅವರಿಗಿಂತ 2785 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಕಲಬುರಗಿ:ತಲಾ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್ ಮುನ್ನಡೆ, ಒಂದರಲ್ಲಿ ಪಕ್ಷೇತರ ಅಭ್ಯರ್ಥಿ ಮುಂದೆ
ಕಲಬುರಗಿ: ಜಿಲ್ಲೆಯ ಒಂಬತ್ತು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ, ಇನ್ನು ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.
ಬಿಜೆಪಿ ಉತ್ತರ ಕ್ಷೇತ್ರದಲ್ಲಿ ಚಂದು ಪಾಟೀಲ, ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಬಸವರಾಜ ಮತ್ತಿಮಡು, ಆಳಂದದಲ್ಲಿ ಸುಭಾಷ್ ಗುತ್ತೇದಾರ, ಚಿಂಚೋಳಿಯಲ್ಲಿ ಡಾ. ಅವಿನಾಶ್ ಜಾಧವ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಕಾಂಗ್ರೆಸ್ ಕಲಬುರಗಿ ದಕ್ಷಿಣದಲ್ಲಿ ಅಲ್ಲಮಪ್ರಭು ಪಾಟೀಲ, ಸೇಡಂನಲ್ಲಿ ಡಾ. ಶರಣಪ್ರಕಾಶ ಪಾಟೀಲ, ಚಿತ್ತಾಪುರದಲ್ಲಿ ಪ್ರಿಯಾಂಕ್ ಖರ್ಗೆ, ಜೇವರ್ಗಿಯಲ್ಲಿ ಡಾ. ಅಜಯ್ ಸಿಂಗ್ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಅಫಜಲಪುರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ನಿತಿನ್ ಗುತ್ತೇದಾರ ಮುನ್ನಡೆ ಸಾಧಿಸಿದ್ದಾರೆ.
ವರುಣ 2ನೇ ಸುತ್ತು: ಕಾಂಗ್ರೆಸ್‌ನ ಸಿದ್ದರಾಮಯ್ಯ ಮುನ್ನಡೆ.
ಸಿದ್ದರಾಮಯ್ಯ 12759
ಸೋಮಣ್ಣ 7471
5288 ಮತಗಳಿಂದ ಮುನ್ನಡೆ ಕಾಯ್ದುಕೊಂಡಿರುವ ಸಿದ್ದರಾಮಯ್ಯ.
ಬಸವರಾಜ ಬೊಮ್ಮಾಯಿ (ಬಿಜೆಪಿ)– 44,182
ಯಾಸಿರ್ ಖಾನ್ ಪಠಾಣ್ (ಕಾಂಗ್ರೆಸ್)– 23,011
ಶಶಿಧರ ಯಲಿಗಾರ (ಜೆಡಿಎಸ್)– 5537
ಬೊಮ್ಮಾಯಿಗೆ 21,171 ಮತಗಳ ಮುನ್ನಡೆ
ಹು-ಧಾ ಸೆಂಟ್ರಲ್ 5 ನೆಯ ಸುತ್ತು ಮುಕ್ತಾಯ
ಬಿಜೆಪಿ ಮಹೇಶ್ ತೆಂಗಿನಕಾಯಿ 27459
ಕಾಂಗ್ರೆಸ್ ಜಗದೀಶ್ ಶೆಟ್ಟರ್ 16804
ಬಿಜೆಪಿ 10655 ಲೀಡ್
ಬಾರಿ ಲೀಡ್ ಕಾಯ್ದುಕೊಂಡ ಮಹೇಶ್ ತೆಂಗಿನಕಾಯಿ
ಚಿಂತಾಮಣಿ- ನಾಲ್ಕನೇ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ
ಡಾ.ಎಂ.ಸಿ.ಸುಧಾಕರ್- (ಕಾಂಗ್ರೆಸ್)- 18,961
ಎಂ.ಕೃಷ್ಣಾರೆಡ್ಡಿ ಜೆಡಿಎಸ್ 15, 348
ಎಂ.ಸಿ.ವೇಣುಗೋಪಾಲ್ ಬಿಜೆಪಿ 3182
ಮುನ್ನಡೆ ಕಾಂಗ್ರೆಸ್- 3,613
ಬೆಂಗಳೂರಿನ ಗೋವಿಂದರಾಜ ನಗರ 4 ನೇ ಸುತ್ತು
ಕಾಂಗ್ರೆಸ್: ಪ್ರಿಯಕೃಷ್ಣ 18,054
ಬಿಜೆಪಿ: ಉಮೇಶ್ ಶೆಟ್ಟಿ 12,409
ಮುನ್ನಡೆ: ಕಾಂಗ್ರೆಸ್ 5,645
ಕುಮಟಾ ಕ್ಷೇತ್ರ:
5ನೆ ಸುತ್ತು:ಜೆಡಿಎಸ್ 45 ಮುನ್ನಡೆ
ದಿನಕರ ಶೆಟ್ಟಿ:ಬಿಜೆಪಿ:15,722
ನಿವೇದಿತ್ ಆಳ್ವ:ಕಾಂಗ್ರೆಸ್:6,183
ಸೂರಜ್ ನಾಯ್ಕ ಸೋನಿ:ಜೆಡಿಎಸ್:15,767
ಹಳಿಯಾಳ ಕ್ಷೇತ್ರ: 8ನೇ ಸುತ್ತು:ಬಿಜೆಪಿ 1257 ಮತ ಮುನ್ನಡೆ
ಆರ್.ವಿ.ದೇಶಪಾಂಡೆ:ಕಾಂಗ್ರೆಸ್: 27,636
ಸುನೀಲ ಹೆಗಡೆ:ಬಿಜೆಪಿ: 28,893
ಎಸ್.ಎಲ್.ಘೋಟ್ನೇಕರ್:ಜೆಡಿಎಸ್:13,211
ಡಿಕೆಶಿಗೆ 20 ಸಾವಿರ ಮತಗಳ ಭಾರಿ ಮುನ್ನಡೆ
ರಾಮನಗರ: ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಐದು ಸುತ್ತುಗಳ ಮತ ಎಣಿಕೆ ಮುಗಿದಿದ್ದು, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಶಿವಕುಮಾರ್ 20,508 ಮತಗಳ ಭಾರಿ ಮುನ್ನಡೆ ಗಳಿಸಿದ್ದಾರೆ.
ಶಿವಕುಮಾರ್ ಮತಗಳನ್ನು 25,406 ಪಡೆದರೆ, ಜೆಡಿಎಸ್ ಅಭ್ಯರ್ಥಿ ನಾಗರಾಜು 4898 ಮತ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿ ಆರ್. ಅಶೋಕ್ 3813 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
5ನೇ ಸುತ್ತು: ನಾಗಮಂಗಲ ಕ್ಷೇತ್ರ
ಎನ್.ಚಲುವರಾಯಸ್ವಾಮಿ (ಕಾಂಗ್ರೆಸ್): 27658
ಸುರೇಶ್ ಗೌಡ(ಜೆಡಿಎಸ್): 28568
ಸುಧಾ ಶಿವರಾಮೇಗೌಡ (ಬಿಜೆಪಿ): 3162
ಜೆಡಿಎಸ್ ನ ಸುರೇಶ್ ಗೌಡ 920 ಮತಗಳ ಮುನ್ನಡೆ
ಅರನೇ ಸುತ್ತಿನಲ್ಲಿಯೂ ಕೊಪ್ಪಳದಲ್ಲಿ ಕಾಂಗ್ರೆಸ್ ಮುನ್ನಡೆ
ಕೊಪ್ಪಳ: ಕೊಪ್ಪಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳ ಆರನೇ ಸುತ್ತಿನ ಅಂತ್ಯಕ್ಕೆ ಮುನ್ನಡೆ ಸಾಧಿಸಿದ್ದಾರೆ.
ಹಿಟ್ನಾಳ 22,652 ಬಿಜೆಪಿ ಅಭ್ಯರ್ಥಿ ಮಂಜುಳಾ ಕರಡಿ 17952 ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿ ಸಿ.ವಿ.ಚಂದ್ರಶೇಖರ್ 15858 ಮತಗಳನ್ನು ಪಡೆದಿದ್ದಾರೆ.
ಭಟ್ಕಳ ಕ್ಷೇತ್ರ: 8ನೇ ಸುತ್ತು:ಕಾಂಗ್ರೆಸ್ 4923 ಮುನ್ನಡೆ
ಸುನೀಲ ನಾಯ್ಕ: ಬಿಜೆಪಿ: 28,051
ಮಂಕಾಳ ವೈದ್ಯ: ಕಾಂಗ್ರೆಸ್: 32,974
ಬೆಳಗಾವಿ ಗ್ರಾಮೀಣ, ಉತ್ತರ, ಕುಡಚಿ, ನಿಪ್ಪಾಣಿ, ಬೈಲಹೊಂಗಲ: ಏಳು ಸುತ್ತು ಮುಕ್ತಾಯ: ತಲೆ ಕೆಳಗಾದ ನಿರೀಕ್ಷೆಗಳು: ಕಾರ್ಯಕರ್ತರಲ್ಲಿ ಢವಢವ
ಬೆಳಗಾವಿ: ಈವರೆಗೆ ನಡೆದ ಮತ ಎಣಿಕೆಯಲ್ಲಿ ಬೆಳಗಾವಿ ಗ್ರಾಮೀಣ, ಕುಡಚಿ, ಬೈಲಹೊಂಗಲ ಹಾಗೂ ನಿಪ್ಪಾಣಿ ಮತಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಿರೀಕ್ಷೆಗಳು ತಲೆ ಕೆಳಗಾಗುತ್ತಿವೆ. ಪ್ರತಿ ಸುತ್ತಿನ ಮತ ಎಣಿಕೆ ಬಂದಾಗಲೂ ಕಾರ್ಯಕರ್ತರ ಎದೆಯಲ್ಲಿ ಢವಢವ ಶುರುವಾಗಿದೆ.
ಕುಡಚಿ ಕ್ಷೇತ್ರದಲ್ಲಿ ಹಾಲಿ ಶಾಸಕ, ಬಿಜೆಪಿಯ ಪಿ.ರಾಜೀವ್ ತೀವ್ರ ಹಿನ್ನಡೆ ಅನುಭವಿಸಿದ್ದಾರೆ. ಈರೆಗೆ ಮುಗಿದ ನಾಲ್ಕೂ ಸುತ್ತುಗಳಲ್ಲಿ ಕಾಂಗ್ರೆಸ್‌ನ ಮಹೇಂದ್ರ ತಮ್ಮಣ್ಣವರ ಮುಂದಿದ್ದಾರೆ. ಕುಡಚಿ ಮತಕ್ಷೇತ್ರದಲ್ಲಿ 4 ನೇ ಸುತ್ತಿನಲ್ಲೂ ಕಾಂಗ್ರೆಸ್ ಅಭ್ಯರ್ಥಿ ಮಹೇಂದ್ರ ತಮ್ಮಣ್ಣವರ 20919 ಮತ ಪಡೆದು, 12151 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಪಿ.ರಾಜೀವ್ 12151 ಮತ ಮಾತ್ರ ಪಡೆದಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ 6ನೇ ಸುತ್ತು ಮುಕ್ತಾಯವಾಗಿದ್ದು, ಕಾಂಗ್ರೆಸ್ ಲಕ್ಷ್ಮೀ ಹೆಬ್ಬಾಳಕರ 20976 ಮತ, ಎಂಇಎಸ್ ಆರ್.ಎಂ. ಚೌಗಲೆ 13927 ಹಾಗೂ ಬಿಜೆಪಿ ನಾಗೇಶ ಮನ್ನೋಳಕರ 7723 ಮತ ಪಡೆದಿದ್ದಾರೆ. ಲಕ್ಷ್ಮೀಗೆ 7049 ಮತಗಳ ಮುನ್ನಡೆ ಸಿಕ್ಕಿದೆ. ಬಿಜೆಪಿ ಅಭ್ಯರ್ತಿ ಸತತ ಐದು ಸುತ್ತಿನಲ್ಲೂ ಮೂರನೇ ಸ್ತಾನಕ್ಕೆ ಕುಸಿದ್ದು, ಕಾರ್ಯಕರ್ತರಲ್ಲಿ ಢವಢವ ಶುರುವಾಗಿದೆ.
ಬೆಳಗಾವಿ ಉತ್ತರ ನಾಲ್ಕನೇ ಸುತ್ತು ಮುಗಿದಿದ್ದು ಬಿಜೆಪಿಯ ಡಾ.ರವಿ ಪಾಟೀಲ 12630, ಕಾಂಗ್ರೆಸ್ ಆಸೀಫ್ ಸೇಠ್ 11966 ಹಾಗೂ ಎಂಇಎಸ್ ಅಮರ ಯಳ್ಳೂರಕರ್ 1296 ಮತಗಳನ್ನು ಮಾತ್ರ ಪಡೆದಿದ್ದಾರೆ. ಬಿಜೆಪಿ ಕೇವಲ 321 ಮತಗಳ ಮುನ್ನಡೆ ಸಾಧಿಸಿದೆ. ಒಂದೊಂದು ಸುತ್ತಿನಲ್ಲೂ ಒಂದೊಂದು ಪಕ್ಷ ಮುನ್ನಡೆ ಸಾಧಿಸುತ್ತಿದ್ದು, ಕಾರ್ಯಕರ್ತರನ್ನು ತುದಿಗಾಲ ಮೇಲೆ ನಿಲ್ಲಿಸಿದೆ.
ಬೈಲಹೊಂಗಲ: ಆರನೇ ಸುತ್ತಿನಲ್ಲೂ 123 ಮತಗಳಿಂದ ಕಾಂಗ್ರೆಸ್ ಮುನ್ನಡೆ
ತೀವ್ರ ಜಿದ್ದಾಜಿದ್ದಿನಿಂದ ಕೂಡಿದ ಬೈಲಹೊಂಗಲ ಕ್ಷೇತ್ರದಲ್ಲಿ ಬಿಜೆಪಿಯ ಜಗದೀಶ ಮೆಟಗುಡ್ಡ 16,103 ಕಾಂಗ್ರೆಸ್‌ನ ಮಹಾಂತೇಶ ಕೌಜಲಗಿ 16226 ಮತ ಪಡೆದಿದ್ದಾರೆ. ಪಕ್ಷೇತರರಾದ ಡಾ.ವಿಶ್ವನಾಥ ಪಾಟೀಲ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಕೇವಲ 131 ಮತಗಳ ವ್ಯತ್ಯಾಸವಿದೆ. ಈ ಕ್ಷೇತ್ರದಲ್ಲೂ ಆಯಾ ಪಕ್ಷಗಳ ಮುಖಂಡರು, ಬೆಂಬಲಿಗರು ತುದಿಗಾಲ ಮೇಲೆ ನಿಲ್ಲುಂತಾಗಿದೆ.
ಲಿಂಗಸುಗೂರಿನಲ್ಲಿ ಮಾನಪ್ಪ ವಜ್ಜಲ್ ಮುನ್ನಡೆ
ರಾಯಚೂರು: ಲಿಂಗಸುಗೂರು ಮತಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಪೈಪೋಟಿ ಏರ್ಪಟ್ಟಿದ್ದು, ನಾಲ್ಕನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ 12,797 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಿ.ಎಸ್.ಹುಲಗೇರಿ 10,530 ಮತಗಳನ್ನು ಪಡೆದಿದ್ದಾರೆ.
ಚಿತ್ರದುರ್ಗ ಕ್ಷೇತ್ರ: 5ನೇ ಸುತ್ತು ಎಣಿಕೆ ಮುಕ್ತಾಯ- ಕಾಂಗ್ರೆಸ್ 15,199 ಮತಗಳ ಮುನ್ನಡೆ
ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ವೀರೇಂದ್ರ 36,742 ಮತ ,
ಬಿಜೆಪಿ ಅಭ್ಯರ್ಥಿ ಜಿ.ಎಚ್.ತಿಪ್ಪಾರೆಡ್ಡಿ- 21,543 ಮತ
ಪಕ್ಷೇತರ ಅಭ್ಯರ್ಥಿ- ಜಿ.ರಘು ಆಚಾರ್ - 1,265
ಸತತ ಏಳನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಆರ್. ಗವಿಯಪ್ಪ
ಬೆಂಗಳೂರು ಗ್ರಾಮಾಂತರ
ಹೊಸಕೋಟೆ: 6ನೇ ಸುತ್ತು ಮತ ಎಣಿಕೆ ಮುಕ್ತಾಯ. ಕಾಂಗ್ರೆಸ್ ನ ಶರತ್ ಬಚ್ಚೇಗೌಡ 4937 ಮತಗಳ ಮುನ್ನಡೆ.
ನೆಲಮಂಗಲ: ಕಾಂಗ್ರೆಸ್ ನ ಶ್ರೀನಿವಾಸ ಯ್ಯ 4014 ಮತಗಳ ಮುನ್ನಡೆ
ಕೂಡ್ಲಿಗಿ ಕ್ಷೇತ್ರದ 10ನೇ ಸುತ್ತು, ಕಾಂಗ್ರೆಸ್ ಅಭ್ಯರ್ಥಿ 33770 ಮತಗಳ ಮುನ್ನಡೆ
ಬಳ್ಳಾರಿ ಗ್ರಾಮೀಣ
ಕಾಂಗ್ರೆಸ್ ನಾಗೇಂದ್ರ - 47930
ಬಿಜೆಪಿ-ಶ್ರೀರಾಮುಲು-27767
ಕಾಂಗ್ರೆಸ್- 20,163 ಮುನ್ನಡೆ
ಕಾಂಗ್ರೆಸ್ ಭರತ್ ರೆಡ್ಡಿ- 14138
ಕೆಆರ್‌ಪಿಪಿ-ಲಕ್ಷ್ಮಿ ಅರುಣ-10483
ಬಿಜೆಪಿ- ಸೋಮಶೇಖರ ರೆಡ್ಡಿ -6054
ಕಾಂಗ್ರೆಸ್-3655 ಮುನ್ನಡೆ
12ನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ಸತೀಶ ಜಾರಕಿಹೊಳಿ,
ಹುಂದ್ರಿ ಬಿಜೆಪಿ, 23281
ಅಷ್ಟಗಿ ಜೆಡಿಎಸ್ 14586
ಸತೀಶ್ ಕಾಂಗ್ರೆಸ್ 55544
ಮತಗಳ ಲೀಡ್ 32263
ಹುಕ್ಕೇರಿ ಮತಕ್ಷೇತ್ರದ 6 ನೇ ಸುತ್ತಿನ ಮತ ಎಣಿಕೆ ಮುಕ್ತಾಯ
6 ನೇ ಸುತ್ತಿನಲ್ಲಿ ಹುಕ್ಕೇರಿ ಕ್ಷೇತ್ರದಲ್ಲಿ ಬಿಜೆಪಿಯ ನಿಖೀಲ ಕತ್ತಿ 8425 ಮುನ್ನೆಡೆ
ಬಿಜೆಪಿ : ನಿಖೀಲ ಕತ್ತಿ -27581
ಕಾಂಗ್ರೆಸ್ : ಎ ಬಿ ಪಾಟೀಲ- 19156
ಗೋಕಾಕ್ ಒಂಬತ್ತನೇ ರೌಂಡ್ ಮುಕ್ತಾಯ
ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ 5516 ಮತಗಳಿಂದ ಮುನ್ನಡೆ.
ಬಿಜೆಪಿ 34528
ಕಾಂಗ್ರೆಸ್ 29012
ರಾಯಬಾಗ
ರಾಯಬಾಗ ಕ್ಷೇತ್ರದ ಆರನೇಯ ಸುತ್ತಿನ ಮತ ಎಣಿಕೆಯಲ್ಲೂ ಮುನ್ನಡೆ ಕಾಯ್ದುಕೊಂಡ ಬಿಜೆಪಿಯ ದುರ್ಯೋಧನ ಐಹೊಳೆ
6921 ಮತಗಳ ಮುನ್ನಡೆ ಕಾಯ್ದುಕೊಂಡ ದುರ್ಯೋಧನ ಐಹೊಳೆ
ಬಿಜೆಪಿ ದುರ್ಯೋಧನ ಐಹೊಳೆ - 22159
ಕಾಂಗ್ರೆಸ್ ಮಾಹವೀರ ಮೋಹಿತೆ - 7852
ಪಕ್ಷೇತರ ಶಂಭು ಕಲ್ಲೋಳಿಕರ - 15238
ತೀರ್ಥ ಹಳ್ಳಿ 8 ನೇ ಸುತ್ತು ಮುಕ್ತಾಯ
ಆರಗ ಜ್ಞಾನೇಂದ್ರ - ಬಿಜೆಪಿ-36048
ಕಿಮ್ಮನೆ ರತ್ನಾಕರ - ಕಾಂಗ್ರೆಸ್ -32814
ಸುಧಾಕರ್ ಗೆ ಹಿನ್ನಡೆ
ಚಿಕ್ಕಬಳ್ಳಾಪುರ; ಚಿಕ್ಕಬಳ್ಳಾಪುರ ಕ್ಷೇತ್ರದ ಆರನೇ ಸುತ್ತಿನ ಮತ ಎಣಿಕೆ ಪೂರ್ಣವಾಗಿದೆ. ಸಚಿವ ಡಾ.ಕೆ.ಸುಧಾಕರ್- ಹಿನ್ನಡೆ ಮುಂದುವರಿದಿದೆ.
ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ 26,544
ಬಿಜೆಪಿಯ ಸುಧಾಕರ್- 23,846
ಜೆಡಿಎಸ್ ನ ಕೆ.ಪಿ.ಬಚ್ಚೇಗೌಡ 8209 ಮತ ಪಡೆದಿದ್ದಾರೆ.
ಮಹದೇವಪುರ ಬಿಜೆಪಿ ಮುನ್ನಡೆ
ಬಿಜೆಪಿಯ ಮಂಜುಳಾ ಲಿಂಬಾವಳಿ: 53068
ಕಾಂಗ್ರೆಸ್ ನ ನಾಗೇಶ್: 48918
ಸರ್ವಜ್ಞ ನಗರದಲ್ಲಿ ಕಾಂಗ್ರೆಸ್ ಗೆ ಭಾರಿ ಮುನ್ನಡೆ
ಕಾಂಗ್ರೆಸ್ ನ ಕೆ.ಜೆ.ಜಾರ್ಜ್ 40777
ಬಿಜೆಪಿಯ ಪದ್ಮನಾಭ್ 12641
ಕೆಅರ್ ಪುರದಲ್ಲಿ ಬಿಜೆಪಿಗೆ ಮುನ್ನಡೆ
ಬಿಜೆಪಿಯ ಬೈರತಿ ಬಸವರಾಜ: 34753
ಕಾಂಗ್ರೆಸ್ ನ ಡಿ.ಕೆ.ಮೋಹನ್: 21309
ಬೆಂಗಳೂರು ಗ್ರಾಮಾಂತರ
ದೊಡ್ಡಬಳ್ಳಾಪುರ ಐದನೇ ಸುತ್ತಿನಲ್ಲಿ 5147 ಮತಗಳಿಂದ ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ಮುನ್ನಡೆ
ಮುಧೋಳ 6ನೇ ಸುತ್ತು
ಆರ್.ಬಿ ತಿಮ್ಮಾಪುರ ಕಾಂಗ್ರೆಸ್ 23,257
ಗೋವಿಂದ ಕಾರಜೋಳ ಬಿಜೆಪಿ 17, 244
ಧಾರವಾಡ ಕ್ಷೇತ್ರ 9ನೇ ಸುತ್ತು ಮುಕ್ತಾಯ
ಕಾಂಗ್ರೆಸ್ ವಿನಯ ಕುಲಕರ್ಣಿ 49,800
ಬಿಜೆಪಿ ಅಮೃತ ದೇಸಾಯಿ 37,737
ಕಾಂಗ್ರೆಸ್ ಲೀಡ್: 12,063
ಗುಂಡ್ಲುಪೇಟೆ -4ನೇ ಸುತ್ತು
ಕಾಂಗ್ರೆಸ್ (ಗಣೇಶ್ ಪ್ರಸಾದ್)- 24,684
ಬಿಜೆಪಿ (ಸಿ.ಎಸ್. ನಿರಂಜನ ಕುಮಾರ್)-15,324
ಕಾಂಗ್ರೆಸ್ ಮುನ್ನಡೆ: 15,324
ತಲಾ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್ ಮುನ್ನಡೆ, ಒಂದರಲ್ಲಿ ಪಕ್ಷೇತರ ಅಭ್ಯರ್ಥಿ ಮುಂದೆ
ಕಲಬುರಗಿ: ಜಿಲ್ಲೆಯ ಒಂಬತ್ತು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ, ಇನ್ನು ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.
ಬಿಜೆಪಿ ಉತ್ತರ ಕ್ಷೇತ್ರದಲ್ಲಿ ಚಂದು ಪಾಟೀಲ, ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಬಸವರಾಜ ಮತ್ತಿಮಡು, ಆಳಂದದಲ್ಲಿ ಸುಭಾಷ್ ಗುತ್ತೇದಾರ, ಚಿಂಚೋಳಿಯಲ್ಲಿ ಡಾ. ಅವಿನಾಶ್ ಜಾಧವ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಕಾಂಗ್ರೆಸ್ ಕಲಬುರಗಿ ದಕ್ಷಿಣದಲ್ಲಿ ಅಲ್ಲಮಪ್ರಭು ಪಾಟೀಲ, ಸೇಡಂನಲ್ಲಿ ಡಾ. ಶರಣಪ್ರಕಾಶ ಪಾಟೀಲ, ಚಿತ್ತಾಪುರದಲ್ಲಿ ಪ್ರಿಯಾಂಕ್ ಖರ್ಗೆ, ಜೇವರ್ಗಿಯಲ್ಲಿ ಡಾ. ಅಜಯ್ ಸಿಂಗ್ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಅಫಜಲಪುರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ನಿತಿನ್ ಗುತ್ತೇದಾರ ಮುನ್ನಡೆ ಸಾಧಿಸಿದ್ದಾರೆ.
ಹೈವೋಲ್ಟೇಜ್ ಕ್ಷೇತ್ರ ಅಥಣಿಯಲ್ಲಿ 7ನೇ ಸುತ್ತಿನ ಮತಎಣಿಕೆಯಲ್ಲೂ ಲಕ್ಷ್ಮಣ್ ಸವದಿ ಮುನ್ನಡೆ
25007 ಮತಗಳಿಂದ ಲಕ್ಷ್ಮಣ್ ಸವದಿ ಮುನ್ನಡೆ
ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ - 15218
ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಸವದಿ - 40225
ದೇವನಹಳ್ಳಿ :11 ಸುತ್ತು ಮುಕ್ತಾಯ
ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ 410 ಮತಗಳ ಮುನ್ನಡೆ.
