ನವದೆಹಲಿ: ಬಾಲಿವುಡ್ ಸೂಪರ್‌ಸ್ಟಾರ್ ಆಮೀರ್ ಖಾನ್ ಅವರನ್ನು ಗುರುನಾನಕ್ ರೀತಿ ತೋರಿಸಿರುವ ಪೋಸ್ಟರ್ ಸಂಪೂರ್ಣವಾಗಿ ನಕಲಿ ಮತ್ತು ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಲಾಗಿದೆ ಎಂದು ನಟನ ವಕ್ತಾರರು ಸೋಮವಾರ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿನ ನಕಲಿ ಸುದ್ದಿಗಳ ಬಗ್ಗೆ ಅಭಿಮಾನಿಗಳು ಎಚ್ಚರದಿಂದಿರಬೇಕು ಎಂದು ಅವರು ಕೇಳಿಕೊಂಡಿದ್ದಾರೆ.
ಆಮೀರ್ ಖಾನ್ ಅವರನ್ನು ಗುರುನಾನಕ್ ರೀತಿ ತೋರಿಸುವ ಪೋಸ್ಟರ್ ಸಂಪೂರ್ಣವಾಗಿ ನಕಲಿ ಮತ್ತು ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಲ್ಪಟ್ಟಿದೆ. ಅಂತಹ ಪೋಸ್ಟರ್‌ಗೂ ಆಮೀರ್ ಖಾನ್ ಅವರಿಗೆ ಯಾವುದೇ ಸಂಬಂಧವಿಲ್ಲ. ಅವರು ಗುರುನಾನಕ್ ಬಗ್ಗೆ ಅತ್ಯುನ್ನತ ಗೌರವವನ್ನು ಹೊಂದಿದ್ದಾರೆ. ಎಂದಿಗೂ ಅಗೌರವ ತೋರುವುದಿಲ್ಲ. ದಯವಿಟ್ಟು ನಕಲಿ ಸುದ್ದಿಗಳಿಗೆ ಬಲಿಯಾಗಬೇಡಿ ಎಂದು ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಿಖ್ ಧರ್ಮದ ಸ್ಥಾಪಕ ಗುರುನಾನಕ್ ಕುರಿತಾದ ಮುಂದಿನ ಚಿತ್ರದಲ್ಲಿ ಅಮೀರ್ ಖಾನ್ ನಟಿಸುತ್ತಿದ್ದು, ಆ ಕುರಿತಂತೆ ನಕಲಿ ಪೋಸ್ಟರ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದು ಸಿಖ್ಕರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.