ADVERTISEMENT

LS Polls 2024 | ಈಶ್ವರಪ್ಪ ಮನವೊಲಿಕೆ: ಬಿಜೆಪಿ ಉಸ್ತುವಾರಿ ಅಗರವಾಲ್ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2024, 11:29 IST
Last Updated 24 ಮಾರ್ಚ್ 2024, 11:29 IST
ಕೆ.ಎಸ್. ಈಶ್ವರಪ್ಪ
ಕೆ.ಎಸ್. ಈಶ್ವರಪ್ಪ   

ಮೈಸೂರು: ಈಶ್ವರಪ್ಪ ಬಿಜೆಪಿ ಕಟ್ಟಾಳು. ಚು‌ನಾವಣೆಗೆ ಸ್ಪರ್ಧಿಸದಂತೆ ಅವರ ಮನವೊಲಿಸುವ ಪ್ರಯತ್ನ ಯಶಸ್ವಿ ಆಗಲಿದೆ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ ದಾಸ್ ಅಗರವಾಲ್ ವಿಶ್ವಾಸ ವ್ಯಕ್ತಪಡಿಸಿದರು.‌

ನಗರದಲ್ಲಿ ಭಾನುವಾರ ಪತ್ರಕರ್ತರ ‌ಜೊತೆ ಅವರು ಮಾತನಾಡಿದರು. ಬಿಜೆಪಿ ದೊಡ್ಡ ಪಕ್ಷ. ಏಕಕಾಲಕ್ಕೆ ಎಲ್ಲರಿಗೂ ಅವಕಾಶ ಸಿಗದು. ಪಕ್ಷದ ನಿಷ್ಠಾವಂತ ಕಾರ್ಯಕರ್ತ ಆದವರು ನಿಷ್ಠರಾಗಿಯೇ ಉಳಿಯುತ್ತಾರೆ ಎಂದರು.

ಮೈತ್ರಿಯಿಂದ ಅನುಕೂಲ

ರಾಜ್ಯದಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿಯಿಂದ ಎರಡೂ ಪಕ್ಷಗಳಿಗೆ ಅನುಕೂಲ ಆಗಿದೆ.‌ ಮುಂಚೆ ಲಿಂಗಾಯತ, ಒಕ್ಕಲಿಗದಂತಹ ಪ್ರಬಲ ಸಮುದಾಯಗಳು ಒಂದೊಂದು ಪಕ್ಷದ ಜೊತೆ ಹೆಚ್ಚು ಗುರುತಿಸಿಕೊಳ್ಳುತ್ತಿದ್ದವು. ಈಗ ಎಲ್ಲ ಜಾತಿಗಳೂ ಒಂದೇ ವೇದಿಕೆಯಲ್ಲಿ ಒಗ್ಗೂಡಿವೆ. ರಾಜ್ಯದ ಒಂದು ಕ್ಷೇತ್ರದಲ್ಲೂ ಈ ಬಾರಿ ಕಾಂಗ್ರೆಸ್ ಗೆಲ್ಲುವುದಿಲ್ಲ ಎಂದರು.

ADVERTISEMENT

' ಜೆಡಿಎಸ್ ಜೊತೆಗೂಡಿಯೇ ಪ್ರಚಾರ ಮಾಡುತ್ತೇವೆ. ಸೀಟು ಹಂಚಿಕೆ ಅಂತಿಮ ಆಗದ ಕಾರಣ ಅವರು ಹಿಂದಿನ ಪ್ರಚಾರ ಸಭೆಗಳಿಗೆ ಬಂದಿರಲಿಲ್ಲ. ಬಿಜೆಪಿ ತಾರಾ ಪ್ರಚಾರಕರ ಪಟ್ಟಿಯಲ್ಲಿ ಎಚ್.ಡಿ. ದೇವೇಗೌಡ, ಕುಮಾರಸ್ವಾಮಿ ಸಹ ಇದ್ದಾರೆ' ಎಂದರು.‌

ಸುಮಲತಾ ಒಳ್ಳೆಯ ಸಂಸದೆ: ಬಿಜೆಪಿಯಿಂದ ಸುಮಲತಾ ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ. ಅವರು ಒಳ್ಳೆಯ ಸಂಸದೆ. ಆದರೆ ಮಂಡ್ಯ ಕ್ಷೇತ್ರ ಜೆಡಿಎಸ್ ಗೆ ಬಿಟ್ಟುಕೊಡಲಾಗಿದೆ. ಮುಂದೆ ಪಕ್ಷ ಅವರಿಗೆ ಉತ್ತಮ ಅವಕಾಶಗಳನ್ನು ನೀಡಲಿದೆ ಎಂದರು.

ಪ್ರತಾಪಗಿಂತ ಯದುವೀರ್ ಉತ್ತಮ

ಮೈಸೂರಿನಲ್ಲಿ ಹಾಲಿ ಸಂಸದ ಪ್ರತಾಪ ಸಿಂಹಗಿಂತ ಉತ್ತಮ ಅಭ್ಯರ್ಥಿಯಾಗಿ ಯದುವೀರ್ ಸಿಕ್ಕಿದ ಕಾರಣ ಸಿಂಹ ಅವರಿಗೆ ಟಿಕೆಟ್ ತಪ್ಪಿದೆ. ಮೈಸೂರಿಗೆ ರಾಜರ ಕುಟುಂಬ ಅಪಾರ ಕೊಡುಗೆ ನೀಡಿದೆ. ಆ ಬಗ್ಗೆ ಜನರಲ್ಲಿ ಅಭಿಮಾನ, ಗೌರವ‌ ಇದೆ' ಎಂದು ರಾಧಾ ಮೋಹನದಾಸ್ ಅಗರವಾಲ್ ಹೇಳಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.