ಹೊಸಕೋಟೆ: ಒಂಬತ್ತನೇ ಸುತ್ತು ಮುಕ್ತಾಯ
ಕಾಂಗ್ರೆಸ್ ಶರತ್ ಬಚ್ಚೇಗೌಡ 4736 ಮತಗಳ ಮುನ್ನಡೆ
ದೊಡ್ಡಬಳ್ಳಾಪುರ: 8ನೇ ಸುತ್ತಿನಲ್ಲಿ 12545 ಮತಗಳಿಂದ ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ಮುನ್ನಡೆ
ನೆಲಮಂಗಲ:ಮೊದಲನೇ ಸುತ್ತಿನಿಂದ ನಾಲ್ಕನೇ ಸುತ್ತಿನ ವರೆಗೂ
ಕಾಂಗ್ರೆಸ್ ಅಭ್ಯರ್ಥಿ ಎನ್.ಶ್ರೀನಿವಾಸಯ್ಯ- 17290
ಜೆಡಿಎಸ್ ಅಭ್ಯರ್ಥಿ ಡಾ.ಕೆ.ಶ್ರೀನಿವಾಸಮೂರ್ತಿ - 11336
ಬಿಜೆಪಿ ಅಭ್ಯರ್ಥಿ ಸಪ್ತಗಿರಿ ಶಂಕರ್ ನಾಯ್ಕ - 6421
ವರುಣದಲ್ಲಿ 3ನೇ ಸುತ್ತಿನಲ್ಲಿ
ಕಾಂಗ್ರೆಸ್‌ನ ಸಿದ್ದರಾಮಯ್ಯ ಮುನ್ನಡೆ.
18661 ಮತಗಳನ್ನು ಪಡೆದಿರುವ ಅವರು ಬಿಜೆಪಿಯ ವಿ.ಸೋಮಣ್ಣ ಅವರ ವಿರುದ್ಧ 5481 ಮತಗಳ ಅಂತರ
ಗಳಿಸಿದ್ದಾರೆ. ಸೋಮಣ್ಣ 13180 ಮತಗಳನ್ನು ಪಡೆದಿದ್ದಾರೆ.
[11:21 am, 13/05/2023] Pramod Koppala: ಕನಕಗಿರಿ: ಆರನೆ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ
ಕೊಪ್ಪಳ: ಜಿಲ್ಲೆಯ ಕನಕಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಿವರಾಜ ತಂಗಡಗಿ ಆರನೆ ಸುತ್ತಿನ ಅಂತ್ಯಕ್ಕೆ ಮುನ್ನಡೆಯಲ್ಲಿದ್ದಾರೆ.
ತಂಗಡಗಿ 30720 , ಬಿಜೆಪಿ ಅಭ್ಯರ್ಥಿ ಬಸವರಾಜ ದಢೇಸೂಗೂರು 17898, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಡಾ. ಚಾರುಲ್ 296 ಮತಗಳನ್ನು ಪಡೆದಿದ್ದಾರೆ.
ಯಲಬುರ್ಗಾ: ಹತ್ತನೆ ಸುತ್ತಿನಲ್ಲಿಯೂ ಕಾಂಗ್ರೆಸ್ ನ ರಾಯರಡ್ಡಿ ಮುನ್ನಡೆ
ಕೊಪ್ಪಳ: ಜಿಲ್ಲೆಯ ಯಲಬುರ್ಗಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ರಾಯರಡ್ಡಿ ಹತ್ತನೆ ಸುತ್ತಿನ ಅಂತ್ಯಕ್ಕೆ ಮುನ್ನಡೆಯಲ್ಲಿದ್ದಾರೆ.
ಕಾಂಗ್ರೆಸ್ 47911 ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ 38646 ಜೆಡಿಎಸ್ ಅಭ್ಯರ್ಥಿ ಮಲ್ಲನಗೌಡ ಕೋನನಗೌಡ್ರ 480
ಮತಗಳನ್ನು ಪಡೆದಿದ್ದಾರೆ.
ಕೋಲಾರ: ಮಾಲೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯಕುಮಾರ್ ಒಂಬತ್ತನೇ ಸುತ್ತಿನ ಅಂತ್ಯಕ್ಕೆ ಮುನ್ನಡೆ ಸಾಧಿಸಿದ್ದಾರೆ.
ಅವರು 26,231 ಮತ ಗಳಿಸಿದ್ದರೆ ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಕೆ.ವೈ.ನಂಜೇಗೌಡ 23,443 ಮತ ಪಡೆದಿದ್ದಾರೆ.
ಬಿಜೆಪಿ ಟಿಕೆಟ್ ಸಿಗದ ಕಾರಣ ಹೂಡಿ ವಿಜಯಕುಮಾರ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆ ಸಂದರ್ಭದಲ್ಲಿ ಅವರ ಬೆಂಬಲಿಗರು ಪ್ರಧಾನಿ ಮೋದಿ ಭಾವಚಿತ್ರ ಹರಿದು ಹಾಕಿ ಗಲಾಟೆ ಮಾಡಿದ್ದರು. ಇಲ್ಲಿನ ಬಿಜೆಪಿ ಅಭ್ಯರ್ಥಿ ಕೆ.ಎಸ್.ಮಂಜುನಾಥಗೌಡ ಮೂರನೇ ಸ್ಥಾನದಲ್ಲಿದ್ದಾರೆ.
ಚನ್ನಪಟ್ಟಣ: ಕುಮಾರಸ್ವಾಮಿಗೆ 8466 ಮತಗಳ ಮುನ್ನಡೆ
ರಾಮನಗರ: ಚನ್ನಪಟ್ಟಣದಲ್ಲಿ ಎಂಟನೇ ಸುತ್ತಿನ ಅಂತ್ಯಕ್ಕೆ ಜೆಡಿಎಸ್ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ 8466 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ಕುಮಾರಸ್ವಾಮಿ 40,855 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ 32,419 ಮತಗಳನ್ನು ಪಡೆದು ಹಿನ್ನಡೆ ಅನುಭವಿಸಿದ್ದಾರೆ. ಕಾಂಗ್ರೆಸ್‌ನ ಎಸ್. ಗಂಗಾಧರ್ 5767 ಮತ ಪಡೆದಿದ್ದಾರೆ.
ಗೆಲುವಿನ ಸನಿಹದಲ್ಲಿ ಕಾಂಗ್ರೆಸ್‌ನ ಪುಟ್ಟರಂಗಶೆಟ್ಟಿ
ಚಾಮರಾಜನಗರ: ಚಾಮರಾಜನಗರ ಕ್ಷೇತ್ರದಲ್ಲಿ 17 ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಸಿ.ಪುಟ್ಟರಂಗಶೆಟ್ಟಿ ಗೆಲುವಿನ ಸನಿಹದಲ್ಲಿದ್ದಾರೆ.
ಇನ್ನು ಒಂದು ಸುತ್ತಿನ ಮತ ಎಣಿಕೆಯಷ್ಟೇ ಬಾಕಿ ಇದೆ.
17ನೇ ಸುತ್ತಿನ ಅಂತ್ಯಕ್ಕೆ ಪುಟ್ಟರಂಗಶೆಟ್ಟಿ 82,277 ಮತಗಳನ್ನು ಪಡೆದಿದ್ದರೆ, ಬಿಜೆಪಿಯ ವಿ.ಸೋಮಣ್ಣ 75,616 ಮತಗಳನ್ನು ಗಳಿಸಿದ್ದಾರೆ.
ಪುಟ್ಟರಂಗಶೆಟ್ಟಿ 6,661 ಮತಗಳಿಂದ ಮುನ್ನಡೆಯಲ್ಲಿದ್ದಾರೆ.
ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ, ದೊಡ್ಡಬಳ್ಳಾಪುರದಲ್ಲಿ ಧೀರಜ್ ಮುನಿರಾಜು ಮುನ್ನಡೆ
ಬೆಂಗಳೂರು ಗ್ರಾಮಾಂತರ ಹೊಸಕೋಟೆ 10 ನೇ ಸುತ್ತು ಮುಕ್ತಾಯ
ಕಾಂಗ್ರೆಸ್ ಶರತ್ ಬಚ್ಚೇಗೌಡ 3780 ಮತಗಳ ಮುನ್ನಡೆ,
ದೊಡ್ಡಬಳ್ಳಾಪುರ:
ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ಒಟ್ಟು 19902 ಮತಗಳ ಅಂತರದಿಂದ ಮುನ್ನಡೆ
ಕುಣಿಗಲ್ ನಲ್ಲಿ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್
ಕುಣಿಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ 11,671 ಮತಗಳಿಂದ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ.
ಕಾಂಗ್ರೆಸ್ ಅಭ್ಯರ್ಥಿ ಎಚ್.ಡಿ. ರಂಗನಾಥ್- 37,496
ಬಿಜೆಪಿಯ ಅಭ್ಯರ್ಥಿ ಡಿ.ಕೃಷ್ಣ ಕುಮಾರ್- 25,825
ಜೆಡಿಎಸ್ ಅಭ್ಯರ್ಥಿ ರವಿ- 19,984
ಮೈಸೂರು ಜಿಲ್ಲೆ: ಟಿ ನರಸೀಪುರ 8ನೇ ಸುತ್ತು
ಕಾಂಗ್ರೆಸ್ ಹೆಚ್ ಸಿ ಮಹದೇವಪ್ಪ - 35936
ಜೆಡಿಎಸ್ ಅಶ್ವಿನ್ ಕುಮಾರ್ - 37254
ಜೆಡಿಎಸ್ 1318 ಮತಗಳ ಮುನ್ನಡೆ
ಕೆ.ಆರ್ ನಗರ ಎಂಟನೇ ಸುತ್ತು
ಕಾಂಗ್ರೆಸ್ ನ ರವಿಶಂಕರ್ 34619
ಜೆಡಿಎಸ್ ನ ಸಾ ರಾ ಮಹೇಶ್ 34654
ಜೆಡಿಎಸ್ ನ ಸಾಬರಾ ಮಹೇಶ್ ಗೆ 35 ಮತಗಳ ಮುನ್ನಡೆ
ಕೆ.ಆರ್ ನಗರ ಒಂಬತ್ತನೇ ಸುತ್ತು
ಕಾಂಗ್ರೆಸ್ ಡಿ ರವಿಶಂಕರ್ 46638
ಜೆಡಿಎಸ್ ಸಾ.ರಾ ಮಹೇಶ್ 41277
ಮತ್ತೆ ಕಾಂಗ್ರೆಸ್ 5361 ಮತಗಳ ಮುನ್ನಡೆ
ಕೃಷ್ಣರಾಜ ಆರನೇ ಸುತ್ತು
ಕಾಂಗ್ರೆಸ್ ನ ಎಂ ಕೆ ಸೋಮಶೇಖರ್ - 19182
ಬಿಜೆಪಿಯ ಶ್ರೀವತ್ಸ - 23511
ಬಿಜೆಪಿಗೆ 4329 ಮತಗಳ ಮುನ್ನಡೆ
ಚಾಮರಾಜ ಎಂಟನೇ ಸುತ್ತು
ಬಿಜೆಪಿಯ ಎಲ್ ನಾಗೇಂದ್ರ 33375
ಕಾಂಗ್ರೆಸ್ ನ ಹರೀಶ್ ಗೌಡ 33697
ಕಾಂಗ್ರೆಸ್ ಗೆ 322 ಮತಗಳ ಮುನ್ನಡೆ
ಹುಣಸೂರು ಒಂಬತ್ತನೇ ಸುತ್ತು
ಕಾಂಗ್ರೆಸ್ ನ ಮಂಜುನಾಥ್ 41102
ಜೆಡಿಎಸ್ ನ ಹರೀಶ್‌ಗೌಡ 44894
ಜೆಡಿಎಸ್ ಗೆ 3792 ಮತಗಳ ಮುನ್ನಡೆ
ಹಾಲಿ ಶಾಸಕ ಮಂಜುನಾಥ್ ಗೆ ಹಿನ್ನಡೆ
ಪಿರಿಯಾಪಟ್ಟಣ ಎಂಟನೇ ಸುತ್ತು
ಕಾಂಗ್ರೆಸ್ ನ ವೆಂಕಟೇಶ್ - 43387
ಜೆಡಿಎಸ್ ನ ಮಹದೇವ್ - 32421
ಕಾಂಗ್ರೆಸ್ ಗೆ 10966 ಮತಗಳ ಮುನ್ನಡೆ
3ನೇ ಸುತ್ತು ಮಳವಳ್ಳಿ ಕ್ಷೇತ್ರ
ಪಿ.ಎಂ.ನರೇಂದ್ರಸ್ವಾಮಿ (ಕಾಂಗ್ರೆಸ್): 14720
ಕೆ.ಅನ್ನದಾನಿ (ಜೆಡಿಎಸ್): 14176
ಜಿ.ಮುನಿರಾಜು (ಬಿಜೆಪಿ): 1425
ಕಾಂಗ್ರೆಸ್ ನ ನರೇಂದ್ರಸ್ವಾಮಿ 544 ಮತಗಳ ಮುನ್ನಡೆ
ನಂಜನಗೂಡು ಎರಡನೇ ಸುತ್ತು
ಕಾಂಗ್ರೆಸ್ ನ ದರ್ಶನ ಧ್ರುವನಾರಾಯಣ್ 13465
ಬಿಜೆಪಿಯ ಹರ್ಷವರ್ಧನ್ 6791
ಕಾಂಗ್ರೆಸ್ ಗೆ 6674 ಮತಗಳ ಮುನ್ನಡೆ
ನರಸಿಂಹರಾಜ ನಾಲ್ಕನೇ ಸುತ್ತು
ಕಾಂಗ್ರೆಸ್ ನ ತನ್ವೀರ್ ಸೇಠ್ 17224
ಎಸ್‌ಡಿಪಿಐನ ಅಬ್ದುಲ್ ಮಜೀದ್ 7499
ಜಿಜೆಪಿಯ ಸಂದೇಶ್ ಸ್ವಾಮಿ 9453
ಕಾಂಗ್ರೆಸ್ ಗೆ 7771 ಮತಗಳ ಮುನ್ನಡೆ
ಚಾಮರಾಜ ಕ್ಷೇತ್ರ ಒಂಬತ್ತನೇ ಸುತ್ತು
ಬಿಜೆಪಿಯ ಎಲ್ ನಾಗೇಂದ್ರ 36850
ಕಾಂಗ್ರೆಸ್ ನ ಹರೀಶ್ ಗೌಡ 37527
ಕಾಂಗ್ರೆಸ್ ಗೆ 677 ಮತಗಳ ಮುನ್ನಡೆ
ಪಿರಿಯಾಪಟ್ಟಣ ಹತ್ತನೇ ಸುತ್ತು
ಕಾಂಗ್ರೆಸ್ ನ ವೆಂಕಟೇಶ್ 53109
ಜೆಡಿಎಸ್ ನ ಕೆ ಮಹದೇವು 39482
ಕಾಂಗ್ರೆಸ್ ಗೆ 13627 ಮತಗಳ ಮುನ್ನಡೆ
ಚಾಮರಾಜನಗರ: ಚಾಮರಾಜನಗರ ಕ್ಷೇತ್ರದಲ್ಲಿ ಹಾಲಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಸಿ.ಪುಟ್ಟರಂಗಶೆಟ್ಟಿ ಅವರು ಗೆಲುವು ಸಾಧಿಸಿದ್ದಾರೆ.
18ನೇ ಹಾಗೂ ಕೊನೆಯ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, 7,383 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ
ಪುಟ್ಟರಂಗಶೆಟ್ಟಿ 83,136 ಮತಗಳನ್ನು ಪಡೆದಿದ್ದರೆ, ಬಿಜೆಪಿಯ ವಿ.ಸೋಮಣ್ಣ 75,753 ಮತಗಳನ್ನು ಗಳಿಸಿದ್ದಾರೆ.
ಬಿಎಸ್ ಪಿಯ ಹ.ರಾ.ಮಹೇಶ್ 6,373 ಮತಗಳನ್ನು ಪಡೆದರೆ, ಜೆಡಿಎಸ್ ನ ಮಲ್ಲಿಕಾರ್ಜುನ ಸ್ವಾಮಿ 1,073 ಮತಗಳನ್ನು ಪಡೆದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಬಿಜೆಪಿ ತಲಾ ಮೂರು ಹಾಗೂ ಜೆಡಿಎಸ್ ಒಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿವೆ. ಶಿವಮೊಗ್ಗದಲ್ಲಿ ಎಸ್.ಎನ್.ಚನ್ನಬಸಪ್ಪ, ಶಿಕಾರಿಪುರದಲ್ಲಿ ಬಿ.ವೈ.ವಿಜಯೇಂದ್ರ, ಸೊರಬದಲ್ಲಿ ಮಧು ಬಂಗಾರಪ್ಪ ಮುನ್ನಡೆ ಸಾಧಿಸಿದ್ದಾರೆ..
ಭದ್ರಾವತಿ 9ನೇ ಸುತ್ತು ಪೂರ್ಣಗೊಂಡಿದೆ.
ಕಾಂಗ್ರೆಸ್ ನ ಬಿ.ಕೆ.ಸಂಗಮೇಶ- 25174
ಜೆಡಿಎಸ್ ನ ಶಾರದಾ ಅಪ್ಪಾಜಿಗೌಡ- 22840
ಸಾಗರ ಎಂಟನೇ ಸುತ್ತು ಪೂರ್ಣಗೊಂಡಿದೆ.
ಕಾಂಗ್ರೆಸ್ ನ ಬೇಳೂರು ಗೋಪಾಲಕೃಷ್ಣ 39867
ಬಿಜೆಪಿಯ ಹರತಾಳು ಹಾಲಪ್ಪ- 29726
ಶಿವಮೊಗ್ಗ ನಗರ ಕ್ಷೇತ್ರದ 11ನೇ ಸುತ್ತು ಮುಕ್ತಾಯವಾಗಿದೆ.
ಬಿಜೆಪಿಯ ಎಸ್.ಎನ್.ಚನ್ನಬಸಪ್ಪ 56951
ಕಾಂಗ್ರೆಸ್ ನ ಎಚ್.ಸಿ.ಯೋಗೀಶ 32532
ಜೆಡಿಎಸ್ ನ ಆಯನೂರು ಮಂಜುನಾಥ್-5145
ಶಿಕಾರಿಪುರ ಕ್ಷೇತ್ರ ಏಳನೇ ಸುತ್ತು ಮುಕ್ತಾಯ
ಬಿಜೆಪಿಯ ಬಿ.ವೈ.ವಿಜಯೇಂದ್ರ 35699
ಸ್ವತಂತ್ರ ಅಭ್ಯರ್ಥಿ ಎಸ್.ಪಿ.ನಾಗರಾಜಗೌಡ 29068
ಶಿವಮೊಗ್ಗ ಗ್ರಾಮೀಣ ಕ್ಷೇತ್ರ ಏಳನೇ ಸುತ್ತು ಮುಕ್ತಾಯ
ಜೆಡಿಎಸ್- 35966
ಬಿಜೆಪಿ- 28400
ಸೊರಬ 11ನೇ ಸುತ್ತು ಮುಕ್ತಾಯ
ತೀರ್ಥಹಳ್ಳಿ ಕ್ಷೇತ್ರದ 12 ನೇ ಸುತ್ತಿನ ಎಣಿಕೆ ಪೂರ್ಣಗೊಂಡಿದೆ.
ಗೃಹಸಚಿವ, ಬಿಜೆಪಿಯ ಆರಗ ಜ್ಞಾನೇಂದ್ರ 54940
ಕಾಂಗ್ರೆಸ್ ನ ಕಿಮ್ಮನೆ ರತ್ನಾಕರ. 47583
ಸೊರಬ ಕ್ಷೇತ್ರದ 10 ನೇ ಸುತ್ತು ಮುಕ್ತಾಯವಾಗಿದೆ
ಕಾಂಗ್ರೆಸ್ ನ ಮಧು ಬಂಗಾರಪ್ಪ-56613
ಬಿಜೆಪಿಯ ಕುಮಾರ್ ಬಂಗಾರಪ್ಪ-31204
ಹೈವೋಲ್ಟೇಜ್ ಕ್ಷೇತ್ರ ಅಥಣಿಯಲ್ಲಿ 9ನೇ ಸುತ್ತಿನ ಮತಎಣಿಕೆಯಲ್ಲೂ ಲಕ್ಷ್ಮಣ್ ಸವದಿ ಮುನ್ನಡೆ
ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ - 19766
ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಸವದಿ - 50275
ಧಾರವಾಡ ಹು-ಧಾ ಸೆಂಟ್ರಲ್ 9ನೆಯ ಸುತ್ತು ಅಂತ್ಯ
ಕಾಂಗ್ರೆಸ್‌ನ ಜಗದೀಶ ಶೆಟ್ಟರ್‌ಗೆ ಹಿನ್ನೆಡೆ
26902 ಮತಗಳಿಂದ ಟೆಂಗಿನಕಾಯಿ ಮುನ್ನಡೆ
ಟೆಂಗಿನಕಾಯಿಗೆ 52101 ಮತ
ಶೆಟ್ಟರ್ ಗೆ 25298 ಮತ.
ಚಿಕ್ಕಮಗಳೂರು ಕ್ಷೇತ್ರ 6ನೇ ಸುತ್ತು
ಕಾಂಗ್ರೆಸ್-ಎಚ್.ಡಿ.ತಮ್ಮಯ್ಯ: 27479
ಬಿಜೆಪಿ- ಸಿ.ಟಿ.ರವಿ: 25563
ಜೆಡಿಎಸ್- ಬಿ.ಎಂ.ತಿಮ್ಮ ಶೆಟ್ಟಿ: 637
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಮೂರು ಸ್ಥಾನದಲ್ಲಿ ಮುನ್ನಡೆ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ, ಚಿಂತಾಮಣಿ, ಬಾಗೇಪಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿದೆ. ಶಿಡ್ಲಘಟ್ಟ ದಲ್ಕಿ ಜೆಡಿಎಸ್ ಮತ್ತು ಗೌರಿಬಿದನೂರಿನಲ್ಲಿ ಪಕ್ಷೇತರ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.
ರಾಮನಗರ ಕ್ಷೇತ್ರ ಫಲಿತಾಂಶ: 12ನೇ ಸುತ್ತು
ಇಕ್ಬಾಲ್ ಹುಸೇನ್ (ಕಾಂಗ್ರೆಸ್): 57,839
ನಿಖಿಲ್ ಕುಮಾರಸ್ವಾಮಿ (ಜೆಡಿಎಸ್): 43,362
ಕಾಂಗ್ರೆಸ್‌ಗೆ ಮುನ್ನಡೆ: 14,377
ದೊಡ್ಡಬಳ್ಳಾಪುರ 12 ನೇ ಸುತ್ತು
BJP - 54927
Cong :- 31621
JDS :- 23245
23306 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ದೀರಜ್ ಮುನ್ನಡೆ
ಹುಬ್ಬಳ್ಳಿ- ಧಾರವಾಡ ಸೆಂಟ್ರಲ್: 10ನೇ ಸುತ್ತು
ಮಹೇಶ ಟೆಂಗಿನಕಾಯಿ (ಬಿಜೆಪಿ)- 59,205
ಜಗದೀಶ ಶೆಟ್ಟರ್ (ಕಾಂಗ್ರೆಸ್)- 27,750
ಜಗದೀಶ ಶೆಟ್ಟರ್ ಗೆ 31,455 ಮತಗಳ ಹಿನ್ನಡೆ
ಕೋಲಾರ: ಕಾಂಗ್ರೆಸ್‌ನ ಕೊತ್ತೂರು ಮಂಜುನಾಥ್‌ಗೆ ಭಾರಿ ಮುನ್ನಡೆ
ಪ್ರಜಾವಾಣಿ ವಾರ್ತೆ
ಕೋಲಾರ: ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಜಿ.ಮಂಜುನಾಥ್ 12 ಸುತ್ತುಗಳ ಅಂತ್ಯಕ್ಕೆ 16 ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ಕೊತ್ತೂರು ಮಂಜುನಾಥ್ (ಕಾಂಗ್ರೆಸ್); 46,966
ಸಿಎಂಆರ್ ಶ್ರೀನಾಥ್ (ಜೆಡಿಎಸ್); 30,967
ವರ್ತೂರು ಪ್ರಕಾಶ್ (ಬಿಜೆಪಿ); 30,065
ಉಡುಪಿ ಜಿಲ್ಲೆಯ ವಿವರ
---------------
ಕುಂದಾಪುರ ಕ್ಷೇತ್ರ 7ನೇ ಸುತ್ತು
ಬಿಜೆಪಿ ಅಭ್ಯರ್ಥಿ ಕಿರಣ್ ಕೊಡ್ಗಿ: 44706
ಕಾಂಗ್ರೆಸ್ ಅಭ್ಯರ್ಥಿ: ದಿನೇಶ್ ಹೆಗ್ಡೆ ಮೊಳಹಳ್ಳಿ: 25420
ಕಾಪು ಕ್ಷೇತ್ರ 8ನೇ ಸುತ್ತು
ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ: 45277
ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ: 37598
ಕಾರ್ಕಳ 11ನೇ ಸುತ್ತು
ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್: 55321
ಕಾಂಗ್ರೆಸ್ ಅಭ್ಯರ್ಥಿ ಉದಯ ಶೆಟ್ಟಿ: 52604
ಉಡುಪಿ ಕ್ಷೇತ್ರ 9ನೇ ಸುತ್ತು
ಬಿಜೆಪಿ ಅಭ್ಯರ್ಥಿ ಯಶ್‌ಪಾಲ್ ಸುವರ್ಣ: 50683
ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್: 38079
ಬೈಂದೂರು 7ನೇ ಸುತ್ತು
ಬಿಜೆಪಿ ಅಭ್ಯರ್ಥಿ ಗುರುರಾಜ ಶೆಟ್ಟಿ ಗಂಟಿಹೊಳೆ 36606
ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಪೂಜಾರಿ: 34374
ಶಿರಹಟ್ಟಿ ಮೀಸಲು ಕ್ಷೇತ್ರ
ಬಿಜೆಪಿಯ ಡಾ. ಚಂದ್ರು ಲಮಾಣಿಗೆ ಗೆಲುವು
ರೋಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಜಿ.ಎಸ್.ಪಾಟೀಲಗೆ ಗೆಲುವು
ಬೆಂಗಳೂರು ಗ್ರಾಮಾಂತರ
ಹೊಸಕೋಟೆ: 12ನೇ ಸುತ್ತು ಮುಕ್ತಾಯ
1426ಮತಗಳಿಂದ ಶರತ್ ಬಚ್ಚೇಗೌಡ ಮುನ್ನಡೆ.
