ADVERTISEMENT

4 ಸರ್ಕಾರಿ ಶಾಲೆ ದತ್ತುಪಡೆದ ಕಿಚ್ಚ ಸುದೀಪ್‌

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 16:01 IST
Last Updated 16 ಜುಲೈ 2020, 16:01 IST
ಸುದೀಪ್‌
ಸುದೀಪ್‌   

ನಟಕಿಚ್ಚ ಸುದೀಪ್‌ ತಮ್ಮ ಸಾಮಾಜಿಕ ಸೇವಾ ಕೈಂಕರ್ಯ ಮುಂದುವರಿಸಿದ್ದು, ಕಿಚ್ಚ ಸುದೀಪ್‌ ಚಾರಿಟಬಲ್ ಟ್ರಸ್ಟ್‌ನಿಂದ ನಾಲ್ಕು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ದತ್ತು ಸ್ವೀಕರಿಸಿದ್ದಾರೆ.

ಶಿಕ್ಷಕರ ವೇತನ ಮತ್ತು ವಿದ್ಯಾರ್ಥಿಗಳ ವೇತನ ಹೊರತುಪಡಿಸಿ, ಶಾಲೆಯ ಅಭಿವೃದ್ಧಿ ಚಟುವಟಿಕೆಗಳ ಜವಾಬ್ದಾರಿಯನ್ನು ಈ ಟ್ರಸ್ಟ್ ನಿರ್ವಹಿಸಲಿದೆ. ಮೊದಲ ಹಂತವಾಗಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಲ್ಕು ಸರ್ಕಾರಿ ಶಾಲೆಗಳನ್ನುಹಿರಿಯೂರು ಮತ್ತು ಚಳ್ಳಕೆರೆ ಬಿಇಒಗಳ ಸಮ್ಮುಖದಲ್ಲಿಕಿಚ್ಚಸುದೀಪ್‌ ಚಾರಿಟಬಲ್ ಟ್ರಸ್ಟ್ ದತ್ತು ತೆಗೆದುಕೊಂಡಿದೆ.

ಸರ್ಕಾರಿ ಶಾಲೆಯಲ್ಲಿ ಕಲಿಯುವ ಬಡಮಕ್ಕಳ ಶಿಕ್ಷಣದ ಗುಣಮಟ್ಟ ಸುಧಾರಿಸಬೇಕೆಂದ ಸುದೀಪ್‌ ಒತ್ತಾಸೆಯಂತೆ, ಈ ನಾಲ್ಕು ಶಾಲೆಗಳನ್ನು ಡಿಜಿಟಲೈಜ್‌ ಮಾಡಲಾಗುತ್ತಿದೆ. ಇದರ ಭಾಗವಾಗಿ ನಾಲ್ಕೂ ಶಾಲೆಗಳಿಗೆ ಕಂಪ್ಯೂಟರ್‌ಗಳನ್ನು ನೀಡಲಾಗುತ್ತಿದೆ. ಮಾರ್ಚ್‌ ತಿಂಗಳಿನಲ್ಲೇ ಶಾಲೆ ದತ್ತುಪಡೆಯುವ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ, ಕೊರೊನಾ ಲಾಕ್‌ಡೌನ್‌ ಕಾರಣಕ್ಕೆ ಅದನ್ನು ಮುಂದೂಡಲಾಗಿತ್ತು ಎನ್ನುತ್ತಾರೆ ಸುದೀಪ್‌ ಸಮೀಪ ವರ್ತಿಗಳು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.