ಅಕ್ಷತಾ ಪಾಂಡವಪುರ ಮತ್ತು ಪ್ರಜ್ವಲ್ ದೇವರಾಜ್
ಬೆಂಗಳೂರು: 2020ನೇ ಕ್ಯಾಲೆಂಡರ್ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಮಂಗಳವಾರ ಪ್ರಕಟವಾಗಿದ್ದು, ‘ಜಂಟಲ್‌ಮನ್’ ಚಿತ್ರದಲ್ಲಿನ ನಟನೆಗಾಗಿ ಪ್ರಜ್ವಲ್ ದೇವರಾಜ್ ಅತ್ಯುತ್ತಮ ನಟ (ಸುಬ್ಬಯ್ಯ ನಾಯ್ಡು ಪ್ರಶಸ್ತಿ) ಹಾಗೂ ‘ಪಿಂಕಿ ಎಲ್ಲಿ’ ಚಿತ್ರದಲ್ಲಿನ ನಟನೆಗಾಗಿ ಅಕ್ಷತಾ ಪಾಂಡವಪುರ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.
ಪ್ರಶಸ್ತಿಯು ಇಪ್ಪತ್ತು ಸಾವಿರ ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕವನ್ನು ಒಳಗೊಂಡಿದೆ. ಕೃಷ್ಣೇಗೌಡ ನಿರ್ಮಾಣದ, ಪೃಥ್ವಿ ಕೊಣನೂರು ನಿರ್ದೇಶನದ ‘ಪಿಂಕಿ ಎಲ್ಲಿ’ ಚಿತ್ರವು ಮೊದಲನೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ಪ್ರಶಸ್ತಿಯು ತಲಾ ₹1 ಲಕ್ಷ ನಗದು ಹಾಗೂ 50 ಗ್ರಾಂ ಚಿನ್ನದ ಪದಕ ಒಳಗೊಂಡಿದೆ. ಸಂಗಮೇಶ ಎಸ್.ಸಜ್ಜನರ್ ನಿರ್ದೇಶನದ ‘ಫೋರ್‌ವಾಲ್ಸ್’ ಸಿನಿಮಾ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿ ಪಡೆದಿದೆ.
ಅತ್ಯುತ್ತಮ ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಗಿಳಿಯು ಪಂಜರದೊಳಿಲ್ಲ ಮತ್ತು ಈ ಮಣ್ಣು
ಅತ್ಯುತ್ತಮ ಮಕ್ಕಳ ಚಿತ್ರ ‘ಪದಕ’: ನಿರ್ಮಾಪಕ: ಆದಿತ್ಯ ಆರ್.ಚಿರಂಜೀವಿ, ನಿರ್ದೇಶಕ: ಆದಿತ್ಯ ಆರ್.ಚಿರಂಜೀವಿ
ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ‘ನೀಲಿ ಹಕ್ಕಿ’: ನಿರ್ಮಾಪಕ: ಯೋಗೇಶ್ ಕೆ.ಎಸ್, ನಿರ್ದೇಶಕ: ಗಣೇಶ್ ಹೆಗ್ಡೆ
ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ‘ಜೀಟಿಗೆ’ (ತುಳು) : ನಿರ್ಮಾಪಕ: ಅರುಣ್ ರೈ ಬಾಲಕೃಷ್ಣ, ನಿರ್ದೇಶಕ: ಸಂತೋಷ ಮಾಡ
ಅತ್ಯುತ್ತಮ ಕತೆ: ಶಶಿಕಾಂತ್ ಗಟ್ಟಿ (ಚಿತ್ರ: ರಾಂಚಿ)
ಅತ್ಯುತ್ತಮ ಚಿತ್ರಕತೆ: ರಾಘವೇಂದ್ರ ಕುಮಾರ್(ಚಿತ್ರ: ಚಾಂದಿನಿ ಬಾರ್)
ಅತ್ಯುತ್ತಮ ಸಂಭಾಷಣೆ: ವೀರಪ್ಪ ಮರಳವಾಡಿ (ಚಿತ್ರ: ಹೂವಿನ ಹಾರ)