ದೇವನಹಳ್ಳಿ:ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ 16 ನೇ ಸುತ್ತಿನಲ್ಲಿ 3973ವಮತಗಳ ಮುನ್ನಡೆ .
ದೊಡ್ಡಬಳ್ಳಾಪುರ:12 ನೇ ಸುತ್ತು
23306 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಧೀರಜ್ ಮುನ್ನಡೆ
ನೆಲಮಂಗಲ: 13271ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸಯ್ಯ ಮುನ್ನಡೆ
ಚಿತ್ರದುರ್ಗ: ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ.ರಘುಮೂರ್ತಿ 16,127 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ರಘುಮೂರ್ತಿ ಅವರು ಸತತ ಮೂರನೇ ಬಾರಿಗೆ ಗೆದ್ದು, ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಟಿ.ರಘುಮೂರ್ತಿ 67,363 ಮತ ಪಡೆದಿದ್ದು, ಜೆಡಿಎಸ್ ಅಭ್ಯರ್ಥಿ ವಿರುದ್ಧ ಜಯ ಗಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ರವೀಶ್ ಕುಮಾರ್ 51,236 ಮತ ಪಡೆದಿದ್ದಾರೆ.
ಬಿಜೆಪಿ ಅಭ್ಯರ್ಥಿ ಆರ್.ಅನಿಲ್ ಕುಮಾರ್ 22,732 ಹಾಗೂ ಪಕ್ಷೇತರ- ಕೆ.ಟಿ.ಕುಮಾರಸ್ವಾಮಿ 28,928 ಮತ ಪಡೆದಿದ್ದಾರೆ. ಟಿ.ರಘುಮೂರ್ತಿ ಅವರು 2013 ಹಾಗೂ 2018 ರಲ್ಲಿ ಗೆಲುವು ಸಾಧಿಸಿದ್ದರು.
ಶಿಗ್ಗಾವಿ ಕ್ಷೇತ್ರ– 13ನೇ ಸುತ್ತು
ಬಸವರಾಜ ಬೊಮ್ಮಾಯಿ (ಬಿಜೆಪಿ)– 76,499
ಯಾಸಿರ್ ಖಾನ್ ಪಠಾಣ್ (ಕಾಂಗ್ರೆಸ್)– 48,244
ಬೊಮ್ಮಾಯಿಗೆ 28,255 ಮತಗಳ ಮುನ್ನಡೆ
ಹುಬ್ಬಳ್ಳಿ ಪೂರ್ವ ಕ್ಷೇತ್ರದಲ್ಲಿ
36 ಸಾವಿರ ಮತಗಳ ಅಂತರದಿಂದ ಪ್ರಸಾದ್ ಅಬ್ಬಯ್ಯ ಹ್ಯಾಟ್ರಿಕ್ ಗೆಲುವು
ಯಾದಗಿರಿ: ಕಾಂಗ್ರೆಸ್ ಅಭ್ಯರ್ಥಿಗಳ ಮುನ್ನಡೆ
ಯಾದಗಿರಿ: ಜಿಲ್ಲೆಯ ನಾಲ್ಕು ಮತಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ.
ಶಹಾಪುರ, ಸುರಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಶರಣಬಸಪ್ಪ ದರ್ಶನಾಪುರ 8,455,ರಾಜಾ ವೆಂಕಟಪ್ಪ ನಾಯಕ 14,172 ಮುನ್ನಡೆ ಸಾಧಿಸಿದ್ದು, ಗುರುಮಠಕಲ್ ನಲ್ಲಿ ಜೆಡಿಎಸ್ ಅಭ್ಯರ್ಥಿ ಶರಣಗೌಡ ಕಂದಕೂರ 3,776, ಯಾದಗಿರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನಾರೆಡ್ಡಿ ಪಾಟೀಲ ತುನ್ನೂರು 2,564 ಮುನ್ನಡೆ ಸಾಧಿಸಿದ್ದಾರೆ.
ಯಾದಗಿರಿ 7ನೇ ಸುತ್ತು, ಸುರಪುರ 9 ನೇ ರೌಂಡ್, ಶಹಾಪುರ 10 ನೇ ಸುತ್ತು, ಗುರುಮಠಕಲ್ 9 ನೇ ಮತ ಎಣಿಕೆ ಮುಕ್ತಾಯವಾಗಿದೆ.
ಕೋಲಾರ ಜಿಲ್ಲೆ (ಮಧ್ಯಾಹ್ನ 12 ಗಂಟೆಯ ಟ್ರೆಂಡ್)
ಕ್ಷೇತ್ರ; ಮುನ್ನಡೆ
ಶ್ರೀನಿವಾಸಪುರ; ಜಿ.ಕೆ.ವೆಂಕಟಶಿವಾರೆಡ್ಡಿ (ಜೆಡಿಎಸ್)
ಮುಳಬಾಗಿಲು; ಸಮೃದ್ಧಿ ಮಂಜುನಾಥ್ (ಜೆಡಿಎಸ್)
ಕೆಜಿಎಫ್; ರೂಪಕಲಾ ಎಂ. (ಕಾಂಗ್ರೆಸ್)
ಬಂಗಾರಪೇಟೆ; ಎಸ್.ಎನ್.ನಾರಾಯಣಸ್ವಾಮಿ (ಕಾಂಗ್ರೆಸ್)
ಕೋಲಾರ: ಕೊತ್ತೂರು ಮಂಜುನಾಥ್ (ಕಾಂಗ್ರೆಸ್)
ಮಾಲೂರು; ಹೂಡಿ ವಿಜಯಕುಮಾರ್ (ಪಕ್ಷೇತರ)
ಹಾವೇರಿ ಕ್ಷೇತ್ರ– 7ನೇ ಸುತ್ತು
ಗವಿಸಿದ್ದಪ್ಪ ದ್ಯಾಮಣ್ಣವರ (ಬಿಜೆಪಿ)– 39,091
ರುದ್ರಪ್ಪ ಲಮಾಣಿ (ಕಾಂಗ್ರೆಸ್)– 44031
ಕಾಂಗ್ರೆಸ್‌ಗೆ 4940 ಮತಗಳ ಮುನ್ನಡೆ
ಚಾಮರಾಜ ಹತ್ತನೇ ಸುತ್ತು
ಬಿಜೆಪಿಯ ಎಲ್ ನಾಗೇಂದ್ರ 40362
ಕಾಂಗ್ರೆಸ್ ನ ಹರೀಶ್ ಗೌಡ 41326
ಕಾಂಗ್ರೆಸ್ ಗೆ 964 ಮತಗಳ ಮುನ್ನಡೆ
ಸಿರಗುಪ್ಪ 11ನೇ ಸುತ್ತು
ಕಾಂಗ್ರೆಸ್- B.M. ನಾಗರಾಜ್- 59191
ಬಿಜೆಪಿ-ಸೋಮಲಿಂಗಪ್ಪ- 33864
ಕಾಂಗ್ರೆಸ್- 25327 ಮುನ್ನಡೆ
ಹೆಚ್ ಡಿ ಕೋಟೆ 11ನೇ ಸುತ್ತು
ಕಾಂಗ್ರೆಸ್ ಅನಿಲ್ ಚಿಕ್ಕಮಾದು 44924
ಬಿಜೆಪಿಯ ಕೃಷ್ಣನಾಯಕ 26197
ಜೆಡಿಎಸ್ ನ ಜಯಪ್ರಕಾಶ್ 24078
ಕಾಂಗ್ರೆಸ್ ಗೆ 18727 ಮತಗಳ ಮುನ್ನಡೆ
ಬಳ್ಳಾರಿ ಗ್ರಾಮೀಣ 15ನೇ ಸುತ್ತು
ಕಾಂಗ್ರೆಸ್ ನಾಗೇಂದ್ರ -90273
ಬಿಜೆಪಿ-ಶ್ರೀರಾಮುಲು-63446
ಕಾಂಗ್ರೆಸ್- 26827 ಮುನ್ನಡೆ
ಪಿರಿಯಾಪಟ್ಟಣ 11ನೇ ಸುತ್ತು
ಕಾಂಗ್ರೆಸ್ ನ ವೆಂಕಟೇಶ್ - 58430
ಜೆಡಿಎಸ್ ನ ಮಹದೇವ್ - 43799
ಕಾಂಗ್ರೆಸ್ ಗೆ 14631 ಮತಗಳ ಮುನ್ನಡೆ
ಬಳ್ಳಾರಿ ಗ್ರಾಮೀಣ 16ನೇ ಸುತ್ತು
ಕಾಂಗ್ರೆಸ್ ನಾಗೇಂದ್ರ -95453
ಬಿಜೆಪಿ-ಶ್ರೀರಾಮುಲು-68091
ಕಾಂಗ್ರೆಸ್- 27362 ಮುನ್ನಡೆ
ನರಸಿಂಹರಾಜ 5ನೇ ಸುತ್ತು
ಕಾಂಗ್ರೆಸ್ ನ ತನ್ವೀರ್ ಸೇಠ್ 19701
ಎಸ್‌ಡಿಪಿಐನ ಅಬ್ದುಲ್ ಮಜೀದ್ 8200
ಬಿಜೆಪಿಯ ಸಂದೇಶ್ ಸ್ವಾಮಿ 12468
ಕಾಂಗ್ರೆಸ್ ಗೆ 7233 ಮತಗಳ ಮುನ್ನಡೆ
ಹುಣಸೂರು 11ನೇ ಸುತ್ತು
ಕಾಂಗ್ರೆಸ್ ನ ಮಂಜುನಾಥ್ 51403
ಜೆಡಿಎಸ್ ನ ಹರೀಶ್‌ಗೌಡ 54187
ಜೆಡಿಎಸ್ ಗೆ 2784 ಮತಗಳ ಮುನ್ನಡೆ
ಹಾಲಿ ಶಾಸಕ ಮಂಜುನಾಥ್ ಹಿನ್ನಡೆ
ಸಂಡೂರು 10ನೇ ಸುತ್ತು
ಕಾಂಗ್ರೆಸ್- ಇ.ತುಕಾರಾಂ- 45656
ಬಿಜೆಪಿ-ಶಿಲ್ಪ ರಾಘವೇಂದ್ರ-29889
ಕಾಂಗ್ರೆಸ್-25767 ಮುನ್ನಡೆ
ಚಿಕ್ಕಬಳ್ಳಾಪುರ ಕ್ಷೇತ್ರ 12 ಸುತ್ತು
ಕಾಂಗ್ರೆಸ್ 58,137
ಬಿಜೆಪಿ 49,101
ಚಾಮರಾಜ ಕ್ಷೇತ್ರ 11ನೇ ಸುತ್ತು
ಬಿಜೆಪಿಯ ಎಲ್ ನಾಗೇಂದ್ರ 44597
ಕಾಂಗ್ರೆಸ್ ನ ಹರೀಶ್ ಗೌಡ 44880
ಕಾಂಗ್ರೆಸ್ ಗೆ 283 ಮತಗಳ ಮುನ್ನಡೆ
ಕೆ.ಆರ್ ನಗರ 12ನೇ ಸುತ್ತು
ಕಾಂಗ್ರೆಸ್ ನ ಡಿ ರವಿಶಂಕರ್ 65016
ಜೆಡಿಎಸ್ ನ ಸಾ ರಾ ಮಹೇಶ್ 55384
ಕಾಂಗ್ರೆಸ್ ಗೆ 9632 ಮತಗಳ ಮುನ್ನಡೆ
ಹೆಚ್ ಡಿ ಕೋಟೆ 12ನೇ ಸುತ್ತು
ಕಾಂಗ್ರೆಸ್ ನ ಅನಿಲ್ ಚಿಕ್ಕಮಾದು 49843
ಬಿಜೆಪಿಯ ಕೃಷ್ಣನಾಯಕ 28866
ಜೆಡಿಎಸ್ ನ ಜಯಪ್ರಕಾಶ್ 25657
ಕಾಂಗ್ರೆಸ್ ಗೆ 20977 ಮತಗಳ ಮುನ್ನಡೆ
ಟಿ ನರಸೀಪುರ 13ನೇ ಸುತ್ತು
ಕಾಂಗ್ರೆಸ್ ನ ಹೆಚ್ ಸಿ ಮಹದೇವಪ್ಪ - 60994
ಜೆಡಿಎಸ್ ನ ಅಶ್ವಿನ್ ಕುಮಾರ್ 48213
ಕಾಂಗ್ರೆಸ್ ಗೆ 12781 ಮತಗಳ ಮುನ್ನಡೆ
ಪಿರಿಯಾಪಟ್ಟಣ 12ನೇ ಸುತ್ತು
ಕಾಂಗ್ರೆಸ್ ನ ವೆಂಕಟೇಶ್ - 62631
ಜೆಡಿಎಸ್ ನ ಮಹದೇವ್ - 47639
ಕಾಂಗ್ರೆಸ್ ಗೆ 14992 ಮತಗಳ ಮುನ್ನಡೆ
ವರುಣ 6ನೇ ಸುತ್ತು
ಕಾಂಗ್ರೆಸ್ ನ ಸಿದ್ದರಾಮಯ್ಯ - 38731
ಬಿಜೆಪಿಯ ವಿ ಸೋಮಣ್ಣ - 22816
ಸಿದ್ದರಾಮಯ್ಯಗೆ 15915 ಮತಗಳ ಮುನ್ನಡೆ
ಕೊಡಗು ಜಿಲ್ಲೆ 20 ನೇ ಸುತ್ತು
ವಿರಾಜಪೇಟೆ
ಬಿಜೆಪಿ ಕೆ.ಜಿ.ಬೋಪಯ್ಯ 78,397
ಕಾಂಗ್ರೆಸ್ ಎ.ಎಸ್.ಪೊನ್ನಣ್ಣ 83,128
,ಕಾಂಗ್ರೆಸ್ 4,731 ಮತಗಳ ಮುನ್ನಡೆ
16ನೇ ಸುತ್ತು ಮಡಿಕೇರಿ
ಕಾಂಗ್ರೆಸ್ ಮಂತರ್ ಗೌಡ , 69,733
ಬಿಜೆಪಿ ಎಂ.ಪಿ.ಅಪ್ಪಚ್ಷುರಂಜನ್ 65,137
ಕಾಂಗ್ರೆಸ್ 4596ಮತಗಳ ಮುನ್ನಡೆ
ನಂಜನಗೂಡು 4ನೇ ಸುತ್ತು
ಕಾಂಗ್ರೆಸ್ ನ ದರ್ಶನ್ ಧ್ರುವನಾರಾಯಣ್ - 24595
ಬಿಜೆಪಿಯ ಹರ್ಷವರ್ಧನ್ - 13659
ಕಾಂಗ್ರೆಸ್ ಗೆ 10936 ಮತಗಳ ಮುನ್ನಡೆ
ಹುಣಸೂರು 13ನೇ ಸುತ್ತು
ಕಾಂಗ್ರೆಸ್ ನ ಮಂಜುನಾಥ್ 56100
ಜೆಡಿಎಸ್ ನ ಹರೀಶ್‌ಗೌಡ 58642
ಜೆಡಿಎಸ್ ಗೆ 2542 ಮತಗಳ ಮುನ್ನಡೆ
ಹಾಲಿ ಶಾಸಕ ಮಂಜುನಾಥ್ ಹಿನ್ನಡೆ
ಚಾಮರಾಜ ಕ್ಷೇತ್ರ 12ನೇ ಸುತ್ತು
ಬಿಜೆಪಿತ ಎಲ್ ನಾಗೇಂದ್ರ 48663
ಕಾಂಗ್ರೆಸ್ ನ ಹರೀಶ್ ಗೌಡ 49075
ಕಾಂಗ್ರೆಸ್ ಗೆ 412 ಮತಗಳ ಮುನ್ನಡೆ
ಹೆಚ್ ಡಿ ಕೋಟೆ 13ನೇ ಸುತ್ತು
ಕಾಂಗ್ರೆಸ್ ನ ಅನಿಲ್ ಚಿಕ್ಕಮಾದು 54823
ಬಿಜೆಪಿಯ ಕೃಷ್ಣನಾಯಕ 31428
ಜೆಡಿಎಸ್ ನ ಜಯಪ್ರಕಾಶ್ 28283
ಕಾಂಗ್ರೆಸ್ ಗೆ 23395 ಮತಗಳ ಮುನ್ನಡೆ
ಕಾಂಗ್ರೆಸ್ ನ ಡಾ ಹೆಚ್ ಸಿ ಮಹದೇವಪ್ಪಗೆ - 65992
ಜೆಡಿಎಸ್ ನ ಅಶ್ವಿನ್ ಕುಮಾರ್ ಗೆ 50923
ಕಾಂಗ್ರೆಸ್ ಗೆ 15069 ಮತಗಳ ಮುನ್ನಡೆ
ರಾಜರಾಜೇಶ್ವರಿ ನಗರ
ಮುನಿರತ್ನ (ಬಿಜೆಪಿ) 41,047
ಎಚ್.ಕುಸುಮಾ (ಕಾಂಗ್ರೆಸ್) 37,354
ಮುನ್ನಡೆ: ಬಿಜೆಪಿಗೆ 3693 ಮತಗಳು
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ: 10ನೇ ಸುತ್ತು
ಎಚ್.ಡಿ. ಕುಮಾರಸ್ವಾಮಿ (ಜೆಡಿಎಸ್): 53,773
ಸಿ.ಪಿ. ಯೋಗೇಶ್ವರ್ (ಬಿಜೆಪಿ): 40,178
ಎಸ್. ಗಂಗಾಧರ್ (ಕಾಂಗ್ರೆಸ್) : 8261
ಮುನ್ನಡೆ ಅಂತರ: 13,595
ಚಿತ್ತಾಪುರ ಕ್ಷೇತ್ರದ 14ನೇ ಸುತ್ತಿನ ಎಣಿಕೆ ಪೂರ್ಣ.
ಕಾಂಗ್ರೆಸ್- 64916
ಬಿಜೆಪಿ- 49698
ಕಾಂಗ್ರೆಸ್ 15217 ಮತಗಳ ಅಂತರದಿಂದ ಮುನ್ನಡೆ
ಚಿಂಚೋಳಿ ಕ್ಷೇತ್ರದ 8ನೇ ಸುತ್ತಿನ ಎಣಿಕೆ ಪೂರ್ಣ
ಬಿಜೆಪಿ- 33185
ಕಾಂಗ್ರೆಸ್- 30089
ಜೆಡಿಎಸ್- 3033
ಬಿಜೆಪಿ 3096 ಮತಗಳ ಅಂತರದಿಂದ ಮುನ್ನಡೆ.
ಅಫಜಲಪೂರ ಕ್ಷೇತ್ರದ 9ನೇ ಸುತ್ತಿನ ಎಣಿಕೆ ಪೂರ್ಣ
ಪಕ್ಷೇತರ- 28330
ಕಾಂಗ್ರೆಸ್- 27666
ಬಿಜೆಪಿ -17785
ಪಕ್ಷೇತರ ಅಭ್ಯರ್ಥಿ ನಿತಿನ್ ಗುತ್ತೇದಾರ ಅವರು 664 ಮತಗಳ ಅಂತರದಿಂದ ಮುನ್ನಡೆ.
ಹಾವೇರಿ ಕ್ಷೇತ್ರ– 10ನೇ ಸುತ್ತು
ಗವಿಸಿದ್ದಪ್ಪ ದ್ಯಾಮಣ್ಣವರ (ಬಿಜೆಪಿ)– 43,480
ರುದ್ರಪ್ಪ ಲಮಾಣಿ (ಕಾಂಗ್ರೆಸ್)– 49,814
ಕಾಂಗ್ರೆಸ್‌ಗೆ 6334 ಮತಗಳ ಮುನ್ನಡೆ
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್ ಪಕ್ಷದ ನರಭರತ್ ರೆಡ್ಡಿ 26507
ಬಿಜೆಪಿ ಪಕ್ಷದ ಸೋಮಶೇಖರ್ ರೆಡ್ಡಿ 12485
ಕೆ ಆರ್ ಪಿ ಪಕ್ಷದ ಲಕ್ಷ್ಮಿ ಅರುಣ 18920
ಬೆಳಗಾವಿ: ಅಥಣಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿ ಅವರಿಗೆ ಭರ್ಜರಿ ಗೆಲುವಾಗಿದೆ. ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.
ಈ ಕ್ಷೇತ್ರದಲ್ಲಿ 18 ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದೆ. ಇನ್ನು ಐದು ಸುತ್ತುಗಳು ಮಾತ್ರ ಬಾಕಿ ಇವೆ. ಆದರೆ, ಲಕ್ಷ್ಮಣ ಸವದಿ ಅವರು 59 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದಾರೆ.
ಶೇ 96ರಷ್ಟು ಮತಗಳ ಎಣಿಕೆ ಮುಗಿದು ಹೋಗಿದ್ದರಿಂದ ಅವರ ಗೆಲುವು ಬಹುತೇ ಖಚಿಯವಾಗಿದೆ.
ಬೆಳಗಾವಿ ನಗರ ಹಾಗೂ ಅಥಣಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಮನೆ ಮಾಡಿದೆ.
ಹಾವೇರಿ: ತೀವ್ರ ಕುತೂಹಲ ಕೆರಳಿಸಿದ್ದ ‘ಸಿಎಂ ತವರು ಕ್ಷೇತ್ರ’ ಶಿಗ್ಗಾವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗೆಲುವು ಬಹುತೇಕ ನಿಶ್ಚಿತವಾಗಿದೆ.
ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರು 14ನೇ ಸುತ್ತಿನಲ್ಲಿ 80,886 ಮತಗಳನ್ನು ಪಡೆದು, 26,612 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇನ್ನು 3 ಸುತ್ತುಗಳು ಮಾತ್ರ ಬಾಕಿ ಇವೆ.
ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ 54,274 ಮತ್ತು ಜೆಡಿಎಸ್ ಅಭ್ಯರ್ಥಿ ಶಶಿಧರ ಯಲಿಗಾರ 10,592 ಮತಗಳನ್ನು ಪಡೆದು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನದಲ್ಲಿದ್ದಾರೆ.
2008, 2013, 2018ರ ಮೂರು ಚುನಾವಣೆಗಳಲ್ಲೂ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಬಸವರಾಜ ಬೊಮ್ಮಾಯಿ ಅವರು ಈ ಬಾರಿಯೂ ಗೆಲುವಿನ ನಗೆ ಬೀರಿದ್ದಾರೆ.
ಈ ಬಾರಿ ಪ್ರಬಲ ಸ್ಪರ್ಧಿಯನ್ನು ಹಾಕಿ ಬೊಮ್ಮಾಯಿ ಅವರನ್ನು ಕಣದಲ್ಲಿ ಕಟ್ಟಿ ಹಾಕುತ್ತೇವೆ ಎಂದು ಸವಾಲು ಹಾಕಿದ್ದ ಕಾಂಗ್ರೆಸ್ ನಾಯಕರು ಪ್ರಬಲ ಸ್ಪರ್ಧಿಯನ್ನು ಹಾಕುವಲ್ಲಿ ಎಡವಿದರು. ಹೀಗಾಗಿ ಬೊಮ್ಮಾಯಿ ಅವರ ಗೆಲುವು ಸುಲಭವಾಯಿತು. ಕಳೆದ ಮೂರು ಚುನಾವಣೆಗಳಿಗಿಂತ ಈ ಬಾರಿ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ.
‘ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಜವಳಿ ಪಾರ್ಕ್, ನವಾಬರ ಆಡಳಿತ ಕಚೇರಿ ನವೀಕರಣ, ಜಿಟಿಟಿಸಿ ಸೇರಿದಂತೆ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಬೊಮ್ಮಾಯಿ ಅವರ ಗೆಲುವಿಗೆ ಕಾರಣವಾಗಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಭಾರೀ ಹಿನ್ನಡೆಯಾಗಿದೆ. ಕಾಂಗ್ರೆಸ್‌ನ ಎಚ್.ಕುಸುಮಾ ಅವರು 9 ಸಾವಿರ ಮತಗಳ ಮುನ್ನಡೆ ಪಡೆದುಕೊಂಡಿದ್ದಾರೆ.
ಖಾದರ್ ಕಾರಿಗೆ ಕಾರ್ಯಕರ್ತರ ಮುತ್ತಿಗೆ!
ಮಂಗಳೂರು: ಉಳ್ಳಾಲ ಕ್ಷೇತ್ರದ ಎಂಟನೇ ಸುತ್ತಿನ ಮತ ಎಣಿಕೆ ಕಾರ್ಯ ಮುಕ್ತಾಯಗೊಂಡ ನಂತರ 15 ಸಾವಿರಕ್ಕೂ ಹೆಚ್ಚು ಮತಗಳ ಅಂತರದ ಮುನ್ನಡೆ ಸಾಧಿಸಿದ್ದ ಕಾಂಗ್ರೆಸ್‌ನ ಯು.ಟಿ.ಖಾದರ್ ಎಣಿಕೆ ಕೇಂದ್ರದತ್ತ ಬಂದರು. ಅವರ ಕಾರು ಕಂಡ ಕೂಡಲೆ ಮೈದಾನದ ಬಳಿ ನಿಂತಿದ್ದ ಕಾರ್ಯಕರ್ತರು ಅದರತ್ತ ನುಗ್ಗಿದರು. ಕಾರ್ಯಕರ್ತರತ್ತ ಕೈಬೀಸಿದ ಖಾದರ್ ಅವರ ಕಾರನ್ನು ಕ್ಷಣಾರ್ಧದಲ್ಲಿ ಮುತ್ತಿದರು. ಕಾರಿನಿಂದ ಇಳಿದ ಅವರನ್ನು ಎತ್ತಿಕೊಂಡು ತಿರುಗಾಡಿದರು. ಅವರಿಗೂ ಕಾಂಗ್ರೆಸ್ ಪಕ್ಷಕ್ಕೂ ಜೈಕಾರ ಕೂಗಿದರು. ನಮ್ಮದೇ ನಮ್ಮದೇ ಸರ್ಕಾರ ನಮ್ಮದೇ ಎಂಬ ಘೋಷಣೆಯೂ ಮೊಳಗಿತು.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಖಾದರ್ 'ನಾಲ್ಕು ವರ್ಷಗಳಿಂದ ಕರ್ನಾಟಕದ ಜನರು ಒತ್ತಡದಲ್ಲಿದ್ದರು. ಅವರ ನೋವನ್ನು ಮತದಾನದ ಮೂಲಕ ಹೊರಹಾಕಿದ್ದಾರೆ. ಕರ್ನಾಟಕ ಬೇರೆ ರಾಜ್ಯಗಳಿಗಿಂತ ಭಿನ್ನ, ನಮ್ಮದು ಬಹುತ್ವವನ್ನು ಬೆಂಬಲಿಸುವ ಸಮಾಜ ಎಂಬುದನ್ನು ಜನರು ತೋರಿಸಿಕೊಟ್ಟಿದ್ದಾರೆ' ಎಂದು ಹೇಳಿದರು.
