ADVERTISEMENT

ಬಾರ್‌ಗಳಂತೆ ಜಿಮ್‌ಗೆ ಅನುಮತಿ ನೀಡಿ: ಸರ್ಕಾರಕ್ಕೆ ದುನಿಯಾ ವಿಜಯ್‌ ಮನವಿ

​ಪ್ರಜಾವಾಣಿ ವಾರ್ತೆ
Published 5 ಮೇ 2020, 14:10 IST
Last Updated 5 ಮೇ 2020, 14:10 IST
ದುನಿಯಾ ವಿಜಯ್
ದುನಿಯಾ ವಿಜಯ್   

ಬೆಂಗಳೂರು: ರಾಜ್ಯದಲ್ಲಿನಿನ್ನೆಯಿಂದ ಬಾರ್‌ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಆದೇ ರೀತಿ ಜಿಮ್‌ಗಳಿಗೂಅನುಮತಿ ನೀಡುವಂತೆ ನಟ ದುನಿಯಾ ವಿಜಯ್‌ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

‘ಬಾರ್‌ಗಳಿಗೆ ಹೋಗುವವರಿಗೆ ಸರದಿ ಸಾಲಿನಲ್ಲಿ ನಿಲ್ಲುವವರಿಗೆ ಐದಡಿ ದೂರ ನಿಲ್ಲಲು ಸೂಚಿಸಲಾಗಿದೆ. ನಾವು ಜಿಮ್‌ನಲ್ಲಿ ಕೂಡ ಏಳಡಿಯಷ್ಟೇ ಅಂತರ ಇಟ್ಟುಕೊಳ್ಳುತ್ತೇವೆ. ಸ್ಯಾನಿಟೈಸರ್‌ ಬಳಸುತ್ತೇವೆ. ಹೈಜಿನಿಕ್‌ ಆಗಿ ಇರಿಸುತ್ತೇವೆ. ಆರೋಗ್ಯ ತಪಾಸಣೆ ಕೂಡ ನಡೆಯಲಿ. ಒಂದು ಬಾರಿಗೆ ಇಷ್ಟೇ ಮಂದಿ ಎಂದು ನಿಗದಿಗೊಳಿಸುತ್ತೇವೆ. ಹಾಗಾಗಿ ದಯವಿಟ್ಟು ಜಿಮ್‌ ಓಪನ್‌ ಮಾಡಲು ಅನುಮತಿ ಕೊಡಿ’ ಎಂಬುದು ನನ್ನ ಪರಿಚಿತ ಜಿಮ್‌ ಮಾಲೀಕರ ಮನವಿಯಾಗಿದೆ. ದಯವಿಟ್ಟು ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ನಾನು ಕೂಡ ವಿನಂತಿಸಿಕೊಳ್ಳುತ್ತೇನೆ ಎಂದು ದುನಿಯಾ ವಿಜಯ್‌ ಮನವಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT