ADVERTISEMENT

ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ ಬಾಲಿವುಡ್ ನಟಿ ಜಾಹ್ನವಿ ಕಪೂರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಆಗಸ್ಟ್ 2023, 7:51 IST
Last Updated 28 ಆಗಸ್ಟ್ 2023, 7:51 IST
ಜಾಹ್ನವಿ ಕಪೂರ್
ಜಾಹ್ನವಿ ಕಪೂರ್   -ಟ್ವಿಟರ್ ಚಿತ್ರ

ಅಮರಾವತಿ: ಬಾಲಿವುಡ್‌ ನಟಿ ಜಾಹ್ನವಿ ಕಪೂರ್ ಅವರು ಇಂದು (ಸೋಮವಾರ) ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.

ಜಾಹ್ನವಿ ಕಪೂರ್ ತಿರುಪತಿಗೆ ಭೇಟಿ ನೀಡಿದ್ದ ವಿಡಿಯೊವನ್ನು ಸುದ್ದಿಸಂಸ್ಥೆ ‘ಎಎನ್‌ಐ’ ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಹಂಚಿಕೊಂಡಿದೆ.

ಇತ್ತೀಚೆಗೆ ಬಿಳಿ ಬಣ್ಣದ ದಿಂಬು ಹಿಡಿದುಕೊಂಡು ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದ ಜಾಹ್ನವಿ ಕಪೂರ್ ಅವರನ್ನು ನೆಟ್ಟಿಗರು ಟ್ರೋಲ್‌ ಮಾಡಿದ್ದರು. ಈ ಹಿಂದೆ ಬಾಲಿವುಡ್‌ ನಟ ಅಮೀರ್ ಖಾನ್‌ ಕೂಡ ವಿಮಾನ ನಿಲ್ದಾಣಕ್ಕೆ ದಿಂಬು ಹಿಡಿದುಕೊಂಡು ಬಂದಿದ್ದರು. ದಿಂಬಿನ ಕಾರಣಕ್ಕೆ ಅಮೀರ್‌ ಖಾನ್ ಟ್ರೋಲ್‌ ಆಗಿದ್ದರು.

ADVERTISEMENT

ಸದ್ಯ ಜಾಹ್ನವಿ ಕಪೂರ್ ಜೂನಿಯರ್ ಎನ್‌ಟಿಆರ್‌ ಅವರ ‘ದೇವರಾ’ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ಚಿತ್ರದಲ್ಲಿ ನಟಿಸಿದ್ದಾರೆ. ಅಲ್ಲದೇ ರಾಜ್‌ಕುಮಾರ್ ರಾವ್ ಅವರೊಂದಿಗೆ ‘ಮಿಸ್ಟರ್ ಆ್ಯಂಡ್ ಮಿಸ್ಸಸ್‌’ ಮಹಿ ಚಿತ್ರದಲ್ಲೂ ನಟಿಸಲಿದ್ದಾರೆ. ಅಲ್ಲದೇ ಹೊಸ ಚಿತ್ರ ‘ಉಲಾಜ್‌’ನಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.