'ದ್ವೇಷದ ರಾಜಕಾರಣ, ಸಮುದಾಯಗಳನ್ನು ಒಡೆಯುವ ತಂತ್ರ ಇತ್ಯಾದಿಗಳು ಬಿಜೆಪಿಗೆ ಮುಳುವಾಯಿತು' ಎಂದ ಅವರು 'ಕರಾವಳಿಯಲ್ಲಿ ಕಾಂಗ್ರೆಸ್ ಹಿನ್ನಡೆಗೆ ಕಾರಣ ಏನು ಎಂಬುದರ ಬಗ್ಗೆ ಉನ್ನತ ಮಟ್ಟದಲ್ಲಿ ಆತ್ಮಾವಲೋಕನ ಮಾಡಲಾಗುವುದು, ಕ್ಷೇತ್ರದಲ್ಲಿ ಯಾವ ರೀತಿಯ ಕಪ್ಪುಚುಕ್ಕೆ ಇಲ್ಲದಂತೆ ನೋಡಿಕೊಳ್ಳುವೆ' ಎಂದರು.
ಕಾಂಗ್ರೆಸ್ ಸರ್ಕಾರ ರಚನೆಯಾದರೆ ಸಚಿವ ಸ್ಥಾನದ ಬೇಡಿಕೆ ಇಡುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು 'ಅದೆಲ್ಲ ಮುಂದಿನ ದಿನಗಳಲ್ಲಿ ತೀರ್ಮಾನ ಆಗುತ್ತದೆ' ಎಂದರು.
14 ಸುತ್ತಿನಲ್ಲಿ ಸಹ ಸುಧಾಕರ್‌ಗೆ ಹಿನ್ನಡೆ
ಚಿಕ್ಕಬಳ್ಳಾಪುರ; 14 ಸುತ್ತುಗಳ ಮತ ಎಣಿಕೆ ಪೂರ್ಣ. ಸಚಿವ ಸುಧಾಕರ್- ಗೆ ಹಿನ್ನಡೆ. 3 ಮತ್ತು 5ನೇ ಸುತ್ತಿನ ಎಣಿಕೆಯಲ್ಲಿಮಾತ್ರ ಸುಧಾಕರ್- ಸಣ್ಣಪ್ರಮಾಣದ ಲ್ಲಿ ಮುನ್ನಡೆ ಪಡೆದಿದ್ದರು. ಅದರ ಹೊರತಾಗಿ ಎಲ್ಲ ಸುತ್ತುಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಲೀಡ್ ಪಡೆದಿದ್ದಾರೆ
11,200. ಮತಗಳ ಮುನ್ನಡೆ
ಮಡಿಕೇರಿ ವಿಧಾನಸಭಾ ಕ್ಷೇತ್ರ; ಗೆಲುವಿನತ್ತ ಡಾ.ಮಂತರ್ ಗೌಡ
ಮಡಿಕೇರಿ: ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂತರ್ ಗೌಡ ಅವರು ಗೆಲುವಿನ ಸಮೀಪಕ್ಕೆ ಬಂದಿದ್ದಾರೆ.
18ನೇ ಸುತ್ತು ಮತ ಎಣಿಕೆ ಈಗಾಗಲೆ ಮುಗಿದಿದ್ದು,
ಕಾಂಗ್ರೆಸ್ ಅಭ್ಯರ್ಥಿ ಡಾ.ಮಂತರ್ ಗೌಡ , 78,912 ಮತ ಗಳಿಸಿ 5,384ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ
ಸತತವಾಗಿ ಮೂರು ಬಾರಿ ಗೆಲುವು ಸಾಧಿಸಿದ್ದ ಬಿಜೆಪಿಯ ಎಂ.ಪಿ.ಅಪ್ಪಚ್ಷುರಂಜನ್73,528 ಮತ ಗಳಿಸಿದ್ದಾರೆ. ಇನ್ನೂ ಎರಡು ಸುತ್ತಿನ ಮತ ಎಣಿಕೆಯಷ್ಟೇ ಬಾಕಿ ಉಳಿದಿದೆ.
ಭಾಲ್ಕಿ ವಿಧಾನಸಭಾ ಕ್ಷೇತ್ರ
ಭಾಲ್ಕಿಯಲ್ಲಿ ಕಾಂಗ್ರೆಸ್‌ನ ಹಾಲಿ ಶಾಸಕ ಈಶ್ವರ ಖಂಡ್ರೆ ಮುನ್ನಡೆ ಸಾಧಿಸಿದ್ದಾರೆ. ನಂತರದ ಸ್ಥಾನದಲ್ಲಿ ಬಿಜೆಪಿಯ ಪ್ರಕಾಶ ಖಂಡ್ರೆ ಇದ್ದಾರೆ.
1 ನೇ ಸುತ್ತಿನಲ್ಲಿ ಕಾಂಗ್ರೆಸ್ 4155, ಬಿಜೆಪಿ 3810, ಜೆಡಿಎಸ್ 31
2ನೇ ಸುತ್ತಿನಲ್ಲಿ ಕಾಂಗ್ರೆಸ್ 8860, ಬಿಜೆಪಿ 6922, ಜೆಡಿಎಸ್ 51
3ನೇ ಸುತ್ತಿನಲ್ಲಿ ಕಾಂಗ್ರೆಸ್ 13554, ಬಿಜೆಪಿ 10754, ಜೆಡಿಎಸ್ 74,
4 ನೇ ಸುತ್ತಿನಲ್ಲಿ ಕಾಂಗ್ರೆಸ್ 19425, ಬಿಜೆಪಿ 15053, ಜೆಡಿಎಸ್ 100
5 ನೇ ಸುತ್ತಿನಲ್ಲಿ ಕಾಂಗ್ರೆಸ್ 24560, ಬಿಜೆಪಿ 19179, ಜೆಡಿಎಸ್ 130
6 ನೇ ಸುತ್ತಿನಲ್ಲಿ ಕಾಂಗ್ರೆಸ್ 29567, ಬಿಜೆಪಿ 22973, ಜೆಡಿಎಸ್ 149
7 ನೇ ಸುತ್ತಿನಲ್ಲಿ ಕಾಂಗ್ರೆಸ್ 34619, ಬಿಜೆಪಿ 26828, ಜೆಡಿಎಸ್ 192
8 ನೇ ಸುತ್ತಿನಲ್ಲಿ ಕಾಂಗ್ರೆಸ್ 40040, ಬಿಜೆಪಿ 31155, ಜೆಡಿಎಸ್ 231
9 ನೇ ಸುತ್ತಿನಲ್ಲಿ ಕಾಂಗ್ರೆಸ್ 47202, ಬಿಜೆಪಿ 34718, ಜೆಡಿಎಸ್ 334
ಪ್ರಜಾವಾಣಿ ವಾರ್ತೆ ಮಂಗಳೂರು: ದಕ್ಷಿ ಣ ಕನ್ನಡ ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ಒಂದರಲ್ಲಿ ಕಾಂಗ್ರೆಸ್, ಒಂದಲ್ಲಿ ಪಕ್ಷೇತರ ಹಾಗೂ ಆರು ಕ್ಣೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ. ಬೆಳ್ತಂಗಡಿ ಕ್ಷೇತ್ರದಲ್ಲಿ 14ನೇ ಸುತ್ತಿನ ಎಣಿಕೆ ಬಳಿಕ ಬಿಜೆಪಿಯ ಹರೀಶ್ ಪೂಂಜ 80,070 ಕಾಂಗ್ರೆಸ್ ನ ರಕ್ಷಿತ್ ಶಿವರಾಂ 66459 ಮತಗಳನ್ನು ಪಡೆದಿದ್ದಾರೆ. ಪೂಂಜ 13611 ಮತಗಳ ಮುನ್ನಡೆ ಸಾಧಿಸಿದ್ದಾರೆ. ಮೂಡುಬಿದಿರೆ ಕ್ಷೇತ್ರದಲ್ಲಿ ಎಂಟನೇ ಸುತ್ತಿನ ಎಣಿಕೆ ಬಳಿಕ ಬಿಜೆಪಿಯ ಉಮಾನಾಥ ಕೋಟ್ಯಾನ್ 44,850 ಹಾಗೂ ಕಾಂಗ್ರೆಸ್ ನ ಮಿಥುನ್ ರೈ 32,530 ಮತಗಳನ್ನು ಪಡೆದಿದ್ದಾರೆ. ಕೋಟ್ಯಾನ್ 12320 ಮತಗಳಿಂದ ಮುಂದಿದ್ದಾರೆ. ಮಂಗಳೂರು ದಕ್ಷಿಣದಲ್ಲಿ 10 ನೇ ಸುತ್ತಿನ ಎಣಿಕೆ ಬಳಿಕ ಬಿಜೆಪಿಯ ಡಿ.ವೇದವ್ಯಾಸ ಕಾಮತ್ 57171 ಹಾಗೂ ಕಾಂಗ್ರೆಸ್ ನ ಜೆ.ಆರ್.ಲೋಬೊ 35579 ಮತಗಳನ್ನು ಪಡೆದಿದ್ದಾರೆ. ಕಾಮತ್ 21592 ಮತಗಳಿಂದ ಮುಂದಿದ್ದಾರೆ. ಮಂಗಳೂರು ನಗರ ಉತ್ತರದಲ್ಲಿ ಕ್ಷೇತ್ರದಲ್ಲಿ 10 ನೇ ಸುತ್ತಿನ ಎಣಿಕೆ ಬಳಿಕ ಬಿಜೆಪಿಯ ಡಾ.ವೈ.ಭರತ್ ಶೆಟ್ಟಿ 61,892 ಮತಗಳನ್ನು ಹಾಗೂ ಕಾಂಗ್ರೆಸ್ನ ಇನಾಯತ್ ಅಲಿ 34,856 ಮತಗಳನ್ನು ಗಳಿಸಿದ್ದಾರೆ. ಭರತ್ ಶೆಟ್ಟಿ ಅವರು 27,046 ಮತಗಳ ಮುನ್ನಡೆ ಹೊಂದಿದ್ದಾರೆ.ಮಂಗಳೂರು ಕ್ಷೇತ್ರದಲ್ಲಿ 9 ನೇ ಸುತ್ತಿನ ಬಳಿಕ ಕಾಂಗ್ರೆಸ್ ನ ಯು.ಟಿ.ಖಾದರ್ 51372 ಹಾಗೂ ಬಿಜೆಪಿಯ ಸತೀಶ್ ಕುಂಪಲ 31181 ಮತಗಳಿಸಿದ್ದು, ಖಾದರ್ 19191 ಮತಗಳ ಮುನ್ನಡೆ ಹೊಂದಿದ್ದಾರೆ. ಬಂಟ್ವಾಳದಲ್ಲಿ 10ನೇ ಸುತ್ತಿನ ಬಳಿಕ ಬಿಜೆಪಿಯ ರಾಜೇಶ್ ನಾಯ್ಕ್ ಉಳಿಪಾಡಿ 63490 ಮತ್ತು ಕಾಂಗ್ರೆಸ್ ನ ಬಿ.ರಮನಾಥ ರೈ 45861 ಮತಗಳನ್ನು ಗಳಿಸಿದ್ದು ರಾಜೇಶ್ ನಾಯ್ಕ್ 17,619 ಮತಗಳ ಮುನ್ನಡೆ ಹೊಂದಿದ್ದಾರೆ. ಪುತ್ತೂರು ಕ್ಷೇತ್ರದಲ್ಲಿ12 ನೇ ಸುತ್ತಿನ ಬಳಿಕ ಕಾಂಗ್ರೆಸ್ ನ ಅಶೋಕ್ ಕುಮಾರ್ ರೈ 48,257 ಹಾಗೂ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ 48,020 ಮತ ಗಳಿಸಿದ್ದು ಅಶೋಕ್ ರೈ 237 ಮತಗಳ ಮುನ್ನಡೆ ಹೊಂಙಲದಿದ್ದಾರೆ. ಬಿಜೆಪಿಯ ಆಶಾ ತಿಮ್ಮಪ್ಪ ಗೌಡ 29232 ಮತಗಳನ್ನು ಗಳಿಸಿದ್ದಾರೆ. ಸುಳ್ಯ ಕ್ಷೇತ್ರದಲ್ಲಿ 10 ನೇ ಸುತ್ತಿನ ಬಳಿಕ ಬಿಜೆಪಿಯ ಭಾಗಿರಥಿ ಮುರುಳ್ಯ 56384 ಹಾಗೂ ಕಾಂಗ್ರೆಸ್ನ ಜಿ. ಕೃಷ್ಣಪ್ಪ 37780 ಮತಗಳನ್ನು ಗಳಿಸಿದ್ದಾರೆ. ಭಾಗಿರಥಿ 18604 ಮತಗಳ ಮುನ್ನಡೆ ಹೊಂದಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ 13 ಸುತ್ತು ಹಾಗೂ ಇನ್ನು ಕೆಲವು ಕ್ಷೇತ್ರಗಳಲ್ಲಿ 10 ಸುತ್ತುಗಳ ಎಣಿಕೆ ಮುಗಿದಿದೆ.
ವಿಜಯಪುರ ಜಿಲ್ಲೆ ಎಂಟು ಕ್ಷೇತ್ರ
ಕ್ಷೇತ್ರ; ಪಕ್ಷ; ಮುನ್ನಡೆ; ಸುತ್ತು
ಮುದ್ದೇಬಿಹಾಳ;ಕಾಂಗ್ರೆಸ್; 5900; 15
ದೇವರ ಹಿಪ್ಪರಗಿ; ಜೆಡಿಎಸ್;15,396; 14
ಬಸವನ ಬಾಗೇವಾಡಿ; ಕಾಂಗ್ರೆಸ್; 4090; 09
ಬಬಲೇಶ್ವರ; ಕಾಂಗ್ರೆಸ್; 10,367; 12
ವಿಜಯಪುರ ನಗರ; ಬಿಜೆಪಿ; 21,146;10
ನಾಗಠಾಣ;ಕಾಂಗ್ರೆಸ್;23,814; 12
ಇಂಡಿ;ಕಾಂಗ್ರೆಸ್;8734;17
ಸಿಂದಗಿ; ಕಾಂಗ್ರೆಸ್;4544; 12
ಅರಸೀಕೆರೆ ಹದಿನಾರನೇ ಸುತ್ತು ಮುಕ್ತಾಯ
ಕಾಂಗ್ರೆಸ್ - ಕೆ.ಎಂ.ಶಿವಲಿಂಗೇಗೌಡ - 75,742
ಜೆಡಿಎಸ್ - ಎನ್.ಆರ್.ಸಂತೋಷ್
- 62172
13570 ಮತಗಳ ಅಂತರದಿಂದ ಕೆ.ಎಂ.ಶಿವಲಿಂಗೇಗೌಡ ಮುನ್ನಡೆ
ಬೆಂಗಳೂರು ಗ್ರಾಮಾಂತರ
ದೊಡ್ಡಬಳ್ಳಾಪುರ:
ಬಿಜೆಪಿ 16ನೇ ಸುತ್ತು.
ಬಿಜೆಪಿ - 69902
ಕಾಂಗ್ರೆಸ್ : 42617
ಜೆಡಿಎಸ್ :29688
ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು 27283 ಮತಗಳಿಂದ ಮುನ್ನಡೆ.
ದೊಡ್ಡಬಳ್ಳಾಪುರ ಬಹುತೇಕ ಬಿಜೆಪಿ ತೆಕ್ಕೆಗೆ
4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು, 8 ಕಡೆ ಭರ್ಜರಿ ಮುನ್ನಡೆ
ಬೆಳಗಾವಿ: ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ 12ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.
ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಣೇಶ ಹುಕ್ಕೇರಿ 38,606 ಮತಗಳ ಮುನ್ನಡೆ ಸಾಧಿಸಿದ್ದು ಗೆಲುವಿನ ಹೊಸ್ತಿಲಲ್ಲಿದ್ದಾರೆ. 10 ಸುತ್ತು ಮುಕ್ತಾಯವಾಗಿದ್ದು ಹುಕ್ಕೇರಿ ಅವರು 61,012 ಮತ ಪಡದಿದ್ದಾರೆ. ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ರಮೇಶ ಕತ್ತಿ 22,406 ಮತ ಪಡೆದಿದ್ದಾರೆ. ಕೆಲವೇ ಸುತ್ತುಗಳು ಬಾಕಿ ಇದ್ದು, ಗಣೇಶ ಗೆಲುವು ಖಚಿತವಾಗಿದೆ.
ಕುಡಚಿ ವಿಧಾನಸಭಾ ಕ್ಷೇತ್ರದಲ್ಲಿ ಕೂಡ ಕಾಂಗ್ರೆಸ್‌ನ ಮಹೇಂದ್ರ ತಮ್ಮಣ್ಣವವರ ಗೆಲವಿನ ದಡಕ್ಕೆ ಬಂದಿದ್ದಾರೆ. ಮಹೇಂದ್ರ ಅವರು 21 ಸಾವಿರಕ್ಕೂ ಹೆಚ್ಚು ಮತಗಳ ಅಂತರ ಕಾಯ್ದುಕೊಂಡಿದ್ದಾರೆ. ಇದರಿಂದ ಕಾರ್ಯಕರ್ತರಲ್ಲಿ ಹರ್ಷ ಮೂಡಿದೆ.
ಯಮಕನಮರಡಿಯಲ್ಲಿ ಕೂಡ ಸತೀಶ ಜಾರಕಿಹೊಳಿ 41 ಸಾವಿರಕ್ಕೂ ಅಧಿಕ ಮತಗಳ ಅಂತರ ಕಾಯ್ದುಕೊಂಡಿದ್ದಾರೆ. ಸದ್ಯ ಬಾಕಿ ಉಳಿದ ಮತಗಳು ಇದಕ್ಕಿಂತ ಕಡಿಮೆ ಇವೆ. ಹೀಗಾಗಿ, ಸತೀಶ ಗೆಲುವು ನಿಚ್ಛಳವಾಗಿದೆ.
ಉಳಿದಂತೆ ಸವದತ್ತಿಯಲ್ಲಿ ಕಾಂಗ್ರೆಸ್, ಕಾಗವಾಡದಲ್ಲಿ ಕಾಂಗ್ರೆಸ್, ಕಿತ್ತೂರಿನಲ್ಲಿ ಕಾಂಗ್ರೆಸ್, ರಾಮದುರ್ಗದಲ್ಲಿ ಕಾಂಗ್ರೆಸ್, ಬೆಳಗಾವಿ ಗ್ರಾಮೀಣದಲ್ಲಿ ಕಾಂಗ್ರೆಸ್, ಗೋಕಾಕದಲ್ಲಿ ಬಿಜೆಪಿ, ನಿಪ್ಪಾಣಿಯಲ್ಲಿ ಎನ್‌ಸಿಪಿ ಪಕ್ಷಗಳು ಮುನ್ನಡೆ ಸಾಧಿಸಿವೆ.
ಅಬ್ಬಯ್ಯಗೆ ‘ಹ್ಯಾಟ್ರಿಕ್’ ಗೆಲುವು; ತಲೆಕೆಳಗಾದ ಬಿಜೆಪಿ ಲೆಕ್ಕಾಚಾರ
ಹುಬ್ಬಳ್ಳಿ: ಜಿಲ್ಲೆಯ ಹುಬ್ಬಳ್ಳಿ–ಧಾರವಾಡ ಪೂರ್ವ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಪ್ರಸಾದ ಅಬ್ಬಯ್ಯ ಅವರು ಸತತ ಮೂರನೇ ಸಲ ಗೆಲುವು ಸಾಧಿಸಿದ್ದಾರೆ. ಮತ ವಿಭಜನೆಯಾಗಿ ತನ್ನ ಗೆಲುವು ಸುಲಭವಾಗಲಿದೆ ಎಂಬ ಬಿಜೆಪಿಯ ಲೆಕ್ಕಾಚಾರ ತಲೆ ಕೆಳಗಾಗಿದೆ.
ಎದುರಾಳಿ ಬಿಜೆಪಿಯ ಡಾ. ಕ್ರಾಂತಿಕಿರಣ ಅವರ ವಿರುದ್ದ 36 ಸಾವಿರ ಮತಗಳ ಅಂತರದಿಂದ ಅಬ್ಬಯ್ಯ ವಿಜಯಿಯಾಗಿದ್ದು, ಆ ಮೂಲಕ ಕ್ಷೇತ್ರದ ಇತಿಹಾಸದಲ್ಲಿ ಹ್ಯಾಟ್ರಿಕ್ ವಿಜಯ ಸಾಧಿಸಿದ ಮೊದಲ ರಾಜಕಾರಣಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಬಿಜೆಪಿ ತೊರೆದಿದ್ದ ಆ ಪಕ್ಷದ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದರು. ಎಐಎಂಐಎಂ ಮತ್ತು ಎಸ್‌ಡಿಪಿಐ ಮೊದಲ ಸಲ ಅಖಾಡಕ್ಕಿಳಿದಿದ್ದವು.
ಮುಸ್ಲಿಂ, ಲಿಂಗಾಯತ ಹಾಗೂ ದಲಿತ ಮತದಾರರು ಹೆಚ್ಚಾಗಿರುವ ಕ್ಷೇತ್ರದಲ್ಲಿ ಸತತ ಎರಡನೇ ಸಲ ಹೊಸ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕಿಳಿಸಿತ್ತು. ಜೆಡಿಎಸ್, ಎಐಎಂಐಎಂ ಹಾಗೂ ಎಸ್‌ಡಿಪಿಐ ಅಭ್ಯರ್ಥಿಗಳು ಕಾಂಗ್ರೆಸ್ ಮತಬುಟ್ಟಿಗೆ ಕೈ ಹಾಕುವುದರಿಂದ ಆಗುವ ಮತ ವಿಭಜನೆಯು ತನ್ನ ಗೆಲುವಿಗೆ ಕಾರಣವಾಗಲಿದೆ ಎಂಬ ಬಿಜೆಪಿ ಲೆಕ್ಕಾಚಾರ ತಲೆ ಕೆಳಗಾಗಿದೆ.
ಎಐಎಂಐಎಂ ನಾಯಕ ಅಸಾದುದ್ದೀನ್ ಒವೈಸಿ ಕ್ಷೇತ್ರದಲ್ಲಿ ಎರಡು ದಿನ ಇದ್ದು, ರೋಡ್ ಶೋ ಮತ್ತು ಬಹಿರಂಗ ಸಭೆ ನಡೆಸಿ ಭಾರೀ ಪ್ರಚಾರ ನಡೆಸಿದ್ದರು. ಇದು ಕಾಂಗ್ರೆಸ್‌ನ ಸಾಂಪ್ರದಾಯಿಕ ಮುಸ್ಲಿಂ ಮತಗಳನ್ನು ವಿಭಜಿಸಿ ಬಿಜೆಪಿ ಗೆಲುವಿಗೆ ಪೂರಕವಾಗಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಒವೈಸಿ ಮ್ಯಾಜಿಕ್‌ಗೆ ಮತದಾರರು ಮಣೆ ಹಾಕಿಲ್ಲ.
ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳು ಅಬ್ಬಯ್ಯ ಅವರ ಕೈ ಹಿಡಿದಿವೆ. ಅವರ ಸರಳತೆ ಮತ್ತು ಸ್ಪಂದನೆ ಸತತ ಮೂರನೇ ಸಲ ಅವರನ್ನು ಗೆಲುವಿನ ದಡ ಸೇರಿಸಿದೆ.
ಶಿರಸಿ: ಕಾಂಗ್ರೆಸ್ ನ ಭೀಮಣ್ಣ ನಾಯ್ಕ ಗೆಲುವು
ಶಿರಸಿ: ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರರಾಗಿದ್ದ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆ ಚುನಾವಣೆಯಯ ಕಾಂಗ್ರೆಸ್ ನ ಭೀಮಣ್ಣ ನಾಯ್ಕ ಎದುರು ಸೋಲು ಅನುಭವಿಸಿದ್ದಾರೆ.
ಆರಂಭದಿಂದ ಮುನ್ನಡೆ ಕಾಯ್ದುಕೊಂಡಿದ್ದ ಬಿಜೆಪಿ 10 ಸುತ್ತಿನಲ್ಲಿ ಹಿನ್ನಡೆ ಕಂಡಿತ್ತು. ಮತ್ತೆ ಚೇತರಿಕೆ ಕಂಡ ಬಿಜೆಪಿ 16ನೇ ಸುತ್ತಿನ ಎಣಿಕೆಯಲ್ಲಿ ಕೂಡ ಮುನ್ನಡೆ ಸಾಧಿಸಿತ್ತು. ಕೊನೆಯವರೆಗೂ ತೀವ್ರ ಪೈಪೋಟಿ ನೀಡಿದ ಕಾಂಗ್ರೆಸ್ ಕೊನೆಯ 2 ಸುತ್ತುಗಳಲ್ಲಿ ಮುನ್ನಡೆ ಸಾಧಿಸಿತು. ಅಂತಿಮವಾಗಿ 5800 ಮತಗಳ ಅಂತರದಿಂದ ಕಾಂಗ್ರೆಸ್ ನ ಭೀಮಣ್ಣ ನಾಯ್ಕ ಅವರು ಗೆಲುವಿನ ನಗೆ ಬೀರಿದರು.
ತಿ.ನರಸೀಪುರದಲ್ಲಿ ಮಾಜಿ ಸಚಿವ ಕಾಂಗ್ರೆಸ್‌ನ ಡಾ.ಎಚ್.ಸಿ.ಮಹದೇವಪ್ಪಗೆ ಗೆಲುವು. ಅಧಿಕೃತ ಘೋಷಣೆಯಷ್ಟೆ ಬಾಕಿ.
