ADVERTISEMENT

ನಿಮ್ಮ ಪ್ರೀತಿ, ಬೆಂಬಲವೇ ನನಗೆ ಶಕ್ತಿ: ಇವರಿಗೆ ಹಾಡು ಸಮರ್ಪಿಸಿದ ಕಿಚ್ಚ ಸುದೀಪ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಅಕ್ಟೋಬರ್ 2025, 6:36 IST
Last Updated 9 ಅಕ್ಟೋಬರ್ 2025, 6:36 IST
<div class="paragraphs"><p>ನಟ ಕಿಚ್ಚ ಸುದೀ‍ಪ್</p></div>

ನಟ ಕಿಚ್ಚ ಸುದೀ‍ಪ್

   

ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್‌ ನಟಿಸುತ್ತಿರುವ ಬಹುನಿರೀಕ್ಷಿತ ಮಾರ್ಕ್ ಚಿತ್ರದ ಮೊದಲ ಹಾಡು ರಿಲೀಸ್ ಆಗಿದೆ. ಸರೆಗಮಪ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ 'ಸೈಕೋ ಸೈತಾನ್‌' ಕನ್ನಡ ಹಾಡು ಬಿಡುಗಡೆಯಾಗಿದೆ.

ರಿಲೀಸ್ ಆದ ಮಾರ್ಕ್‌ ಸಿನಿಮಾದ ಮೊದಲ ‘ಸೈಕೋ ಸೈತಾನ್‌’ ಹಾಡಿನಲ್ಲಿ ಕಿಚ್ಚ ಸುದೀಪ್ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ. ‌ಕಿಚ್ಚ ಸುದೀಪ್‌ ಡ್ಯಾನ್ಸ್‌ ನೋಡಿದ ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲೂ ‘ಸೈಕೋ ಸೈತಾನ್‌’ ಹಾಡು ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.

ADVERTISEMENT

ನಟ ಕಿಚ್ಚ ಸುದೀಪ್

ಇನ್ನು, ಮಾರ್ಕ್‌ ಸಿನಿಮಾದ ಮೊದಲ ಹಾಡು ಬಿಡುಗಡೆ ಬಗ್ಗೆ ಕಿಚ್ಚ ಸುದೀಪ್ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅದರಲ್ಲಿ ನಿಮ್ಮ ಪ್ರೀತಿ ಬೆಂಬಲವೇ ನನಗೆ ಶಕ್ತಿ ಎನ್ನುತ್ತಾ ಅಭಿಮಾನಿಗಳಿಗೆ ಮೊದಲ ಹಾಡು ಅರ್ಪಿಸಿದ್ದಾರೆ.

ಕಿಚ್ಚ ಸುದೀಪ್ ಟ್ವಿಟ್‌ನಲ್ಲಿ ಏನಿದೆ?

‘MARK ನ ಈ ಸಾಹಿತ್ಯ ನನ್ನೆಲ್ಲ ಜನರಿಗೆ ಸಮರ್ಪಿಸಲಾಗಿದೆ. ನಿಮ್ಮ ಪ್ರೀತಿ, ನಿಮ್ಮ ಬೆಂಬಲ. ಅದು ನನ್ನ ಶಕ್ತಿ. ನೀವು ನನಗೆ ಅಭಿಮಾನಿಗಳಿಗಿಂತ ಹೆಚ್ಚು. ನಿಜವಾದ ಬಾದ್‌ಶಾಗಳು. ಈಗಲೇ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಲಿರಿಕಲ್ ವೀಡಿಯೊವನ್ನು ವೀಕ್ಷಿಸಿ’ ಎಂದು ಬರೆದುಕೊಂಡಿದ್ದಾರೆ.

ಅನೂಪ್ ಭಂಡಾರಿ ಅವರು ಮಾರ್ಕ್‌ ಸಿನಿಮಾದ ಮೊದಲ ಹಾಡಿಗೆ ಸಾಹಿತ್ಯ ಒದಗಿಸಿದ್ದಾರೆ. ವಿಜಯ್ ಪ್ರಕಾಶ್, ಅಜನೀಶ್ ಲೋಕನಾಥ್ ಹಾಗೂ ಅನಿರುದ್ಧ ಶಾಸ್ತ್ರಿ ಕಂಠದಲ್ಲಿ ಹಾಡು ಮೂಡಿ ಬಂದಿದೆ. ಅಜನೀಶ್ ಲೋಕನಾಥ್ ಟ್ಯೂನ್ ಹಾಕಿದ್ದು, ಸುದೀಪ್ ಪಾತ್ರದ ಮ್ಯಾನರಿಸಂನ್ನು ಹಾಡಿನಲ್ಲಿ ಕಟ್ಟಿಕೊಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.