ADVERTISEMENT

ನಟಿ ರಮ್ಯಾ ಸಾವು ವದಂತಿ: ಸ್ಪಷ್ಟನೆ ನೀಡಿದ ಆಪ್ತ ವಲಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಸೆಪ್ಟೆಂಬರ್ 2023, 7:49 IST
Last Updated 6 ಸೆಪ್ಟೆಂಬರ್ 2023, 7:49 IST
ನಟಿ ರಮ್ಯಾ
ನಟಿ ರಮ್ಯಾ   

ಬೆಂಗಳೂರು: ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ (ದಿವ್ಯ ಸ್ಪಂದನಾ) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಈ ಬಗ್ಗೆ ರಮ್ಯಾ ಆಪ್ತರು ‌ಸ್ಪಷ್ಟನೆ ನೀಡಿದ್ದು, ರಮ್ಯಾ ಅವರು ಅರೋಗ್ಯವಾಗಿದ್ದಾರೆ. ಸದ್ಯ ಅವರು ಯುರೋಪ್‌ ಪ್ರವಾಸದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

‘ರಮ್ಯಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿದ್ದೇವೆ. ಅವರು ಆರೋಗ್ಯವಾಗಿದ್ದಾರೆ. ಅವರ ಸಾವಿನ ಬಗೆಗೆ ಹರಡುತ್ತಿರುವ ಸುದ್ದಿ ಸುಳ್ಳು’ ಎಂದು ರಮ್ಯಾ ಆಪ್ತ ವಲಯ ಸ್ಪಷ್ಟಪಡಿಸಿದೆ.

ತಮಿಳಿನ ಕೆಲ ವೆಬ್‌ಸೈಟ್‌ಗಳು ಮತ್ತು ಸಾಮಾಜಿಕ ಜಾಲತಾಣಗಳು ರಮ್ಯಾ ಸಾವಿನ ಬಗ್ಗೆ ವದಂತಿ ಹಬ್ಬಿಸಿದ್ದವು. ಇದನ್ನು ಮೂಲವಾಗಿರಿಸಿ ಇನ್ನೂ ಕೆಲ ಮಾಧ್ಯಮಗಳು ರಮ್ಯಾ ಸಾವಿನ ಸುದ್ದಿಯನ್ನು ಬಿತ್ತರಿಸಿದ್ದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.