17ನೇ ಸುತ್ತಿನಲ್ಲಿ 77884 ಮತಗಳನ್ನು ಪಡೆದು ಜೆಡಿಎಸ್‌ನ ಹಾಲಿ ಶಾಸಕ ಎಂ.ಅಶ್ವಿನ್‌ಕುಮಾರ್ (59265) ವಿರುದ್ಧ 18,619 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.
ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕನಕಪುರದಲ್ಲಿ ದಾಖಲೆಯ ಗೆಲುವಿನತ್ತ ಹೆಜ್ಜೆ ಇಟ್ಟಿದ್ದಾರೆ.
ಕ್ಷೇತ್ರದಲ್ಲಿ ಈ ಬಾರಿ ಒಟ್ಟು 1.92 ಲಕ್ಷ ಮತಗಳು ಚಲಾವಣೆ ಆಗಿದ್ದು, ಇದರಲ್ಲಿ 1 ಲಕ್ಷ ಮತಗಳು ಈಗಾಗಲೇ ಎಣಿಕೆ ಆಗಿವೆ. ಡಿ.ಕೆ. ಶಿವಕುಮಾರ್ 70 ಸಾವಿರಕ್ಕೂ ಅಧಿಕ ಮತ ಗಳಿಸುವ ಮೂಲಕ ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಬಿ. ನಾಗರಾಜು 12 ಸಾವಿರ ಹಾಗೂ ಬಿಜೆಪಿ ಅಭ್ಯರ್ಥಿ ಆರ್. ಅಶೋಕ್ ಕೇವಲ 10 ಸಾವಿರ ಮತ ಪಡೆದಿದ್ದಾರೆ.
ಪುತ್ತೂರು ಪುತ್ತಿಲ ಮುನ್ನಡೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕ್ಷೇತ್ರದಲ್ಲಿ 13ನೇ ಸುತ್ತಿನ ಎಣಿಕೆ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ 256 ಮತಗಳ ಮುನ್ನಡೆಯಲ್ಲಿದ್ದಾರೆ. ಅಶೋಕ್ ಕುಮಾರ್ 52255 ಹಾಗೂ ಅರುಣ್ ಪುತ್ತಿಲ 51,999 ಮತ ಗಳಿಸಿದ್ದಾರೆ.
ಬಿಜೆಪಿಯ ಆಶಾ ತಿಮ್ಮಪ್ಪ ಗೌಡ 31,304 ಮತಗಳನ್ನು ಗಳಿಸಿದ್ದಾರೆ
ಎಂಟು ಕ್ಷೇತ್ರಗಳಲ್ಲಿ ಎರಡರಲ್ಲಿ ಕಾಂಗ್ರೆಸ್ ಹಾಗೂ ಆರರಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ. ಸ್ಪರ್ಧೆಯಲ್ಲಿರುವ ಕಾಂಗ್ರೆಸ್ ನ ಎಲ್ಲ ಆರು ಶಾಸಕರು ಮುನ್ನಡೆ ಕಾಯ್ದುಕೊಂಡಿದ್ದಾರೆ.
ರಾಮನಗರ: ಮುಗ್ಗರಿಸಿದ ಜೆಡಿಎಸ್, ಗೆಲುವಿನ ಅಲೆಯಲ್ಲಿ ಕಾಂಗ್ರೆಸ್
ರಾಮನಗರ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರರಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದ್ದು, ಜೆಡಿಎಸ್ ತನ್ನ ಭದ್ರಕೋಟೆಯಲ್ಲೇ ಮುಗ್ಗರಿಸಿದೆ.
ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜಯ ಖಾತ್ರಿಯಾಗಿದೆ. ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಭಾರಿ ಹಿನ್ನಡೆ ಅನುಭವಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಗೆಲುವಿನ ಸನಿಹಕ್ಕೆ ಬಂದಿದ್ದಾರೆ. ಮಾಗಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ. ಬಾಲಕೃಷ್ಣ ಸಹ ಮುನ್ನಡೆ ಕಂಡಿದ್ದಾರೆ. ಚನ್ನಪಟ್ಟಣದಲ್ಲಿ ಮಾತ್ರ ಎಚ್.ಡಿ. ಕುಮಾರಸ್ವಾಮಿ ಮುನ್ನಡೆ ಕಾಯ್ದುಕೊಂಡಿದ್ದು, ಬಿಜೆಪಿಯ ಸಿ.ಪಿ. ಯೋಗೇಶ್ವರ್ ನಿರಾಸೆ ಅನುಭವಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಇಲ್ಲಿ 3 ಕ್ಷೇತ್ರಗಳಲ್ಲಿ ಜೆಡಿಎಸ್ ಹಾಗೂ 1ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ್ದರು.ಈ ಬಾರಿ ಈ ಫಲಿತಾಂಶ ಉಲ್ಟಾ ಆಗಿದೆ.
ಹೊಸಕೋಟೆ: ಕಾಂಗ್ರೆಸ್ ಶರತ್ : 70048
ಬಿಜೆಪಿ ಎಂಟಿಬಿ ನಾಗರಾಜ್ : 67804
ನೆಲಮಂಗಲ:
ಕಾಂಗ್ರೆಸ್: 47083
ಬಿಜೆಪಿ:16321
ಜೆಡಿಎಸ್: 29393
17690 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸಯ್ಯ ಮುನ್ನಡೆ
ಯಲ್ಲಾಪುರದಲ್ಲಿ ಬಿಜೆಪಿ ಗೆಲುವು
ಶಿರಸಿ: ಯಲ್ಲಾಪುರ ಮುಂಡಗೋಡ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ.
ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ (72758) ಹಾಗೂ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ (68941) ನಡುವೆ ಜಿದ್ದಾಜಿದ್ದಿಯ ಹೋರಾಟದಲ್ಲಿ ಹೆಬ್ಬಾರ್ ಅವರು 3817 ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ.
ಹೊಸಕೋಟೆ: ಕಾಂಗ್ರೆಸ್ ಮುನ್ನಡೆ
ಕಾಂಗ್ರೆಸ್ ಶರತ್ : 70048
ಬಿಜೆಪಿ ಎಂಟಿಬಿ ನಾಗರಾಜ್ : 67804
ನೆಲಮಂಗಲ:
ಕಾಂಗ್ರೆಸ್: 47083
ಬಿಜೆಪಿ:16321
ಜೆಡಿಎಸ್: 29393
17690 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸಯ್ಯ ಮುನ್ನಡೆ
ಆರ್. ಅಶೋಕ್ 43 ಸಾವಿರ ಮತಗಳ ಮುನ್ನಡೆ
ಬೆಂಗಳೂರಿನ ಪದ್ಮನಾಭನಗರ 12ನೇ ಸುತ್ತು
ಬಿಜೆಪಿಯ ಆರ್. ಅಶೋಕ್: 63,485
ಕಾಂಗ್ರೆಸ್‌ನ ವಿ. ರಘುನಾಥ್ ನಾಯ್ಡು: 19,896
ಮುನ್ನಡೆ: ಬಿಜೆಪಿ 43,589
ಗೆಲುವಿನ ಸನಿಹ ಜನಾರ್ದನ ರೆಡ್ಡಿ
ಕೊಪ್ಪಳ: ಗಂಗಾವತಿ ಕ್ಷೇತ್ರದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಜನಾರ್ದನ ರೆಡ್ಡಿ ಗೆಲುವಿನ ಸನಿಹ ಬಂದಿದ್ದಾರೆ.
ರೆಡ್ಡಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ನಡುವೆ ಒಂಬತ್ತನೇ ಸುತ್ತಿನ ಬಳಿಕ ತುರುಸಿನ ಪೈಪೋಟಿ ಏರ್ಪಟ್ಟಿದೆ.
ರೆಡ್ಡಿ 46,031, ಇಕ್ಬಾಲ್ ಅನ್ಸಾರಿ ಹಾಗೂ 43,315 ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ 20,365 ಮತಗಳನ್ನು ಪಡೆದಿದ್ದಾರೆ.
ಶಿಗ್ಗಾವಿ ಕ್ಷೇತ್ರ– 17ನೇ ಸುತ್ತು
ಬಸವರಾಜ ಬೊಮ್ಮಾಯಿ (ಬಿಜೆಪಿ)– 99,073
ಯಾಸಿರ್ ಖಾನ್ ಪಠಾಣ್ (ಕಾಂಗ್ರೆಸ್)– 63,732
ಶಶಿಧರ ಯಲಿಗಾರ (ಜೆಡಿಎಸ್)– 13,794
ಬೊಮ್ಮಾಯಿಗೆ 35,441 ಮತಗಳ ಮುನ್ನಡೆ
ರಾಮಲಿಂಗಾರೆಡ್ಡಿ 11 ಸಾವಿರ ಮತಗಳ ಮುನ್ನಡೆ
ಬೆಂಗಳೂರಿನ ಬಿಟಿಎಂ ಲೇಔಟ್ 14ನೇ ಸುತ್ತು
ಕಾಂಗ್ರೆಸ್: ರಾಮಲಿಂಗಾರೆಡ್ಡಿ 56,884
ಬಿಜೆಪಿ: ಕೆ.ಆರ್. ಶ್ರೀಧರ್ ರೆಡ್ಡಿ 45,082
ಮುನ್ನಡೆ: ಕಾಂಗ್ರೆಸ್ 11,802
ಬೆಂಗಳೂರು: ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್‌ನ ಜಮೀರ್ ಅಹಮದ್ ಅವರು ಭರ್ಜರಿ ಜಯ ಸಾಧಿಸಿದ್ದಾರೆ. 53 ಸಾವಿರ ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ. ಬಿಜೆಪಿಯ ಭಾಸ್ಕರ್ ರಾವ್ ಮೊದಲ ಸುತ್ತಿನಲ್ಲಿ ಅಷ್ಟೆ ಮುನ್ನಡೆ ಕಾಯ್ದುಕೊಂಡಿದ್ದರು. ಅದಾದ ಮೇಲೆ ಎಲ್ಲ ಸುತ್ತಿನಲ್ಲೂ ಜಮೀರ್ ಅವರೇ ಮುನ್ನಡೆ ಕಾಯ್ದುಕೊಂಡು ಭರ್ಜರಿ ಜಯ ಗಳಿಸಿದರು.
ಕಾಂಗ್ರೆಸ್ 129, ಬಿಜೆಪಿ 66, ಜೆಡಿಎಸ್ 22 ಮುನ್ನಡೆ ಸಾಧಿಸಿವೆ.
ಸಚಿವರಾದ ಚಿಕ್ಕಬಳ್ಳಾಪುರದಲ್ಲಿ ಕೆ. ಸುಧಾಕರ್, ಚಾಮರಾಜನಗರದಲ್ಲಿ ವಿ.ಸೋಮಣ್ಣ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿ.ಸಿ. ಪಾಟೀಲ್, ನಿಖಿಲ್ ಕುಮಾರಸ್ವಾಮಿ ಮುಂತಾದ ಘಟಾನುಘಟಿಗಳಿಗೆ ಸೋಲಾಗಿದೆ.
ವರುಣ 7ನೇ ಸುತ್ತು: ಮಾಜಿ ಸಿಎಂ ಸಿದ್ದರಾಮಯ್ಯ ಮುನ್ನಡೆ
ಕಾಂಗ್ರೆಸ್ ನ ಸಿದ್ದರಾಮಯ್ಯ - 45075
ಬಿಜೆಪಿಯ ವಿ ಸೋಮಣ್ಣ - 26049
ಸಿದ್ದರಾಮಯ್ಯಗೆ 19025 ಮತಗಳ ಮುನ್ನಡೆ
ಹುಣಸೂರು 15ನೇ ಸುತ್ತು
ಕಾಂಗ್ರೆಸ್ ನ ಮಂಜುನಾಥ್ 69890
ಜೆಡಿಎಸ್ ನ ಹರೀಶ್‌ಗೌಡ 73357
ಜೆಡಿಎಸ್ ಗೆ 3467 ಮತಗಳ ಮುನ್ನಡೆ
ಹಾಲಿ ಶಾಸಕ ಮಂಜುನಾಥ್ ಹಿನ್ನಡೆ
ಒಟ್ಟು ಚಲಾವಣೆಯಾದ ಮತಗಳು 199945
ಎಣಿಕೆಯಾಗಿರುವ ಮತಗಳು
154321
ಎಣಿಕೆಯಾಗ ಬೇಕಿರುವ ಮತಗಳು 45624
ನಂಜನಗೂಡು 7ನೇ ಸುತ್ತು
ಕಾಂಗ್ರೆಸ್ ನ ದರ್ಶನ್ ಧ್ರುವನಾರಾಯಣ್ - 45157
ಬಿಜೆಪಿಯ ಹರ್ಷವರ್ಧನ್ - 21337
ಕಾಂಗ್ರೆಸ್ ಗೆ 23820 ಮತಗಳ ಮುನ್ನಡೆ
ಒಟ್ಟು ಚಲಾವಣೆಯಾದ ಮತಗಳು 174838
ಎಣಿಕೆಯಾದ ಮತಗಳು 68287
ಎಣಿಕೆ ಆಗಬೇಕಿರುವ ಮತಗಳು 106551
ಟಿ ನರಸೀಪುರ ಅಂತಿಮ ಸುತ್ತು
ಕಾಂಗ್ರೆಸ್‌ನ ಡಾ ಹೆಚ್ ಸಿ ಮಹದೇವಪ್ಪ ಭರ್ಜರಿ ಗೆಲುವು
ಕಾಂಗ್ರೆಸ್ ನ ಡಾ ಹೆಚ್ ಸಿ ಮಹದೇವಪ್ಪ - 77884
ಜೆಡಿಎಸ್ ನ ಅಶ್ವಿನ್ ಕುಮಾರ್ 59265
ಕಾಂಗ್ರೆಸ್ ಗೆ 18619 ಮತಗಳ ಮುನ್ನಡೆ
ಚಾಮುಂಡೇಶ್ವರಿ 15ನೇ ಸುತ್ತು
ಜಿ ಟಿ ದೇವೇಗೌಡ (ಜೆಡಿಎಸ್) 66203
ಮಾವಿನಹಳ್ಳಿ ಸಿದ್ದೇಗೌಡ (ಕಾಂಗ್ರೆಸ್) 45354
ಜೆಡಿಎಸ್ ಗೆ 20849 ಮತಗಳ ಮುನ್ನಡೆ
ಹುಣಸೂರು 17ನೇ ಸುತ್ತು
ಕಾಂಗ್ರೆಸ್ ನ ಮಂಜುನಾಥ್ 80809
ಜೆಡಿಎಸ್ ನ ಹರೀಶ್‌ಗೌಡ 82899
ಜೆಡಿಎಸ್ ಗೆ 2090 ಮತಗಳ ಮುನ್ನಡೆ
ಹಾಲಿ ಶಾಸಕ ಮಂಜುನಾಥ್ ಹಿನ್ನಡೆ
ಒಟ್ಟು ಮತಗಳು 199945
ಎಣಿಕೆಯಾಗಿರುವ ಮತಗಳು 176318
ಎಣಿಕೆ ಆಗಬೇಕಿರುವ ಮತಗಳು 23627
ಚಾಮರಾಜ 16ನೇ ಸುತ್ತು
ಕಾಂಗ್ರೆಸ್‌ನ ಹೆರೀಶ್‌ಗೌಡ ಗೆಲುವಿನ ಹಾದಿಯಲ್ಲಿ
ಬಿಜೆಪಿ ಎಲ್ ನಾಗೇಂದ್ರ 56586
ಕಾಂಗ್ರೆಸ್ ನ ಹರೀಶ್ ಗೌಡ 67979
ಕಾಂಗ್ರೆಸ್ ಗೆ 5716 ಮತಗಳ ಮುನ್ನಡೆ
ಒಟ್ಟು ಮತಗಳು 150322
ಎಣಿಕೆಯಾದ ಮತಗಳು 138495
ಎಣಿಕೆ ಆಗಬೇಕಿರುವ ಮತಗಳು 11827
ಮಡಿಕೇರಿ: ಕೊಡಗು ಜಿಲ್ಲೆಯ ಎರಡೂ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯ ಗಳಿಸಿದೆ.
ವಿರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿಯ ಕೆ.ಜಿ.ಬೋಪಯ್ಯ 79,500, ಕಾಂಗ್ರೆಸ್ ಎ.ಎಸ್.ಪೊನ್ನಣ್ಣ 83,791 ಮತಗಳನ್ನು ಪಡೆದಿದ್ದು ಒಟ್ಟು 4,291ಮತಗಳ ಗೆಲುವನ್ನು ಕಾಂಗ್ರೆಸ್ ಸಾಧಿಸಿದೆ.
20ನೇ ಸುತ್ತು
ಮಡಿಕೇರಿ ಕ್ಷೇತ್ರದಲ್ಲಿ ,,20ನೇ ಸುತ್ತಿನ ಅಂತ್ಯಕ್ಕೆ ಕಾಂಗ್ರೆಸ್ ನ ಮಂತರ್ ಗೌಡ , 83,949, ಬಿಜೆಪಿಯ ಎಂ.ಪಿ.ಅಪ್ಪಚ್ಷುರಂಜನ್ 79,249
ಕಾಂಗ್ರೆಸ್ 4,700ಮತಗಳ ಮುನ್ನಡೆ ಪಡೆದು ಬಹುತೇಕ ಗೆಲುವು ಸಾಧಿಸಿದೆ. ಇನ್ನು ಅಂಚೆ ಮತದಾನದ ಫಲಿತಾಂಶ ಬರಬೇಕಿದೆ.
ತುಮಕೂರು ನಗರದಲ್ಲಿ ಬಿಜೆಪಿ ಗೆಲುವು
ತುಮಕೂರು: ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಬಿ. ಜ್ಯೋತಿಗಣೇಶ್ ಗೆಲುವು. 3,600 ಮತಗಳ ಅಂತದರಲ್ಲಿ ಜಯ.
ರಾಮಲಿಂಗಾರೆಡ್ಡಿ 11 ಸಾವಿರ ಮತಗಳ ಮುನ್ನಡೆ
ಬೆಂಗಳೂರಿನ ಬಿಟಿಎಂ ಲೇಔಟ್ 14ನೇ ಸುತ್ತು
ಕಾಂಗ್ರೆಸ್: ರಾಮಲಿಂಗಾರೆಡ್ಡಿ 56,884
ಬಿಜೆಪಿ: ಕೆ.ಆರ್. ಶ್ರೀಧರ್ ರೆಡ್ಡಿ 45,082
ಮುನ್ನಡೆ: ಕಾಂಗ್ರೆಸ್ 11,802
ಬೆಂಗಳೂರು: ಭಾರಿ ಕುತೂಹಲ ಮೂಡಿಸಿದ್ದ ರಾಜಾಜಿನಗರ ಕ್ಷೇತ್ರದಲ್ಲಿ ಬಿಜೆಪಿಯ ಎಸ್.ಸುರೇಶ್‌ಕುಮಾರ್ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನ ಪುಟ್ಟಣ್ಣ ಸೋಲು ಕಂಡಿದ್ದಾರೆ.
ಮತ ಎಣಿಕೆ ಆರಂಭದಿಂದಲೂ ಇಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಒಂದು ಸುತ್ತಿನಲ್ಲಿ ಪಟ್ಟಣ್ಣ, ಮತ್ತೊಂದು ಸುತ್ತಿನಲ್ಲಿ ಸುರೇಶ್ ಕುಮಾರ್ ಅವರು ಮುನ್ನಡೆ ಪಡೆಯುತ್ತಿದ್ದರು. ಅಂತಿಮ ಎರಡು ಸುತ್ತಿನಲ್ಲಿ ಸುರೇಶ್ ಕುಮಾರ್ ಅವರಿಗೆ ವಿಜಯಮಾಲೆ ಒಲಿದಿದೆ.
ದಾಸರಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ
ಬೆಂಗಳೂರು: ತೀವ್ರ ಪೈಪೋಟಿಯಿಂದ ಕೂಡಿದ್ದ ದಾಸರಹಳ್ಳಿ ಕ್ಷೇತ್ರದಲ್ಲಿ ಬಿಜೆಪಿಯ ಎಸ್.ಮುನಿರಾಜು ಮುನ್ನಡೆ ಸಾಧಿಸಿದ್ದಾರೆ.
ಇದುವರೆಗೆ ಮತ ಎಣಿಕೆ ಅನ್ವಯ, ಮುನಿರಾಜು ಅವರು 52,164 ಮತಗಳನ್ನು ಪಡೆದಿದ್ದು, ಜೆಡಿಎಸ್ ಅಭ್ಯರ್ಥಿ ಎಸ್. ಮಂಜುನಾಥ್ ಅವರು 44,571 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಜಿ. ಧನಂಜಯ 18971 ಮತಗಳನ್ನು ಪಡೆದಿದ್ದಾರೆ.
ಇಂಡಿ: ಯಶವಂತ ರಾಯಗೌಡ ಹ್ಯಾಟ್ರಿಕ್ ಸಾಧನೆ
ವಿಜಯಪುರ: ಭೀಮಾ ತೀರದ ಇಂಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ,ಶಾಸಕ ಯಶವಂತ ರಾಯಗೌಡ ಪಾಟೀಲ ಮೂರನೇ ಬಾರಿಗೆ ಜಯಗಳಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಬಿ.ಡಿ.ಪಾಟೀಲ ಅವರ ವಿರುದ್ಧ 9690 ಮತಗಳ ಅಂತರದಿಂದ ವಿಜಯ ಸಾಧಿಸಿದ್ದಾರೆ.
ಯಶವಂತ ರಾಯಗೌಡರಿಗೆ 70,267 ಮತಗಳು, ಜೆಡಿಎಸ್ ಅಭ್ಯರ್ಥಿ ಬಿ.ಡಿ.ಪಾಟೀಲರಿಗೆ 60677 ಮತಗಳು ಲಭಿಸಿವೆ. ಬಿಜೆಪಿ ಅಭ್ಯರ್ಥಿ ಕಾಸುಗೌಡ ಬಿರಾದಾರ ಮೂರನೇ ಸ್ಥಾನ ಲಭಿಸಿದೆ.
ಹೊಸದುರ್ಗ: ಕಾಂಗ್ರೆಸ್ ಗೆಲುವು
ಚಿತ್ರದುರ್ಗ: ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಜಿ.ಗೋವಿಂದಪ್ಪ ಅವರು 32,440 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಕಾಂಗ್ರೆಸ್ ನ ಬಿ.ಜಿ.ಗೋವಿಂದಪ್ಪ 79,967 ಮತ ಪಡೆದಿದ್ದಾರೆ. ಬಿಜೆಪಿಯ ಎಸ್.ಲಿಂಗಮೂರ್ತಿ 47,527 ಮತ ಪಡೆದು ಪರಾಭವಗೊಂಡಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಮಾಜಿ ಶಾಸಕ ಗೂಳಿಹಟ್ಟಿ ಡಿ.ಶೇಖರ್ 10,387 ಪಡೆದಿದ್ದಾರೆ. ಎಲ್ಲ 18 ಸುತ್ತು ಮತ ಎಣಿಕೆ ಮುಕ್ತಾಯವಾಗಿದ್ದು, ಗೆಲುವು ಸಾಧಿಸಿದ ಅಭ್ಯರ್ಥಿಯ ಘೋಷಣೆ ಮಾತ್ರ ಬಾಕಿ ಇದೆ.
ಚಿಂತಾಮಣಿಯಲ್ಲಿ ಡಾ.ಎಂ.ಸಿ ಸುಧಾಕರ್- ಗೆಲುವು
ಚಿಕ್ಕಬಳ್ಳಾಪುರ: ಚಿಂತಾಮಣಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಎಂ.ಸಿ.ಸುಧಾಕರ್- ಗೆಲುವು ಸಾಧಿಸಿದ್ದಾರೆ.
ಕೋಲಾರ ಸಂಸದ ಕೆ.ಎಚ್.ಮುನಿಯಪ್ಪ- ಅವರ ಮೇಲಿನ ಮುನಿಸಿನಿಂದ 2013 ಮತ್ತು 2018ರ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಪಕ್ಷೇತರ ಅಭ್ಯರ್ಥಿ ಆಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಕಳೆದ ವರ್ಷ ಮತ್ತೆ ಕಾಂಗ್ರೆಸ್ ಸೇರಿಸಿದ್ದರು.
ಸುಧಾಕರ್- ಅವರ ಕುಟುಂಬ ಚಿಂತಾಮಣಿ ಕ್ಷೇತ್ರದಲ್ಲಿ 1951 ಚುನಾವಣೆಯಿಂದ ಇಲ್ಲಿಯವರೆಗೂ ಸ್ಪರ್ಧಿಸಿದೆ.
ಅವರ ತಾತ ಆಂಜನೇಯ ರೆಡ್ಡಿ ಇಲ್ಲಿ ಎರಡು ಬಾರಿ ಶಾಸಕರಾಗಿದ್ದರು. ಅವರ ತಂದೆ ಮಾಜಿ ಸಚಿವ ಚೌಡರೆಡ್ಡಿ ಐದು ಬಾರಿ ಶಾಸಕರಾಗಿದ್ದರು. ಡಾ.ಎಂ.ಸಿ.ಸುಧಾಕರ್- 2004 ಮತ್ತು 2008ರಲ್ಲಿ ಕಾಂಗ್ರೆಸ್ ನಿಂದ ಗೆಲುವು ಸಾಧಿಸಿದ್ದರು.
