ADVERTISEMENT

ಹುಚ್ಚು ಅಭಿಮಾನಿಯಾಗಿದ್ದ ಸಂಗೀತಾ,ನಟ ವಿಜಯ್‌ಗೆ ವಿಚ್ಛೇದನ ನೀಡಲು ಮುಂದಾಗಿದ್ದೇಕೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಫೆಬ್ರುವರಿ 2026, 6:55 IST
Last Updated 28 ಫೆಬ್ರುವರಿ 2026, 6:55 IST
   

ಬೆಂಗಳೂರು: ನಟ, ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ವಿಜಯ್ ಅವರ ಪತ್ನಿ ಸಂಗೀತಾ ಅವರು ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಆದರೆ ಇದೀಗ ಈ ಜೋಡಿಯ ಹಳೆಯ ಫೋಟೊಗಳು ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಹರಿದಾಡುತ್ತಿದೆ. ಅವರ ವಿಚ್ಛೇದನವು ಚಿತ್ರರಂಗ ಸೇರಿದಂತೆ ರಾಜಕೀಯದಲ್ಲೂ ಭಾರಿ ಚರ್ಚೆಗೆ ಕಾರಣವಾಗಿದೆ.

ಹುಚ್ಚು ಅಭಿಮಾನಿಯಾಗಿದ್ದ ಯುವತಿ, ಮಡದಿಯಾಗುವವರೆಗೆ.. ಸಂಗೀತಾ ಅವರ ಯಾವ ಗುಣಕ್ಕೆ ವಿಜಯ್‌ ಮನಸೋತಿದ್ದು .. ಇವರಿಬ್ಬರ ನಡುವೆ ಪ್ರೀತಿ ಹುಟ್ಟಿದ್ದು ಹೇಗೆ.. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ ಈ ಎಲ್ಲ ಘಟನೆಗಳನ್ನು ಗಮನಿಸುವುದಾದರೆ;

ADVERTISEMENT
'ಪೂವೆ ಉನಕ್ಕಾಗ' ಚಿತ್ರದ ಯಶಸ್ಸು..ಸಂಗೀತಾ ಮೊದಲ ಭೇಟಿ

ವಿಜಯ್‌ ಅವರ ಮೊದಲ ಸಿನಿಮಾ 'ಪೂವೆ ಉನಕ್ಕಾಗ' ಯಶಸ್ಸಿನ ಕಾರ್ಯಕ್ರಮದಲ್ಲಿ ಸಂಗೀತಾ ಅವರನ್ನು ಭೇಟಿ ಮಾಡಿದರು. ಈ ಭೇಟಿ ಅವರಿಬ್ಬರ ಸ್ನೇಹಕ್ಕೆ ಕಾರಣವಾಯಿತು.

ವಿಜಯ್-ಸಂಗೀತಾ

1996–1999ರ ನಡುವೆ..

ವಿಜಯ್–ಸಂಗೀತಾ ನಡುವಿನ ಸ್ನೇಹ ಉತ್ತಮ ಬಾಂಧವ್ಯ ಮೂಡಿಸಿತ್ತು. ವಿಜಯ್‌ ಅವರು ಸಂಗೀತಾ ಅವರ ಮುಗ್ಧತೆಗೆ ಮನಸೋತಿದ್ದರು. ಹೀಗಾಗಿಯೇ ಸಂಗೀತಾ ಅವರನ್ನು ಮನೆಗೆ ಆಹ್ವಾನಿಸಿ ಹೆತ್ತವರಿಗೂ ಪರಿಚಯಿಸಿದ್ದರು. ಈ ಪರಿಚಯ ಪ್ರೀತಿಯಾಗಿತ್ತು. ಈ ಪ್ರೀತಿಯೇ ಮುಂದೆ ಮದುವೆಗೆ ನಾಂದಿ ಹಾಡಿತ್ತು. 1999ರ ಆಗಸ್ಟ್ 25ರಂದು ಚೆನ್ನೈನಲ್ಲಿ ಹಿಂದೂ ಸಾಂಪ್ರದಾಯದಂತೆ ವಿಜಯ್‌ ಹಾಗೂ ಸಂಗೀತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವಿಜಯ್‌ ಅವರು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದರೆ, ಸಂಗೀತಾ ಹಿಂದೂ ಧರ್ಮದವರು. ಇವರಿಬ್ಬರು ಅಂತರ್‌ಜಾತಿ ವಿವಾಹ ಮಾಡಿಕೊಂಡರು.

