ADVERTISEMENT

63ನೇ ಸಿನಿಮಾಕ್ಕೆ ನಯನ ಸಿದ್ಧತೆ?

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 10:10 IST
Last Updated 15 ಜೂನ್ 2018, 10:10 IST
ನಯನ ತಾರಾ
ನಯನ ತಾರಾ   

‘ಲೇಡಿ ಸೂಪರ್ ಸ್ಟಾರ್’ ನಯನ್ ತಾರಾ ತಮ್ಮ ವೃತ್ತಿಜೀವನದ 63ನೇ ಸಿನಿಮಾಕ್ಕೆ ತಯಾರಿ ನಡೆಸಿದ್ದಾರೆ. ಟಾಲಿವುಡ್‌ನ‌ಲ್ಲಿ ಸಖತ್ ಬ್ಯೂಸಿಯಾಗಿರುವ ಈ ಬ್ಯೂಟಿ, ನಿರ್ದೇಶಕ ಸರ್ಜುನ್ ಕೆ.ಎಂ. ಅವರ ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿಸಲು ಸಿದ್ಧತೆ ನಡೆಸುತ್ತಿದ್ದಾರೆ.

ಪಕ್ಕಾ ಸಸ್ಪೆನ್ಸ್ ಮತ್ತು ಹಾರರ್ ಕಥೆಯುಳ್ಳ ಈ ಸಿನಿಮಾವನ್ನು ಕೆ.ಜೆ.ಆರ್. ಸ್ಟುಡಿಯೊದ ರಾಜೇಶ್ ನಿರ್ಮಾಣ ಮಾಡುತ್ತಿದ್ದು, ಚಿತ್ರದ ತಾರಾಗಣ ಇನ್ನೂ ಅಂತಿಮಗೊಂಡಿಲ್ಲ. ಖ್ಯಾತ ನಿರ್ದೇಶಕರಾದ ಮಣಿರತ್ನಂ ಮತ್ತು ಎ.ಆರ್. ಮುರುಗದಾಸ್ ಅವರ ಶಿಷ್ಯನಾಗಿರುವ ಸರ್ಜುನ್ ತಮ್ಮ ಚಿತ್ರದಲ್ಲಿ ನಯನ್‌ ನಟಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

‘ಲಕ್ಷ್ಮಿ’ ಮತ್ತು ‘ಮಾ’ ಎನ್ನುವ ಕಿರುಚಿತ್ರಗಳ ಮೂಲಕ ಸರ್ಜುನ್ ಟಾಲಿವುಡ್‌ನಲ್ಲಿ ಈಗಾಗಲೇ ಹೆಸರು ಮಾಡಿದ್ದು, ಅವರ ಹೊಸ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಹುಟ್ಟುಹಾಕಿದೆ.

ADVERTISEMENT

‘ಆರಂಬ್‌’ ಯಶಸ್ಸಿನ ನಂತರ ಟಾಲಿವುಡ್‌ನಲ್ಲಿ ತಮ್ಮ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿರುವ ನಯನ್ ತಾರಾ ಕೈಯಲ್ಲಿ ಈಗಾಗಲೇ ‘ವಿಶ್ವಾಸಂ’, ‘ಆರಂಬ್‌ 2’, ‘ಸೆ ರೇ ನರಸಿಂಹ ರೆಡ್ಡಿ’ ಚಿತ್ರಗಳಿವೆ. ಇನ್ನೂ ಹೆಸರಿಡದ ಮತ್ತೊಂದು ಚಿತ್ರದಲ್ಲಿ ನಯನ್, ನಟ ಶಿವಕಾರ್ತಿಕೇಯನ್ ಜತೆ ನಟಿಸುತ್ತಿದ್ದಾರೆ. ಸದ್ಯಕ್ಕೆ ಚಿತ್ರೀಕರಣ ಪೂರ್ಣಗೊಂಡಿರುವ ‘ಕೊಲಮಾವು ಕೋಕಿಲಾ’ ಸಿನಿಮಾದ ಬಿಡುಗಡೆಗಾಗಿ ನಯನ್ ಕಾತರದಿಂದ ಕಾಯುತ್ತಿದ್ದಾರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.