ಗದಗ ಜಿಲ್ಲೆ ಫಲಿತಾಂಶ
ಗದಗ; ಎಚ್ ಕೆ ಪಾಟೀಲ ಗೆಲುವು (ಕಾಂಗ್ರೆಸ್)
ಶಿರಹಟ್ಟಿ ಮೀಸಲು ಕ್ಷೇತ್ರ; ಡಾ.ಚಂದ್ರು ಲಮಾಣಿ (ಬಿಜೆಪಿ)
ನರಗುಂದ; ಸಿ.ಸಿ.ಪಾಟೀಲ (ಬಿಜೆಪಿ)
ರೋಣ; ಜಿ.ಎಸ್.ಪಾಟೀಲ (ಕಾಂಗ್ರೆಸ್)
ತುಮಕೂರು ಜಿಲ್ಲೆ ಫಲಿತಾಂಶ
ತುಮಕೂರು ಸಿಟಿ– ಬಿಜೆಪಿ ಜ್ಯೋತಿ ಗಣೇಶ್
ಗ್ರಾಮೀಣ– ಬಿಜೆಪಿ ಸುರೇಶ್ ಗೌಡ
ಕೊರಟಗೆರೆ– ಕಾಂಗ್ರೆಸ್ ಪರಮೇಶ್ವರ
ಮಧುಗಿರಿ– ಕಾಂಗ್ರೆಸ್ ಕೆ.ಎನ್.ರಾಜಣ್ಣ
ಪಾವಗಡ– ಕಾಂಗ್ರೆಸ್ ವೆಂಕಟೇಶ್
ಶಿರಾ– ಕಾಂಗ್ರೆಸ್ ಟಿ.ಬಿ.ಜಯಚಂದ್ರ
ಚಿಕ್ಕನಾಯಕನಹಳ್ಳಿ– ಜೆಡಿಎಸ್ ಸುರೇಶ್ ಬಾಬು
ತಿಪಟೂರು– ಕಾಂಗ್ರೆಸ್ ಷಡಕ್ಷರಿ ಮುನ್ನಡೆ
ತುರುವೇಕೆರೆ– ಜೆಡಿಎಸ್ ಎಂ.ಟಿ.ಕೃಷ್ಣಪ್ಪ
ಗುಬ್ಬಿ– ಕಾಂಗ್ರೆಸ್ ಶ್ರೀನಿವಾಸ್
ಕುಣಿಗಲ್– ಕಾಂಗ್ರೆಸ್ ಡಾ.ರಂಗನಾಥ್
ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್‌ನ ಜಿ.ಡಿ.ಹರೀಶ್ ಗೌಡ ಗೆಲುವು
ಮೈಸೂರು: ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್‌ನ ಜಿ.ಡಿ.ಹರೀಶ್ ಗೌಡ ಗೆಲುವು ಸಾಧಿಸಿದ್ದಾರೆ. ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆಯಷ್ಟೆ ಬಾಕಿ.
2,412 ಮತಗಳಿಂದ ಗೆದ್ದ ಹರೀಶ್. ಹಾಲಿ ಶಾಸಕ ಕಾಂಗ್ರೆಸ್‌ನ ಎಚ್.ಪಿ.ಮಂಜುನಾಥ್ ವಿರುದ್ಧ ರೋಚಕ ಗೆಲುವು. ಮೊದಲ ಚುನಾವಣೆಯಲ್ಲೇ ಜಯದ ಸವಿ ಸವಿದ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಹರೀಶ್ ಗೌಡ. ಮಂಜುನಾಥ್ 92,254 ಮತಗಳನ್ನು ಪಡೆದಿದ್ದಾರೆ.
ಪುತ್ತೂರು ಅಶೋಕ್ ರೈ ಮುನ್ನಡೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕ್ಷೇತ್ರದಲ್ಲಿ 15ನೇ ಸುತ್ತಿನ ಎಣಿಕೆ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ 2,673 ಮತಗಳ ಮುನ್ನಡೆಯಲ್ಲಿದ್ದಾರೆ. ಅಶೋಕ್ ಕುಮಾರ್ 61,797 ಹಾಗೂ ಅರುಣ್ ಪುತ್ತಿಲ 59, 124 ಮತ ಗಳಿಸಿದ್ದಾರೆ.
ಬಿಜೆಪಿಯ ಆಶಾ ತಿಮ್ಮಪ್ಪ ಗೌಡ 34871 ಮತಗಳನ್ನು ಗಳಿಸಿದ್ದಾರೆ
ಎಂಟು ಕ್ಷೇತ್ರಗಳಲ್ಲಿ ಎರಡರಲ್ಲಿ ಕಾಂಗ್ರೆಸ್ ಹಾಗೂ ಆರರಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ. ಸ್ಪರ್ಧೆಯಲ್ಲಿರುವ ಎಲ್ಲ ಆರು ಶಾಸಕರು ಮುನ್ನಡೆ ಕಾಯ್ದುಕೊಂಡಿದ್ದಾರೆ.
ಉಡುಪಿ: ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಪಡೆದಿದ್ದು ಅಧಿಕೃತ ಘೋಷಣೆಯಷ್ಟೆ ಬಾಕಿ ಇದೆ.
ಉಡುಪಿ ಕ್ಷೇತ್ರದಿಂದ ಯಶ್ ಪಾಲ್ ಸುವರ್ಣ, ಕಾಪು ಕ್ಷೇತ್ರದಿಂದ ಗುರ್ಮೆ ಸುರೇಶ್ ಶೆಟ್ಟಿ, ಕಾರ್ಕಳ ಕ್ಷೇತ್ರದಿಂದ ವಿ.ಸುನಿಲ್ ಕುಮಾರ್, ಬೈಂದೂರು ಕ್ಷೇತ್ರದಿಂದ ಗುರುರಾಜ ಶೆಟ್ಟಿ ಗಂಟಿಹೊಳೆ, ಕುಂದಾಪುರ ಕ್ಷೇತ್ರದಿಂದ ಕಿರಣ ಕುಮಾರ್ ಕೊಡ್ಗಿ ಗೆಲುವು ಸಾಧಿಸಿದ್ದಾರೆ.
2018ರ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಐದೂ ಕ್ಷೇತ್ರಗಳನ್ನು ಗೆದ್ದಿತ್ತು.
2023ರಲ್ಲೂ ಐದೂ ಕ್ಷೇತ್ರಗಳನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಂಡಿದೆ.
ಹೊಸಮುಖಗಳಿಗೆ ಅವಕಾಶ ನೀಡುವ ಮೂಲಕ ಬಿಜೆಪಿ ಜಿಲ್ಲೆಯಲ್ಲಿ ಮಾಡಿದ ಪ್ರಯೋಗಕ್ಕೆ ಫಲ ಸಿಕ್ಕಿದೆ.
ಬಳ್ಳಾರಿ ನಗರ: 10ನೇ ಸುತ್ತು
ಕಾಂಗ್ರೆಸ್ ಭರತ್ ರೆಡ್ಡಿ- 37578
KRPP-ಲಕ್ಷ್ಮಿ ಅರುಣ-27348
BJP- ಸೋಮಶೇಖರ ರೆಡ್ಡಿ -23335
ಕಾಂಗ್ರೆಸ್- 10230 ಮುನ್ನಡೆ
ಕಂಪ್ಲಿ 14ನ ಸುತ್ತು
ಕಾಂಗ್ರೆಸ್- j.n. ಗಣೇಶ್- 81755
ಬಿಜೆಪಿ- ಸುರೇಶ್ ಬಾಬು 61948
ಕಾಂಗ್ರೆಸ್-19807 ಮುನ್ನಡೆ
ಸಂಡೂರು: 15ನೇ ಸುತ್ತು
ಕಾಂಗ್ರೆಸ್- ಇ.ತುಕಾರಾಂ- 70753
ಬಿಜೆಪಿ-ಶಿಲ್ಪ ರಾಘವೇಂದ್ರ-41892
ಕಾಂಗ್ರೆಸ್- 28861 ಮುನ್ನಡೆ
ಬಳ್ಳಾರಿ ನಗರ: 11ನೇ ಸುತ್ತು
ಕಾಂಗ್ರೆಸ್ ಭರತ್ ರೆಡ್ಡಿ- 37578
KRPP-ಲಕ್ಷ್ಮಿ ಅರುಣ-27348
BJP- ಸೋಮಶೇಖರ ರೆಡ್ಡಿ -23335
ಕಾಂಗ್ರೆಸ್- 10230 ಮುನ್ನಡೆ
ಮಂಡ್ಯ: ಮೇಲುಕೋಟೆ ಕ್ಷೇತ್ರ, ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಗೆಲುವು ಸಾಧಿಸಿದ್ದಾರೆ.
ದರ್ಶನ್ ಗೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡಿತ್ತು. 2013ರ ಚುನಾವಣೆಯಲ್ಲಿ ಸರ್ವೋದಯ ಕರ್ನಾಟಕ ಪಕ್ಷದಿಂದ ಸ್ಪರ್ಧಿಸಿದ್ದ ಕೆ.ಎಸ್.ಪುಟ್ಟಣ್ಣಯ್ಯ ಗೆದ್ದಿದ್ದರು.
ಕಲಬುರಗಿ: ಚಿತ್ತಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ, ಸೇಡಂನ ಕಾಂಗ್ರೆಸ್ ಅಭ್ಯರ್ಥಿ ಡಾ. ಶರಣಪ್ರಕಾಶ ಪಾಟೀಲ ಗೆಲುವು ಸಾಧಿಸಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ.
ಕಲಬುರಗಿ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ ಸಹ ಗೆಲುವಿನ ಸನಿಹದಲ್ಲಿದ್ದಾರೆ. ಆಳಂದ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್. ಪಾಟೀಲ, ಜೇವರ್ಗಿಯ ಡಾ. ಅಜಯ್ ಸಿಂಗ್ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಗೆಲುವು ಸಾಧಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಬಿಜೆಪಿಯವರು ಚಿತ್ತಾಪುರ ಜನತೆಗೆ ಇಷ್ಟ ಇಲ್ಲದಿದ್ದರೂ ರೌಡಿಶೀಟರ್ ನಲ್ಲಿ ಹೆಸರಿದ್ದ ಮಣಿಕಂಠ ರಾಠೋಡ ಅವರನ್ನು ಕಣಕ್ಕಿಳಿಸಿದರು. ಅವರ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರಚಾರ ನಡೆಸಿದ್ದು ಪ್ರಯೋಜನಕ್ಕೆ ಬರಲಿಲ್ಲ. ಅಂತೂ ಸತ್ಯಕ್ಕೆ ಜಯವಾಗಿದೆ ಎಂದರು.
ತಮ್ಮ ಸೋಲು ಖಚಿತವಾಗುತ್ತಿದ್ದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಸೇಡಂ ಬಿಜೆಪಿ ಅಭ್ಯರ್ಥಿ ರಾಜಕುಮಾರ ಪಾಟೀಲ ತೇಲ್ಕೂರ, ಈ ಸೋಲನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತೇನೆ. ನನ್ನ ಸೋಲಿಗೆ ಕಾರ್ಯಕರ್ತರು ಚಿಂತಿಸುವುದು ಬೇಡ. ಇನ್ನೂ ಮುಂದೆ ಲೋಕಸಭೆ ಚುನಾವಣೆ ಇದ್ದು, ಪಕ್ಷವನ್ನು ಮೊದಲಿನಿಂದ ಸಂಘಟಿಸಲಾಗುವುದು ಎಂದರು.
ವಿಜಯನಗರ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಜಯ ಸಾಧಿಸಿದವರ ವಿವರ...
ಕ್ಷೇತ್ರ; ಹೆಸರು; ಪಕ್ಷ
ವಿಜಯನಗರ ; ಎಚ್.ಆರ್. ಗವಿಯಪ್ಪ ; ಕಾಂಗ್ರೆಸ್
ಹಗರಿಬೊಮ್ಮನಹಳ್ಳಿ ; ಕೆ. ನೇಮರಾಜ ನಾಯ್ಕ ; ಜೆಡಿಎಸ್
ಹೂವಿನಹಡಗಲಿ ; ಕೃಷ್ಣ ನಾಯ್ಕ; ಬಿಜೆಪಿ
ಹರಪನಹಳ್ಳಿ ; ಎಂ.ಪಿ. ಲತಾ ಮಲ್ಲಿಕಾರ್ಜುನ ; ಪಕ್ಷೇತರೆ
ಕೂಡ್ಲಿಗಿ ; ಡಾ.ಎನ್.ಟಿ. ಶ್ರೀನಿವಾಸ್ ; ಕಾಂಗ್ರೆಸ್
ವಿಜಯನಗರ ಜಿಲ್ಲೆಯ ಚುನಾವಣಾ ಫಲಿತಾಂಶದ ವಿವರ
ಕಾಂಗ್ರೆಸ್–2
ಬಿಜೆಪಿ–01
ಜೆಡಿಎಸ್–01
ಪಕ್ಷೇತರೆ–01
ಕನಕಗಿರಿ: ಗೆಲುವಿನ ಸನಿಹ ತಂಗಡಗಿ
ಕೊಪ್ಪಳ: ಕನಕಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಿವರಾಜ ತಂಗಡಗಿ 25796 ಅಂತರದ ಭಾರಿ ಮುನ್ನಡೆ ಸಾಧಿಸಿದ್ದು, ಗೆಲುವಿನ ಸನಿಹ ಬಂದಿದ್ದಾರೆ.
ಶಿವರಾಜ ತಂಗಡಗಿ 63,108, ಬಿಜೆಪಿ ಅಭ್ಯರ್ಥಿ ಬಸವರಾಜ ಧಡೇಸೂಗೂರ 37,312 ಮತಗಳನ್ನು ಪಡೆದಿದ್ದಾರೆ.
ಮುದ್ದೇಬಿಹಾಳ: ಕಾಂಗ್ರೆಸ್ ಸಿ.ಎಸ್.ನಾಡಗೌಡ ಜಯಭೇರಿ
ವಿಜಯಪುರ: ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಸಿ.ಎಸ್.ನಾಡಗೌಡ(ಅಪ್ಪಾಜಿ) ಜಯ ಗಳಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ವಿರುದ್ಧ 7844 ಮತಗಳ ಅಂತರದಿಂದ ವಿಜಯ ಸಾಧಿಸಿದ್ದಾರೆ. ಈ ಮೂಲಕ ಆರನೇ ಬಾರಿಗೆ ಶಾಸಕರಾಗಿದ್ದಾರೆ.
ನಾಡಗೌಡ ಅವರಿಗೆ 78,598 ಹಾಗೂ ನಡಹಳ್ಳಿ ಅವರಿಗೆ 70,754 ಮತಗಳು ಲಭಿಸಿವೆ.
ತರೀಕೆರೆ ಕ್ಷೇತ್ರ9ನೇ ಸುತ್ತು
ಕಾಂಗ್ರೆಸ್-ಜಿ.ಎಚ್.ಶ್ರೀನಿವಾಸ್:38780
ಬಿಜೆಪಿ- ಡಿ.ಎಸ್.ಸುರೇಶ್: 30374
ಪಕ್ಷೇತರ- ಎಚ್.ಎಂ.ಗೋಪಿಕೃಷ್ಣ:23752
ಶೃಂಗೇರಿ ಕ್ಷೇತ್ರ 11ನೇ ಸುತ್ತು
ಬಿಜೆಪಿ- ಡಿ.ಎನ್.ಜೀ ವರಾಜ್:37361
ಕಾಂಗ್ರೆಸ್- ಟಿ.ಡಿ.ರಾಜೇಗೌಡ: 36157
ಜೆಡಿಎಸ್- ಸುಧಾಕರ್ ಶೆಟ್ಟಿ: 12866
ಬೀದರ್: ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ, ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ. ಜೆಡಿಎಸ್ ಹೀನಾಯ ಸೋಲು ಅನುಭವಿಸಿದೆ.
ಜಿಲ್ಲೆಯ ಪ್ರಭಾವಿ ರಾಜಕಾರಣಿ ಹುಮನಾಬಾದ್‌ನ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಪಾಟೀಲ ಅವರನ್ನು ಅವರದ್ದೇ ಸೋದರ ಸಂಬಂಧಿ ಬಿಜೆಪಿಯ ಸಿದ್ದು ಪಾಟೀಲ ಗೆಲುವು ಸಾಧಿಸಿದ್ದಾರೆ. ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಜೆಡಿಎಸ್‌ನ ಬಂಡೆಪ್ಪ ಕಾಶೆಂಪುರ ಅವರನ್ನು ಬಿಜೆಪಿ ಅಭ್ಯರ್ಥಿ ಶೈಲೇಂದ್ರ ಬೆಲ್ದಾಳೆ ಗೆಲುವು ಸಾಧಿಸಿದ್ದಾರೆ. ನಾಲ್ವರು ಪ್ರಭಾವಿಗಳು ಕಣದಲ್ಲಿದ್ದ ಕಾರಣ ಮತಗಳು ವಿಭಜನೆಯಾಗಿ ಬಿಜೆಪಿ ಗೆಲುವು ಸಾಧ್ಯವಾಗಿದೆ.
ಔರಾದ್ ಮೀಸಲು ಕ್ಷೇತ್ರದಿಂದ ಬಿಜೆಪಿ ಪ್ರಭು ಚವಾಣ್ ನಾಲ್ಕನೇ ಬಾರಿಗೆ ಚುನಾಯಿತರಾಗಿದ್ದಾರೆ. ಭಾಲ್ಕಿಯಲ್ಲಿ ಕಾಂಗ್ರೆಸ್‌ನ ಈಶ್ವರ ಖಂಡ್ರೆ ಹಾಗೂ ಬೀದರ್ ಕ್ಷೇತ್ರದಲ್ಲಿ ರಹೀಂ ಖಾನ್ ನಾಲ್ಕನೇ ಬಾರಿಗೆ ಗೆಲುವು ಸಾಧಿಸಿದ್ದಾರೆ.
ಕ್ಷೇತ್ರ : ಭಾಲ್ಕಿ
ಕಾಂಗ್ರೆಸ್ ಅಭ್ಯರ್ಥಿ ಈಶ್ವರ್ ಖಂಡ್ರೆ :- ಗೆಲವು
ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ :- ಸೋಲು
ಸದ್ಯ ಮತ ಅಂತರ:- 23000
====================
ಕ್ಷೇತ್ರ :- ಬಸವಕಲ್ಯಾಣ
ಕಾಂಗ್ರೆಸ್ ವಿಜಯ್ ಸಿಂಗ್:-ಸೋಲು
ಬಿಜೆಪಿ ಶರಣು ಸಲಗರ:- ಗೆಲವು
ಮತಗಳ ಅಂತರ : 500೦
=======================
ಕ್ಷೇತ್ರ: ಬಿದರ್ ದಕ್ಷಿಣ
ಕಾಂಗ್ರೆಸ್ ಅಭ್ಯರ್ಥಿ ಆಶೋಕ್ ಖೇಣಿ:- ಸೋಲು
ಬಿಜೆಪಿ ಶೈಲೇಂದ್ರ ಬೆಲದಾಳೆ:- ಗೆಲವು
ಜೆಡಿಎಸ್ ಬಂಡೆಪ್ಪ ಕಾಶೆಂಪುರ ಸೋಲು
ಮತಗಳ ಅಂತರ 400 ಬಿಜೆಪಿ ಗೆಲವು
=================
ಕ್ಷೇತ್ರ:- ಹುಮನಾಬಾದ್
ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಪಾಟೀಲ: ಸೋಲು
ಬಿಜೆಪಿ ಅಭ್ಯರ್ಥಿ ಸಿದ್ದು ಪಾಟೀಲ್: ಗೆಲವು
ಸುಮಾರು 1460 ಮತಗಳ ಅಂತರ ದಲ್ಲಿ ಬಿಜೆಪಿ ಗೆಲವು
============
ಕ್ಷೇತ್ರ: ಔರಾದ್(ಎಸ್.ಸಿ)
ಬಿಜೆಪಿ ಅಭ್ಯರ್ಥಿ ಪ್ರಭು ಚವಾಣ್:- ಗೆಲುವು
ಕಾಂಗ್ರೆಸ್ ಭೀಮಸೇನ್‌ರಾವ್ ಸಿಂಧೆ: ಸೋಲು
ಮತಗಳ ಅಂತರ :- 10000
=================×
ಕ್ಷೇತ್ರ :- ಬೀದರ್
ಕಾಂಗ್ರೆಸ್ ಅಭ್ಯರ್ಥಿ ರಹಿಂ ಖಾನ್ :-ಗೆಲವು
ಬಿಜೆಪಿ ಅಭ್ಯರ್ಥಿ ಈಶ್ವರ್ ಸಿಂಗ್ ಠಾಕೂರ್:- ಸೋಲು
ಜೆಡಿಎಸ್ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ:- ಸೋಲು
ಗೆಲುವು :- ಕಾಂಗ್ರೆಸ್
ಮತಗಳ ಅಂತರ 5000
ವಿಜಯಪುರ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ
ಅವರು ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಜಯ ಸಾಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ ಅವರ ವಿರುದ್ಧ 14, 943 ಮತಗಳ ಅಂತರದಿಂದ ಆರನೇ ಬಾರಿ ವಿಜಯ ಸಾಧಿಸಿದ್ದಾರೆ.
ಎಂ.ಬಿ.ಪಾಟೀಲ ಅವರಿಗೆ 93,008, ವಿಜುಗೌಡ ಅವರಿಗೆ 78,085 ಮತಗಳು ಲಭಿಸಿವೆ.
ಚಾಮರಾಜನಗರ: ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಎ.ಆರ್.ಕೃಷ್ಣಮೂರ್ತಿ ಅವರು ಭಾರಿ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಹಾಲಿ ಶಾಸಕ, ಬಿಜೆಪಿ ಅಭ್ಯರ್ಥಿ ಎನ್.ಮಹೇಶ್ ಹೀನಾಯ ಸೋಲು ಅನುಭವಿಸಿದ್ದಾರೆ.
18ನೇ ಸುತ್ತಿನೊಂದಿಗೆ, ಮತಗಳ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಕೃಷ್ಣಮೂರ್ತಿ 1,07,380 ಮತಗಳನ್ನು ಪಡೆದಿದ್ದಾರೆ.
ಬಿಜೆಪಿಯ ಎನ್.ಮಹೇಶ್ 48,403 ಮತಗಳನ್ನು ಗಳಿಸಿದ್ದಾರೆ.
ಅಂಚೆ ಮತಗಳ ವಿವರ ಇನ್ನಷ್ಟೇ ಸಿಗಬೇಕಿದ್ದು, 58 ಸಾವಿರಕ್ಕೂ ಹೆಚ್ಚು ಮತಗಳಿಂದ ಕೃಷ್ಣಮೂರ್ತಿ ಗೆಲುವು ಸಾಧಿಸಿದ್ದಾರೆ.
ಜೆಡಿಎಸ್ ನ ಬಿ.ಪುಟ್ಟಸ್ವಾಮಿ ಅವರು 3,855 ಮತಗಳನ್ನು ಪಡೆಯಲಷ್ಟೇ ಶಕ್ತರಾಗಿದ್ದಾರೆ.
ಶಶಿಕಲಾ ಜೊಲ್ಲೆ ಹ್ಯಾಟ್ರಿಕ್ ಗೆಲುವು
ನಿಪ್ಪಾಣಿ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಶಿಕಲಾ ಜೋಲ್ಲೆ ಗೆಲುವು
ಬಿಜೆಪಿ ಅಭ್ಯರ್ಥಿ 71684
ಎನ ಸಿ ಪಿ 64690
22 ನೇ ಸುತ್ತಿನಲ್ಲಿ 6994 ಮತಗಳ ಮುನ್ನಡೆ
ಶಶಿಕಲಾ ಜೋಲ್ಲೆ ಗೆಲುವು
ರಾಯಚೂರು: 4 ಕಾಂಗ್ರೆಸ್, 2 ಬಿಜೆಪಿ, 1 ಜೆಡಿಎಸ್
ರಾಯಚೂರು: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ಮುಕ್ತಾಯ ಹಂತದಲ್ಲಿದ್ದು ಕಾಂಗ್ರೆಸ್ ನಾಲ್ಕು ಕಡೆಗಳಲ್ಲಿ ಬಿಜೆಪಿ ಎರಡು ಕಡೆ ಹಾಗೂ ಜೆಡಿಎಸ್ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತಿವೆ.
ರಾಯಚೂರು ನಗರ ಕ್ಷೇತ್ರದ ಶಾಸಕ ಡಾ.ಶಿವರಾಜ ಪಾಟೀಲ್ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, 20 ಸುತ್ತಿನ ಎಣಿಕೆ ಪೈಕಿ ಈಗಾಗಲೇ 18 ಸುತ್ತುಗಳು ಪೂರ್ಣಗೊಂಡಿದ್ದು 4000 ಮತಗಳ ಅಂತರವನ್ನು ಕಾಯ್ದುಕೊಂಡಿದ್ದಾರೆ.
ರಾಯಚೂರು ಗ್ರಾಮೀಣ, ಮಾನ್ವಿ, ಸಿಂಧನೂರು ಹಾಗೂ ಮಸ್ಕಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿನ ಹೊಸ್ತಿಲಲ್ಲಿದೆ.
ರಾಯಬಾಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದುರ್ಯೋಧನ ಐಹೊಳೆ ಗೆಲುವು
21ನೇ ಸುತ್ತಿನಲ್ಲಿ 2631 ಮತಗಳ ಮುನ್ನಡೆ ಕಾಯ್ದುಕೊಂಡ ದುರ್ಯೋಧನ ಐಹೊಳೆ
ಬಿಜೆಪಿ ದುರ್ಯೋಧನ ಐಹೊಳೆ - 57164
ಕಾಂಗ್ರೆಸ್ ಮಹಾವೀರ ಮೋಹಿತೆ - 22550
ಜೆಡಿಎಸ್ - ಪ್ರದೀಪಕುಮಾರ ಮಾಳಗೆ - 25263
ಪಕ್ಷೇತರ ಶಂಭು ಕಲ್ಲೋಳಕರ್ - 54533
ಇನ್ನು ಅಂಚೆ ಮತಗಳ ಎಣಿಕೆ ಮಾತ್ರ ಬಾಕಿ
ಕೋಲಾರ ಜಿಲ್ಲೆ ಫಲಿತಾಂಶ
ಕ್ಷೇತ್ರ; ಗೆಲುವು
ಮುಳಬಾಗಿಲು; ಸಮೃದ್ಧಿ ಮಂಜುನಾಥ್ (ಜೆಡಿಎಸ್)
ಕೆಜಿಎಫ್; ರೂಪಕಲಾ ಎಂ. (ಕಾಂಗ್ರೆಸ್)
ಕೋಲಾರ: ಕೊತ್ತೂರು ಮಂಜುನಾಥ್ (ಕಾಂಗ್ರೆಸ್)
ದೇವರ ಹಿಪ್ಪರಗಿಯಲ್ಲಿ ಖಾತೆ ತೆರೆದ ಜೆಡಿಎಸ್
ವಿಜಯಪುರ: ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್ ಪ್ರಥಮ ಬಾರಿಗೆ ಖಾತೆ ತೆರೆದಿದೆ.
ರಾಜುಗೌಡ ಪಾಟೀಲ (ಭೀಮನಗೌಡ ಪಾಟೀಲ) ಅವರು ಬಿಜೆಪಿಯ ಶಾಸಕಸೋಮನಗೌಡ ಪಾಟೀಲ ಸಾಸನೂರ ವಿರುದ್ದ 19,999 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಈ ಮೂಲಕ ಜಿಲ್ಲೆಯಲ್ಲಿ ಜೆಡಿಎಸ್ ಎಂಟು ಕ್ಷೇತ್ರಗಳಲ್ಲಿ ಒಂದು ಸ್ಥಾನ ಪಡೆಯುವ ಮೂಲಕ ತನ್ನ ಅಸ್ಥಿತ್ವ ಉಳಿಸಿಕೊಂಡಿದೆ.
