ADVERTISEMENT

‘ಉರಿ’ ಖ್ಯಾತಿಯ ಆದಿತ್ಯ ನಿರ್ದೇಶನದ ಮುಂಬರುವ ಚಿತ್ರದಲ್ಲಿ ನಟ ರಣವೀರ್‌ ಸಿಂಗ್‌

ಪಿಟಿಐ
Published 27 ಜುಲೈ 2024, 10:48 IST
Last Updated 27 ಜುಲೈ 2024, 10:48 IST
<div class="paragraphs"><p>ರಣವೀರ್‌ ಸಿಂಗ್‌</p></div>

ರಣವೀರ್‌ ಸಿಂಗ್‌

   

ಇನ್‌ಸ್ಟಾಗ್ರಾಮ್ 

ಮುಂಬೈ: ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಅವರು ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಖ್ಯಾತಿಯ ನಿರ್ದೇಶಕ ಆದಿತ್ಯ ಧಾರ್‌ ಅವರ ಮುಂದಿನ ಚಿತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರ ತಯಾರಕರು ತಿಳಿಸಿದ್ದಾರೆ.

ಹೊಸ ಸಿನಿಮಾ ಸಂಬಂಧ ‘ಜಿಯೋ ಸ್ಟುಡಿಯೋಸ್‌’ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡು ಮಾಹಿತಿ ನೀಡಿದೆ.

ಚಿತ್ರಕ್ಕೆ ಇನ್ನಷ್ಟೇ ಹೆಸರಿಡಬೇಕಿದೆ. ಚಿತ್ರದಲ್ಲಿ ಸಂಜಯ್ ದತ್, ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್ ಮತ್ತು ಆರ್. ಮಾಧವನ್ ಸೇರಿದಂತೆ ದೊಡ್ಡ ತಾರಾಗಣವಿದೆ ಎಂದು ತಿಳಿಸಿದೆ.

‘ಈ ಸಿನಿಮಾದ ಮೂಲಕ ಕನಸುಗಳು ಹುಟ್ಟಿಕೊಂಡಿವೆ. ಆದಿತ್ಯ ಧಾರ್ ನಿರ್ದೇಶನದ, ರಣವೀರ್‌ ಸಿಂಗ್‌ ಅಭಿನಯ‌ದ ಸಿನಿಮಾವು ಹಿಂದೆಂದಿಗಿಂತಲೂ ಉತ್ತಮ ಸಿನಿಮಾ ನೀಡಲು ಉತ್ಸುಕರಾಗಿದ್ದೇವೆ’ ಎಂದು ಜಿಯೋ ಸ್ಟುಡಿಯೋಸ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದೆ.

‘ಇದು ನನ್ನ ಅಭಿಮಾನಿಗಳಿಗೆ, ತಾಳ್ಮೆಯಿಂದ ನನ್ನ ಸಿನಿಮಾಗಳಿಗಾಗಿ ಕಾಯುವ ಪ್ರೇಕ್ಷಕರಿಗೆ ಈ ಬಾರಿ ಉತ್ತಮ ಸಿನಿಮಾದೊಂದಿಗೆ ನಿಮ್ಮ ಮುಂದೆ ಬರುತ್ತೇನೆ. ಸದಾ ನನ್ನ ಮೇಲೆ ನಿಮ್ಮ ಆಶೀರ್ವಾದ ಇರಲಿ’ ಎಂದು ಪೋಸ್ಟ್‌ನಲ್ಲಿ ರಣವೀರ್‌ ಸಿಂಗ್‌ ಬರೆದುಕೊಂಡಿದ್ದಾರೆ.

ಈ ಚಿತ್ರವನ್ನು B62 ಸ್ಟುಡಿಯೋಸ್ ಮತ್ತು ಜಿಯೋ ಸ್ಟುಡಿಯೋಸ್‌ ನಿರ್ಮಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.