ಇಬ್ಬರು ಮಕ್ಕಳು

1999ರಲ್ಲಿ ದಾಂಪತ್ಯ ಜೀವನ ಆರಂಭಿಸಿದ ಈ ಜೋಡಿಗೆ 2000ರಲ್ಲಿ ಜೇಸನ್ ಸಂಜಯ್ ಹಾಗೂ 2005ರಲ್ಲಿ ದಿವ್ಯಾ ಸಾಶಾ ಜನಿಸಿದರು.

ವಿಜಯ್‌ ಪತ್ನಿಯಾದರೂ ಸಂಗೀತಾ ಅವರು ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಅವರು ಗೌಪ್ಯತೆಯನ್ನು ಕಾಪಡಿಕೊಂಡಿದ್ದರು.

ವಿಜಯ್-ಸಂಗೀತಾ

ದಾಂಪತ್ಯದಲ್ಲಿ ಬಿರುಕು ವದಂತಿ

2023ರಲ್ಲಿ ಸಂಗೀತಾ ವಾರಿಸು ಚಿತ್ರದ ಆಡಿಯೊ ಬಿಡುಗಡೆ ಸೇರಿದಂತೆ ಕೆಲವು ಪ್ರಮುಖ ಕಾರ್ಯಕ್ರಮಗಳಿಗೆ ಗೈರುಹಾಜರಾಗಿದ್ದಾಗ ಅವರ ಪ್ರತ್ಯೇಕತೆಯ ಬಗ್ಗೆ ಊಹಾಪೋಹಗಳು ಪ್ರಾರಂಭವಾದವು. ಇವು ಆಧಾರಕ್ಕೆ ದೂರವಾದ ಮಾತುಗಳು ಸಂಗೀತಾ ತಮ್ಮ ಮಕ್ಕಳೊಂದಿಗೆ ಯುಎಸ್‌ನಲ್ಲಿದ್ದಾರೆ ಎಂಬ ವರದಿಗಳು ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿತ್ತು.

ಇದಾದ ಬಳಿಕ 2025ರಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪ್ರಮುಖ ರಾಜಕೀಯ ಕಾರ್ಯಕ್ರಮಗಳಿಗೆ ಸಂಗೀತಾ ಗೈರಾಗಿದ್ದು, ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗೆ ಮತ್ತೆ ಪುಷ್ಠಿ ಸಿಕ್ಕಿತ್ತು.

ವಿಜಯ್-ಸಂಗೀತಾ

ವಿಚ್ಛೇದನ ಅರ್ಜಿ

ನಟ, ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ವಿಜಯ್ ಅವರ ಪತ್ನಿ ಸಂಗೀತಾ ಅವರು ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.‘ನನ್ನ ಪತಿಯು ನಟಿಯೊಬ್ಬರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾರೆ. ನನಗೆ ನಿರಂತರವಾಗಿ ಮಾನಸಿಕ ಹಿಂಸೆ ನೀಡುತ್ತಿದ್ದು, ನನ್ನನ್ನು ನಿರ್ಲಕ್ಷಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.ಚೆಂಗಲ್ಪಟ್ಟು ಜಿಲ್ಲೆಯ ಕುಟುಂಬ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಏ. 10ರಂದು ವಿಚಾರಣೆಗೆ ಬರುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.