ADVERTISEMENT

ತೆಲುಗು ನಟ ನಾಸರ್‌ಗೆ ಚಿತ್ರೀಕರಣ ವೇಳೆ ಗಾಯ: ಆತಂಕವಿಲ್ಲ ಎಂದ ವೈದ್ಯರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಆಗಸ್ಟ್ 2022, 9:49 IST
Last Updated 20 ಆಗಸ್ಟ್ 2022, 9:49 IST
ನಾಸರ್‌
ನಾಸರ್‌   

ಬಹುಭಾಷಾ ನಟ ನಾಸರ್‌ ಚಿತ್ರೀಕರಣದ ವೇಳೆ ಗಾಯಗೊಂಡಿದ್ದು ಅವರನ್ನು ಆಸ್ಪತ್ರಗೆ ದಾಖಲಿಸಿ ಬಿಡುಗಡೆ ಮಾಡಲಾಗಿದೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

ಹೈದರಾಬಾದ್‌ನಲ್ಲಿರುವ ಪೊಲೀಸ್ ಅಕಾಡೆಮಿಯಲ್ಲಿ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ನಾಸರ್ ಅವರ ಎಡಗಣ್ಣಿನ ಕೆಳ ಭಾಗದಲ್ಲಿ ಪೆಟ್ಟಾಗಿ ರಕ್ತಸ್ರಾವವಾಗಿದೆ.ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ನಂತರ ಅವರನ್ನು ಬಿಡುಗಡೆಗೆ ಮಾಡಲಾಗಿದೆ.

ಸದ್ಯ ಅವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು ಕೆಲವೇ ದಿನಗಳಲ್ಲಿ ಚಿತ್ರೀಕರಣಕ್ಕೆ ಹಾಜರಾಗಲಿದ್ದಾರೆ ಎಂದು ತಮಿಳು ಸಿನಿಮಾದ ಸಹಾಯಕ ನಿರ್ದೇಶಕರೊಬ್ಬರು ಹೇಳಿದ್ದಾರೆ. ನಾಸರ್ ಅವರು ತಮಿಳು ಚಿತ್ರದ ಶೂಟಿಂಗ್‌ ಸಮಯಲ್ಲಿ ಗಾಯಗೊಂಡಿದ್ದಾರೆ. ಆದರೆ ಈ ಚಿತ್ರದ ಹೆಸರು ತಿಳಿದು ಬಂದಿಲ್ಲ.

ADVERTISEMENT

ಸಿನಿಮಾದ ಫೈಟಿಂಗ್‌ ದೃಶ್ಯವನ್ನು ಶೂಟಿಂಗ್‌ ಮಾಡುವಾಗ ನಾಸರ್‌ ಅವರು ಮೆಟ್ಟಿಲಿನಿಂದ ಜಾರಿ ಬಿದ್ದಾಗಎಡಭಾಗದ ಕಣ್ಣಿನ ಕೆಳಭಾಗದಲ್ಲಿ ಗಾಯವಾಗಿತ್ತು. ನಾಸರ್‌ ಆರೋಗ್ಯವಾಗಿದ್ದು ಆತಂಕಪಡುವ ಅಗತ್ಯವಿಲ್ಲ ಎಂದು ವೈದರು ತಿಳಿಸಿದ್ದಾರೆ.

ತಮಿಳು, ತೆಲುಗು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಾಸರ್‌ ಪೋಷಕ ನಟರಾಗಿದ್ದಾರೆ. ಕನ್ನಡದಲ್ಲೂ ಅವರು ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.