ADVERTISEMENT

ನಟ ಸೂರ್ಯಗೆ ₹44 ಲಕ್ಷ ಮೌಲ್ಯದ ರೊಲೆಕ್ಸ್ ವಾಚ್ ಉಡುಗೊರೆ ಕೊಟ್ಟ ಕಮಲ್ ಹಾಸನ್!

ವಿಕ್ರಮ್ ಸಿನಿಮಾ ಗೆದ್ದ ಖುಷಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜೂನ್ 2022, 6:13 IST
Last Updated 9 ಜೂನ್ 2022, 6:13 IST
ಕಮಲ್ ಹಾಸನ್ ಅವರಿಂದ ನಟ ಸೂರ್ಯ ದುಬಾರಿ ವಾಚ್ ಉಡುಗೊರೆ ಪಡೆದರು
ಕಮಲ್ ಹಾಸನ್ ಅವರಿಂದ ನಟ ಸೂರ್ಯ ದುಬಾರಿ ವಾಚ್ ಉಡುಗೊರೆ ಪಡೆದರು   

ಬೆಂಗಳೂರು: ಇತ್ತೀಚೆಗೆ ತೆರೆಕಂಡು ಉ‌ತ್ತಮ ಪ್ರಶಂಸೆಗಳಿಸುತ್ತಿರುವ ಕಮಲ್ ಹಾಸನ್ ಅಭಿನಯದ ವಿಕ್ರಮ್ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲೂ ಕೂಡ ದೊಡ್ಡ ಸದ್ದು ಮಾಡುತ್ತಿದೆ.

ಇನ್ನೊಂದೆಡೆ ಚಿತ್ರದ ಯಶಸ್ಸಿನ ಸಂತಸದಲ್ಲಿರುವ ಕಮಲ್ ಹಾಸನ್ ಅವರು ನಿರ್ದೇಶಕ ಲೋಕೇಶ್ ಕನಗರಾಜ್ ಅವರಿಗೆ ದುಬಾರಿ ಕಾರ್ ಉಡುಗೊರೆ ನೀಡಿದ ಬೆನ್ನಲ್ಲೇ ಚಿತ್ರತಂಡದ ಇತರರಿಗೂ ಕೂಡ ಕಮಲ್ ಅವರು ದುಬಾರಿ ಉಡುಗೊರೆ ನೀಡಿ ಗಮನ ಸೆಳೆಯುತ್ತಿದ್ದಾರೆ.

ಇದೀಗ ನಟ ಸೂರ್ಯ ಶಿವಕುಮಾರ್ ಅವರಿಗೂ ಕೂಡ ಕಮಲ್ ಹಾಸನ್ ಅವರು ತಮ್ಮ ಬಳಿ ಇದ್ದ ದುಬಾರಿ ವಾಚ್ ಉಡುಗೊರೆಯಾಗಿ ನೀಡಿದ್ದಾರೆ. 44 ಲಕ್ಷ ರೂಪಾಯಿ ಮೌಲ್ಯದ ರೊಲೆಕ್ಸ್ ವಾಚ್‌ ಅನ್ನು ಸೂರ್ಯ ಕಮಲ್ ಅವರಿಂದ ಪಡೆದಿದ್ದಾರೆ.

ADVERTISEMENT

ವಿಕ್ರಮ್ ಸಿನಿಮಾದಲ್ಲಿ ಸೂರ್ಯ ಅವರು ಕೇವಲ 10 ನಿಮಿಷ ಕಾಣಿಸಿಕೊಂಡರೂ ಗಮನ ಸೆಳೆಯುವ ನಟನೆ ಮಾಡಿದ್ದಾರೆ. ಚಿತ್ರದಲ್ಲಿ ಅವರ ಪಾತ್ರ ಕೂಡ ಡ್ರಗ್ಸ್ ಮಾಫಿಯಾದ ಡಾನ್ ರೋಲೆಕ್ಸ್ ಎಂಬುದು ಕೂಡ ಇಲ್ಲಿ ಗಮನಾರ್ಹ.

ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಕಂಡು ನಟ ಕಮಲ್ ಹಾಸನ್, ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದರು. ಅಲ್ಲದೆ, ಚಿತ್ರತಂಡ ಮತ್ತು ನಿರ್ಮಾಣ ಹಂತದಲ್ಲಿ ಶ್ರಮಿಸಿದವರಿಗೂ ಧನ್ಯವಾದ ಹೇಳಿದ್ದಾರೆ. ನಿರ್ದೇಶಕ ಲೋಕೇಶ್ ಕನಕರಾಜ್ ಅವರಿಗೆ ದುಬಾರಿ ಐಷಾರಾಮಿ ಲೆಕ್ಸಸ್ ಕಾರನ್ನು ಉಡುಗೊರೆ ನೀಡಿದ್ದಾರೆ.

ಅಲ್ಲದೆ, ವಿಕ್ರಮ್ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದವರಿಗೆ, ಕಮಲ್ ಹಾಸನ್ ಅವರು ಟಿವಿಎಸ್ ಅಪಾಚೆ ಬೈಕ್ ಉಡುಗೊರೆ ನೀಡಿದ್ದಾರೆ.

ಅಲ್ಲದೆ, ಚಿತ್ರದ ಯಶಸ್ಸಿಗೆ ವಿಜಯ್ ಸೇತುಪತಿ, ಫಹಾದ್ ಫಾಸಿಲ್ ಮತ್ತು ನರೈನ್ ಚೆಂಬನ್ ಕೂಡ ಕಾರಣರಾಗಿದ್ದು, ಅವರಿಗೂ ಧನ್ಯವಾದ ಅರ್ಪಿಸುವುದಾಗಿ ಕಮಲ್ ಹಾಸನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.