ಅತ್ಯುತ್ತಮ ಛಾಯಗ್ರಹಣ: ಅಶೋಕ್ ಕಶ್ಯಪ್ (ಚಿತ್ರ: ತಲೆದಂಡ)
ಅತ್ಯುತ್ತಮ ಸಂಗೀತ ನಿರ್ದೇಶನ: ಗಗನ ಬಡೇರಿಯಾ (ಚಿತ್ರ: ಮಾಲ್ಗಡಿ ಡೇಸ್)
ಅತ್ಯುತ್ತಮ ಸಂಕಲನ: ನಾಗೇಂದ್ರ ಕೆ.ಉಜ್ಜನಿ (ಚಿತ್ರ: ಆ್ಯಕ್ಟ್ 1978)
ಅತ್ಯುತ್ತಮ ಬಾಲ ನಟ: ಮಾಸ್ಟರ್ ಅಹಿಲ್ ಅನ್ಯಾರಿ (ಚಿತ್ರ: ದಂತ ಪುರಾಣ)
ಅತ್ಯುತ್ತಮ ಬಾಲ ನಟಿ: ಬೇಬಿ ಹಿತೈಷಿ ಪೂಜಾರ್ (ಚಿತ್ರ: ಪಾರು)
ಅತ್ಯುತ್ತಮ ಕಲಾ ನಿರ್ದೇಶನ: ಗುಣಶೇಖರ್ (ಚಿತ್ರ: ಬಿಚ್ಚುಗತ್ತಿ)
ಅತ್ಯುತ್ತಮ ಗೀತ ರಚನೆ: ಗಾರ್ಗಿ ಕಾರೆಹಕ್ಲು (ಹಾಡು: ಮೌನವು ಮಾತಾಗಿದೆ, ಚಿತ್ರ: ಪರ್ಜನ್ಯ), ಸಚಿನ್ ಶೆಟ್ಟಿ ಕುಂಬ್ಳೆ (ಹಾಡು:ದಾರಿಯೊಂದು ಹುಡುಕುತ್ತಿದೆ, ಚಿತ್ರ: ಈ ಮಣ್ಣು)
ಅತ್ಯುತ್ತಮ ಹಿನ್ನೆಲೆ ಗಾಯಕ: ಅನಿರುದ್ಧ ಶಾಸ್ತ್ರಿ (ಚಿತ್ರ: ಆಚಾರ್ಯ ಶ್ರೀ ಶಂಕರ)
ಅತ್ಯುತ್ತಮ ಹಿನ್ನೆಲೆ ಗಾಯಕಿ: ಅರುಂಧತಿ ವಶಿಷ್ಠ (ಚಿತ್ರ: ದಂತ ಪುರಾಣ)
ತೀರ್ಪುಗಾರರ ವಿಶೇಷ ಪ್ರಶಸ್ತಿ:
ನಟನೆಗಾಗಿ (ಮರಣೋತ್ತರವಾಗಿ): ಬಿ.ವಿಜಯ್ ಕುಮಾರ್(ಸಂಚಾರಿ ವಿಜಯ್)
ವಸ್ತ್ರ ವಿನ್ಯಾಸ: ವಲ್ಲಿ (ಚಿತ್ರ: ಸಾರವಜ್ರ)
ಪ್ರಸಾದನ: ರಮೇಶ್ ಬಾಬು (ತಲೆದಂಡ)
ಶಬ್ದ ಗ್ರಹಣ: ವಿ.ಜಿ.ರಾಜನ್(ಅಮೃತ ಅಪಾರ್ಟ್‌ಮೆಂಟ್ಸ್)
ವಿಶೇಷ ಪ್ರಶಸ್ತಿ(ಪ್ರಮಾಣ ಪತ್ರ)
ವಿಶೇಷಚೇತನ ನಟ: ವಿಶ್ವಾಸ್ ಕೆ.ಎಸ್.(ಚಿತ್ರ: ಅರಬ್ಬೀ)
ಅತ್ಯುತ್ತಮ ನಿರ್ಮಾಣ ನಿರ್ವಾಹಕ: ಚಂಪಕದಾಮ ಬಾಬು (ಚಿತ್ರ: ಕನ್ನಡಿಗ)
ಪ್ರಶಸ್ತಿ ಮೊತ್ತ
ಮೊದಲನೇ ಅತ್ಯುತ್ತಮ ಚಿತ್ರ: ₹1 ಲಕ್ಷ ನಗದುಹಾಗೂ 50 ಗ್ರಾಂ ಚಿನ್ನದ ಪದಕ
ಎರಡನೇ ಅತ್ಯುತ್ತಮ ಚಿತ್ರ: ₹75 ಸಾವಿರ ನಗದುಹಾಗೂ 100 ಗ್ರಾಂ ಬೆಳ್ಳಿ ಪದಕ
ಮೂರನೇ ಅತ್ಯುತ್ತಮ ಚಿತ್ರ: ₹50 ಸಾವಿರ ನಗದುಹಾಗೂ 100 ಗ್ರಾಂ ಬೆಳ್ಳಿ ಪದಕ
ವಿಶೇಷ ಸಾಮಾಜಿಕ ಕಾಳಜಿಯ ಪ್ರಶಸ್ತಿ: ₹75 ಸಾವಿರ ನಗದುಹಾಗೂ 100 ಗ್ರಾಂ ಬೆಳ್ಳಿ ಪದಕ
ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ನಟಿ: ₹20 ಸಾವಿರ ನಗದುಹಾಗೂ 100 ಗ್ರಾಂ ಬೆಳ್ಳಿ ಪದಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.