ರಾಜುಗೌಡ ಪಾಟೀಲ ಅವರಿಗೆ 66,271, ಬಿಜೆಪಿಯ ಪರಾಜಿತ ಅಭ್ಯರ್ಥಿ ಸೋಮನಗೌಡ ಪಾಟೀಲ ಸಾಸನೂರಗೆ 45,272 ಮತಗಳು ಲಭಿಸಿದೆ
ಬಾಗಲಕೋಟೆ: ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಸೋತಿದ್ದಾರೆ. ಮುಧೋಳ ದಲ್ಲಿ ಕಾರಜೋಳ ವಿರುದ್ಧ ಕಾಂಗ್ರೆಸ್ ನ ಆರ್.ಬಿ. ತಿಮ್ಮಾಪುರ, ಬೀಳಗಿ ಕ್ಷೇತ್ರದಲ್ಲಿ ನಿರಾಣಿ ವಿರುದ್ಧ ಜೆ.ಟಿ. ಪಾಟೀಲ ಗೆಲುವು ಸಾಧಿಸಿದ್ದಾರೆ.
ದಕ್ಷಿಣ ಕ್ಷೇತ್ರದ 15ನೇ ಸುತ್ತಿನ ಎಣಿಕೆ ಪೂರ್ಣ.
ಕಾಂಗ್ರೆಸ್-68677
ಬಿಜಿಪಿ-51275
ಕಾಂಗ್ರೆಸ್ 17402 ಮತಗಳ ಅಂತರದಿಂದ ಮುನ್ನಡೆ.
ಸೇಡಂ ಕ್ಷೇತ್ರದ 16ನೇ ಸುತ್ತಿನ ಎಣಿಕೆ ಪೂರ್ಣ.
ಕಾಂಗ್ರೆಸ್-79800
ಬಿಜೆಪಿ-43235
ಜೆಡಿಎಸ್-17097
ಕಾಂಗ್ರೆಸ್ 36565 ಮತಗಳ ಅಂತರದಿಂದ ಮುನ್ನಡೆ.
ಗ್ರಾಮೀಣ ಕ್ಷೇತ್ರದ 18ನೇ ಸುತ್ತಿನ ಎಣಿಕೆ ಪೂರ್ಣ
ಬಿಜೆಪಿ-77014
ಕಾಂಗ್ರೆಸ್-60107
ಬಿಜೆಪಿ 16907 ಮತಗಳ ಅಂತರಿಂದ ಮುನ್ನಡೆ
ಕಲಬುರಗಿ ಉತ್ತರ ಕ್ಷೇತ್ರದ 16ನೇ ಸುತ್ತಿನ ಎಣಿಕೆ ಪೂರ್ಣ.
ಬಿಜೆಪಿ-63620
ಕಾಂಗ್ರೆಸ್-62345
ಜೆಡಿಎಸ್-12643
ಬಿಜೆಪಿ 1275 ಮತಗಳ ಅಂತರದಿಂದ ಮುನ್ನಡೆ.
ಚಿಂಚೋಳಿ ಕ್ಷೇತ್ರದ 12ನೇ ಸುತ್ತಿನ ಎಣಿಕೆ ಪೂರ್ಣ
ಬಿಜೆಪಿ-48838
ಕಾಂಗ್ರೆಸ್-46590
ಜೆಡಿಎಸ್-4690
ಬಿಜೆಪಿ 2248 ಮತಗಳ ಅಂತರದಿಂದ ಮುನ್ನಡೆ.
ಜೇವರ್ಗಿ ಕ್ಷೇತ್ರದ 11ನೇ ಸುತ್ತಿನ ಎಣಿಕೆ ಪೂರ್ಣ.
ಕಾಂಗ್ರೆಸ್-40126
ಜೆಡಿಎಸ್-31139
ಬಿಜೆಪಿ-18045
ಕಾಂಗ್ರೆಸ್ 8987 ಮತಗಳ ಅಂತರದಿಂದ ಮುನ್ನಡೆ
ಬೆಂಗಳೂರು: ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎನ್.ಎ.ಹ್ಯಾರಿಸ್ ಅವರು ಗೆಲುವು ಸಾಧಿಸಿದ್ದಾರೆ. ಹ್ಯಾರಿಸ್
ಅವರು 61,030 ಮತಗಳನ್ನು ಪಡೆದರು. ಬಿಜೆಪಿ ಅಭ್ಯರ್ಥಿ ಕೆ.ಶಿವಕುಮಾರ್ 53,905 ಮತಗಳನ್ನು ಪಡೆದು ಸೋಲು ಕಂಡರು.
ಕಾರವಾರ: ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಕಾಂಗ್ರೆಸ್, ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿವೆ.
ಹಳಿಯಾಳ, ಕಾರವಾರ, ಭಟ್ಕಳ ಮತ್ತು ಶಿರಸಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು, ಯಲ್ಲಾಪುರ ಮತ್ತು ಕುಮಟಾದಲ್ಲಿ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾದರು.
ಚಾಮರಾಜನಗರ: ಜಿಲ್ಲೆಯ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ನ ಎಂ.ಆರ್.ಮಂಜುನಾಥ್ ಅವರು 17,654 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಹಾಲಿ ಶಾಸಕ, ಕಾಂಗ್ರೆಸ್ ನ ಆರ್.ನರೇಂದ್ರ ಹಾಗೂ ಬಿಜೆಪಿಯ ಡಾ.ಪ್ರೀತನ್ ನಾಗಪ್ಪ ಸೋಲು ಅನುಭವಿಸಿದ್ದಾರೆ.
ದೇವನಹಳ್ಳಿ- ಕಾಂಗ್ರೆಸ್ ಗೆಲುವು- ಕೆ.ಹೆಚ್ ಮುನಿಯಪ್ಪ
ಹೊಸಕೋಟೆ- ಕಾಂಗ್ರೆಸ್ ಗೆಲುವು- ಶರತ್ ಬಚ್ಚೇಗೌಡ
ನೆಲಮಂಗಲ- ಕಾಂಗ್ರೆಸ್ ಗೆಲುವು- ಎನ್. ಶ್ರೀ ನಿವಾಸಯ್ಯ
ದೊಡ್ಡಬಳ್ಳಾಪುರ- ಬಿಜೆಪಿ ಗೆಲುವು- ಧೀರಜ್ ಮುನಿರಾಜು
ಸಂಡೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ಗೆಲುವು. ಬಿಜೆಪಿಯ ಶಿಲ್ಪಾ ರಾಘವೇಂದ್ರಗೆ ಸೋಲು.ಬಳ್ಳಾರಿ ಜಿಲ್ಲೆಯ ಮೊದಲ ಫಲಿತಾಂಶ ಬಹಿರಂಗ. ಅಧಿಕೃತ ಘೋಷಣೆಯಷ್ಟೇ ಬಾಕಿ.
* ಬಾಗಲಕೋಟೆಯಲ್ಲಿ ಕಾಂಗ್ರೆಸ್ಸಿನ ಎಚ್.ವೈ. ಮೇಟಿ ಗೆಲುವು
* ಹುನಗುಂದ ಕ್ಷೇತ್ರದಲ್ಲಿ ಕಾಂಗ್ರೆಸ್ ನ ವಿಜಯಾನಂದ ಕಾಶಪ್ಪನವರ ಗೆಲುವು
ಬೆಂಗಳೂರು: ಬಸವನಗುಡಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಲ್.ಎ. ರವಿಸುಬ್ರಹ್ಮಣ್ಯ ಗೆಲುವು ಸಾಧಿಸಿದ್ದಾರೆ.
ಕಮಲ ಅರಳಿಸಿದ್ದ ಕೆ.ಸಿ.ನಾರಾಯಣಗೌಡರಿಗೆ ಸೋಲು
ಮಂಡ್ಯ: ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಕಮಲ ಅರಳಿಸಿ ಇತಿಹಾಸ ನಿರ್ಮಿಸಿದ್ದ ಸಚಿವ ಕೆ.ಸಿ.ನಾರಾಯಣಗೌಡ 3ನೇ ಸ್ಥಾನ ಪಡೆದಿದ್ದಾರೆ.
ಬೆಳಗಾವಿ: ಬೆಳಗಾವಿ ದಕ್ಷಿಣ, ರಾಯಬಾಗ, ಹುಕ್ಕೇರಿ, ಅರಭಾವಿ, ನಿಪ್ಪಾಣಿ, ಗೋಕಾಕ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವಿನ ದಡ ಸೇರಿದ್ದಾರೆ. ಖಾನಾಪುರದಲ್ಲಿ ಕಾಂಗ್ರೆಸ್‌ನ ಡಾ.ಅಂಜಲಿ ನಿಂಬಾಳಕರ ಅವರನ್ನು ಸೋಲಿಸಿ, ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಹಿನ್ನಡೆ ಅನುಭವಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಗಣಿಗ ರವಿಕುಮಾರ್ ಗೌಡ ಕಡೆಯ 2 ಸುತ್ತಿನಲ್ಲಿ ಅಲ್ಪ ಮತಗಳ ಅಂತರದಿಂದ ಗೆಲುವು
ವಿಜಯಪುರ: ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಜಯಗಳಿಸಿದ್ದಾರೆ.
ಮಂಡ್ಯ: ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಕಮಲ ಅರಳಿಸಿ ಇತಿಹಾಸ ನಿರ್ಮಿಸಿದ್ದ ಸಚಿವ ಕೆ.ಸಿ.ನಾರಾಯಣಗೌಡ 3ನೇ ಸ್ಥಾನ ಪಡೆದಿದ್ದಾರೆ.
ಹು-ಧಾ ಸೆಂಟ್ರಲ್ ಕ್ಷೇತ್ರದ ಉಸ್ತುವಾರಿ ರಜತ್ ಉಳ್ಳಾಗಡ್ಡಿಮಠ ರಾಜೀನಾಮೆ
ಹು-ಧಾ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರ ಸೋಲು ಖಚಿತವಾಗುತ್ತಿದ್ದಂತೆ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಸೆಂಟ್ರಲ್ ಕ್ಷೇತ್ರದ ಚುನಾವಣಾ ಉಸ್ತುವಾರಿ ಸ್ಥಾನಕ್ಕೆ ರಜತ್ ಉಳ್ಳಾಗಡ್ಡಿಮಠ ರಾಜೀನಾಮೆ ನೀಡಿದ್ದಾರೆ.
ಗೆಲುವಿನ ಲೆಕ್ಕಾಚಾರದಲ್ಲಿ ನಿರತ, ಆಪ್ತ ಗೆಳೆಯರಾದ ಲಕ್ಷ್ಮಣ ಸವದಿ ಹಾಗೂ ರಾಜು ಕಾಗೆ ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದು ಹೀಗೆ.
ಕಲಬುರಗಿ ದಕ್ಷಿಣ: ಕಾಂಗ್ರೆಸ್ ನ ಅಲ್ಲಮಪ್ರಭು ಪಾಟೀಲ ಗೆಲುವು
ಕಲಬುರಗಿ: ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಇಲ್ಲಿನ ಕಲಬುರಗಿ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ ಗೆಲುವು ಸಾಧಿಸಿದ್ದು, ಅಧಿಕೃತ ಘೋಷಣೆ ಬಾಕಿ ಇದೆ.
ಮೈಸೂರು: ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಇದೇ ಮೊದಲಿಗೆ ತಂದೆ ಹಾಗೂ ಮಗ ಒಟ್ಟಿಗೆ ಗೆಲುವು ಸಾಧಿಸಿದ ದಾಖಲೆ ನಿರ್ಮಾಣವಾಗಿದೆ. ಜೆಡಿಎಸ್‌ನಿಂದ ಸ್ಪರ್ಧಿಸಿ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದಿರುವ ಜಿ.ಟಿ.ದೇವೇಗೌಡ ಹಾಗೂ ಹುಣಸೂರಿನಿಂದ ಗೆದ್ದಿರುವ ಜಿ.ಡಿ.ಹರೀಶ್ ಗೌಡ ದಾಖಲೆ ಬರೆದವರು.
ಬೆಂಗಳೂರು: ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ.ಸಿ.ಶ್ರೀನಿವಾಸಮೂರ್ತಿ ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅವರು 69,650 ಮತಗಳು, ಬಿಎಸ್‌ಪಿಯ ಅಖಂಡ ಶ್ರೀನಿವಾಸ ಮೂರ್ತಿ 21,897 ಮತಗಳು, ಬಿಜೆಪಿಯ ಎ.ಮುರಳಿ 7,705 ಮತಗಳನ್ನು ಪಡೆದಿದ್ದಾರೆ
ಕನಕಪುರ: ಡಿಕೆಶಿಗೆ 1.22 ಲಕ್ಷ ಮತಗಳ ಅಂತರದ ಭಾರಿ ಗೆಲುವು
ರಾಮನಗರ: ಕನಕಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಶಿವಕುಮಾರ್ 1.22 ಲಕ್ಷ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.
ಕೋಲಾರ: ಮಾಲೂರು ಕಾಂಗ್ರೆಸ್ ಅಭ್ಯರ್ಥಿ ಕೆ.ವೈ.ನಂಜೇಗೌಡ ಕೇವಲ 211 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಅವರು 50,485 ಮತ ಪಡೆದರೆ, ಬಿಜೆಪಿ ಅಭ್ಯರ್ಥಿ ಕೆ.ಎಸ್.ಮಂಜುನಾಥ ಗೌಡ 50,274 ಮತ ಗಳಿಸಿದರು.
ಬೆಂಗಳೂರು: ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಎಸ್. ರಘು ಗೆಲುವು ಸಾಧಿಸಿದ್ದಾರೆ. ಎರಡು ಬಾರಿ ಶಾಸಕರಾಗಿದ್ದ ಇವರು, ಈ ಬಾರಿ ಹ್ಯಾಟ್ರಿಕ್ ಜಯ ತಮ್ಮದಾಗಿಸಿಕೊಂಡಿದ್ದಾರೆ.
ವಿಜಯಪುರ: ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಶಿವಾನಂದ ಪಾಟೀಲ ಭರ್ಜರಿ ಜಯ ಗಳಿಸಿದ್ದಾರೆ.
ಬೆಂಗಳೂರು: ಚಿಕ್ಕಪೇಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಉದಯ್ ಗರುಡಾಚಾರ್ ಅವರು ಗೆಲುವು ಸಾಧಿಸಿದ್ಧಾರೆ. ಉದಯ್ 57,136 ಮತಗಳನ್ನು ಪಡೆದರೆ, ಕಾಂಗ್ರೆಸ್ ಆರ್.ವಿ.ದೇವರಾಜ್ ಅವರು 45,114 ಮತಗಳನ್ನು ಪಡೆದಿದ್ಧಾರೆ. 12,002 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಬೆಂಗಳೂರು: ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಉಪ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದ ರಿಜ್ವಾನ್, ಇದೀಗ ಪುನಃ ಜಯ ಸಾಧಿಸಿದ್ದಾರೆ.
ಪಕ್ಷ, ಕ್ಷೇತ್ರ ಬದಲಿಸಿ ಗೆದ್ದ ಎನ್.ವೈ.ಗೋಪಾಲಕೃಷ್ಣ
ಚಿತ್ರದುರ್ಗ: ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ.ಗೋಪಾಲಕೃಷ್ಣ ಗೆಲುವು ಸಾಧಿಸಿದರು. ಪಕ್ಷ ಹಾಗೂ ಕ್ಷೇತ್ರವನ್ನು ಬದಲಿಸಿ 22,096 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದರು.
ಬೆಂಗಳೂರು: ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮರು ಮತ ಎಣಿಕೆ ಆರಂಭವಾಗಿದೆ.
113 ಮತಗಳ ಅಂತರದಲ್ಲಿ ದಿನೇಶ್ ಗುಂಡೂರಾವ್ ಗೆಲುವು ಸಾಧಿಸಿದ್ದರು. ಸಮೀಪ ಸ್ಪರ್ಧಿಯಾಗಿದ್ದ ಬಿಜೆಪಿ ಅಭ್ಯರ್ಥಿ ಸಪ್ತಗಿರಿಗೌಡ ಮರು ಮತ ಎಣಿಕೆ ಕೋರಿದರು.
ಬೆಂಗಳೂರು: ವಿಜಯನಗರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಎಂ. ಕೃಷ್ಣಪ್ಪ ಅವರು ನಾಯ್ಕೆನೇ ಬಾರಿ ಜಯ ಸಾಧಿಸಿದ್ದಾರೆ.
ಬೆಂಗಳೂರು: ‘ನನ್ನ ಪಕ್ಷದ ಕಾರ್ಯಕರ್ತರು, ನಾಯಕರ ಒಗ್ಗಟ್ಟಿನ ಪರಿಶ್ರಮದಿಂದ ಈ ಗೆಲುವು ಸಾಧ್ಯವಾಗಿದೆ. ನಮ್ಮ ಮೇಲೆ ವಿಶ್ವಾಸವಿಟ್ಟು ನಿಚ್ಚಳ ಬಹುಮತ ನೀಡಿದ್ದಾರೆ‘ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಾನು ಪಕ್ಷದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಹೇಳಿದ್ದೆ, ಜತೆಗೂಡುವುದು ಆರಂಭ, ಜತೆಗೂಡಿ ಯೋಚಿಸುವುದು ಪ್ರಗತಿ, ಜತೆಯೂಡಿ ಕೆಲಸ ಮಾಡುವುದು ಯಶಸ್ಸು ಎಂದು. ಅದೇ ರೀತಿ ನಮ್ಮ ನಾಯಕರು ಹಾಗೂ ಕಾರ್ಯಕರ್ತರ ಒಗ್ಗಟ್ಟಿನ ಪರಿಶ್ರಮದಿಂದ ಪಕ್ಷಕ್ಕೆ ಈ ಯಶಸ್ಸು ಸಿಕ್ಕಿದೆ‘ ಎಂದರು.
ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಅವರು 160 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಪ್ರಭಲ ಪೈಪೋಟಿ ನೀಡಿದ್ದ ಬಿಜೆಪಿ ಅಭ್ಯರ್ಥಿ ಸಿ.ಕೆ. ರಾಮಮೂರ್ತಿ, ಅಲ್ಪ ಮತಗಳ ಅಂತರದಲ್ಲಿ ಪರಾಭವ ಅನುಭವಿಸಿದರು. ಕಳೆದ ಬಾರಿ ಕಾಂಗ್ರೆಸ್– ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾದ ಮೇಲೆ ನಡೆದ ಚುನಾವಣೆಯಲ್ಲಿ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾರೆಡ್ಡಿ ಗೆಲುವು ಸಾಧಿಸಿದ್ದರು.
ಬೆಂಗಳೂರು: ‘ವಿಧಾನ ಸಭೆ ಚುನಾವಣಾ ಫಲಿತಾಂಶ ಬಿಜೆಪಿಯ ಭ್ರಷ್ಟಾಚಾರ, ದುರಾಡಳಿತ ಮತ್ತು ಕೋಮುವಾದದ ವಿರುದ್ಧದ ಫಲಿತಾಂಶ. ಇದು ಕೇವಲ ಕಾಂಗ್ರೆಸ್ ಪಕ್ಷದ ಗೆಲುವಲ್ಲ, ಕರ್ನಾಟಕದ ಗೆಲುವು. ಕನ್ನಡಿಗರ ಗೆಲುವು, ಪ್ರಜಾಪ್ರಭುತ್ವದ ಗೆಲುವು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
‘ಈ ಫಲಿತಾಂಶ ಅನಿರೀಕ್ಷಿತ ಅಲ್ಲ. ಜನರ ಜೊತೆ ಸಂಪರ್ಕದಲ್ಲಿರುವವರಿಗೆ ಇದು ನಿರೀಕ್ಷಿತ ಫಲಿತಾಂಶ.
ಭ್ರಷ್ಟಾಚಾರ, ಬೆಲೆ ಏರಿಕೆ, ಕೋಮುವಾದ, ಕನ್ನಡ- ಕನ್ನಡಿಗ ವಿರೋಧಿ ನಿಲುವು, ದುರಾಡಳಿತ ಹೀಗೆ ಎಲ್ಲ ವಿಷಯಗಳಲ್ಲಿಯೂ ಜನ ರೋಸಿ ಹೋಗಿದ್ದರು. ರೈತರು, ಕಾರ್ಮಿಕರು, ಮಹಿಳೆಯರು, ಯುವಕರು ಹೀಗೆ ಪ್ರತಿಯೊಂದು ವರ್ಗದ ಜನ ಕೂಡಾ ಬಿಜೆಪಿ ಪಕ್ಷದ ಸೋಲು ಬಯಸಿದ್ದರು’ ಎಂದಿದ್ದಾರೆ.
ಬೆಂಗಳೂರು: ಜನಾದೇಶವನ್ನು ಸ್ವಾಗತಿಸುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿಗಳು, ರಾಜ್ಯದ ಜನತೆ ನೀಡಿರುವ ಆದೇಶವನ್ನು ಸ್ವಾಗತಿಸುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶವೇ ಅಂತಿಮ. ಸೋಲು, ಗೆಲುವನ್ನು ನಾನು ಸಮಚಿತ್ತದಿಂದ ಸ್ವೀಕರಿಸುತ್ತೇನೆ. ಆದರೆ, ಈ ಸೋಲು ಅಂತಿಮವಲ್ಲ, ನನ್ನ ಹೋರಾಟ ನಿಲ್ಲುವುದಿಲ್ಲ, ಸದಾ ಜನರ ಜತೆಯಲ್ಲೇ ಇರುತ್ತೇನೆ ಎಂದಿದ್ದಾರೆ.
ಚಿತ್ರದುರ್ಗ: ಹೊಳಲ್ಕೆರೆ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿಯ ಎಂ.ಚಂದ್ರಪ್ಪ ಜಯಭೇರಿ ಬಾರಿಸಿದ್ದಾರೆ. ಸತತ ಗೆಲುವು ಸಾಧಿಸುವ ಮೂಲಕ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಎಂ.ಚಂದ್ರಪ್ಪ ಅವರು 87,987 ಮತಗಳನ್ನು ಗಳಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಪರಾಭವಗೊಳಿಸಿದ್ದಾರೆ. ಮಾಜಿ ಸಚಿವ ಎಚ್.ಆಂಜನೇಯ 82,281 ಮತ ಗಳಿಸಿ ಸೋಲು ಅನುಭವಿಸಿದ್ದಾರೆ.
ವಿಜಯಪುರ: ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ನಾಗಠಾಣ ಎಸ್ ಸಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ವಿಠ್ಠಲ ಕಟಕಧೋಂಡ ಜಯಗಳಿಸಿದ್ದಾರೆ.
ಕೊಡಗಿನ ಬಿಜೆಪಿಯ ಭದ್ರಕೋಟೆ ಭಗ್ನ; ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು
ಮಡಿಕೇರಿ: ಬಿಜೆಪಿಯ ಭದ್ರಕೋಟೆ ಎನಿಸಿದ್ದ ಕೊಡಗಿನ ಎರಡೂ ಕ್ಷೇತ್ರಗಳು ಕಾಂಗ್ರೆಸ್ ನ ಕೈವಶವಾಗಿವೆ. ಈ ಮೂಲಕ ಸತತ 25 ವರ್ಷಗಳ ಬಿಜೆಪಿಯ ಭದ್ರಕೋಟೆ ಸಂಪೂರ್ಣ ಭಗ್ನಗೊಂಡಿದೆ.
ಕಲಬುರಗಿ: ಜಿಲ್ಲೆಯ ಜೇವರ್ಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಅಜಯ್ ಸಿಂಗ್ ಸತತ ಮೂರನೇ ಬಾರಿಗೆ ಗೆಲುವು ಸಾಧಿಸಿದರು.
ಶಿವಮೊಗ್ಗ: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಬಿಜೆಪಿ ತಲಾ ಮೂರು ಹಾಗೂ ಜೆಡಿಎಸ್ ಒಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿವೆ. ಶಿವಮೊಗ್ಗ ನಗರ ಕ್ಷೇತ್ರದಿಂದ ಬಿಜೆಪಿಯ ಎಸ್.ಎನ್.ಚನ್ನಬಸಪ್ಪ, ತೀರ್ಥಹಳ್ಳಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಶಿಕಾರಿಪುರದಲ್ಲಿ ಬಿ.ವೈ.ವಿಜಯೇಂದ್ರ, ಕಾಂಗ್ರೆಸ್‌ನಿಂದ ಸೊರಬದಲ್ಲಿ ಮಧು ಬಂಗಾರಪ್ಪ, ಸಾಗರದಲ್ಲಿ ಗೋಪಾಲಕೃಷ್ಣ ಬೇಳೂರು, ಭದ್ರಾವತಿಯಲ್ಲಿ ಬಿ.ಕೆ.ಸಂಗಮೇಶ, ಜೆಡಿಎಸ್‌ನಿಂದ ಶಿವಮೊಗ್ಗ ಗ್ರಾಮೀಣ ಕ್ಷೇತ್ರದಿಂದ ಶಾರದಾ ಪೂರ್ಯಾನಾಯ್ಕ ಅವರ ಗೆಲುವು ಖಚಿತವಾಗಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ.
ಬೆಂಗಳೂರು: ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಜಯ ಗಳಿಸಿದ್ದಾರೆ. ಕಾಂಗ್ರೆಸ್‌ನ ಎಚ್.ಕುಸುಮಾ ಅವರು 27 ಸುತ್ತು ಮತ ಎಣಿಕೆ ವರೆಗೂ ತೀವ್ರ ಪೈಪೋಟಿ ನೀಡಿದ್ದರು. ಒಂದು ಹಂತದಲ್ಲಿ 10 ಸಾವಿರ ಮತಗಳ ಮುನ್ನಡೆಯಲ್ಲಿದ್ದರು. ಅಂತಿಮ ಮೂರು ಸುತ್ತಿನಲ್ಲಿ ಮುನಿರತ್ನ ಅವರು ಮುನ್ನಡೆ ಪಡೆದುಕೊಂಡು, ಅಂತಿಮವಾಗಿ 12 ಸಾವಿರ ಮತಗಳ ಅಂತರದಲ್ಲಿ ಜಯಗಳಿಸಿದ್ಧಾರೆ.
ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆ ಕಲಬುರಗಿಯ ಒಂಬತ್ತು ವಿಧಾನಸಭಾ ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಏಳು ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ದಾಖಲಿಸಿದೆ.
ಬಿಜೆಪಿ ಕೇವಲ ಏಳು ಕ್ಷೇತ್ರಗಳಲ್ಲಷ್ಟೇ ಗೆಲುವು ಸಾಧಿಸಲು ಸಾಧ್ಯವಾಯಿತು.
ಚಿತ್ರದುರ್ಗ: ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ವೀರೇಂದ್ರ ಅವರು 53,412 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಐದು ಬಾರಿ ಶಾಸಕರಾಗಿದ್ದ ಬಿಜೆಪಿಯ ಜಿ.ಎಚ್.ತಿಪ್ಪಾರೆಡ್ಡಿ ಹೀನಾಯ ಸೋಲು ಕಂಡಿದ್ದಾರೆ.
ವಿಜಯಪುರ: ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಜಯಗಳಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ ಅವರ ವಿರುದ್ಧ 8223 ಮತಗಳ ಅಂತರದಿಂದ ವಿಜಯ ಸಾಧಿಸಿದ್ದಾರೆ.
ಕೊಪ್ಪಳ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಹಾಗೂ ಗಂಗಾವತಿ ಕ್ಷೇತ್ರದ ಅಭ್ಯರ್ಥಿ ಜನಾರ್ದನ ರೆಡ್ಡಿ 8268 ಮತಗಳಿಂದ ಗೆಲುವಿನ ಗೋಲು ಹೊಡೆದಿದ್ದಾರೆ.
ಹೊಸಪೇಟೆ: ‘ಈ ಚುನಾವಣೆಯಲ್ಲಿ ತಾಂತ್ರಿಕವಾಗಿ ನಾನು ಸೋತಿದ್ದೇನೆ. ಇದು ನನ್ನ ಮಗನ ಸೋಲಲ್ಲ. ಆದರೆ, ಜನರ ತೀರ್ಪನ್ನು ನಾನು ಗೌರವಿಸುತ್ತೇನೆ’ ಎಂದು ಮಾಜಿಸಚಿವ ಆನಂದ್ ಸಿಂಗ್ ಹೇಳಿದರು.
ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಮತ ಮರು ಎಣಿಕೆ ಪ್ರಾರಂಭವಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಅವರು 160 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಬಿಜೆಪಿ ಅಭ್ಯರ್ಥಿ ಸಿ.ಕೆ. ರಾಮಮೂರ್ತಿ ಅವರ ಮನವಿ ಮೇರಿಗೆ ಮರು ಎಣಿಕೆ ಪ್ರಾರಂಭವಾಗಿದೆ.
ಚಿತ್ರದುರ್ಗ: ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಬಿಜೆಪಿ ಒಂದು ಕ್ಷೇತ್ರವನ್ನು ಮಾತ್ರ ಉಳಿಸಿಕೊಂಡಿದೆ. ಕಾಂಗ್ರೆಸ್ ಗತವೈಭವ ಮತ್ತೆ ಮರುಕಳಿಸಿದೆ.
ಬೆಂಗಳೂರು: ಸಿ.ವಿ.ರಾಮನ್ ನಗರದ ಬಿಜೆಪಿ ಅಭ್ಯರ್ಥಿ ಎಸ್.ರಘು ಅವರು ಕಾಂಗ್ರೆಸ್‌ನ ಆನಂದ್‌ಕುಮಾರ್ ಎದುರು 16,246 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ 68,848 ಹಾಗೂ ಕಾಂಗ್ರೆಸ್ 52,602 ಮತಗಳನ್ನು ಪಡೆದಿದ್ದಾರೆ.
ಬೆಂಗಳೂರು: ಕೆ.ಆರ್.ಪುರ ಕ್ಷೇತ್ರದಲ್ಲಿ ನಗರಾಭಿವೃದ್ಧಿ ಸಚಿವ, ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ ಅವರು ಗೆಲುವು ಪಡೆದಿದ್ದಾರೆ.
ಉಡುಪಿ: ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. 2018ರ ಚುನಾವಣೆಯಲ್ಲೂ ಬಿಜೆಪಿ ಐದೂ ಸ್ಥಾನಗಳನ್ನು ಗೆದ್ದಿತ್ತು.
ಜನರ ತೀರ್ಮಾನವನ್ನು ಗೌರವಿಸುತ್ತೇನೆ. ನನ್ನನ್ನು ಸೋಲಿಸಬೇಕೆಂದು ಹಲವರು ಹಟ ತೊಟ್ಟಿದ್ದರು. ಅವರ ಆಸೆ ಈಡೇರಿದೆ. ಅವರು ನನ್ನನ್ನು ಸೋಲಿಸುವ ಜತೆಗೆ ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಿದ್ದಾರೆ ಎಂದು ಜಗದೀಶ ಶೆಟ್ಟರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಕೆಟ್ ಕೊಡದೆ ಇದ್ದುದನ್ನು ಸವಾಲಾಗಿ ಸ್ವೀಕರಿಸಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಸೋತಿದ್ದಕ್ಕೆ ದುಃಖ ಇಲ್ಲ. ನನ್ನ ವಿರುದ್ಧ ಷಡ್ಯಂತ್ರ ಮಾಡಿದವರು ನನಗೆ ಪೆಟ್ಟು ಕೊಡಲು ಹೋಗಿ ಬಿಜೆಪಿಗೆ ಪೆಟ್ಟು ಕೊಟ್ಟಿದ್ದಾರೆ ಎಂದರು.
ಬೆಂಗಳೂರು: ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮರು ಮತ ಎಣಿಕೆ ಕೋರಿಕೆಯನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದಾರೆ.
ಕೊಪ್ಪಳ: ಜಿಲ್ಲೆಯ ಕನಕಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಿವರಾಜ ತಂಗಡಗಿ 40 ಸಾವಿರಕ್ಕೂ ಅಧಿಕ ಮತಗಳ ಅಂತರದ ಗೆಲುವು ಪಡೆದಿದ್ದಾರೆ.
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಎಂ.ಗಣೇಶ್ ಪ್ರಸಾದ್ ಅವರ ಗೆಲುವು ಖಚಿತವಾಗಿದೆ.
ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ. ಆಂಜನಪ್ಪ ಅವರು ಸೋಲು ಅನುಭವಿಸಿದ್ದಾರೆ.
ದೇವನಹಳ್ಳಿ: ’ನಾನು ದಲಿತ ಮುಖ್ಯಮಂತ್ರಿ ರೇಸ್‌ನಲ್ಲಿ ಇಲ್ಲ. ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರೂ ಬದ್ದರಾಗಿದ್ದೇವೆ’ ಎಂದು ದೇವನಹಳ್ಳಿ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿರುವ ಕೆ.ಎಚ್ ಮುನಿಯಪ್ಪ ಅಭಿಪ್ರಾಯಪಟ್ಟರು.
ಕೊಪ್ಪಳ: ಯಲಬುರ್ಗಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ರಾಯರಡ್ಡಿ ಗೆಲುವು ಪಡೆದಿದ್ದಾರೆ. ರಾಯರಡ್ಡಿ ಒಟ್ಟು 92508 ಮತಗಳನ್ನು ಪಡೆದರೆ, ಹಾಲಿ ಶಾಸಕ ಬಿಜೆಪಿಯ ಹಾಲಪ್ಪ ಆಚಾರ್ 75461 ಮತಗಳನ್ನು ಪಡೆದರು.
ರಾಯರಡ್ಡಿ ಶಾಸಕರಾಗಿ ಆಯ್ಕೆಯಾಗಿದ್ದು ಇದು ಆರನೇ ಬಾರಿ. 1985ರಲ್ಲಿ ಜಿಎನ್‌ಪಿಯಿಂದ, 1989 ಮತ್ತು 1994ರಲ್ಲಿ ಜನತಾದಳದಿಂದ ಗೆಲುವು ಸಾಧಿಸಿದ್ದರು. 2004 ಹಾಗೂ 2013ರಲ್ಲಿ ಕಾಂಗ್ರೆಸ್‌ನಿಂದ ಜಯ ಪಡೆದಿದ್ದರು.
ರಾಜಶೇಖರ ಪಾಟೀಲ, ಅಶೋಕ ಖೇಣಿ, ಬಂಡೆಪ್ಪ ಕಾಶೆಂಪುರಗೆ ಸೋಲು
ಬಿಜೆಪಿ ಗೆದ್ದ ಕ್ಷೇತ್ರಗಳು
ಔರಾದ್ : ಪ್ರಭು ಚವಾಣ್
ಬಸವಕಲ್ಯಾಣ: ಶರಣು ಸಲಗರ
ಹುಮನಾಬಾದ್: ಸಿದ್ದು ಪಾಟೀಲ
ಬೀದರ್ ದಕ್ಷಿಣ: ಶೈಲೇಂದ್ರ ಬೆಲ್ದಾಳೆ
ಕಾಂಗ್ರೆಸ್ ಗೆದ್ದ ಕ್ಷೇತ್ರಗಳು
ಭಾಲ್ಕಿ: ಈಶ್ವರ ಖಂಡ್ರೆ
ಬೀದರ್: ರಹೀಂ ಖಾನ್
ಕೊಪ್ಪಳ: ತ್ರಿಕೋನ ಸ್ಪರ್ಧೆ ಇದ್ದ ಕೊಪ್ಪಳ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ರಾಘವೇಂದ್ರ ಹಿಟ್ನಾಳ ಗೆಲುವು ಸಾಧಿಸಿದರು. ಇದು ಅವರ ಹ್ಯಾಟ್ರಿಕ್ ಜಯವಾಗಿದೆ.
ಹಿಟ್ನಾಳ 90430 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಮಂಜುಳಾ ಕರಡಿ 54170 ಮತ್ತು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದ ಸಿ.ವಿ. ಚಂದ್ರಶೇಖರ್ 45,369 ಮತಗಳನ್ನು ಗಳಿಸಿ ಮೂರನೆ ಸ್ಥಾನ ಪಡೆದರು.
ಯಾದಗಿರಿ: ಜಿಲ್ಲೆಯ ನಾಲ್ಕು ಮತಕ್ಷೇತ್ರಗಳ ಪೈಕಿ ಇಬ್ಬರು ಹಾಲಿ ಬಿಜೆಪಿ ಶಾಸಕರು ಸೋತಿದ್ದಾರೆ. ಯಾದಗಿರಿ ಮತಕ್ಷೇತ್ರದಲ್ಲಿ ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ಸುರಪುರ ಮತಕ್ಷೇತ್ರದಲ್ಲಿ ನರಸಿಂಹ ನಾಯಕ (ರಾಜೂಗೌಡ) ಸೋತಿದ್ದಾರೆ. ಇನ್ನೂ ಮಾಜಿ ಸಚಿವರಿಬ್ಬರೂ ಯಾದಗಿರಿ, ಗುರುಮಠಲ್ ಮತಕ್ಷೇತ್ರದಲ್ಲಿ ಪರಾಭಾವಗೊಂಡಿದ್ದಾರೆ.
ಕೊಪ್ಪಳ: ಜಿಲ್ಲೆಯ ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಒಮ್ಮೆ ಗೆದ್ದವರು ಮತ್ತೆ ಮುಂದಿನ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎನ್ನುವ ಇತಿಹಾಸವಿದೆ. ಈ ಬಾರಿಯೂ ಅದು ಪುನರಾವರ್ತನೆಯಾಯಿತು.
ಹಾಲಿ ಶಾಸಕ ಕಾಂಗ್ರೆಸ್‌ನ ಅಮರೇಗೌಡ ಬಯ್ಯಾಪುರ ಎದುರು ಬಿಜೆಪಿಯ ದೊಡ್ಡನಗೌಡ ಪಾಟೀಲ ಗೆಲುವು ಸಾಧಿಸುವ ಮೂಲಕ ಕ್ಷೇತ್ರದ ಸೋಲು–ಗೆಲುವಿನ ಇತಿಹಾಸದ ದಾಖಲೆಯನ್ನು ಮತ್ತೆ ಮುಂದುವರಿಸಿದರು.
ಹುಬ್ಬಳ್ಳಿ: ‘ಕ್ಷೇತ್ರದ ಜನರು ನೀಡಿರುವ ತೀರ್ಪಿನಿಂದ ಬೇಸರಗೊಳ್ಳದೆ ಸ್ವಾಗತಿಸುತ್ತೇನೆ. ಈ ಚುನಾವಣೆಯಲ್ಲಿ ನಾನು ಸೋತರೂ ಜನರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾನೆ’ ಎಂದು ಹುಬ್ಬಳ್ಳಿ–ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಡಾ. ಕ್ರಾಂತಿಕಿರಣ ಹೇಳಿದ್ದಾರೆ.
ಈ ಕುರಿತು ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಪಕ್ಷವನ್ನು ಮತ್ತಷ್ಟು ಬಲಿಷ್ಠವಾಗಿ ಸಂಘಟಿಸಲು ಪ್ರಯತ್ನಿಸುವೆ. ಚುನಾವಣೆ ಘೋಷಣೆಯಾದ ದಿನದಿಂದಲೂ ಹಗಲಿರುಳು ದುಡಿದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಕೃತಜ್ಞತೆಗಳು’ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್- ಟಿ.ಡಿ.ರಾಜೇಗೌಡ: 58461
ಬಿಜೆಪಿ- ಡಿ.ಎನ್.ಜೀ ವರಾಜ್:58171
ಜೆಡಿಎಸ್- ಸುಧಾಕರ್ ಶೆಟ್ಟಿ: 19119
ಹೊಸಪೇಟೆ: ವಿಜಯನಗರ ಜಿಲ್ಲೆ ರಚಿಸಿ, ಸಾವಿರಾರು ಕೋಟಿ ರೂಪಾಯಿ ಅನುದಾನ ಕೊಟ್ಟರೂ ಸಹ ಹೊಸ ಜಿಲ್ಲೆಯ ಜನ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಲಿಲ್ಲ.
ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಬಿಜೆಪಿ ಒಂದು ಕಡೆ ಗೆಲುವು ದಾಖಲಿಸಿದೆ. ಎರಡರಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿ ಜಯ ಸಾಧಿಸಿದ್ದಾರೆ.
ಪಕ್ಷಗಳ ಬಲಾಬಲ ಹೀಗಿದೆ
05–ಒಟ್ಟು ಕ್ಷೇತ್ರಗಳು
02–ಕಾಂಗ್ರೆಸ್
01–ಬಿಜೆಪಿ
01–ಜೆಡಿಎಸ್
01–ಪಕ್ಷೇತರ
ಕೊಪ್ಪಳ: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮೂರರಲ್ಲಿ ಕಾಂಗ್ರೆಸ್, ಒಂದರಲ್ಲಿ ಬಿಜೆಪಿ ಮತ್ತು ಇನ್ನೊಂದರಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಗೆಲುವು ಸಾಧಿಸಿವೆ.
ಕಾಂಗ್ರೆಸ್‌ನಿಂದ ಕೊಪ್ಪಳ ಕ್ಷೇತ್ರದಿಂದ ರಾಘವೇಂದ್ರ ಹಿಟ್ನಾಳ, ಯಲಬುರ್ಗಾದಲ್ಲಿ ಬಸವರಾಜ ರಾಯರಡ್ಡಿ, ಕನಕಗಿರಿ ಕ್ಷೇತ್ರದಿಂದ ಶಿವರಾಜ ತಂಗಡಗಿ, ಕುಷ್ಟಗಿ ಕ್ಷೇತ್ರದಿಂದ ಬಿಜೆಪಿಯ ದೊಡ್ಡನಗೌಡ ಪಾಟೀಲ ಮತ್ತು ಗಂಗಾವತಿಯಿಂದ ಕೆಆರ್‌ಪಿಪಿ ಅಭ್ಯರ್ಥಿ ಜನಾರ್ದನ ರೆಡ್ಡಿ ಗೆಲುವು ಪಡೆದಿದ್ದಾರೆ.
ದಾವಣಗೆರೆ ಜಿಲ್ಲೆ: ಕಾಂಗ್ರೆಸ್‌ಗೆ 6 ಕ್ಷೇತ್ರಗಳಲ್ಲಿ, ಬಿಜೆಪಿಗೆ 1 ಕಡೆ ಗೆಲುವು
ದಾವಣಗೆರೆ: ದಾವಣಗೆರೆ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ 6 ಕಡೆ ಕಾಂಗ್ರೆಸ್ ಗೆಲುವು ಸಾಧಿಸಿದ್ದರೆ, ಬಿಜೆಪಿ ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಜೆಡಿಎಸ್ ‘ಶೂನ್ಯ’ ಸಂಪಾದನೆ ಮಾಡಿದೆ.
ವಿಜಯನಗರ
ಗೆದ್ದ ಅಭ್ಯರ್ಥಿ ಹೆಸರು : ಎಚ್.ಆರ್. ಗವಿಯಪ್ಪ (ಕಾಂಗ್ರೆಸ್) – 1,04,863
ಗೆಲುವಿನ ಅಂತರ : 33,723
ಪ್ರತಿಸ್ಪರ್ಧಿ : ಸಿದ್ದಾರ್ಥ ಸಿಂಗ್
ಹೂವಿನಹಡಗಲಿ (ಎಸ್ಸಿ)
ಗೆದ್ದ ಅಭ್ಯರ್ಥಿ ಹೆಸರು : ಕೃಷ್ಣ ನಾಯ್ಕ (ಬಿಜೆಪಿ) – 73,200
ಗೆಲುವಿನ ಅಂತರ : 1,444
ಪ್ರತಿಸ್ಪರ್ಧಿ : ಪಿ.ಟಿ. ಪರಮೇಶ್ವರ ನಾಯ್ಕ
ಕಳೆದ ಬಾರಿ ಗೆದ್ದ ಪಕ್ಷ – (ಕಾಂಗ್ರೆಸ್)
ಹಗರಿಬೊಮ್ಮನಹಳ್ಳಿ (ಎಸ್ಸಿ)
ಗೆದ್ದ ಅಭ್ಯರ್ಥಿ ಹೆಸರು : ಕೆ. ನೇಮರಾಜ ನಾಯ್ಕ (ಜೆಡಿಎಸ್) – 84,023
ಗೆಲುವಿನ ಅಂತರ : 11,344
ಪ್ರತಿಸ್ಪರ್ಧಿ : ಭೀಮ ನಾಯ್ಕ
ಕೂಡ್ಲಿಗಿ (ಎಸ್ಟಿ)
ಗೆದ್ದ ಅಭ್ಯರ್ಥಿ ಹೆಸರು : ಡಾ.ಎನ್.ಟಿ. ಶ್ರೀನಿವಾಸ್ (ಕಾಂಗ್ರೆಸ್) – 1,04,753
ಗೆಲುವಿನ ಅಂತರ : 54,350
ಪ್ರತಿಸ್ಪರ್ಧಿ : ಲೋಕೇಶ್ ವಿ. ನಾಯಕ
ಹರಪನಹಳ್ಳಿ
ಗೆದ್ದ ಅಭ್ಯರ್ಥಿ ಹೆಸರು : ಎಂ.ಪಿ. ಲತಾ ಮಲ್ಲಿಕಾರ್ಜುನ (ಪಕ್ಷೇತರೆ) – 70,194
ಗೆಲುವಿನ ಅಂತರ : 13,845
ಪ್ರತಿಸ್ಪರ್ಧಿ : ಜಿ. ಕರುಣಾಕರ ರೆಡ್ಡಿ
ಹಾವೇರಿ: ‘ಜನರ ಈ ತೀರ್ಪನ್ನು ಅತ್ಯಂತ ಗೌರವಪೂರ್ವಕವಾಗಿ ಒಪ್ಪಿಕೊಳ್ಳುತ್ತೇನೆ. ಬಿಜೆಪಿಯ ಈ ಸೋಲಿನ ಜವಾಬ್ದಾರಿಯನ್ನು ರಾಜ್ಯದ ಮುಖ್ಯಮಂತ್ರಿಯಾಗಿ ನಾನೇ ಹೊರುತ್ತೇನೆ. ಇದನ್ನು ಯಾರ ಹೆಗಲಿಗೂ ಹಾಕುವುದಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಯಾದಗಿರಿ: ಜಿಲ್ಲೆಯ ನಾಲ್ಕು ವಿಧಾನಸಭೆಗಳಲ್ಲಿ ಮೂರು ಕಡೆ ಕಾಂಗ್ರೆಸ್ ಗೆದ್ದಿದ್ದು, ಒಂದು ಕಡೆ ಜೆಡಿಎಸ್ ಗೆದ್ದಿದೆ. ಕಳೆದ ಬಾರಿ ಎರಡು ಸ್ಥಾನ ಗಳಿಸಿದ್ದ ಬಿಜೆಪಿ ಈ ಬಾರಿ ಒಂದು ಕಡೆಯೂ ಗೆದ್ದಿಲ್ಲ.
ಯಾದಗಿರಿ: ಜಿಲ್ಲೆಯ ನಾಲ್ಕು ವಿಧಾನಸಭೆಗಳಲ್ಲಿ ಮೂರು ಕಡೆ ಕಾಂಗ್ರೆಸ್ ಗೆದ್ದಿದ್ದು, ಒಂದು ಕಡೆ ಜೆಡಿಎಸ್ ಗೆದ್ದಿದೆ. ಕಳೆದ ಬಾರಿ ಎರಡು ಸ್ಥಾನ ಗಳಿಸಿದ್ದ ಬಿಜೆಪಿ ಈ ಬಾರಿ ಒಂದು ಕಡೆಯೂ ಗೆದ್ದಿಲ್ಲ.
ಕೊಪ್ಪಳ: ’ಇಷ್ಟೊಂದು ದೊಡ್ಡ ಮತಗಳ ಅಂತರದಿಂದ ಗೆಲುವು ಪಡೆಯಲು ಪಕ್ಷದ ಎಲ್ಲಾ ಕಾರ್ಯಕರ್ತರ ಶ್ರಮ ಕಾರಣ’ ಎಂದು ಕನಕಗಿರಿ ಕ್ಷೇತ್ರದಿಂದ ಗೆಲುವು ಪಡೆದ ಕಾಂಗ್ರೆಸ್‌ನ ಶಿವರಾಜ ತಂಗಡಗಿ ಹೇಳಿದರು.
ಇಲ್ಲಿ ಶನಿವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು ‘ಜನ ದೊಡ್ಡ ಮತಗಳ ಅಂತರದಿಂದ ಗೆಲ್ಲಿಸಿ ನನ್ನ ಜವಾಬ್ದಾರಿಯನ್ನೂ ಅಷ್ಟೇ ಹೆಚ್ಚಿಸಿದ್ದಾರೆ. ಜನರ ನಿರೀಕ್ಷೆಯಂತೆಯೇ ನಡೆದುಕೊಳ್ಳುವೆ. ಕ್ಷೇತ್ರದಲ್ಲಿ ಕೆರೆಗಳನ್ನು ತುಂಬಿಸುವ ಎರಡನೇ ಹಂತದ ಯೋಜನೆಯನ್ನು ಮೊದಲ ಆದ್ಯತೆಯಾಗಿ ಕೈಗೊಳ್ಳುವೆ. ಕೊನೆಯ ಭಾಗದ ರೈತರಿಗೆ ನೀರು ಒದಗಿಸಲಾಗುವುದು. ನವಲಿ ಸಮಾನಾಂತರ ಜಲಾಶಯ ಮಾಡುವುದಷ್ಟೆ ಅಲ್ಲ; ಜಲಾಶಯಗಳನ್ನು ಮಾಡುವ ಗುರಿಯಿದೆ’ ಎಂದರು.
ಇದನ್ನೂ ಓದಿ: ವಿಧಾನಸಭೆ ಚುನಾವಣೆ: ಆಘಾತಕಾರಿ ಸೋಲು, ಅಚ್ಚರಿಯ ಗೆಲುವು ಕಂಡ ನಾಯಕರ ವಿವರ ಇಲ್ಲಿದೆ
ಆಡಳಿತ ವಿರೋಧಿ ಅಲೆ ಕಾರಣವಾಗಿರಬಹುದು: ಸಚಿವ ಜೋಶಿ
ಹುಬ್ಬಳ್ಳಿ: ‘ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಬಹುಶಃ ಆಡಳಿತ ವಿರೋಧಿ ಅಲೆ ಕಾರಣವಾಗಿರಬಹುದು. ಶೀಘ್ರ ಕೋರ್ ಕಮಿಟಿ ಸಭೆ ನಡೆಸಿ ಎಲ್ಲಿ ಎಡವಿದ್ದೇವೆ ಎನ್ನುವ ಕುರಿತು ಚರ್ಚಿಸಲಾಗುವುದು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
‘ಪ್ರಜಾಪ್ರಭುತ್ವದಲ್ಲಿ ಸೋಲು, ಗೆಲುವು ಸಹಜ. ಸೋಲನ್ನು ಸವಾಲಾಗಿ ಸ್ವೀಕರಿಸಿ, ಮುಂದಿನ ಚುನಾವಣೆಗೆ ಸಂಘಟನಾತ್ಮಕವಾಗಿ ಸಿದ್ಧತೆ ನಡೆಸುತ್ತೇವೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಗಾವಿ: ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಸೀಫ್ (ರಾಜು) ಸೇಠ್ ಗೆಲುವಿನ ಸಂಭ್ರಮದಲ್ಲಿ ಪಾಲ್ಗೊಂಡ ಕೆಲ ಕಿಡಿಗೇಡಿಗಳು ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದರು. ಶನಿವಾರ ಮಧ್ಯಾಹ್ನ ಆಸೀಫ್ ಸೇಠ್ ಗೆಲುವು ಖಾತ್ರಿ ಆಗುತ್ತಿದ್ದಂತೆಯೇ ಅಪಾರ ಸಂಖ್ಯೆಯ ಯುವಕರು ಮತ ಎಣಿಕೆ ಕೇಂದ್ರದ ಸುತ್ತ ಸೇರಿದರು. ಬಣ್ಣಗಳನ್ನು ಎರಚಿ, ಸಂಗೀತ ಹಾಕಿಕೊಂಡು ಕುಣಿದರು.
ಕಾಂಗ್ರೆಸ್ – 136
ಬಿಜೆಪಿ – 65
ಜೆಡಿಎಸ್ –19
ಇತರೆ – 4
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.