ADVERTISEMENT

ಬೆಂಗಳೂರು: ರ‍್ಯಾಲಿಯಲ್ಲಿ ಪಿ.ಸಿ. ಮೋಹನ್‌ ಮತಯಾಚನೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 22:28 IST
Last Updated 24 ಏಪ್ರಿಲ್ 2024, 22:28 IST
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್‌ ಅವರು ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ರ‍್ಯಾಲಿ ನಡೆಸಿದರು
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್‌ ಅವರು ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ರ‍್ಯಾಲಿ ನಡೆಸಿದರು   

ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್‌ ಅವರು ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಎಚ್‌ಬಿಆರ್‌ಆರ್ ವಾರ್ಡ್‌ನ ಫಾರೆಸ್ಟ್ ಪಾರ್ಕ್, ಕಮ್ಮನಹಳ್ಳಿಯಲ್ಲಿ ಹಾಗೂ ಮಾರುತಿ ಸೇವಾನಗರ ವಾರ್ಡ್‌ನ ನಾಗಯ್ಯನಪಾಳ್ಯದಲ್ಲಿ ಬುಧವಾರ ಚುನಾವಣಾ ಪ್ರಚಾರ ನಡೆಸಿದರು.

ತಮಿಳು ಭಾಷಿಕರು ಹೆಚ್ಚಿರುವ ಈ ಪ್ರದೇಶದಲ್ಲಿ ಪುದುಚೇರಿ ಗೃಹ ಸಚಿವರಾದ ಎ. ನಮಶಿವಾಯಂ, ಮಂಡಲ ಅಧ್ಯಕ್ಷರಾದ ಮುನಿರಾಜ ಕಾರ್ಣಿಕ್, ಎಂ.ಸಿ.ಶ್ರೀನಿವಾಸ್, ಗೋವಿಂದರಾಜ್, ಮಾಜಿ ಕಾರ್ಪೊರೇಟರ್ ಮಂಜುನಾಥ್, ಮೋಹನ್‌ ಪರ ಮತಯಾಚನೆ ಮಾಡಿದರು.

‘ಪ್ರಧಾನಿ ಮೋದಿಯವರು ಬೆಂಗಳೂರಿಗಾಗಿ ಹೊಂದಿರುವ ‘ವಿಷನ್’ ಅನ್ನು ಕಾರ್ಯರೂಪಕ್ಕೆ ತರುವ ನನ್ನ ಪ್ರಯತ್ನವನ್ನು ಮುಂದುವರಿಸುತ್ತೇನೆ. ಜನಕಲ್ಯಾಣ ಯೋಜನೆಗಳು ಎಲ್ಲ ಫಲಾನುಭವಿಗಳಿಗೆ ದೊರಕುವಂತೆ ಮತ್ತು ಜನರ ಮನೆ ಬಾಗಿಲಿಗೆ ತಲುಪುವಂತೆ ಮಾಡಲು ನಾನು ಶ್ರಮಿಸುತ್ತೇನೆ’ ಎಂದು ಮೋಹನ್ ಭರವಸೆ ನೀಡಿದರು.

ADVERTISEMENT

‘ಮೋದಿಯವರು ಹತ್ತು ವರ್ಷಗಳಲ್ಲಿ ಮೆಟ್ರೊ ರೈಲು, ಸಾರಿಗೆ ವ್ಯವಸ್ಥೆಯ ಆಧುನೀಕರಣ ಸೇರಿದಂತೆ ವಿಶ್ವ ದರ್ಜೆಯ ಮೂಲಸೌಕರ್ಯ ನಿರ್ಮಾಣ ಮತ್ತು ಆ ಮೂಲಕ ಮಹಿಳೆಯರು ಮತ್ತು ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಿ ಬೆಂಗಳೂರಿನ ಜನತೆಯ ಜೀವನದ ಗುಣಮಟ್ಟವನ್ನು ಸುಧಾರಿಸಲು ಕೊಡುಗೆ ನೀಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.