ADVERTISEMENT

ಮಾಸ್ ರಾಜಾ ರವಿ ತೇಜಾ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಘೋಷಣೆ

ಪಿಟಿಐ
Published 3 ನವೆಂಬರ್ 2021, 12:43 IST
Last Updated 3 ನವೆಂಬರ್ 2021, 12:43 IST
ರವಿ ತೇಜಾ
ರವಿ ತೇಜಾ   

ಬೆಂಗಳೂರು: ತೆಲುಗು ಮಾಸ್ ನಟ ರವಿ ತೇಜಾ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾಘೋಷಣೆಯಾಗಿದೆ. ಈ ವಿಚಾರವನ್ನು ಸ್ವತಃ ರವಿ ತೇಜಾ ಅವರೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

‘ಟೈಗರ್ ನಾಗೇಶ್ವರ್ ರಾವ್‘ ಎಂಬ ಹೆಸರಿನ ಪ್ಯಾನ್ ಇಂಡಿಯಾ ಚಿತ್ರ ಸೆಟ್ಟೆರಲಿದ್ದು, ಮೊದಲ ಪೋಸ್ಟರ್ ಇಂದು ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ನಾಗೇಶ್ವರ್ ರಾವ್ ಆಗಿ ರವಿ ತೇಜ ಅಭಿನಯಿಸುತ್ತಿದ್ದಾರೆ.

ಇದು ರವಿ ತೇಜಾ ಅವರ 71 ನೇ ಚಿತ್ರವಾಗಿದ್ದು ವಂಶಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ತೇಜ್ ನಾರಾಯಣ್ ಅಗರವಾಲ್ ಅವರು ನಿರ್ಮಾಣ ಮಾಡಲಿದ್ದಾರೆ. ಈ ಸಿನಿಮಾ ತೆಲುಗು, ಕನ್ನಡ, ತಮಿಳು, ಮಲೆಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗಲಿದೆ.‌

ADVERTISEMENT

70 ರ ದಶಕದಲ್ಲಿ ಆಂಧ್ರಪ್ರದೇಶ ಕಡಪಾ ಜಿಲ್ಲೆಯಲ್ಲಿ ಸದ್ದು ಮಾಡಿದ್ದ ಕುಖ್ಯಾತ ದರೋಡೆಕೋರ ನಾಗೇಶ್ವರ್ ರಾವ್ ಜೀವನಗಾಥೆಯನ್ನು ಇದು ಒಳಗೊಂಡಿದೆ ಎನ್ನಲಾಗಿದೆ. ನಾಗೇಶ್ವರ್ ರಾವ್1987 ರಲ್ಲಿಚೆನ್ನೈ ಜೈಲಿನಿಂದ ತಪ್ಪಿಸಿಕೊಂಡು ಬರುವಾಗಪೊಲೀಸರ ಗುಂಡಿಗೆ ಬಲಿಯಾಗಿದ್ದ.

ಇನ್ನು ಇತ್ತೀಚೆಗಷ್ಟೇ ರವಿ ತೇಜಾ ಅವರು ‘ಆರ್‌ಟಿ 70’ಪ್ರೊಜೆಕ್ಟ್ ಘೋಷಣೆ ಮಾಡಿದ್ದರು. ಉಳಿದಂತೆ ‘ಖಿಲಾಡಿ’, ‘ರಮಾ ರಾವ್ ಆನ್ ಡುಟಿ’, ‘ಧಮಾಕಾ’ಚಿತ್ರಗಳು ಬಿಡುಗಡೆಯಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.